ಡಾ.ರಾಜ್‌ ಜೊತೆ ಸ್ಟಾರ್ ನಟಿ ಬಾಲ್ಯದ ಪೋಟೋ ವೈರಲ್; ಅಣ್ಣಾವ್ರ ಕುಟುಂಬದ ಜೊತೆ ನಂಟು!

Suvarna News   | Asianet News
Published : Apr 26, 2021, 12:39 PM ISTUpdated : Apr 26, 2021, 12:47 PM IST
ಡಾ.ರಾಜ್‌ ಜೊತೆ ಸ್ಟಾರ್ ನಟಿ ಬಾಲ್ಯದ ಪೋಟೋ ವೈರಲ್; ಅಣ್ಣಾವ್ರ ಕುಟುಂಬದ ಜೊತೆ ನಂಟು!

ಸಾರಾಂಶ

ಡಾ.ರಾಜ್‌ಕುಮಾರ್ ಹುಟ್ಟು ಹಬ್ಬದ ದಿನ ಹಳೇ ಫೋಟೋವೊಂದನ್ನು ಶೇರ್ ಮಾಡಿಕೊಂಡ ದಕ್ಷಿಣ ಭಾರತದ ಸುಂದರಿ. ರಾಜ್‌ ಕುಟುಂಬದ ಜೊತೆ ಏನು ಸಂಬಂಧ ಎಂದು ಪ್ರಶ್ನಿಸಿದ ನೆಟ್ಟಿಗರು....  

ಏಪ್ರಿಲ್ 24ರಂದು ವರನಟ ಡಾ.ರಾಜ್‌ಕುಮಾರ್ ಜನ್ಮ ದಿನದ ಪ್ರಯುಕ್ತ ಕನ್ನಡ ಚಿತ್ರರಂಗದ ನಟ-ನಟಿಯರು ಶುಭಾಶಯಗಳನ್ನು ಹೇಳುವ ಮೂಲಕ ದಿಗ್ಗಜ ನಟನನ್ನು ಸ್ಮರಿಸಿದ್ದಾರೆ. ಈ ವೇಳೆ ದಕ್ಷಿಣ ಭಾರತದ ಸಿನಿ ಜಗತ್ತಿನ ಬಹು ಬೇಡಿಕೆಯ 'ಮಹಾನಟಿ' ಅಪ್ಲೋಡ್ ಮಾಡಿದ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 

ಹೌದು! ನಟಿ ಕೀರ್ತಿ ಸುರೇಶ್ ರಾಜ್‌ಕುಮಾರ್‌ ಜೊತೆಗಿರುವ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ಕೀರ್ತಿ ಆಗ ಇನ್ನು ಪುಟ್ಟ ಹುಡುಗಿ. 'ರಾಜ್‌ಕುಮಾರ್ ಸರ್ ಅವರನ್ನು ಜನ್ಮ ದಿನದ ಹಿನ್ನಲೆಯಲ್ಲಿ ನೆನಪು ಮಾಡಿಕೊಳ್ಳುತ್ತೇನೆ,' ಎಂದು ಬರೆದುಕೊಂಡಿದ್ದಾರೆ. ಈ ಫೋಟೋವನ್ನು ರಾಜ್‌ ಕುಟುಂಬದ ಅಭಿಮಾನಿಗಳು ಎಲ್ಲೆಡೆ ಹಂಚಿಕೊಳ್ಳುತ್ತಿದ್ದಾರೆ.

ಖ್ಯಾತ ನಿರ್ದೇಶಕನನ್ನು ಅಟ್ಟಾಡಿಸಿ ಹೊಡೆದ ನಟಿ ಕೀರ್ತಿ ಸುರೇಶ್; ವಿಡಿಯೋ ವೈರಲ್!

ಅಚ್ಚರಿ ವಿಚಾರ ಏನೆಂದು ಡಾ.ರಾಜ್‌ಕುಮಾರ್ ಅಭಿನಯದ 'ಸಮಯದ ಗೊಂಬೆ' ಸಿನಿಮಾದಲ್ಲಿ ನಟಿ ಕೀರ್ತಿ ಸುರೇಶ್ ಅವರ ತಾಯಿ ಮೇನಕಾ ಅವರು,  ರಾಜ್‌‌ಕುಮಾರ್ ತಂಗಿಯಾಗಿ ಅಭಿನಯಿಸಿದ್ದಾರೆ. ಅಲ್ಲಿಂದ ಕೀರ್ತಿ ಕುಟುಂಬಕ್ಕೂ ಅಣ್ಣಾವ್ರ ಕುಟುಂಬಕ್ಕೆ ಆವಿನಭಾವ ಆತ್ಮೀಯತೆ ಇದೆ. ಕೆಲವು ವರ್ಷಗಳ ಹಿಂದೆ ಕೀರ್ತಿ ರಾಘವೇಂದ್ರ ರಾಜ್‌ಕುಮಾರ್ ನಿವಾಸಕ್ಕೆ ಭೇಟಿ ನೀಡಿ ಉಭಯಕುಶಲೋಪರಿ ವಿಚಾರಿಸಿ ಸಮಯ ಕಳೆದಿದ್ದಾರೆ. 

ನ್ಯಾಷನಲ್ ಅವಾರ್ಡ್ ನಟಿ ಕೀರ್ತಿ ಕೊನೆಗೂ ಸ್ಯಾಂಡಲ್‌ವುಡ್‌ ಬಗ್ಗೆ ಮಾತನಾಡಿದ್ದಾರೆ!

ಖಾಸಗಿ ಸಂದರ್ಶನವೊಂದರಲ್ಲಿ ಕೀರ್ತಿ ಕನ್ನಡ ಸಿನಿಮಾಗಳಲ್ಲಿ ಮಿಂಚುವುದು ಯಾವಾಗ ಹಾಗೂ ಯಾವ ನಟನ ಜೊತೆ ಎಂದು ಪ್ರಶ್ನೆ ಮಾಡಲಾಗಿತ್ತು. 'ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾ ಮಾಡಲು ನನಗಿಷ್ಟ. ಪುನೀತ್ ರಾಜ್‌ಕುಮಾರ್ ಹಾಗೂ ಯಶ್‌ ಜೊತೆ ಮಾಡಬೇಕು,' ಎಂದು ಹೇಳಿದ್ದರು. ಸದ್ಯ ಕೀರ್ತಿ 'ವಾಶಿ', 'ಸಾನಿ ಕಾಯಿಧಂ', 'ಅಣ್ಣಾಥೆ', 'ಸರ್ಕಾರು ವಾರು ಪಾಟು' ಸಿನಿಮಾ ಚಿತ್ರೀಕರಣ ಮಾಡುತ್ತಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?