ನಟ ಪೃಥ್ವಿರಾಜ್ ಹೊಸ ಸಿನಿಮಾಗೆ ಟೈಸನ್ ಎಂದು ಟೈಟಲ್ ಇಡಲಾಗಿದೆ. ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿರುವ ಕೆಜಿಎಫ್ ನಿರ್ಮಾಣದ ಸಂಸ್ಥೆ ಜೊತೆ ಸಿನಿಮಾ ಮಾಡುತ್ತಿರುವ ಬಗ್ಗೆ ನಟ ಪೃಥ್ವಿರಾಜ್ ಸಂತಸ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಟೈಸನ್ ಸಿನಿಮಾ ಮುಂದಿನ ವರ್ಷ2023ರಲ್ಲಿ ಸೆಟ್ಟೇರುವ ಸಾಧ್ಯತೆ ಇದೆ. 2024ರಲ್ಲಿ ರಿಲೀಸ್ ಮಾಡಲು ಸಿನಿಮಾತಂಡ ಪ್ಲ್ಯಾನ್ ಮಾಡಿದೆ.
ಸ್ಯಾಂಡಲ್ ವುಡ್‌ನ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್(Hombale Films) ಇತ್ತೀಚಿಗಷ್ಟೆ ಮತ್ತೊಂದು ಸಿನಿಮಾ ಅನೌನ್ಸ್ ಮಾಡುವ ಮೂಲಕ ಸಂತಸದ ಸುದ್ದಿ ಹಂಚಿಕೊಂಡಿತ್ತು. ಕೆಜಿಎಫ್-2 (KGF 2) ಸೂಪರ್ ಸಕ್ಸಸ್‌ನಲ್ಲಿ ತೆಲುತ್ತಿರುವ ವಿಜಯ್ ಕಿರಗಂದೂರ್ ಅವರ ಹೊಂಬಾಳೆ ಸಂಸ್ಥೆ ಅದೇ ಖುಷಿಯಲ್ಲಿ ಸಾಲು ಸಾಲು ಸಿನಿಮಾ ಘೋಷಣೆ ಮಾಡಿದೆ. ಹೊಂಬಾಳೆ ಈ ಬಾರಿ ಸಿನಿಮಾ ಮಾಡಲು ಮುಂದಾಗಿದ್ದು ಮಲಯಾಳಂ ಖ್ಯಾತ ನಟ ಪೃಥ್ವಿರಾಜ್ ಸುಕುಮಾರನ್ (Prithviraj Sukumaran) ಜೊತೆ. ಹೌದು ಕನ್ನಡ, ತೆಲುಗು ಬಳಿಕ ಹೊಂಬಾಳೆ ಫಿಲ್ಮ್ಸ್ ಇದೀಗ ಮಲಯಾಳಂ ಕಡೆ ಮುಖ ಮಾಡಿದ್ದು, ಪೃಥ್ವಿರಾಜ್ ಸುಕುಮಾರ್ ಅವರಿಗೆ ಸಿನಿಮಾ ಮಾಡುತ್ತಿದೆ.
ಅಂದಹಾಗೆ ಪೃಥ್ವಿರಾಜ್ ಹೊಸ ಸಿನಿಮಾಗೆ ಟೈಸನ್ ಎಂದು ಟೈಟಲ್ ಇಡಲಾಗಿದೆ. ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿರುವ ಕೆಜಿಎಫ್ ನಿರ್ಮಾಣದ ಸಂಸ್ಥೆ ಜೊತೆ ಸಿನಿಮಾ ಮಾಡುತ್ತಿರುವ ಬಗ್ಗೆ ನಟ ಪೃಥ್ವಿರಾಜ್ ಸಂತಸ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಟೈಸನ್ ಸಿನಿಮಾ ಮುಂದಿನ ವರ್ಷ2023ರಲ್ಲಿ ಸೆಟ್ಟೇರುವ ಸಾಧ್ಯತೆ ಇದೆ. 2024ರಲ್ಲಿ ರಿಲೀಸ್ ಮಾಡಲು ಸಿನಿಮಾತಂಡ ಪ್ಲ್ಯಾನ್ ಮಾಡಿದೆ.
ಈ ಬಗ್ಗೆ ನಟ ಪೃಥ್ವಿರಾಜ ಸುಕುಮಾರ್ ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ್ದಾರೆ. 'ನಾನು ಮತ್ತು ಮುರಳಿ ಗೋಪಿ ಲೂಸಿಫರ್ ಸಿನಿಮಾ ಮಾಡುವಾಗ ಚರ್ಚೆ ಮಾಡಿದ ನಿಷಯವಿದು. ಬಳಿಕ ಲೂಸಿಫರ್-2ನಲ್ಲಿ ಬ್ಯುಸಿಯಾದ್ವಿ. ಬಳಿಕ ಕೊರೊನಾ ಬಂತು. ಹಾಗಾಗಿ ಈ ಪ್ರಾಜೆಕ್ಟ್ ತಡವಾಯಿತು. ನಂತರ ಬೇರೆ ಬೇರೆ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾದೆ. ಆದರೆ ಟೈಸನ್ ನನ್ನ ಮನಸ್ಸಿನಲ್ಲಿ ಇತ್ತು. ಈ ಸಿನಿಮಾದ ವಿಷಯ ನನಗೆ ತುಂಬಾ ಹತ್ತಿರವಾಗಿದೆ ಹಾಗೂ ಉತ್ತಮ ಸಂಸ್ಥೆ ಜೊತೆ ಕೈ ಜೋಡಿಸಿರುವುದು ತುಂಬಾ ಸಂತಸವಾಗಿದೆ' ಎಂದು ಹೇಳಿದ್ದಾರೆ.
ಕನ್ನಡ, ತೆಲುಗು ಆಯ್ತು ಇದೀಗ ಮಲಯಾಳಂ ನಟನ ಜೊತೆ ಹೊಂಬಾಳೆ ಫಿಲ್ಮ್ಸ್ ಸಿನಿಮಾ; ಹೊಸ ಚಿತ್ರ ಅನೌನ್ಸ್
ಅಂದಹಾಗೆ ಟೈಸನ್ 'ಆಕ್ಷನ್ ಪ್ಯಾಕ್ಡ್ ಸೋಶಿಯೋ ಥ್ರಿಲರ್ ಸಿನಿಮಾ' ಎಂದು ಹೇಳಿದ್ದಾರೆ. 'ನನ್ನ ಮೊದಲ ನಿರ್ದೇಶನದ ಲೂಸಿಫರ್ ಸಿನಿಮಾ ಬಿಡುಗಡೆ ಬಳಿಕ ನನ್ನನ್ನು ಸಂಪರ್ಕ ಮಾಡಿದ ಮೊದಲ ಸಂಸ್ಥೆ ಹೊಂಬಾಳೆ ಫಿಲ್ಮ್ಸ್. ಬಳಿಕ ಕೆಜಿಎಫ್-2ಗೆ ಕೈ ಜೋಡಿಸಿದೆವು. ದೇಶದಾದ್ಯಂತ ಸದ್ದು ಮಾಡುತ್ತಿರುವ ಸಂಸ್ಥೆ ಜೊತೆ ಕೆಲಸ ಮಾಡಲು ಬಯಸುತ್ತೇನೆ' ಎಂದು ಪೃಥ್ವಿರಾಜ್ ಹೇಳಿದ್ದಾರೆ.
'ನಾನು ಯಾವಾಗಲು ಪ್ಯಾನ್ ಇಂಡಿಯಾ ವಿಷಯದ ಬಗ್ಗೆ ಸಿನಿಮಾ ಮಾಡಿದ್ದೇನೆ ಎಂದು ನಂಬಿದ್ದೇನೆ. ಪ್ಯಾನ್ ಇಂಡಿಯಾ ಎನ್ನುವ ಪದ ಹೊಸದು ಆದರೆ ಪ್ರಯತ್ನ ಹಳೆಯದು. ಬಾಹುಬಲಿ ಮೊದಲ ದಾರಿ ಮಾಡಿ ಕೊಟ್ಟಿತ್ತು. ಇದೀಗ ಕೆಜಿಎಫ್ ಪ್ರಾಂಚೈಸಿ. ಈ ಸಿನಿಮಾಗಳ ಯಶಸ್ಸು ಇನ್ನೂ ಅನೇಕ ಸಿನಿಮಾಗಳಿಗೆ ಸ್ಪೂರ್ತಿಯಾಗಿದೆ' ಎಂದು ಹೇಳಿದ್ದಾರೆ.
Prithviraj Sukumaran - Supriya Menon ಅವರ ಲವ್ ಸ್ಟೋರಿ ಶುರುವಾಗಿದ್ದು ಹೇಗೆ
ಟೈಸನ್‌ನಲ್ಲಿ ಪೃಥ್ವಿರಾಜ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಟನೆಯ ಜೊತೆಗೆ ಪೃಥ್ವಿರಾಜ್ ನಿರ್ದೇಶನದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಈಗಾಗಲೇ ಪೃಥ್ವಿರಾಜ್ ನಟನೆ ಮತ್ತು ನಿರ್ದೇಶನ ಎರಡರಲ್ಲೂ ಸಕ್ಸಸ್ ಆಗಿದ್ದಾರೆ. ಟೈಸನ್ ಪೃಥ್ವಿರಾಜ್ ನಿರ್ದೇಶನದ 4ನೇ ಸಿನಿಮಾವಾಗಿದೆ. ಟೈಸನ್ ಸಿನಿಮಾ ಮಲಯಾಳಂ ಜೊತೆಗೆ ಕನ್ನಡ, ತಮಿಳು ಮತ್ತು ತೆಲುಗಿನಲ್ಲೂ ರಿಲೀಸ್ ಆಗುತ್ತಿದೆ.