ಏಳು ವರ್ಷ ಸಂಬಂಧದಲ್ಲಿದ್ದ ಕತ್ರಿನಾ-ರಣಬೀರ್ ಬೇರೆಯಾಗಿದ್ದೇಕೆ? ನಟಿಯ ಜೊತೆ ಇರಲು ಅಪಾರ್ಟ್ಮೆಂಟ್ ಖರೀದಿಸಿದ್ದ ರಣಬೀರ್ ದೂರವಾಗಿದ್ದೇಕೆ? ಪ್ರೀತಿ ಸಾಯಲ್ಲ ಎಂದಿದ್ಯಾಕೆ ನಟಿ?
ಸಿನಿಮಾ ಇಂಡಸ್ಟ್ರಿಯಲ್ಲಿ ನಟ-ನಟಿಯರ ಡೇಟಿಂಗ್, ಸಂಬಂಧ ಎಲ್ಲವೂ ಕಾಮನ್ನೇ ಬಿಡಿ. ಸಂಬಂಧ, ಮದುವೆ, ಪ್ರೀತಿ ಇಂಥ ವಿಷಯಗಳಿಗೆ ಇಲ್ಲಿ ಯಾವುದೇ ಬೆಲೆ ಇಲ್ಲ ಎನ್ನುವುದೂ ಉಂಟು. ಯಾರದ್ದೋ ಜೊತೆ ಸುತ್ತಾಟ, ಇನ್ನಾರದ್ದೋ ಜೊತೆ ಮದ್ವೆ, ಅದರ ಮೇಲೊಂದಿಷ್ಟು ಗಾಸಿಪ್ಪು, ಪ್ರೇಮ ಪುರಾಣ ಎಲ್ಲವೂ ಮಾಮೂಲೇ ಇಲ್ಲಿ. ಕೆಲವೊಂದು ಸುದ್ದಿಗಳು ಕೇವಲ ವದಂತಿಗಳಾಗಿದ್ದರೆ, ಇನ್ನು ಕೆಲವು ನಿಜವಾಗಿ ಇರುತ್ತವೆ. ಯಾರದ್ದೋ ಜೊತೆ ಡೇಟಿಂಗು, ಸಂಬಂಧ ಇನ್ನಾರದ್ದೋ ಜೊತೆ ಮದ್ವೆ, ಮಗು ಇವುಗಳ ಸಾಲಿನಲ್ಲಿ ಇದಾಗಲೇ ಹಲವಾರು ನಟ-ನಟಿಯರ ಹೆಸರು ಥಳಕು ಹಾಕಿಕೊಂಡಿದ್ದು ಅದರಲ್ಲಿ ಒಂದು ಕತ್ರೀನಾ ಕೈಫ್ ಮತ್ತು ರಣಬೀರ್ ಕಪೂರ್ ಜೋಡಿ. ಕತ್ರಿನಾ ಜೀವನದಲ್ಲಿ ವಿಕ್ಕಿ ಕೌಶಲ್ ಎಂಟ್ರಿ ಕೊಟ್ಟಿದ್ದರೆ, ರಣಬೀರ್ ಕಪೂರ್ ಆಲಿಯಾ ಭಟ್ ಜೊತೆ ಮದ್ವೆಯಾಗಿ ಮಗುವಿನ ಅಪ್ಪನೂ ಆಗಿದ್ದಾರೆ. ಈ ಎರಡೂ ಜೋಡಿಗಳು ಸುಂದರ ಸಾಂಸಾರಿಕ ಜೀವನವನ್ನು ನಡೆಸುತ್ತಿದ್ದಾರೆ. ಆದರೆ ಇದೀಗ ಕತ್ರಿನಾ ಕೈಫ್ ಮತ್ತು ರಣಬೀರ್ ಕಪೂರ್ ಜೋಡಿ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಸದ್ದು ಮಾಡುತ್ತಿದೆ. ರಣಬೀರ್ ಕಪೂರ್ ಕುರಿತು ಕತ್ರಿನಾ ಕೈಫ್ ಹೇಳಿರುವ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. ಅಷ್ಟಕ್ಕೈ ರಣಬೀರ್ ಮತ್ತು ಕತ್ರಿನಾ ಅವರು ಸುಮಾರು ಏಳು ವರ್ಷ ಸಂಬಂಧದಲ್ಲಿ ಇದ್ದುದು ಸಿನಿ ಪ್ರಿಯರಿಗೆ ತಿಳಿದ ವಿಷಯವೇ. ಈ ಕುರಿತು ಈಗ ಖುದ್ದು ಕತ್ರಿನಾ ಅವರೇ ವಿಷಯ ತಿಳಿಸಿದ್ದಾರೆ.
ಬಹಳ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ರಣಬೀರ್ ಮತ್ತು ಕತ್ತಿನಾ ಹಲವು ವರ್ಷ ತಮ್ಮ ರಿಲೇಷನ್‌ಶಿಪ್ ಬಗ್ಗೆ ಬಾಯಿ ಬಿಟ್ಟಿರಲಿಲ್ಲ. ವಿದೇಶದ ರೆಸಾರ್ಟ್‌ವೊಂದರಲ್ಲಿ ಹಾಲಿಡೇ ಕಳೆಯುತ್ತಿರುವಾಗ ದೊರೆತ ಫೋಟೊಗಳಿಂದ ಇವರಿಬ್ಬರ ನಡುವಿನ ಅಫೇರ್ ಬೆಳಕಿಗೆ ಬಂದಿತ್ತು. ಜತೆಗೆ ರಣಬೀರ್ ತಂದೆ ರಿಷಿ ಕಪೂರ್‌ಗೆ ಕತ್ರಿನಾ ಇಷ್ಟವಾಗಿರಲಿಲ್ಲ. ಮುಂಬೈನಲ್ಲಿರುವ ತಮ್ಮ ಬಂಗಲೆಗೆ ಕತ್ರಿನಾ ಅವರಿಗೆ ಎಂಟ್ರಿ ಕೊಟ್ಟಿರಲಿಲ್ಲ. ಇದೇ ಕಾರಣಕ್ಕೆ ಆಗ ರಣಬೀರ್ ಸ್ವಂತ ಬಂಗಲೆ ಖರೀದಿಸಿದ್ದರು. ಅಲ್ಲಿ ಪಾರ್ಟಿ ಆಯೋಜಿಸಿ ತಮ್ಮ ಸಂಬಂಧದ ಬಗ್ಗೆ ಪರೋಕ್ಷವಾಗಿ ತಿಳಿಸಿದ್ದರು. 2009 ರಿಂದ 2016ರವರೆಗೆ ಇವರು ಒಟ್ಟಿಗೇ ಇದ್ದರು.
ಎಷ್ಟೇ ಬೇಡಿಕೊಂಡ್ರೂ ಹಿಂಬದಿ ಮಾತ್ರ ತೋರಿಸಿ ಪಾಪರಾಜಿಗಳನ್ನು ಸುಸ್ತು ಮಾಡಿದ ಕಾಜೋಲ್ ಪುತ್ರಿ!
ಆದರೆ ಅದೇನಾಯಿತೋ ಗೊತ್ತಿಲ್ಲ. ಸುಮಾರು ಏಳು ವರ್ಷಗಳ ಡೇಟಿಂಗ್ ನಂತರ ಕತ್ರಿನಾ ಕೈಫ್ ಮತ್ತು ರಣಬೀರ್ ಕಪೂರ್ 2016 ರಲ್ಲಿ ಬ್ರೇಕಪ್ ಮಾಡಿಕೊಂಡರು. ಇದೀಗ ಕತ್ರಿನಾ ಕಪೂರ್, ರಣಬೀರ್ ಕಪೂರ್ ಬಗ್ಗೆ ಹೇಳಿಕೆ ನೀಡಿರುವ ವಿಡಿಯೋ ವೈರಲ್ ಆಗುತ್ತಿದೆ. ಅದರಲ್ಲಿ ಕತ್ರಿನಾ, ರಣಬೀರ್ ಬಗ್ಗೆ ಕೆಟ್ಟದಾಗಿ ಮಾತಾಡಲು ನನಗೆ ಇಷ್ಟವಿಲ್ಲ. ಯಾರೂ ನನ್ನನ್ನು ಪ್ರೀತಿಯಿಂದ ದೂರ ಮಾಡಲು ಸಾಧ್ಯವಿಲ್ಲ. ಅಥವಾ ಅದನ್ನು ಕೆಟ್ಟದಾಗಿ ಕರೆಯಲು ನನಗೆ ಇಷ್ಟವಿಲ್ಲ ಎಂದಿದ್ದಾರೆ. ಪ್ರೀತಿಯ ಬಗ್ಗೆ ನನ್ನ ಅಭಿಪ್ರಾಯ ಎಂದಿಗೂ ಬದಲಾಗುವುದಿಲ್ಲ. ಪ್ರೀತಿಯ ಬಗ್ಗೆ ನನ್ನ ಆಲೋಚನೆಗಳು ಹೆಚ್ಚು ವಿಸ್ತಾರವಾಗಿದೆ. ಜನರೊಂದಿಗೆ ಹೇಗೆ ವ್ಯವಹರಿಸಬೇಕು ಎಂಬುದನ್ನು ನಾನು ಕಲಿತಿದ್ದೇನೆ. ನಾನು ಪ್ರೀತಿಯಲ್ಲಿ ಹೆಚ್ಚು ಕೊಡುವುದನ್ನು ಕಲಿತಿದ್ದೇನೆ. ಒಬ್ಬ ವ್ಯಕ್ತಿಯ ಕನಸುಗಳನ್ನು ಹೆಚ್ಚು ಬೆಂಬಲಿಸಲು ಕಲಿತಿದ್ದೇನೆ ಎಂದು ಹೇಳಿದ್ದಾರೆ. ನಾನು ಯಾರ ಬಗ್ಗೂ ಕೆಟ್ಟ ಭಾವನೆ ಹೊಂದಿಲ್ಲ. ಪ್ರೀತಿ ಶಾಶ್ವತ ಎಂದಿದ್ದಾರೆ.
ನನ್ನ ಪ್ರೀತಿಯಲ್ಲಿ ನನಗೆ ಬಲವಾದ ನಂಬಿಕೆ ಇದೆ. ನನ್ನ ಮೇಲಿನ ಪ್ರೀತಿ ಯಾವಾಗಲೂ ಹಾಗೆಯೇ ಉಳಿಯುತ್ತದೆ ಎನ್ನುತ್ತಲೇ ವಿಕ್ಕಿ ಕೌಶಲ್ ಅವರನ್ನು ಮದ್ವೆಯಾದರು ಕತ್ರಿನಾ. ಅಂದಹಾಗೆ, ರಣಬೀರ್ ಕಪೂರ್ ಆಲಿಯಾ ಭಟ್ ಅವರನ್ನು ಮದುವೆಯಾಗಿದ್ದು, ನವೆಂಬರ್ 2023 ರಲ್ಲಿ ರಾಹಾಗೆ ಬೆಸ್ಟ್ ತಂದೆಯಾಗಿದ್ದಾರೆ. ಆದರೆ ಇವರಿಬ್ಬರ ಬ್ರೇಕಪ್ ಬಗ್ಗೆ ಇನ್ನೂ ಸ್ಪಷ್ಟ ಕಾರಣ ಸಿಕ್ಕಿಲ್ಲ. ಇದೀಗ ಕತ್ರಿನಾ ಕೈಫ್ ಕೊನೆಯದಾಗಿ ಶ್ರೀರಾಮ್ ರಾಘವನ್ ಅವರ ಮೆರ್ರಿ ಕ್ರಿಸ್‌ಮಸ್ ಚಿತ್ರದಲ್ಲಿ ವಿಜಯ್ ಸೇತುಪತಿ ಜೊತೆಗೆ ಕಾಣಿಸಿಕೊಂಡಿದ್ದರು. ಚಿತ್ರವು ಕಳೆದ ಜನವರಿಯಲ್ಲಿ ಬಿಡುಗಡೆಯಾಗಿದ್ದು, ಈಗ OTT ಬಿಡುಗಡೆಗೆ ಸಿದ್ಧವಾಗಿದೆ.
ವೇದಿಕೆ ಮೇಲೆ ವಿಜಯ್ ದೇವರಕೊಂಡನ್ನು ತಬ್ಬಿ ಕಿಸ್ ಮಾಡಿದ ಶಾಹಿದ್ ಕಪೂರ್: ವಿಡಿಯೋ ವೈರಲ್