ವೇದಿಕೆ ಮೇಲೆ ವಿಜಯ್ ದೇವರಕೊಂಡನ್ನು ತಬ್ಬಿ ಕಿಸ್ ಮಾಡಿದ ಶಾಹಿದ್ ಕಪೂರ್. ಇದರ ವಿಡಿಯೋ ವೈರಲ್ ಆಗಿದೆ. ಅಷ್ಟಕ್ಕೂ ಅವರು ಹೀಗೆ ಮಾಡಿದ್ದೇಕೆ?
ಅಮೆಜಾನ್ ಪ್ರೈಮ್ನಲ್ಲಿ ಮುಂಬರುವ ಸೀರಿಸ್ ಹಾಗೂ ಸಿನಿಮಾಗಳ ಅನಾವರಣ ಮಾಡುವ ಸಂಬಂಧ ನಡೆದ ಕಾರ್ಯಕ್ರಮ ಈಗ ಸಕತ್ ಸದ್ದು ಮಾಡುತ್ತಿದೆ. ಅಮೆಜಾನ್ ಪ್ರೈಮ್ ವಿಡಿಯೋ 2024 ಶೀರ್ಷಿಕೆಯಡಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಬಾಲಿವುಡ್‌ನಿಂದ ಹಿಡಿದು ದಕ್ಷಿಣದ ತಾರೆಯರೂ ಭಾಗವಹಿಸಿದ್ದರು. ಅವರಲ್ಲಿ ಹೈಲೈಟ್ ಆಗಿದ್ದು ಶಾಹಿದ್ ಕಪೂರ್ ಮತ್ತು ವಿಜಯ್ ದೇವರಕೊಂಡ. ಇದಕ್ಕೆ ಕಾರಣವೂ ಇದೆ. ಇವರಿಬ್ಬರೂ ಭಾಗವಹಿಸಿದ್ದ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಕತ್ ಸೌಂಡ್ ಮಾಡುತ್ತಿದೆ. ಇದಕ್ಕೆ ಕಾರಣ, ಈ ಕಾರ್ಯಕ್ರಮದಲ್ಲಿ ಶಾಹಿದ್ ಕಪೂರ್ ಸೌತ್ ಸೂಪರ್ ಸ್ಟಾರ್ ವಿಜಯ್ ದೇವರಕೊಂಡ ಅವರನ್ನು ಬಿಗಿದಪ್ಪಿ ಚುಂಬಿಸಿದ್ದಾರೆ.
ಈಗ ವೈರಲ್ ಆಗಿರುವ ವಿಡಿಯೋದಲ್ಲಿ, ಶಾಹಿದ್ ಕಪೂರ್ ಅವರು, ವಿಜಯ್ ದೇವರಕೊಂಡ ಮತ್ತು ಮೃಣಾಲ್ ಠಾಕೂರ್ ಅವರೊಂದಿಗೆ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಮಯದಲ್ಲಿ, ಶಾಹಿದ್ ಅವರು, ವಿಜಯ್ ಅವರ ಭುಜದ ಮೇಲೆ ತಲೆಯಿಟ್ಟು, 'ನಾನು ನಿಮಗೆ ಬಹಳಷ್ಟು ಪ್ರೀತಿ ನೀಡಬೇಕಿದೆ. ಏಕೆಂದರೆ ನೀವು ಇರದಿದ್ದರೆ, ಅರ್ಜುನ್ ರೆಡ್ಡಿ ಇರುತ್ತಿಲಿಲ್ಲ, ಕಬೀರ್ ಸಿಂಗ್ ಹುಟ್ಟುತ್ತಿರಲಿಲ್ಲ. ಧನ್ಯವಾದಗಳು ವಿಜಯ್ ಎಂದು ಕಿಸ್ ಮಾಡಿದ್ದಾರೆ. ಅಷ್ಟಕ್ಕೂ ಅವರು ಹೀಗೆ ಹೇಳಲು ಕಾರಣವೂ ಇದೆ. ಅದೇನೆಂದರೆ, ‘ಅರ್ಜುನ್ ರೆಡ್ಡಿ’ ಹಾಗೂ ‘ಕಬೀರ್ ಸಿಂಗ್’ ಸಿನಿಮಾ. ತೆಲುಗಿನಲ್ಲಿ ವಿಜಯ್ ದೇವರಕೊಂಡ ನಟಿಸಿದ ‘ಅರ್ಜುನ್ ರೆಡ್ಡಿ’ ಚಿತ್ರವನ್ನು ಹಿಂದಿಗೆ ‘ಕಬೀರ್ ಸಿಂಗ್’ ಆಗಿ ರಿಮೇಕ್ ಮಾಡಲಾಯಿತು. ಸತತ ಸೋಲು ಕಾಣುತ್ತಿದ್ದ ಶಾಹಿದ್ಗೆ ದೊಡ್ಡ ಗೆಲುವು ತಂದುಕೊಟ್ಟಿದೆ ಈ ಚಿತ್ರ.
ಛೀ... ರಣವೀರ್ ಸಿಂಗ್ ಹೆಸ್ರು ಹೇಳಿ 'ಶಕ್ತಿಮಾನ್' ಹೆಸರಿಗೆ ಧಕ್ಕೆ ತರಬೇಡಿ, ಪಾತ್ರದ ಘನತೆ ತಗ್ಗಿಸಬೇಡಿ ಪ್ಲೀಸ್...
ಶಾಹಿದ್ ಕಪೂರ್ ಅವರ ಚಿತ್ರ 'ಕಬೀರ್ ಸಿಂಗ್' ಸಂದೀಪ್ ರೆಡ್ಡಿ ವಂಗಾ ಅವರ 'ಅರ್ಜುನ್ ರೆಡ್ಡಿ' ಹಿಂದಿ ರಿಮೇಕ್ ಚಿತ್ರಗಳು. ಅರ್ಜುನ್ ರೆಡ್ಡಿ ಚಿತ್ರದಲ್ಲಿ ವಿಜಯ್ ದೇವರಕೊಂಡ ಮತ್ತು ಶಾಲಿನಿ ಪಾಂಡೆ ಮುಖ್ಯ ಭೂಮಿಕೆಯಲ್ಲಿದ್ದರು. 'ಕಬೀರ್ ಸಿಂಗ್' ಚಿತ್ರದಲ್ಲಿ ಶಾಹಿದ್ ಕಪೂರ್ ಮತ್ತು ಕಿಯಾರಾ ಅಡ್ವಾಣಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. 'ಕಬೀರ್ ಸಿಂಗ್' ಶಾಹಿದ್ ಕಪೂರ್ ಅಭಿನಯದ 2019 ರ ಅತಿದೊಡ್ಡ ಬ್ಲಾಕ್ಬಸ್ಟರ್ ಚಿತ್ರಗಳಲ್ಲಿ ಒಂದಾಗಿದೆ. ‘ಅರ್ಜುನ್ ರೆಡ್ಡಿ’ ಸಿನಿಮಾ 2017ರಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಆಯಿತು. ವಿಜಯ್ ದೇವರಕೊಂಡ ಅವರ ಬದುಕನ್ನೇ ಬದಲಿಸಿತು ಈ ಚಿತ್ರ. ಈ ಚಿತ್ರವನ್ನು ಹಿಂದಿಗೆ ‘ಕಬೀರ್ ಸಿಂಗ್’ ಆಗಿ ರಿಮೇಕ್ ಮಾಡಲಾಯಿತು. ಈ ಚಿತ್ರ 379 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಶಾಹಿದ್ ಕಪೂರ್ ಅವರಿಗೆ ಎರಡನೇ ಹುಟ್ಟನ್ನು ಸಿನಿಮಾ ನೀಡಿತ್ತು.
ಇನ್ನು ನಟರ ಚಿತ್ರದ ಕುರಿತು ಮಾತನಾಡುವುದಾದರೆ, ಇವರು ಕೊನೆಯದಾಗಿ ತೇರಿ ಬ್ಯಾಟನ್ ಮೇ ಐಸಾ ಉಲ್ಜಾ ಜಿಯಾ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರದಲ್ಲಿ ಅವರ ಜೊತೆ ಕೃತಿ ಸನೋನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ನಟ ಅಮೆಜಾನ್ ಪ್ರೈಮ್‌ನ ಅಶ್ವಥಾಮ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಜಯ್ ದೇವರಕೊಂಡ ಫ್ಯಾಮಿಲಿ ಸ್ಟಾರ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರೊಂದಿಗೆ ಮೃಣಾಲ್ ಠಾಕೂರ್ ನಾಯಕಿಯಾಗಿ ನಟಿಸಲಿದ್ದಾರೆ.
ಡ್ರೆಸ್ ಒಳಗೇ ಬ್ರಹ್ಮಾಂಡ ತೋರಿದ ಉರ್ಫಿ ಜಾವೇದ್! ವೈರಲ್ ವಿಡಿಯೋಗೆ ಉಫ್ ಎಂದ ಫ್ಯಾನ್ಸ್...