Tiger 3 Trailer ಬಿಡುಗಡೆಯಾಗಿದ್ದು, ಚಿಕ್ಕ ಟವಲ್ನಲ್ಲೇ ಕತ್ರಿನಾ ಫೈಟಿಂಗ್ ಮಾಡಿದ್ದಾರೆ. ಗುದ್ದಾಟದಲ್ಲೂ ಗ್ಲಾಮರಸ್ ಲುಕ್ಕಾ ಅಂತಿದ್ದಾರೆ ಫ್ಯಾನ್ಸ್.
ಬಾಲಿವುಡ್‌ನಲ್ಲಿ ‘ಬಾಕ್ಸ್ ಆಫೀಸ್ ಟೈಗರ್’ ಎಂದೇ ಖ್ಯಾತಿ ಪಡೆದಿರುವ ನಟ ಸಲ್ಮಾನ್ ಖಾನ್ ಅವರ ಬಹು ನಿರೀಕ್ಷಿತ ಟೈಗರ್-3 ಬಿಡುಗಡೆಗೆ ಸಿದ್ಧವಾಗಿದೆ. ಕಳೆದ ಮಾರ್ಚ್ನ ರಂಜಾನ್ ಹಬ್ಬದ ಸಂದರ್ಭದಲ್ಲಿ ಸಿನಿಮಾ ಬಿಡುಗಡೆ ಮಾಡುವುದಾಗಿ ನಟ ಈ ಹಿಂದೆ ಘೋಷಣೆ ಮಾಡಿದ್ದರು. ಹೀಗೆ ಮಾಡಿದರೆ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಆಗುತ್ತೆ ಅನ್ನೋದು ಸಲ್ಮಾನ್ ಖಾನ್ ಅವರ ನಂಬಿಕೆ. ಇದಕ್ಕೆ ಕಾರಣವೂ ಇದೆ. ಈದ್ ಹಬ್ಬದ ಸಮಯದಲ್ಲೇ ಬಿಡುಗಡೆಯಾದ ‘ವಾಂಟೆಡ್’, ‘ದಬಂಗ್’, ‘ಬಾಡಿಗಾರ್ಡ್’, ‘ಏಕ್ ಥಾ ಟೈಗರ್’, ‘ಕಿಕ್’ ‘ಭಜರಂಗಿ ಭಾಯ್‌ಜಾನ್’, ‘ಸುಲ್ತಾನ್’ ಸಿನಿಮಾಗಳು ಸೂಪರ್ ಡ್ಯೂಪರ್ ಹಿಟ್ ಆಗಿದ್ದವು. ಇದೀಗ ಮತ್ತೊಮ್ಮೆ ‘ರಂಜಾನ್’ ಹಬ್ಬದ ಮೇಲೆಯೇ ನಟ ಸಲ್ಮಾನ್ ಖಾನ್ ಕಣ್ಣು ಹಾಕಿದ್ದರು. ಆದರೆ ಚಿತ್ರದ ಟ್ರೇಲರ್ ಇದೀಗ ಬಿಡುಗಡೆಯಾಗಿದೆ.
ಟೈಗರ್ 3’ ಚಿತ್ರವನ್ನು ಟರ್ಕಿ, ಆಸ್ಟ್ರಿಯಾ, ರಷ್ಯಾ ಮುಂತಾದ ಕಡೆ ಚಿತ್ರೀಕರಿಸಲಾಗಿದೆ. ‘ಟೈಗರ್ 3’ ಚಿತ್ರದಲ್ಲಿ ರಾ ಏಜೆಂಟ್ ಅವಿನಾಶ್ ಸಿಂಗ್ ರಾಥೋಡ್ ಅಲಿಯಾಸ್ ಟೈಗರ್ ಆಗಿ ಸಲ್ಮಾನ್ ಖಾನ್ ಕಾಣಿಸಿಕೊಂಡಿದ್ದಾರೆ. ಝೋಯಾ ಪಾತ್ರಕ್ಕೆ ಕತ್ರಿನಾ ಕೈಫ್ ಜೀವ ತುಂಬಿದ್ದಾರೆ. ಇದರ ಟ್ರೇಲರ್ ನೋಡಿದವರು ಉಫ್ ಎನ್ನುತ್ತಿದ್ದಾರೆ. ಇದಕ್ಕೆ ಕಾರಣ, ಇದರಲ್ಲಿರುವ ನಟಿ ಕತ್ರಿನಾ ಕೈಫ್ ಅವರ ಫೈಟಿಂಗ್ ಸೀನ್. ರೊಮ್ಯಾನ್ಸ್ ದೃಶ್ಯದಲ್ಲಿ ಮೈ ಚಳಿ ಬಿಟ್ಟು ಕತ್ರಿನಾ ನಟಿಸಿದಂತೆಯೇ ಆ್ಯಕ್ಷನ್ ಪಾತ್ರಗಳಿಗೂ ಜೀವ ತುಂಬುತ್ತಾರೆ. ಅದರಂತೆಯೇ ಟೈಗರ್ ಚಿತ್ರದಲ್ಲಿ ಇವರ ಆ್ಯಕ್ಷನ್ ಭರ್ಜರಿಯಾಗಿದೆ. ಹೇಳಿ ಕೇಳಿ ಇದು ಆ್ಯಕ್ಷನ್ ಮೂವಿ.
ಕೆಜಿಎಫ್ ತಾರೆ ಮೌನಿರಾಯ್ಯ ವಿಚಿತ್ರ ಸ್ವಭಾವವನ್ನು ಬಹಿರಂಗಗೊಳಿಸಿದ ನಿರ್ದೇಶಕ: ನಟಿ ಶಾಕ್!
ಆದರೆ ಇದರಲ್ಲಿನ ಕತ್ರಿನಾ ಕೈಫ್ ಆ್ಯಕ್ಷನ್ ಸೀನ್ ಮಾತ್ರ ಒಂದು ಹೆಜ್ಜೆ ಮುಂದೆಯೇ ಹೋಗಿದೆ. ಚಿತ್ರದ ಟ್ರೇಲರ್ ನೋಡಿದರೆ, ಫ್ಯಾಮಿಲಿ ಕಥೆ ಎಂದು ಎನಿಸುತ್ತದೆ. ಆದರೆ ಅದಕ್ಕಿಂತಲೂ ಹೆಚ್ಚಾಗಿ ಆ್ಯಕ್ಷನ್ ಸೀನ್ಗಳು ಟ್ರೇಲರ್ ಉದ್ದಕ್ಕೂ ಇವೆ. ಇದರಲ್ಲಿ ಗಮನ ಸೆಳೆದಿರುವುದು ಕತ್ರಿನಾ ಕೈಫ್ ಅವರು ಚಿಕ್ಕ ಟವಲ್ ಧರಿಸಿ ಫೈಟಿಂಗ್ ಮಾಡುವ ದೃಶ್ಯ! ಅಷ್ಟಕ್ಕೂ ಅವರು ಇನ್ನೋರ್ವ ಯುವತಿಯ ಜೊತೆ ಭರ್ಜರಿ ಫೈಟಿಂಗ್ ಮಾಡಿದ್ದಾರೆ. ಆ ಯುವತಿ ಕೂಡ ಇವರಂತೆಯೇ ಚಿಕ್ಕ ಟವೆಲ್ ಸುತ್ತಿಕೊಂಡಿದ್ದಾರೆ. ಫೈಟಿಂಗ್ ವೇಳೆ ಈ ಟವಲ್ಗಳನ್ನು ಇಬ್ಬರೂ ಎಳೆದಾಡಿದ್ದಾರೆ!ಇದನ್ನು ನೋಡಿ ಉಫ್ ಇನ್ನು ಈ ಕಣ್ಣಿನಿಂದ ಇನ್ನು ಏನೇನು ನೋಡಬೇಕೋ ಎಂದು ಸಿನಿ ಪ್ರಿಯರು ಹೇಳುತ್ತಿದ್ದಾರೆ.
ಟೈಗರ್ 3 ಸಿನಿಮಾದಲ್ಲಿ ಇಮ್ರಾನ್ ಹಶ್ಮಿ ವಿಲನ್ ಆಗಿ ಮಿಂಚಿದ್ದಾರೆ. ಟ್ರೇಲರ್ನಲ್ಲಿ ಇಮ್ರಾನ್ ಹಶ್ಮಿ ಅವರ ವಾಯ್ಸ್ ಓವರ್ ಕೂಡ ಇದೆ. ಟ್ರೇಲರ್ನಲ್ಲಿ ಬಂದು ಇಳಿಯುವ ದೃಶ್ಯವೂ ಇದೆ. ಜೊತೆಗೆ ಟ್ರೇಲರ್ನ ಒಂದು ದೃಶ್ಯದಲ್ಲಿ ಕತ್ರಿನಾ ಅವರು ಇನ್ನಾದರದ್ದೋ ಭುಜದ ಮೂಲಕ ಫೈರಿಂಗ್ ಮಾಡುವುದನ್ನು ನೋಡಬಹುದು. ಒಟ್ಟಿನಲ್ಲಿ ಕತ್ರಿನಾರ ವಿಭಿನ್ನ ರೀತಿಯ ಆ್ಯಕ್ಷನ್ ಫ್ಯಾನ್ಸ್ಗೆ ಥ್ರಿಲ್ ನೀಡುತ್ತಿದೆ. ಅಂದಹಾಗೆ ಟೈಗರ್ -3 ಯನ್ನು ಮನೀಶ್ ಶರ್ಮಾ ನಿರ್ದೇಶಿಸಿದ್ದಾರೆ ಮತ್ತು ಆದಿತ್ಯ ಚೋಪ್ರಾ ಕಥೆ ಬರೆದಿದ್ದಾರೆ. ಪಠಾಣ್ ಚಿತ್ರದಲ್ಲಿ ಸಲ್ಮಾನ್ ಖಾನ್ ಮಾಡಿದಂತೆಯೇ ಟೈಗರ್ 3 ನಲ್ಲಿ ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಆದರೆ ಈ ಪಾತ್ರದ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗವಾಗಿಲ್ಲ.
ಅಬ್ಬಬ್ಬಾ! ಮೈತುಂಬಾ ಲಕಲಕ ಚಿನ್ನದ ಆಭರಣ.. ರಮೇಶ್ ಅರವಿಂದ್ ಬಂಗಾರದ ಮನುಷ್ಯ ಆಗಿದ್ದೇಕೆ?