ಹೇಮಾಮಾಲಿನಿ @75: ಶಾರುಖ್​ ಖಾನ್​ರನ್ನು ರಿಜೆಕ್ಟ್​ ಮಾಡಿದ್ದ ಕನಸಿನ ಕನ್ಯೆಯ ಇಂಟರೆಸ್ಟಿಂಗ್​ ವಿಷ್ಯ ರಿವೀಲ್​!

By Suvarna News  |  First Published Oct 16, 2023, 12:23 PM IST

ಮೊದಲ ಚಿತ್ರದ ಆಡಿಷನ್​ನಲ್ಲಿ ನಟ ಶಾರುಖ್​ ಖಾನ್​ರನ್ನು ಹೇಮಾ ಮಾಲಿನಿ ರಿಜೆಕ್ಟ್​ ಮಾಡಿದ್ರಂತೆ.  ಇಂಟರೆಸ್ಟಿಂಗ್​ ವಿಷ್ಯ ರಿವೀಲ್​!
 


ಬ್ಲ್ಯಾಕ್​ ಆ್ಯಂಡ್​ ವೈಟ್​ ಚಿತ್ರದ ವೇಳೆಯಿಂದಲೂ ಬಿ-ಟೌನ್​ ಆಳಿ, ಕನಸಿನ ಕನ್ಯೆ (Dream Girl) ಎಂದೇ ಬಿರುದು ಪಡೆದಿರುವ, ಇಂದಿಗೂ ಅದೇ ಬಿರುದನ್ನು ಉಳಿಸಿಕೊಂಡಿರುವ ನಟಿ ಹೇಮಾ ಮಾಲಿನಿ. ಇಂದು ಅಂದರೆ ಅಕ್ಟೋಬರ್​ 16 ಅವರ ಜನುಮ ದಿನ. ಇಂದು ಹೇಮಾ ಮಾಲಿನಿಯವರು 75 ವಸಂತಗಳನ್ನು ಪೂರೈಸಿದ್ದಾರೆ. ವಯಸ್ಸು ದೇಹಕ್ಕೆ ಮಾತ್ರ ಎನ್ನುವ ಮಾತಿಗೆ ಅನ್ವರ್ಥರಾಗಿರುವವರಲ್ಲಿ 1948ರ ಅಕ್ಟೋಬರ್‌ 16ರಂದು ಜನಿಸಿರುವ ಹೇಮಾ ಮಾಲಿನಿ ಕೂಡ ಒಬ್ಬರು. ಈ ವಯಸ್ಸಿನಲ್ಲಿಯೂ ಅವರು ಅದ್ಭುತವಾಗಿ ಶಾಸ್ತ್ರೀಯ ನೃತ್ಯ ಮಾಡಬಲ್ಲರು. ಬಣ್ಣ ಹಚ್ಚಿ ವೇದಿಕೆಯ ಮೇಲಿಳಿದರೆ ಇವರಿಗೆ ನಿಜಕ್ಕೂ ಇಷ್ಟು ವಯಸ್ಸಾಗಿದ್ದು ಹೌದಾ ಎನ್ನುವಂಥ ಸೌಂದರ್ಯ.  ಹೇಮಾ ಮಾಲಿನಿ ಅವರು ನಟಿಯಾಗಿ, ನಿರ್ದೇಶಕಿಯಾಗಿ, ನಿರ್ಮಾಪಕಿಯಾಗಿ ಜನಪ್ರಿಯತೆ ಪಡೆದಿದ್ದಾರೆ. ಇವರು ರಾಜಕಾರಣಿಯೂ ಹೌದು. 2014ರಿಂದ ಮಥುರಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಇವರು ಬಿಜೆಪಿ ಆಡಳಿತದಲ್ಲಿ ಲೋಕಸಭೆ ಸದಸ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2011ರಿಂದ 2012ರವರೆಗೆ ಕರ್ನಾಟಕ ರಾಜ್ಯಸಭೆಯ ಸದಸ್ಯೆಯಾಗಿದ್ದರು.

ಇದೀಗ ಇವರ ಹುಟ್ಟುಹಬ್ಬದ ಸಮಯದಲ್ಲಿ ನಟ ಶಾರುಖ್​ ಖಾನ್​ ಅವರ ಕುರಿತಾದ ಇಂಟರೆಸ್ಟಿಂಗ್​ ವಿಷಯವೊಂದು ಬಹಿರಂಗಗೊಂಡಿದೆ. ಅಸಲಿಗೆ ಈ ವಿಷಯವನ್ನು ನಟಿ,  ಆತ್ಮಚರಿತ್ರೆ "ಹೇಮಾ ಮಾಲಿನಿ: ಬಿಯಾಂಡ್‌ ದಿ ಡ್ರೀಮ್‌ ಗರ್ಲ್‌ನಲ್ಲಿ ಉಲ್ಲೇಖಿಸಿದ್ದಾರೆ. ಅದು ಶಾರುಖ್​ ಖಾನ್​ ಅವರ ಮೊದಲು ಆಡಿಷನ್​ ಕುರಿತಾಗಿ ಇರುವಂಥದ್ದು. ಇಂದು ಬಾಲಿವುಡ್ ಬಾದ್​ಷಾ ಎಂದೇ ಬಿರುದು ಪಡೆದಿರೋ ಶಾರುಖ್​ ವಯಸ್ಸು 57 ಆದರೂ ಬ್ಲಾಕ್​ಬಸ್ಟರ್​ ಚಿತ್ರಗಳನ್ನು ನೀಡುತ್ತಲೇ ಇದ್ದಾರೆ. ಪಠಾಣ್​ ಮತ್ತು ಜವಾನ್​ ಬಳಿಕ ಈಗ ಡಂಕಿ ಚಿತ್ರದತ್ತ ಗಮನ ಹರಿಸಿರೋ ಶಾರುಖ್​ ಖಾನ್​, ಮೊದಲ ಆಡಿಷನ್​ನಲ್ಲಿಯೇ ರಿಜೆಕ್ಟ್​ ಆಗಿದ್ದರು ಎನ್ನುವುದು ಗೊತ್ತಾ? ಅವರನ್ನು ರಿಜೆಕ್ಟ್​ ಮಾಡಿದ್ದು ಕೂಡ ಹೇಮಾ ಮಾಲಿನಿ! ಇದನ್ನು ಅವರು ಆತ್ಮಚರಿತ್ರೆಯಲ್ಲಿ ಉಲ್ಲೇಖಿಸಿದ್ದಾರೆ.

Tap to resize

Latest Videos

ಬೇರೆಯವ್ರ ಜೊತೆ ಲಿಪ್​ಲಾಕ್​ ಸೀನ್​ಗೆ ಹೇಮಾ ಮಾಲಿನಿ ರೆಡಿ ಇದ್ದಾರಾ? ನಟಿ ಹೇಳಿದ್ದೇನು?

ಹಲವರಿಗೆ ತಿಳಿದಿರುವಂತೆ ಶಾರುಖ್​ ಬಾಲಿವುಡ್​ಗೆ ಪದಾರ್ಪಣೆ ಮಾಡುವ ಮುನ್ನ ದೂರದರ್ಶನದಲ್ಲಿ ಬರುತ್ತಿದ್ದ ಧಾರಾವಾಹಿಗಳಲ್ಲಿ ನಟಿಸುತ್ತಿದ್ದರು.  1988ರಲ್ಲಿ ಶಾರುಖ್​  ಫೌಜಿ ಧಾರಾವಾಹಿಯಲ್ಲಿ ನಟಿಸಿದ್ದರು.  ಅದಾದ ಬಳಿಕ  ದಿಲ್‌ ಧರಿಯಾ, ಸರ್ಕಸ್‌, ದೂಸ್ತಾ ಮುಂತಾದ ಟೀವಿ ಶೋಗಳಲ್ಲಿಯೂ ಕಾಣಿಸಿಕೊಂಡರು. ಸರ್ಕಸ್​ ಸೀರಿಯಲ್​ ಅವರಿಗೆ ತುಂಬಾ ಹೆಸರು ತಂದುಕೊಟ್ಟಿತ್ತು.  ಇದಾದ ಬಳಿಕ  ಈಡಿಯೇಟ್‌ ಎಂಬ ಮಿನಿ ಟೀವಿ ಸೀರಿಸ್‌ನಲ್ಲೂ ನಟಿಸಿದ್ದರು. ನಂತರ ಬಾಲಿವುಡ್​​ಗೆ ಪದಾರ್ಪಣೆ ಮಾಡುವ ಮನಸ್ಸು ಮಾಡಿದ್ದರು ಶಾರುಖ್​. ಅದರಂತೆ ಇವರ ಆಡಿಷನ್​ ಮಾಡಿದ್ದು ಹೇಮಾ ಮಾಲಿನಿ. ಆದರೆ ಮೊದಲ ಬಾರಿ  ಶಾರುಖ್​ ಆಡಿಷನ್​ಗೆ ಬಂದಾಗ ಸಿಕ್ಕಾಪಟ್ಟೆ ನರ್ವಸ್​ ಆಗಿದ್ದರಂತೆ.  ಹೇಮಾ ಅವರು ಕೇಳುತ್ತಿದ್ದ  ಪ್ರಶ್ನೆಗೆ ತಡವರಿಸಿದ್ದರಂತೆ. ಇದೇ ಕಾರಣಕ್ಕೆ ಹೇಮಾ ಮಾಲಿನಿ ಅವರನ್ನು ರಿಜೆಕ್ಟ್​ ಮಾಡಿದ್ದರಂತೆ.

ಆದರೆ ಸರಿಯಾಗಿ ಉತ್ತರಿಸುವುದನ್ನು ಕಲಿತು ಮತ್ತೊಮ್ಮೆ ಬಾ ಎಂದಿದ್ದರು ಹೇಮಾ. ಈ ಕುರಿತು ಆತ್ಮಚರಿತ್ರೆಯಲ್ಲಿ ಬರೆದಿರುವ ಹೇಮಾ ಮಾಲಿನಿ, ಶಾರುಖ್​ ಖಾನ್​ರ  ಕೂದಲನ್ನು ಹಿಂದಕ್ಕೆ ಮಾಡಿ, ವರ್ಣರಂಜಿತ ಜಾಕೆಟ್‌ ಬದಲು ಸರಳ ಟೀಶರ್ಟ್‌ ಹಾಕಲು ಸೂಚಿಸಿದೆ. ಆತನ ಹೇರ್‌ಸ್ಟೈಲ್‌ ಮತ್ತು ಲುಕ್‌ ನೋಡಿ ಎರಡನೇ ಅಡಿಷನ್‌ನಲ್ಲಿ ಒಂದು ಅವಕಾಶ ನೀಡಿದೆ.  ಇದಾದ ಬಳಿಕ ಧರ್ಮೇಂದ್ರ ಅವರನ್ನು ಭೇಟಿಯಾಗುವಂತೆ ಶಾರೂಖ್‌ ಖಾನ್‌ಗೆ ತಿಳಿಸಿದೆ.  ಧರ್ಮೇಂದ್ರ ಅವರಿಗೆ ಮೊದಲ ನೋಟದಲ್ಲಿಯೇ ಶಾರುಖ್‌ ಇಷ್ಟವಾಗಿದ್ದರು. ಅಲ್ಲಿಂದ ಅವರ ಸಿನಿ ಪಯಣ ಆರಂಭವಾಯಿತು ಎಂದಿದ್ದಾರೆ.  ಮೊದಲ ಚಿತ್ರ ದಿಲ್‌ ಆಶ್ನಾ ಹೈ ಚಿತ್ರಕ್ಕೆ ಶಾರುಖ್​ ಅವರನ್ನು ಸೆಲೆಕ್ಟ್​ ಮಾಡಲಾಗಿತ್ತು.

ಹೇಮಾ ಮಾಲಿನಿ ದಾಂಪತ್ಯದ ಕಣ್ಣೀರ ಕಥೆ: ಅಗಲಿಕೆಯ ಈ ನೋವು ಯಾರಿಗೂ ಬೇಡ ಎಂದ ನಟಿ!
 
ಇನ್ನು ಹೇಮಾ ಮಾಲಿನಿಯವರ ಸಿನಿ ಕರಿಯರ್​ ಕುರಿತು ಹೇಳುವುದಾದರೆ,  1963ರಲ್ಲಿ ತಮಿಳು ಚಿತ್ರ ಇಧು ಸತ್ಯಂ ಮೂಲಕ ಇವರು ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. 1968ರಲ್ಲಿ ಬಿಡುಗಡೆಗೊಂಡ ಸಪ್ನೋ ಕಾ ಸೌದಾಗರ್ ಚಿತ್ರದಿಂದ ಬಾಲಿವುಡ್​ನಲ್ಲಿ ಕಾಣಿಸಿಕೊಂಡರು.  ಧರ್ಮೇಂದ್ರ ಅವರ ಜೊತೆ 1980ರಲ್ಲಿ ವಿವಾಹವಾಯಿತು. ಇವರಿಗೆ  ಹಲವು ಫಿಲ್ಮ್‌ಫೇರ್‌ ಪ್ರಶಸ್ತಿಗಳು ದೊರಕಿವೆ. 2000ರಲ್ಲಿ ಪದ್ಮಶ್ರೀ ಪ್ರಶಸ್ತಿಗೂ ಭಾಜನರಾಗಿದ್ದಾರೆ. 

click me!