ನಂಬಿಕೆ, ಭಯ ನಮ್ಮನ್ನು ಬೇರ್ಪಡಿಸಿದೆ: ನಾಗ ಚೈತನ್ಯಗೆ ಕೌಂಟರ್ ಕೊಟ್ರಾ ಸಮಂತಾ?

Published : May 06, 2023, 04:16 PM IST
ನಂಬಿಕೆ, ಭಯ ನಮ್ಮನ್ನು ಬೇರ್ಪಡಿಸಿದೆ: ನಾಗ ಚೈತನ್ಯಗೆ ಕೌಂಟರ್ ಕೊಟ್ರಾ ಸಮಂತಾ?

ಸಾರಾಂಶ

ನಂಬಿಕೆ, ಭಯ, ಅಹಂಕಾರ ನಮ್ಮನ್ನು ಬೇರ್ಪಡಿಸಿದೆ ಎನ್ನುವ ಸಾಲನ್ನು ಶೇರ್ ಮಾಡುವ ಮೂಲಕ ನಾಗ ಚೈತನ್ಯಗೆ ಕೌಂಟರ್ ಕೊಟ್ರಾ ಸಮಂತಾ ಎನ್ನುವ ಮಾತು ಕೇಳಿ ಬರುತ್ತಿದೆ.

ನಟಿ ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇದನ ಪಡೆದು ವರ್ಷದ ಮೇಲಾದರೂ ಇಬ್ಬರೂ ಸದಾ ಸುದ್ದಿಯಲ್ಲಿರುತ್ತಾರೆ. ಒಂದಲ್ಲೊಂದು ವಿಚಾರಕ್ಕೆ ಇಬ್ಬರೂ ಸದ್ದು ಮಾಡುತ್ತಿರುತ್ತಾರೆ. ಇದೀಗ ಸಮಂತಾ ಮಾಡಿರುವ ಪೋಸ್ಟ್ ಸಾಕಷ್ಟು ವೈರಲ್ ಆಗಿದೆ. ಈ ಸಾಲನ್ನು ಹಂಚಿಕೊಳ್ಳುವ ಮೂಲಕ ಮಾಜಿ ಪತಿಗೆ ಕೌಂಟರ್ ಕೊಟ್ರಾ ಎನ್ನುವ ಅನುಮಾನ ಮೂಡಿಸಿದೆ. ಅಹಂಕಾರ, ಭಯ, ನಂಬಿಕೆ ನಮ್ಮನ್ನು ಬೇರ್ಪಡಿಸುತ್ತವೆ ಎಂದು ಸಮಂತಾ ಪೋಸ್ಟಿನ ಹಿಂದಿನ ಅರ್ಥವೇನು ಎಂದು ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ. 

ಸ್ಯಾಮ್ ತನ್ನ Instagram ಸ್ಟೋರಿಸ್‌ನಲ್ಲಿ, ನಿಕೋಲಾ ಟೆಸ್ಲಾ ಅವರ ಜನಪ್ರಿಯ ಸಾಲನ್ನು ಶೇರ್ ಮಾಡಿದ್ದಾರೆ. 'ನಾವೆಲ್ಲರೂ ಒಂದೇ. ಅಹಂಕಾರ, ನಂಬಿಕೆ ಮತ್ತು ಭಯ ಮಾತ್ರ ನಮ್ಮನ್ನು ಬೇರ್ಪಡಿಸುತ್ತವೆ' ಸಾಲನ್ನು ಹಂಚಿಕೊಂಡಿದ್ದಾರೆ. ಈ ಸಾಲು ಮಾಜಿ ಪತಿ ನಾಗ ಚೈತನ್ಯ ಜೊತೆಗಿನ ಬೇರ್ಪಡಿಕೆ ಬಗ್ಗೆ ಸಮಂತಾ ಪರೋಕ್ಷವಾಗಿ ಹೇಳಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಇತ್ತೀಚೆಗಷ್ಟೆ ನಾಗ ಚೈತನ್ಯ ಮಾಜಿ ಪತ್ನಿ ಸಮಂತಾ ಬಗ್ಗೆ ಮಾತನಾಡಿದ್ದರು. ಆ ಮಾತುಗಳಿಗೆ ಸಮಂತಾ ಈ ಸಾಲುಗಳ ಮೂಲಕ ಕೌಂಟರ್ ಕೊಟ್ಟಿದ್ದಾರಾ ಎನ್ನುವ ಅನುಮಾನ ಮೂಡಿದೆ. 

ಬೇಡ ಅಂದ್ರೂ ಬಿಡದ ತಂಡ; ಎಳೆದುಕೊಂಡು ಬಂದು ಸಮಂತಾ ಹುಟ್ಟುಹಬ್ಬ ಆಚರಿಸಿದ 'ಸಿಟಾಡೆಲ್' ಟೀಂ

ನಾಗ ಚೈತನ್ಯ ಹೇಳಿದ್ದೇನು? 

ಇತ್ತೀಚೆಗಷ್ಟೆ ನಾಗ ಚೈತನ್ಯ ಸಂದರ್ಶನದಲ್ಲಿ ಸಮಂತಾ ಬಗ್ಗೆ ಮಾತನಾಡಿದ್ದರು. ವಿಚ್ಛೇದನದ ಬಗ್ಗೆ ಮೊದಲ ಬಾರಿಗೆ ಮೌನ ಮುರಿದಿದ್ದರು. ಕಸ್ಟಡಿ ಸಿನಿಮಾದ ಪ್ರಚಾರದಲ್ಲಿರುವ ನಾಗ ಚೈತನ್ಯ ಅನೇಕ ವಿಚಾರಗಳನ್ನು ಬಹಿರಂಗ ಪಡಿಸಿದ್ದರು. 'ನಾವು ಬೇರೆಯಾಗಿ ಎರಡು ವರ್ಷಗಳಿಗಿಂತ ಜಾಸ್ತಿಯಾಗಿದೆ. ಔಪಚಾರಿಕವಾಗಿ ವಿಚ್ಛೇದನ ಪಡೆದು ಒಂದು ವರ್ಷವಾಗಿದೆ. ನ್ಯಾಯಾಲಯವು ನಮಗೆ ವಿಚ್ಛೇದನಕ್ಕೆ ಅನುಮತಿ ನೀಡಿದೆ. ನಾವಿಬ್ಬರೂ ನಮ್ಮ ಜೀವನದಲ್ಲಿ ಮುಂದೆ ಸಾಗಿದ್ದೇವೆ. ನನ್ನ ಜೀವನದ ಆ ಹಂತದ ಬಗ್ಗೆ ನನಗೆ ಅಪಾರ ಗೌರವವಿದೆ' ಎಂದು ನಾಗ ಚೈತನ್ಯ ಹೇಳಿದ್ದರು. 

ಆಕೆ ಎಲ್ಲಾ ಸಂತೋಷಕ್ಕೂ ಅರ್ಹ; ಮಾಜಿ ಪತ್ನಿ ಸಮಂತಾ ಬಗ್ಗೆ ನಾಗ ಚೈತನ್ಯ ಮಾತು

ಇದೇ ಸಮಯದಲ್ಲಿ ನಾಗ ಚೈತನ್ಯ ಮಾಜಿ ಪತ್ನಿ ಬಗ್ಗೆ, 'ಒಳ್ಳೆಯ ವ್ಯಕ್ತಿ ಮತ್ತು ಎಲ್ಲಾ ಸಂತೋಷಕ್ಕೆ ಆಕೆ ಅರ್ಹಳು. ಮಾಧ್ಯಮಗಳು ನಮ್ಮ ನಡುವೆ ವಿಚಿತ್ರವಾದ ಸಂಗತಿಗಳನ್ನು ಮಾಡುತ್ತಿವೆ. ಸಾರ್ವಜನಿಕರ ದೃಷ್ಟಿಯಲ್ಲಿ ಪರಸ್ಪರ ಗೌರವವು ದೂರವಾಗುತ್ತದೆ. ಅದು ನನಗೆ ಬೇಸರವಾಗಿದೆ' ಎಂದು ಹೇಳಿದ್ದರು.  'ತುಂಬಾ ತುಂಬಾ ಸಂತೋಷವಾಗಿದ್ದೀನಿ. ಜೀವನದ ಪ್ರತಿ ಹಂತವೂ ಪಾಠವಾಗಿದೆ. ನಾನು ನನ್ನ ಜೀವನವನ್ನು ಸಕಾರಾತ್ಮಕತೆಯಿಂದ ನೋಡುತ್ತೇನೆ. ಎಲ್ಲದಕ್ಕೂ ತುಂಬಾ ಧನ್ಯವಾದ ಹೇಳುತ್ತೇನೆ' ಎಂದು ನಾಗ ಚೈತನ್ಯ ಹೇಳಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!
ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?