ಚಾಕೊಲೇಟ್ ನೋಡ್ತಿದ್ದಂತೆ ಮಕ್ಕಳ ರಿಯಾಕ್ಷನ್ ಅದ್ಭುತವಾಗಿರುತ್ತದೆ. ಖುಷಿಯಲ್ಲಿ ಮಾರ್ನಾಲ್ಕು ಚಾಕೊಲೇಟನ್ನು ಮಕ್ಕಳು ಬಾಚಿಕೊಳ್ತಾರೆ. ಇದಕ್ಕೆ ಸೆಲೆಬ್ರಿಟಿ ಕಿಡ್ಸ್ ಹೊರತಾಗಿಲ್ಲ. ಕರೀನಾ ಕಪೂರ್ ಖಾನ್ ಮಗ ಜೆಹ್ ವಿಡಿಯೋ ಒಂದು ಇದಕ್ಕೆ ಎಗ್ಸಾಂಪಲ್
ಮಕ್ಕಳು ಮಕ್ಕಳೇ… ಅವರು ಎಷ್ಟೇ ಶ್ರೀಮಂತರಿರಲಿ ಇಲ್ಲ ಸೆಲೆಬ್ರಿಟಿ ಕಿಡ್ಸ್ (Celebrity Kids) ಆಗಿರ್ಲಿ. ಮನೆಯಲ್ಲಿ ಕೊಳೆಯುವಷ್ಟು ಬಿದ್ದಿದ್ರೂ ಹೊರಗೆ ಚಾಕೋಲೇಟ್ ಕಂಡಾಗ ಓಡಿ ಹೋಗೋದು ಮಕ್ಕಳ ಸ್ವಭಾವ. ಇದಕ್ಕೆ ಛೋಟಾ ನವಾಬ್ ಸೈಫ್ ಅಲಿ ಖಾನ್ (Chota Nawab Saif Ali Khan) ಮಗ ಜೆಹ್ (Jeh) ಕೂಡ ಹೊರತಾಗಿಲ್ಲ. ಈಗ ಜೆಹ್ ವಿಡಿಯೋ ಒಂದು ವೈರಲ್ ಆಗಿದೆ. ಅದ್ರಲ್ಲಿ ಜೆಹ್ ತುಂಟಾಟವನ್ನು ನೋಡ್ಬಹುದು. ಚಾಕೊಲೇಟ್ (Chocolate) ಕಾಣ್ತಿದ್ದಂತೆ ಜೆಹ್ ಮಾಡುವ ಕೆಲಸ ಕ್ಯೂಟ್ ಆಗಿದೆ.
ವಿಶ್ವದ ಪ್ರಸಿದ್ಧ ಯುಟ್ಯೂಬರ್ ಮಿಸ್ಟರ್ ಬೀಸ್ಟ್ (YouTuber Mr. Beast) ಭಾರತಕ್ಕೆ ಬಂದಿದ್ದಾರೆ. ಚಾಕೊಲೇಟ್ ಬ್ರಾಂಡ್ ಫೀಸ್ಟಬಲ್ ಅನ್ನು ಪ್ರಾರಂಭಿಸಲು ಭಾರತದಲ್ಲಿದ್ದಾರೆ. ಮುಂಬೈನಲ್ಲಿ ಮಿಸ್ಟರ್ ಬೀಸ್ಟ್ ಏರ್ಪಡಿಸಿದ್ದ ಈವೆಂಟ್ ಗೆ ಬಾಲಿವುಡ್ ನಟ ಸೈಫ್ ಅಲಿ ಖಾನ್, ನಟಿ ಕರೀನಾ ಕಪೂರ್ ಖಾನ್ (Actress Kareena Kapoor Khan), ತೈಮೂರ್ ಹಾಗೂ ಜೆಹ್ ಬಂದಿದ್ದರು. ಪ್ಲೇಟ್ ನಲ್ಲಿ ಒಂದಿಷ್ಟು ಚಾಕೋಲೇಟ್ ಹಾಕಿಡಲಾಗಿತ್ತು. ಇದನ್ನು ನೋಡಿದ ಜೆಹ್ ಖುಷಿಯಾಗಿದ್ದಾನೆ. ಅಲ್ಲಿಗೆ ಬಂದ ತೈಮೂರ್, ಚಾಕೋಲೇಟ್ ತೆಗೆದುಕೊಂಡು ಹೋಗಿದ್ದಾನೆ. ಜೆಹ್ ಕಂಕಳಿನಲ್ಲಿ ಒಂದು ಚಾಕೊಲೇಟ್ ಹಿಡಿದಿದ್ದು, ಇನ್ನೊಂದಕ್ಕೆ ಕೈ ಹಾಕ್ತಿದ್ದಾನೆ. ಸೈಫ್ ಅಲಿ ಖಾನ್, ಕಣ್ಣು ತಪ್ಪಿಸಿ ಇನ್ನೊಂದು ಚಾಕೊಲೇಟ್ ಹಿಡಿಯುವ ಪ್ರಯತ್ನ ಮಾಡಿದ್ದಾನೆ. ಸೈಫ್, ಜೆಹ್ ಕೈ ಬಿಡಿಸಿದ್ರೂ ಮತ್ತೆ ಕೈ ಹಾಕ್ತಾನೆ. ಕೊನೆಯಲ್ಲಿ ಅಪ್ಪನ ಆಜ್ಞೆಗೆ ಮಣಿದು ಅಲ್ಲಿಂದ ನಿರಾಸೆಯಾಗಿ ಹೋಗ್ತಾನೆ.
undefined
ಲವ್ ಯೂ ಟೂ ರಾಮು' ಅಂತ ರಾಮ್ ಗೋಪಾಲ್ ವರ್ಮಾಗೆ ಮೆಸೇಜ್ ಕಳಿಸಿದ್ದ ಐಶ್ವರ್ಯಾ ರೈ!
ಈ ವಿಡಿಯೋಕ್ಕೆ ಸಾಕಷ್ಟು ಕಮೆಂಟ್ ಬಂದಿದೆ. ಈಗ ಚಾಕೊಲೇಟ್ ಗೆ ಆಸೆ ಪಡ್ತಿರುವ ಹುಡುಗ ಮುಂದೊಂದು ದಿನ ಚಾಕೋಲೇಟ್ ಕಂಪನಿ ಮಾಲೀಕ ಆಗ್ಬಹುದು ಎಂದಿದ್ದಾರೆ ಬಳಕೆದಾರರು. ಮತ್ತೊಬ್ಬರು ಎಷ್ಟಾದ್ರೂ ಮಕ್ಕಳು, ಮಕ್ಕಳೇ. ಬಡವರ ಮಕ್ಕಳು ಮಾತ್ರ ಹೀಗೆ ಅಂದ್ಕೊಂಡಿದ್ವಿ ಎಂದು ಕಮೆಂಟ್ ಮಾಡಿದ್ದಾರೆ. ಮನೆಯಲ್ಲಿ ಎಷ್ಟೇ ಆಹಾರ ನೀಡಿದ್ರೂ ಹೊರಗೆ ಹೋದಾಗ ಮಕ್ಕಳು ವಿಚಿತ್ರವಾಗಿ ಆಡ್ತಾರೆ. ಇದಕ್ಕೆ ಶ್ರೀಮಂತರ ಮಕ್ಕಳೂ ಹೊರತಾಗಿಲ್ಲ ಎನ್ನುವುದು ಈಗ ಗೊತ್ತಾಯ್ತು ಎಂಬ ಕಮೆಂಟ್ ಕೂಡ ಬಂದಿದೆ. ಮಕ್ಕಳನ್ನು ಅವರ ಇಷ್ಟದ ಕೆಲಸ ಮಾಡಲು ಬಿಡಿ. ಬಾಲ್ಯ ಮತ್ತೆ ಬರೋದಿಲ್ಲ ಎಂದು ಬಳಕೆದಾರರೊಬ್ಬರು ಸಲಹೆ ನೀಡಿದ್ದಾರೆ.
ತೈಮೂರ್ ನಂತ್ರ ಜೆಹ್ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿರುತ್ತವೆ. ಜೆಹ್ ಎಲ್ಲಿ ಹೋದ್ರೂ ಪಾಪರಾಜಿಗಳ ಕಣ್ಣು ಆತನ ಮೇಲಿರುತ್ತದೆ. ಪಾಪರಾಜಿಗಳನ್ನು ನೋಡ್ತಿದ್ದಂತೆ ಜೆಹ್ ಒಂದೇ ಬಾರಿಗೆ 100 ಎಕ್ಸ್‌ಪ್ರೆಶನ್ ನೀಡ್ತಾನೆ. ಇದನ್ನು ಅಭಿಮಾನಿಗಳು ತುಂಬಾ ಇಷ್ಟಪಡುತ್ತಾರೆ. ಜೆಹ್ ಬಹಳ ತುಂಟ. ಸದಾ ಚೇಷ್ಠೆ ಮಾಡ್ತಿರುತ್ತಾನೆಂದು ಈ ಹಿಂದೆ ಕರೀನಾ ಕಪೂರ್ ಖಾನ್ ಕೂಡ ಹೇಳಿದ್ದರು.
ಪ್ರಭಾಸ್‌ಗೆ ಪವನ್ ಸಿನಿಮಾದ ಹಾಡು ಇಷ್ಟ: ಪಾರ್ಟಿಲಿ ಈ ಸಾಂಗ್ ಹಾಕಿದರೆ ಫ್ರೆಂಡ್ಸ್
ಮಿಸ್ಟರ್ ಬೀಸ್ಟ್ ಕಾರ್ಯಕ್ರಮದಲ್ಲೂ ಕರೀನಾ ಕಪೂರ್ ಖಾನ್ ಕೊನೆಯ ಮಗನ ಕೆಲ ವಿಡಿಯೋ ಸೋಶಿಯಲ್ ಮೀಡಿಯಾ ಬಳಕೆದಾರರ ಮನ ಗೆದ್ದಿದೆ. ಈವೆಂಟ್ ನಲ್ಲಿ ಬೀಸ್ಟ್ ಜೊತೆ ಯಾರು ಫೋಟೋ ತೆಗೆಸಿಕೊಳ್ತೀರಿ ಎನ್ನುವ ಪ್ರಶ್ನೆಗೆ ಜೆಹ್ ಕೈ ಎತ್ತುತ್ತಾನೆ. ಆದ್ರೆ ಫೋಟೋ ತೆಗೆಸಿಕೊಳ್ಳಲು ಹೋಗೋದಿಲ್ಲ. ಕರೀನಾ ಸಲಹೆಯಂತೆ ಸೈಫ್, ಮಗನನ್ನು ಕರೆದುಕೊಂಡು ಮಿಸ್ಟರ್ ಬೀಸ್ಟ್ ಬಳಿ ಹೋಗೋದನ್ನು ನೀವು ಕಾಣ್ಬಹುದು.
ಮಿಸ್ಟರ್ ಬೀಸ್ಟ್ ಮುಂಬೈನಲ್ಲಿ ಮೊದಲು ಆಟೋ ಓಡಿಸಿದ್ದಾರೆ. ನಂತ್ರ ಈವೆಂಟ್ ನಲ್ಲಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮಕ್ಕೆ ಸೆಲೆಬ್ರಿಟಿಗಳು ತಮ್ಮ ಮಕ್ಕಳ ಜೊತೆ ಬಂದಿದ್ದರು. ಜೆನಿಲಿಯಾ ಡಿಸೋಜಾ, ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ಸೇರಿದಂತೆ ಅನೇಕರು ಮಿಸ್ಟರ್ ಬೀಸ್ಟ್ ಭೇಟಿಗೆ ಕ್ಯೂನಲ್ಲಿ ಇದ್ದಿದ್ದನ್ನು ಕಾಣ್ಬಹುದು.