
ಒಂದು ಕಾಲದ ಖ್ಯಾತ ನಿರ್ದೇಶಕರಾದ ರಾಮ್ ಗೋಪಾಲ್ ವರ್ಮಾ (Ram Gopal Varma) ಇತ್ತೀಚೆಗೆ ಬೇರೆಬೇರೆ ಸಂಗತಿಗಳಿಗೆ ಸುದ್ದಿಯಾಗುತ್ತಿರುವುದು ಗೊತ್ತೇ ಇದೆ. ಹಾಗಿದ್ರೆ ಈಗೇನಪ್ಪಾ ಅವ್ರ ಸುದ್ದಿ ಅಂದ್ರೆ, ಈ ವರ್ಮಾ ಹೇಳಿದ್ದು ಹಾಗೂ ಮಾಜಿ ವಿಶ್ವ ಸುಂದರಿ, ನಟಿ ಐಶ್ವರ್ಯಾ ರೈ (Aishwarya Rai Bachchan) ಕೇಳಿ ರಿಯಾಕ್ಟ್ ಮಾಡಿದ್ದು! ಅಲ್ಲಾರೀ, ಈ ರಾಮ್ ಗೋಪಾಲ್ ವರ್ಮಾ ಯಾರನ್ನೂ ಬಿಟ್ಟಿಲ್ವಾ' ಅಂತ ಕೇಳಿದ್ರೆ. ಹೌದು, ಅವರು ಬಹುತೇಕ ಎಲ್ಲರ ತಂಟೆಗೆ ಹೋಗುತ್ತಾರೆ, ಸುಮ್ಮನಿರುವ ಜಾಯಮಾನವೇ ಅವರದಲ್ಲವಲ್ಲ!
ಅಷ್ಟಿದ್ದ ಮೇಲೆ ಆರ್‌ಜಿವಿ ಮಹಾಶಯ ವಿಶ್ವ ಸುಂದರಿ ಸುದ್ದಿಗೆ ಹೋಗದೇ ಇರಲು ಸಾಧ್ಯ? ಐಶೂ ಪ್ರಗ್ನಂಟ್ ಆದಾಗ ಈ ವರ್ಮಾಗೆ ಅದು ಇಷ್ಟವಿರಲಿಲ್ಲವಂತೆ. ಅದಕ್ಕೇ ಅವರು ಸುಮ್ಮನಿರದೇ ಐಶ್ವರ್ಯಾ ರೈಗೆ 'ಹೆಣ್ಣು ಪ್ರಗ್ನಂಟ್ ಆದ್ರೆ ಅವಳ ಸೌಂದರ್ಯ ಹಾಳಾಗುತ್ತೆ' ಅಂತ ನಾನು ಕಾಳಜಿಯಿಂದ ಐಶ್ವರ್ಯಾ ರೈಗೆ ಮೆಸೇಜ್ ಮಾಡಿದ್ದೆ ಅಂದಿದ್ದಾರೆ. ಅದಕ್ಕೆ ನಟಿ ಐಶ್ವರ್ಯಾ ರೈ ಅವರು 'ಲವ್ ಯು ಟೂ ರಾಮು' ಎಂದು ರಿಪ್ಲೈ ಮಾಡಿದ್ದರಂತೆ.
'ಗೋವಿಂದಾಯ ನಮಃ' ಕೋಮಲ್ ಕುಮಾರ್ ಸಂಕಷ್ಟದ ವೇಳೆ ಪತ್ನಿ ಅನುಸೂಯಾ ಮಾಡಿದ್ದೇನು?
ಈ ಸಂಗತಿಯನ್ನಿ ಇನ್ಯಾರಿಗೋ ಮತ್ಯಾರಿಗೂ ಹೇಳಿದ್ದಾರೆ ಈ ರಾಮ್ ಗೋಪಾಲ್ ವರ್ಮಾ. ಅದು ಈಗ ಸೋಷಿಯಲ್ ಮೀಡಿಯಾಗಳಲ್ಲಿ ಗಿರಕಿ ಹೊಡೆಯುತ್ತಿದೆ. ಐಶೂ ಮಗಳು ದೊಡ್ಡವಳಾಗಿದ್ದಾಳೆ, ಇನ್ನೇನಿದ್ದರೂ ಆರಾಧ್ಯ ಬಚ್ಚನ್ ಭಾರತೀಯ ಚಿತ್ರರಂಗಕ್ಕೆ ಪರಿಚಯವಾಗುವ ಸಮಯ ಸನಿಹವಾಗಿದೆ. ಈ ವೇಳೆ ಇದೇನ್ರೀ ಈ 'ಶಿವಂ' ಡೈರೆಕ್ಟರ್ ಮೆಸೇಜ್ ಮ್ಯಾಟರ್ ಅನ್ಬೇಡಿ. ಯಾವತ್ತೋ ಹೇಳಿದ್ದ ಮಾತು ಈಗ ಪ್ರಪಂಚ ಪರ್ಯಟನೆ ಮಾಡುತ್ತಿದೆ.
ಅದಕ್ಕೇ ಹೇಳೋದು ಮನೆಯಿಂದ ಹೊರಗಡೆ ಮಾತಾಡುವಾಗ ಹುಶಾರಾಗಿರಿ ಅಂತ. ಸೋಷಿಯಲ್ ಮೀಡಿಯಾ ಅಂದ್ರೆ ಹಾಗೇನೇ ತಾನೇ? ಯಾವತ್ತೋ ಯಾರೋ ಹೇಳಿದ್ದನ್ನು ಚೂರು ಗ್ಯಾಪ್ ಸಿಕ್ಕಾಗ ಜಗತ್ತಿನ ಮುಂದಿಟ್ಟು ತಮಾಷೆ ನೋಡೋದು! ಜೀವಂತ ಇದ್ದಾಗಲೇ ಅಂತೇನೂ ಇಲ್ಲಾರೀ, ಸತ್ತ ಮೇಲೆ ಕೂಡ ಯಾರೋ ಏನೊ ಹೇಳಿದ್ದು ಜಗತ್ತಿನ ತುಂಬಾ ಸುತ್ತುತ್ತಲೇ ಇರುತ್ತದೆ. ಇದಕ್ಕೆ ಕನ್ನಡ ನಿರ್ದೇಶರಾದ ಗುರುಪ್ರಸಾದ್ ಕೇಸ್ ಸ್ಪಷ್ಟ ಉದಾಹರಣೆ ಎನ್ನಬಹುದು.
ಸತ್ಯ ಸಾಯೋದಿಲ್ಲ ಒಂದಿನ ಹೊರಗೆ ಬರುತ್ತೆ ಅಂತಾರೆ; ಡಾ ರಾಜ್-ವಿಷ್ಣು ವಿಷ್ಯದಲ್ಲೂ ಅದು ನಿಜವಾಗಿದೆ!
ಅದರಲ್ಲೂ ಈ ರಾಮ್ ಗೋಪಾಲ್ ವರ್ಮಾ ಅಂದ್ರೆ ಸುಮ್ನೆ ಅಲ್ಲ ನೋಡಿ.. ಶ್ರೀದೇವಿ ಸೇರಿದಂತೆ ಹಲವು ಸುಂದರಿ ನಟಿಯರ ಹಿಂದೆ ಬೀಳೋದು, ಅವರ ಜೊತೆ ಲವ್, ಫ್ಲರ್ಟ್ ಅಥವಾ ಡೇಟಿಂಗ್ ಮಾಡಲಾಗದಿದ್ದರೆ ಅಟ್‌ಲೀಸ್ಟ್ ಸುಮ್ಮನೇ ಮಾತಿನಲ್ಲಿ ಗೋಳು ಹುಯ್ದುಕೊಳ್ಳೋದು. ಇಲ್ಲದಿದ್ದರೆ ಈ ವರ್ಮಾಗೆ ತಿಂದಿದ್ದು ಜೀರ್ಣವಾಗಲ್ಲ ಅಂತಾರೆ ಅವರದೇ ಆಪ್ತರು. ನಟಿ ಶ್ರೀದೇವಿ ಅವರೆಂದರೆ ಈ ಆರ್‌ಜಿವಿಗೆ ಪಂಚಪ್ರಾಣ ಎಂಬುದು ಇಡೀ ಪ್ರಪಂಚಕ್ಕೇ ಗೊತ್ತು. ಶ್ರೀದೇವಿ ಸಿಕ್ಕರೆ ಸಾಕು, ಅವರ ಜೊತೆ ಹರಟುವುದು ಇವರ ಕಾಯಕ ಎಂಬಂತೆ ಇದ್ದರು.
ಇಂಥ ವರ್ಮಾ, ಅಭಿಷೇಕ್ ಬಚ್ಚನ್ ಫ್ಯಾಲಿಗೆ ಬಿರುಗಾಳಿಯಾಗಲು ಹೊರಟಿದ್ದರು ಎಂದಹಾಗಾಯ್ತು. ಅಷ್ಟೇ ಅಲ್ಲ, ಬಾಲಿವುಡ್ ಬಿಗ್‌ಬಿ ಅಮಿತಾಭ್ ಬಚ್ಚನ್ ಅವರು ಮೊಮ್ಮಗಳನ್ನು ನೋಡುವ ಭಾಗ್ಯಕ್ಕೂ ಕೊಕ್ಕೆ ಹಾಕಲು ಹೊರಟಿದ್ದರು. ಆದರೆ, ಐಶ್ವರ್ಯಾ ರೈ ಇವರ ಆಟಕ್ಕೆ ಸೊಪ್ಪು ಹಾಕಲಿಲ್ಲ, ಮೆಸೇಜಿನಲ್ಲೇ ಲವ್ ಅಂತ ಹೇಳಿ ಆರಾಧ್ಯಾ ಬಚ್ಚನ್‌ರನ್ನು ಮಡಿಲಲ್ಲಿ ಮಲಗಿಸಿಕೊಂಡರು. ಈ ವರ್ಮಾ ಮೆಸೇಜ್ ಮಾತ್ರ ತಿರಬೋಕಿಯಂತೆ ಈಗ ಸುತ್ತಾಡುತ್ತಿದೆ!
ಐಶ್ವರ್ಯಾ ರೈ ಮಗಳು ಆರಾಧ್ಯಾ ಪಾದಕ್ಕೆರಗಿದ್ದಕ್ಕೆ ಸ್ವತಃ ಶಿವಣ್ಣ ಹೇಳಿದ್ದೇನು? ಹೀಗೂ ಉಂಟೇ?!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.