ಜಗತ್ತಿನಲ್ಲಿಯೇ ಹ್ಯಾಂಡ್‌ಸಮ್ ನಟರ ಪಟ್ಟಿಯಲ್ಲಿ ಬರುವ ನಟ ಹೃತಿಕ್ ರೋಶನ್. ಒಳ್ಳೆಯ ಡಾನ್ಸರ್, ಆಕ್ಟರ್ ಆದರೂ ಕೂಡ ಬಾಲಿವುಡ್ ಲೀಡ್ ಸ್ಟಾರ್‌ಗಳ ಲಿಸ್ಟ್‌ನಲ್ಲಿ ಆಗಾಗ ಮಾತ್ರ ನ ಪಡೆಯುತ್ತಾರೆ ನಟ ಹೃತಿಕ್ ರೋಶನ್. ಜಾಕಿ ಶ್ರಾಫ್ ಮಗ ಟೈಗರ್ ಶ್ರಾಫ್..
ಬಾಲಿವುಡ್ ಚಿತ್ರರಂಗದಲ್ಲಿ 2000ನೇ ಇಸ್ವಿಯಲ್ಲಿ ಬಿರುಗಾಳಿ ಎಬ್ಬಿಸಿ ಬಹಳಷ್ಟು ದಾಖಲೆಗಳನ್ನು ಪುಡಿಪುಡಿ ಮಾಡಿದ ಕೀರ್ತಿ 'ಕಹೋ ನ ಪ್ಯಾರ್ ಹೈ' ಚಿತ್ರಕ್ಕೆ ಸಲ್ಲುತ್ತದೆ. ಹೃತಿಕ್ ರೋಶನ್ (Hrithik Roshan) ನಟನೆಯ ಕಹೋ ನಾ ಪ್ಯಾರ್ ಹೈ (Kaho Naa Pyaar Hai) ಚಿತ್ರವು 14 ಜನವರಿ 2000ದಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ದಾಖಲಿಸಿದೆ. 10 ಕೋಟಿ ಬಜೆಟ್‌ನಲ್ಲಿ ನಿರ್ಮಿಸಿದ್ದ ಈ ಚಿತ್ರವು ಬರೋಬ್ಬರಿ 80 ಕೋಟಿ ಕಲೆಕ್ಷನ್ ದಾಖಲಿಸಿತ್ತು. ಈ ಚಿತ್ರದಲ್ಲಿ ನಟ ಹೃತಿಕ್ ರೋಶನ್‌ಗೆ ಜೋಡಿಯಾಗಿ ನಟಿ ಅಮೀಶಾ ಪಟೇಲ್ ಇದ್ದರು.
ನಟ ಹೃತಿಕ್ ರೋಶನ್ ಅವರದೇ ನಟನೆಯ ಇನ್ನೊಂದು ಚಿತ್ರ 'ವಾರ್' 2019ರಲ್ಲಿ ತೆರೆಗೆ ಬಂದಿತ್ತು. 170 ಕೋಟಿ ಬಜೆಟ್‌ನಲ್ಲಿ ನಿರ್ಮಾಣಗೊಂಡ ಈ (War) ಚಿತ್ರವು 475 ಕೋಟಿ ಕಲೆಕ್ಷನ್ ಮಾಡಿತ್ತು. 02 ಅಕ್ಟೋಬರ್ 2019ರಂದು ರಿಲೀಸ್ ಆಗಿ ಸೂಪರ್ ಹಿಟ್ ಆಗಿದ್ದ ವಾರ್ (War) ಚಿತ್ರದಲ್ಲಿ ನಟ ಹೃತಿಕ್ ರೋಶನ್‌ಗೆ ಜೋಡಿಯಾಗಿ ವಾಣಿಶ್ರೀ ಕಪೂರ್ ಹಾಗೂ ಅನುಶ್ರೀ ಗೋಯೆಂಕಾ ನಟಿಸಿದ್ದಾರೆ. ಈ ಎರಡು ಚಿತ್ರಗಳ ಮಧ್ಯೆ ನಟ ಹೃತಿಕ್ ರೋಶನ್ ಬಹಳಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್ ಯಂಗ್ ಹೀರೋ ಟೈಗರ್ ಶ್ರಾಫ್ (Tiger Shroff) ಕೂಡ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.
undefined
ಸತ್ಯ ಸಾಯೋದಿಲ್ಲ ಒಂದಿನ ಹೊರಗೆ ಬರುತ್ತೆ ಅಂತಾರೆ; ಡಾ ರಾಜ್-ವಿಷ್ಣು ವಿಷ್ಯದಲ್ಲೂ ಅದು ನಿಜವಾಗಿದೆ!
'ಕಹೋ ನ ಪ್ಯಾರ್ ಹೈ' ಹಾಗೂ 'ವಾರ್' ಎರಡೂ ಚಿತ್ರಗಳನ್ನು ಸಹಜವಾಗಿಯೇ ತೂಗಿ ನೋಡಲಾಗುತ್ತದೆ. ಕಾರಣ, ಇವೆರಡೂ ಚಿತ್ರಗಳು ನಟ ಹೃತಿಕ್ ರೋಶನ್ ಕೆರಿಯರ್‌ನಲ್ಲಿ ತುಂಬಾ ಮುಖ್ಯವಾದ ಮೈಲಿಗಲ್ಲು ಎನ್ನಬಹುದು. ಆದರೆ ಇವೆರಡೂ ಚಿತ್ರಗಳಲ್ಲಿ, ವಾರ್‌ಗೆ ಹೋಲಿಕೆ ಮಾಡಿದಾಗ ಕಹೋ ನ ಪ್ಯಾರ್ ಹೈ ಹೆಚ್ಚು ಗಳಿಕೆ ಮಾಡಿದೆ ಎನ್ನಬಹುದು. ಏಕೆಂದರೆ, ಬಜೆಟ್ ಹಾಗೂ ಕಲೆಕ್ಷನ್ ಲೆಕ್ಕ ಹಾಕಿದರೆ ನಿಶ್ಚಿತವಾಗಿಯೂ ಕಹೋ ನ ಪ್ಯಾರ್ ಹೈ ಇವೆರಡರಲ್ಲಿ ಬಿಗ್ ಹಿಟ್ ಎನ್ನಬಹುದು.
ಇತ್ತೀಚೆಗೆ ಬಾಲಿವುಡ್ ಚಿತ್ರರಂಗಕ್ಕೆ ಬಂದು ಲೀಡಿಂಗ್ ಆಕ್ಟರ್ ಎನಿಸಿರುವ ಟೈಗರ್ ಶ್ರಾಫ್ ಅವರು ವಾರ್ ಸಿನಿಮಾದಲ್ಲಿ ಹೃತಿಕ್ ರೋಶನ್ ಜೊತೆಗಿದ್ದಾರೆ. ಆದರೂ ಕೂಡ ವಾರ್ ಗಳಿಕೆ ಬಜೆಟ್‌ಗೆ ಹೋಲಿಸಿದರೆ ಕೇವಲ ಮೂರು ಪಟ್ಟು ಜಾಸ್ತಿ. ಆದರೆ, ಕಹೋ ನ ಪ್ಯಾರ್ ಹೈ ಚಿತ್ರವು ಬರೋಬ್ಬರಿ ಎಂಟು ಕೋಟಿ ಗಳಿಕೆ ಮಾಡಿದೆ. ಅಷ್ಟೇ ಅಲ್ಲ, ಆ ಕಾಲಕ್ಕೆ ನಟ ಹೃತಿಕ್ ರೋಶನ್ ಅವರು ಸ್ಟಾರ್ ನಟರಾಗಿರಲಿಲ್ಲ, ನಾಯಕರಾಗಿ ಅದು ಅವರ ಮೊಟ್ಟಮೊದಲ ಸಿನಿಮಾ. ಎರಡೂ ಚಿತ್ರಗಳಲ್ಲಿ ಆಯಾ ಕಾಲಕ್ಕೆ ಸ್ಟಾರ್ ನಾಯಕಿಯರು ಇರಲಿಲ್ಲ ಎಂಬುದು ವಿಶೇಷ.
ವಿಜಯ ರಾಘವೇಂದ್ರಗೆ ಜೋಡಿಯಾದ ಡಾಕ್ಟರ್ ಅಶ್ವಿನಿ; ಚಿನ್ನಾರಿ ಮುತ್ತನಿಗೆ ಹೊಸ ಗೃಹಮಂತ್ರಿ!
ಒಟ್ಟಿನಲ್ಲಿ, ಜಗತ್ತಿನಲ್ಲಿಯೇ ಹ್ಯಾಂಡ್‌ಸಮ್ ನಟರ ಪಟ್ಟಿಯಲ್ಲಿ ಬರುವ ನಟ ಹೃತಿಕ್ ರೋಶನ್. ಒಳ್ಳೆಯ ಡಾನ್ಸರ್, ಆಕ್ಟರ್ ಆದರೂ ಕೂಡ ಬಾಲಿವುಡ್ ಲೀಡ್ ಸ್ಟಾರ್‌ಗಳ ಲಿಸ್ಟ್‌ನಲ್ಲಿ ಆಗಾಗ ಮಾತ್ರ ನ ಪಡೆಯುತ್ತಾರೆ ನಟ ಹೃತಿಕ್ ರೋಶನ್. ಜಾಕಿ ಶ್ರಾಫ್ ಮಗ ಟೈಗರ್ ಶ್ರಾಫ್ ಕೂಡ ಅಷ್ಟೇ, ಇನ್ನೂ ಕೂಡ ಆರಕ್ಕೇರದ ಮೂರಕ್ಕಿಳಿಯದ ನಟರಾಗಿಯೇ ಉಳಿದುಕೊಂಡಿದ್ದಾರೆ. ಈ ಕಾರಣಕ್ಕೇ ತಾನೇ ಹೇಳುವುದು 'ಕಾಲಾಯ ತಸ್ಮೈ ನಮಃ ಅಂತ..!