1+1=5 ಅಂದ್ರೂ ಓಕೆ ಎನ್ನುವೆ ಎನ್ನುವ ಮೂಲಕ ನಟಿ ಕರೀನಾ ಕಪೂರ್ ಹೊಸ ವರ್ಷದ ಮಂತ್ರ ಘೋಷಿಸಿದ್ದಾರೆ. ಏನಿದರ ಅರ್ಥ?
2024 ಸಮೀಪಿಸುತ್ತಿದೆ. ಇನ್ನೆರಡು ದಿನಗಳಲ್ಲಿಯೇ ಹೊಸ ಹೊಸ ರೆಸುಲ್ಯೂಷನ್ ಹೊತ್ತ ಕೋಟ್ಯಂತರ ಮಂದಿ ಕಾಣಸಿಗುತ್ತಾರೆ. ಹೊಸ ವರ್ಷದಲ್ಲಿ ಹೀಗೆ ಮಾಡಬೇಕು, ಹಾಗೆ ಮಾಡಬೇಕು ಎಂದೆಲ್ಲಾ ಇದಾಗಲೇ ಹಲವರು ಲೆಕ್ಕಾಚಾರ ಹಾಕಿಟ್ಟುಕೊಂಡಿದ್ದಾರೆ. ಅದೇ ರೀತಿ ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಅವರೂ ಹೊಸ ರೆಸಲ್ಯೂಷನ್ ಹಾಕಿಕೊಂಡಿದ್ದಾರೆ. ಅದೇನೆಂದರೆ ಯಾರಾದರೂ ಒಂದು ಪ್ಲಸ್ ಒಂದು ಐದು ಎಂದು ಹೇಳಿದರೂ ಅದನ್ನು ಹೌದು ಎನ್ನುವುದಂತೆ. ಅಷ್ಟಕ್ಕೂ ಬಾಲಿವುಡ್ನ ಸದ್ಯದ ಯಶಸ್ವಿ ಜೋಡಿಗಳಲ್ಲಿ ಒಂದೆನಿಸಿದೆ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಅವರ ಜೋಡಿ. ಎಲ್ಲರಿಗೂ ತಿಳಿದಿರುವಂತೆ ಇದು ಸೈಫ್ ಅಲಿ ಅವರಿಗೆ ಎರಡನೆಯ ಮದುವೆ. ಅವರ ಮೊದಲ ಮದುವೆಯಾದದ್ದು ನಟಿ ಅಮೃತಾ ಸಿಂಗ್ ಅವರ ಜೊತೆಗೆ. ತಮ್ಮ ಮೊದಲ ಮದುವೆಗೆ ಬಂದಿದ್ದ ಕರೀನಾ ಕಪೂರ್ ಅವರನ್ನು ಮಗಳೇ ಎಂದು ಕರೆದಿದ್ದ ಸೈಫ್ ಅಲಿ ನಂತರ ಆಕೆಯನ್ನೇ ಮದುವೆಯಾಗಿ ಟ್ರೋಲ್ಗೂ ಒಳಗಾಗಿದ್ದಿದೆ. ಅದೇನೇ ಇದ್ದರೂ ಸದ್ಯ ಈ ದಂಪತಿಗೆ ಇಬ್ಬರು ಪುತ್ರರಿದ್ದಾರೆ. ಕೆಲವು ಖ್ಯಾತನಾಮ ನಟರಂತೆಯೇ ಸೈಫ್ ಅಲಿ ಕೂಡ ಇಬ್ಬರೂ ಹಿಂದೂ ಯುವತಿಯರನ್ನು ಮದುವೆಯಾಗಿ ಸಕತ್ ಸುದ್ದಿ ಮಾಡಿದವರು. ಸೈಫ್ ಅಲಿ ಖಾನ್ ಕರೀನಾರಿಗಿಂತಲೂ 10 ವರ್ಷ ದೊಡ್ಡವರು. 5 ವರ್ಷಗಳ ಕಾಲ ಲಿವ್-ಇನ್ (Live in relation) ಸಂಬಂಧದಲ್ಲಿದ್ದ ಈ ಜೋಡಿ ಕೊನೆಗೆ ಮದುವೆಯಾಗಿತ್ತು. ಅದಾಗಲೇ ಲವ್ ಜಿಹಾದ್ ಎಂಬ ಬಗ್ಗೆಯೂ ದೊಡ್ಡ ಮಟ್ಟದಲ್ಲಿ ಸುದ್ದಿಯೇ ಆಗಿಬಿಟ್ಟಿತ್ತು.
ಇದೀಗ ಕರೀನಾ ಕಪೂರ್ ಹೊಸ ರೆಸಲ್ಯೂಷನ್ ಕೇಳಿ ಹಲವರು ಹುಬ್ಬೇರಿಸಿದ್ದಾರೆ. ಅಷ್ಟಕ್ಕೂ 1+1=5 ಎಂದರೂ ಸುಮ್ಮನೆ ಇರುವುದಾಗಿ ನಟಿ ಕರೀನಾ ಕಪೂರ್ ಹೇಳಿರುವ ಗೂಡಾರ್ಥ ಇಷ್ಟೇ. 2024ರಲ್ಲಿ ಯಾವುದೇ ವಾದ-ಪ್ರತಿವಾದಗಳಿಂದ ಬೆಬೋ ದೂರ ಇರ್ತಾರಂತೆ. ಯಾರು ಬಂದು ಏನೇ ಹೇಳಿದರೂ ಅವರ ಜೊತೆ ಮಾತಿನ ಚಕಮಕಿ ನಡೆಸುವುದಿಲ್ಲವಂತೆ. ಒಂದು ವೇಳೆ ಅವರು 1+1=5 ಎಂದು ಹೇಳಿದರೂ ಹೌದು, ನೀವೇ ಸರಿ ಅಂತಾರಂತೆ. ಈ ಹೊಸ ರೆಸಲ್ಯೂಷನ್ ಮಾಡಿದ್ದಾರೆ ನಟಿ. ಇದು ನನ್ನ ಹೊಸ ವರ್ಷದ ಮಂತ್ರ ಎಂದಿದ್ದಾರೆ ನಟಿ. ಇದನ್ನು ಕೇಳಿ ಹಲವರು ಕಾಲೆಳೆದಿದ್ದಾರೆ. ಅಷ್ಟೇನಾ? ನಾವೇನೋ ಇನ್ನೂ ಇಬ್ಬರು ಮಕ್ಕಳನ್ನು ಹೆರುವ ಪ್ಲ್ಯಾನ್ ಮಾಡಿದ್ದೀರಿ ಅಂದುಕೊಂಡಿದ್ದೆವು ಎಂದಿದ್ದಾರೆ. ಇದಾಗಲೇ ಸೈಫ್ಗೆ ಮೊದಲ ಪತ್ನಿಯಿಂದ ಇಬ್ಬರು ಹಾಗೂ ಕರೀನಾರಿಂದ ಇಬ್ಬರು ಒಟ್ಟು ನಾಲ್ಕು ಮಕ್ಕಳು ಇದ್ದಾರೆ. ಅದಕ್ಕೇ ಕಾಲೆಳೆದಿರುವ ನೆಟ್ಟಿಗರು ಸೈಫ್ ಐದನೇ ಮಗು ಮಾಡಿಕೊಳ್ತಾರೆ ಎಂದು ಅಂದುಕೊಂಡಿದ್ವಿ ಎಂದಿದ್ದರೆ ಇನ್ನು ಕೆಲವರು ಕರೀನಾನೇ ಇನ್ನಿಬ್ಬರನ್ನು ಹೆತ್ತರೂ ಹೆರಬಹುದು ಎಂದು ಕಾಲೆಳೆಯುತ್ತಿದ್ದಾರೆ.
undefined
ಅಪ್ಪನ ವಯಸ್ಸಿನವ ಜೊತೆ ಮದ್ವೆಯಾಗಿ ಈಗ್ಯಾಕೆ ಮುಖ ಮುಚ್ಕೊತ್ಯಾ? ಅರ್ಬಾಜ್ ಪತ್ನಿ ಸಕತ್ ಟ್ರೋಲ್
ಅಂದಹಾಗೆ, ನಟ ಸೈಫ್ ಅಲಿ ಇದೀಗ ತಮಗಿಂತ 10 ವರ್ಷ ಚಿಕ್ಕವರಾಗಿರುವ ನಟಿ ಕರೀನಾರನ್ನು (Kareena Kapoor) ಮದುವೆಯಾಗಿದ್ದರೆ, ಅಮೃತಾ ಸಿಂಗ್ ಅವರನ್ನು ಮದುವೆಯಾದಾಗ ಸೈಫ್ ಅವರಿಗೆ ವಯಸ್ಸು 21. ಆದರೆ ಅಮೃತಾ ಸಿಂಗ್ ಅವರಿಗೆ 32 ವರ್ಷ ವಯಸ್ಸಾಗಿತ್ತು! ಎಲ್ಲರನ್ನೂ ಎದುರು ಹಾಕಿಕೊಂಡು 12 ವರ್ಷ ಹಿರಿಯ ನಟಿಯನ್ನು ಮದುವೆಯಾಗಿದ್ದರು ಎಂದೇ ಸುದ್ದಿಯಾಗಿತ್ತು. ಇದು ದೊಡ್ಡ ಮಟ್ಟದಲ್ಲಿ ಹಲ್ಚಲ್ ಸೃಷ್ಟಿಸಿತ್ತು. ನಂತರ ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ 13 ವರ್ಷಗಳ ದಾಂಪತ್ಯದ ನಂತರ ವಿಚ್ಛೇದನ ಪಡೆದರು. 2004ರಲ್ಲಿ ಸೈಫ್ ಹಾಗೂ ಅಮೃತಾ ತಮ್ಮ ಮದುವೆಯನ್ನು ಕೊನೆಗೊಳಿಸಲು ನಿರ್ಧರಿಸಿದಾಗ ಸಾರಾ 10 ಮತ್ತು ಇಬ್ರಾಹಿಂ 4 ವರ್ಷ ವಯಸ್ಸಿನವರಾಗಿದ್ದರು. ಇದೀಗ 53 ವರ್ಷದ ಸೈಫ್ ಅಲಿ ಖಾನ್ ಅವರಿಗೆ ಅಮೃತಾ ಸಿಂಗ್ ಮತ್ತು ಕರೀನಾ ಕಪೂರ್ ಈ ಇಬ್ಬರು ಪತ್ನಿಯರಿಂದ ನಾಲ್ವರು ಮಕ್ಕಳಿದ್ದಾರೆ. ಅವರ ಹೆಸರು ಸಾರಾ ಅಲಿ ಖಾನ್ (Sara Ali Khan), ಇಬ್ರಾಹಿಂ ಅಲಿ ಖಾನ್, ತೈಮೂರು ಅಲಿ ಖಾನ್ ಹಾಗೂ ಜೆಹ್ ಅಲಿ ಖಾನ್.
ಲವ್ ಜಿಹಾದ್ ಎಂದೇ ಇವರ ಮದುವೆಯನ್ನು ಕರೆಯಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿರುವ ಸೈಫ್ ಅಲಿ ಖಾನ್, ನಾನು ಎಲ್ಲ ಧರ್ಮವನ್ನೂ ಪಾಲಿಸುವವ. ಕರೀನಾ ಜೊತೆ ಪ್ರೀತಿ ಮಾಡಿ ಮದುವೆ ಮಾಡಿಕೊಂಡಿದ್ದೇನೆ. ಯಾವುದೇ ಕಾರಣಕ್ಕೂ ಆಕೆಯ ಮತಾಂತರಕ್ಕೆ ನಾನು ಬಲವಂತಗೊಳಿಸಲಿಲ್ಲ. ಆಕೆ ಹಿಂದೂ ಧರ್ಮವನ್ನೇ ಪಾಲಿಸುತ್ತಿದ್ದಾಳೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದು, ಅದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಇದಕ್ಕೆ ಕಮೆಂಟ್ ಹಾಕಿರುವ ನೆಟ್ಟಿಗರು, ಎಲ್ಲವೂ ಸರಿ, ಹಿಂದೂಗಳನ್ನು ಮದ್ವೆಯಾಗಿರುವ ಖಾನ್ ನಟರು ತಮ್ಮ ಹಿಂದೂ ಧರ್ಮದ ಬಗ್ಗೆ ಇಷ್ಟೆಲ್ಲಾ ಎದುರುಗಡೆ ಮಾತನಾಡುವವರು ಮಕ್ಕಳಿಗೆ ಮಾತ್ರ ಖಾನ್ ಎನ್ನುವುದನ್ನು ಇಡಲು ಮರೆಯುವುದಿಲ್ಲ, ಭೇಷ್ ಭೇಷ್ ಎನ್ನುತ್ತಿದ್ದಾರೆ.