ಕರೀನಾ ಕಪೂರ್ ತಮ್ಮ ಮನೆಯಲ್ಲಿ ದೀಪಿಕಾ ಪಡುಕೋಣೆ ಪತಿ ನಿಕ್ ಜೋನಸ್ ಮತ್ತು ಪ್ರಿಯಾಂಕಾ ಚೋಪ್ರಾ ಪತಿ ರಣವೀರ್ ಸಿಂಗ್ ಅವರ ಫೋಟೋ ಇಟ್ಟುಕೊಂಡಿದ್ದಾರಂತೆ. ನಟಿ ಹೇಳಿದ್ದೇನು?
ಕರೀನಾ ಕಪೂರ್ ಖಾನ್ ಮತ್ತು ಪ್ರಿಯಾಂಕಾ ಚೋಪ್ರಾ ಅವರು ಬಹಳ ಹಿಂದಿನಿಂದಲೂ ಕಟು ವೈರಿಗಳೇ. ಸಿನಿ ಇಂಡಸ್ಟ್ರಿಯ ಈ ಇಬ್ಬರು ಪ್ರಮುಖ ಮಹಿಳೆಯರು ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದರು. ಕರೀನಾ ಮತ್ತು ಪ್ರಿಯಾಂಕಾ 90 ರ ದಶಕದ ಕೊನೆಯಲ್ಲಿ ಮತ್ತು 2000 ರ ದಶಕದ ಆರಂಭದಲ್ಲಿ ಪರಸ್ಪರ ದೂಷಿಸಿಕೊಳ್ಳುತ್ತಲೇ ಇದ್ದರು. ಟೈಂ ಸಿಕ್ಕಾಗಲೆಲ್ಲಾ ಪರಸ್ಪರ ಕೆಣಕುವ ಅವಕಾಶವನ್ನು ಎಂದಿಗೂ ಬಿಟ್ಟವರಲ್ಲ. ಇಂಥವರನ್ನೇ ಬಹು ವಿವಾದಿತ ಕಾಫಿ ವಿತ್ ಕರಣ್ ರಿಯಾಲಿಟಿ ಷೋನಲ್ಲಿ ಆಹ್ವಾನಿಸಲಾಗುತ್ತದೆ. ಅದೇ ರೀತಿ ಈ ಇಬ್ಬರು ನಟಿಯರನ್ನು ಕರಣ್ ಜೋಹರ್ ಅವರು ಆಹ್ವಾನಿಸಿದ್ದು, ಕೆಲವು ಸ್ವಾರಸ್ಯಕರ ವಿಷಯಗಳು ಬೆಳಕಿಗೆ ಬಂದಿವೆ. ಇದೇ ವೇಳೆ ಡರ್ಟಿ ಮ್ಯಾಗಜೀನ್ಗೆ ನೀಡಿದ್ದ ಸಂದರ್ಶನದಲ್ಲಿ ಕರೀನಾ ಕಪೂರ್ ಹೇಳಿದ್ದ ಪ್ರಶ್ನೆಗಳ ಕುರಿತೂ ಚರ್ಚೆಗೆ ಬಂದಿದೆ.
ಡರ್ಟಿ ಮ್ಯಾಗಜೀನ್ಗೆ ನೀಡಿದ್ದ ಸಂದರ್ಶನದಲ್ಲಿ ಕರೀನಾ ಕಪೂರ್ ಅವರಿಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಲಾಗಿತ್ತು. ಕೇವಲ ತಪ್ಪು ಉತ್ತರಗಳನ್ನು ನೀಡಬೇಕು ಎನ್ನುವ ರೌಂಡ್ ಅದಾಗಿತ್ತು. ಅದರಲ್ಲಿ ನೀವು ನಿಮ್ಮ ಮನೆಯಲ್ಲಿ ಯಾವ ಸೆಲೆಬ್ರಿಟಿ ಫೋಟೋ ಇಟ್ಟುಕೊಂಡಿದ್ದೀರಿ ಎಂದು ಕೇಳಿದಾಗ, ಹಾಸ್ಯದ ರೂಪದಲ್ಲಿ ಕರೀನಾ ಕಪೂರ್ ಅವರು, ಒಂದು ಕಾಲದ ನನ್ನ ಶತ್ರುವಾಗಿದ್ದ ಪ್ರಿಯಾಂಕಾ ಚೋಪ್ರಾ ಅವರ ಪತಿ ನಿಕ್ ಜೋನಸ್ ಮತ್ತು ರಣವೀರ್ ಕಪೂರ್ ಮಾಜಿ ಪ್ರೇಯಸಿ ದೀಪಿಕಾ ಪಡುಕೋಣೆಯ ಪತಿ ರಣವೀರ್ ಸಿಂಗ್ ಅವರದ್ದು ಎಂದರು! ಇದೇ ವೇಳೆ ನೀವು ಫ್ರಿಡ್ಜ್ನಲ್ಲಿ ಸದಾ ಇಡುವ ವಸ್ತು ಯಾವುದು ಎಂದು ಪ್ರಶ್ನಿಸಿದಾಗ, ಯಾವಾಗಲೂ ಮೇಕಪ್ ಸಾಮಗ್ರಿಗಳಿಂದ ತಾವು ಟ್ರೋಲ್ಗೆ ಒಳಗಾಗುತ್ತಿರುವುದನ್ನು ಅರಿತ ಕರೀನಾ ಅವರು ಮೇಕಪ್ ಸಾಮಗ್ರಿಗಳು ಎಂದು ಹಾಸ್ಯದ ರೂಪದಲ್ಲಿ ಉತ್ತರ ನೀಡಿದರು.
ದೀಪಿಕಾ ನನ್ನ ಸ್ಪರ್ಧಿನೇ ಅಲ್ಲ, ಅವಳೇನಿದ್ರೂ... ಕರೀನಾ ಕಪೂರ್ ಅಹಂಕಾರದ ಮಾತಿಗೆ ನೆಟ್ಟಿಗರ ಕ್ಲಾಸ್
ಇದೇ ವೇಳೆ, ಕರೀನಾ ಕಪೂರ್ ಅವರು ಕಾಫಿ ವಿತ್ ಕರಣ್ನಲ್ಲಿ ದೀಪಿಕಾ ಅವರ ಬಗ್ಗೆ ಮಾತನಾಡಿದ್ದು, ಸಕತ್ ಟ್ರೋಲ್ಗೆ ಒಳಗಾಗುತ್ತಿದೆ. ಅಷ್ಟಕ್ಕೂ ಆಗಿರುವುದು ಏನೆಂದರೆ, ಕಾಫಿ ವಿತ್ ಕರಣ್ ಸೀಸನ್ 8ರ ಇತ್ತೀಚಿನ ಸಂಚಿಕೆಯಲ್ಲಿ ಕರೀನಾ ಕಪೂರ್ ಮತ್ತು ಆಲಿಯಾ ಭಟ್ ಅವರನ್ನು ಕರೆಸಲಾಗಿತ್ತು. ಇವರಿಬ್ಬರೂ ಸ್ಟಾರ್ ನಟಿಯರೇ. ರ್ಯಾಪಿಡ್ ಫೈರ್ ರೌಂಡ್ನಲ್ಲಿ ಕರಣ್ ಜೋಹರ್ ಅವರು, ಕರೀನಾ ಕಪೂರ್ ಅವರಿಗೆ ದೀಪಿಕಾ ಪಡುಕೋಣೆ ಅವರು ನಿಮ್ಮ ಸ್ಪರ್ಧಿಯೇ ಎಂದು ಪ್ರಶ್ನಿಸಿದರು. ಆಗ ಕರೀನಾ ಕಪೂರ್ ಅದಕ್ಕೆ ಉತ್ತರಿಸಲಿಲ್ಲ. ಕರಣ್ ಜೋಹರ್ ಇನ್ನೊಮ್ಮೆ ಆ ಪ್ರಶ್ನೆಯನ್ನು ಕೇಳಿದಾಗ, ಕರೀನಾ ಕಪೂರ್, ಈ ಪ್ರಶ್ನೆಯನ್ನು ನನಗ್ಯಾಕೆ ಕೇಳುತ್ತೀರಿ, ಅವಳ್ಯಾಕೆ ನನ್ನ ಸ್ಪರ್ಧಿ ಆಗುತ್ತಾಳೆ, ಅವಳೇನಿದ್ದರೂ ಆಲಿಯಾ ಭಟ್ (ಅಂದರೆ ಇತ್ತೀಚಿಗೆ ಬಂದ ನಟಿ ಎನ್ನುವ ಕಾರಣಕ್ಕೆ) ಸ್ಪರ್ಧಿಯಾಗಲಷ್ಟೇ ಸಾಧ್ಯ ಎಂದರು.
ಕರೀನಾ ಕಪೂರ್ ಈ ಕೊಂಕು ಮಾತಿಗೆ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. ಇಷ್ಟು ಅಹಂಕಾರ ಒಳ್ಳೆಯದಲ್ಲ ಎಂದಿದ್ದಾರೆ. ಇದೇ ವೇಳೆ ಕೆಲವರು ಕೆಲ ತಿಂಗಳ ಹಿಂದೆ ಇನ್ಫೋಸಿಸ್ ನಾರಾಯಣ ಮೂರ್ತಿಯವರು ಕರೀನಾ ಅಹಂಕಾರಿ ಎಂದು ಹೇಳಿದ ಮಾತನ್ನು ನೆನಪಿಸಿದ್ದಾರೆ. ಅದೇನೆಂದರೆ ಒಮ್ಮೆ ನಾರಾಯಣ ಮೂರ್ತಿ ಅವರು, 'ನಾನು ಲಂಡನ್‌ನಿಂದ ಬರುತ್ತಿದ್ದೆ ಆಗ ನನ್ನ ಪಕ್ಕದಲ್ಲಿ ಕರೀನಾ ಕಪೂರ್ ಕುಳಿತಿದ್ದರು. ತುಂಬಾ ಜನರು ಅವರ ಬಳಿ ಬಂದು ಹಲೋ ಹೇಳುತ್ತಿದ್ದರು. ಆದರೆ ಅವರು ಒಂದು ಪ್ರತಿಕ್ರಿಯೆ ಕೂಡ ನೀಡಿಲ್ಲ. ನನಗೆ ಅದು ಆಶ್ಚರ್ಯವಾಯಿತು. ಯಾರೇ ನಮ್ಮ ಬಳಿ ಬಂದರೂ ಎದ್ದು ನಿಂತು ಸ್ವಲ್ಪ ಮಾತನಾಡಿದರೆ ಅದು ಅವರಿಗೆ ಖುಷಿ ಕೊಡುತ್ತದೆ. ಆದರೆ ಕರೀನಾ ಮಾತ್ರ ಅಸಡ್ಡೆ ತೋರಿದ್ದರು. ಇದು ಅಹಂಕಾರ ಎನಿಸಿತ್ತು' ಎಂದಿದ್ದರು. ಇದನ್ನೇ ಮತ್ತೆ ನೆಟ್ಟಿಗರು ಕರೀನಾಗೆ ನೆನಪು ಮಾಡಿಸಿದ್ದಾರೆ.
ಬಿಗ್ಬಾಸ್ ಮನೆಯಲ್ಲೇ ನಟಿ ಗರ್ಭಿಣಿ? ಪ್ರೇಕ್ಷಕರ ಈ ಪ್ರಶ್ನೆಗಳಿಗೆ ಉತ್ತರ ಕೊಡ್ತಾರಾ ಅಂಕಿತಾ?