
ಬಾಲಿವುಡ್ ಬೆಬೋ ಕರೀನಾ ಕಪೂರ್ ಹಾಗೂ ಕಿಯಾರಾ ಅಡ್ವಾಣಿ 'ಗುಡ್ ನ್ಯೂಸ್' ನೀಡಲು ರೆಡಿಯಾಗಿದ್ದಾರೆ. ಅರೇ, ಕರೀನಾ ಮತ್ತೊಮ್ಮೆ ಗರ್ಭಿಣಿಯಾಗಿದ್ದಾರಾ? ಹೌದು! 'ಗುಡ್ ನ್ಯೂಸ್' ಎನ್ನುವ ಸಿನಿಮಾದಲ್ಲಿ ಗರ್ಭಿಣಿಯಾಗಿದ್ದಾರೆ.
ರಜನಿಕಾಂತ್ 'ದರ್ಬಾರ್' ಶುರು; ಟ್ರೇಲರ್ ಸೃಷ್ಟಿಸಿದೆ ಸಖತ್ ಹವಾ!
ಕಿಯಾರಾ ಅಡ್ವಾನಿ, ಕರೀನಾ ಕಪೂರ್ ಪ್ರಗ್ನೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರತಂಡ ಪ್ರಮೋಶನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸಂದರ್ಭದಲ್ಲಿ ಕರೀನಾಗೆ 'ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದೀರಾ? ಎಂದು ಪ್ರಶ್ನಿಸಿದಾಗ ಕರೀನಾ ಕೊಟ್ಟ ಉತ್ತರ ಹೀಗಿದೆ.
ಆಸ್ಕರ್ ರೇಸ್‌ನಿಂದ ಭಾರತದ 'ಗಲ್ಲಿಬಾಯ್' ಜಸ್ಟ್ ಮಿಸ್!
'ಸದ್ಯಕ್ಕೇನು ಪ್ಲಾನ್ ಇಲ್ಲ. ನಾನು, ಸೈಫ್ ಇಬ್ಬರೂ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದೇವೆ. ಹೀಗಾಗಿ ಆ ಬಗ್ಗೆ ಇನ್ನೂ ಆಲೋಚಿಸಿಲ್ಲ' ಎಂದಿದ್ದಾರೆ.
ಕರೀನಾ ಕಪೂರ್, ಕಿಯಾರಾ ಅಡ್ವಾನಿ, ಅಕ್ಷಯ್ ಕುಮಾರ್ ಕಾಂಬಿನೇಶನ್‌ನಲ್ಲಿ 'ಗುಡ್‌ನ್ಯೂಸ್' ಎನ್ನುವ ಸಿನಿಮಾವೊಂದು ಬರುತ್ತಿದೆ. ಕರೀನಾ ಹಾಗೂ ಕಿಯಾರಾ ಪ್ರಗ್ನೆಂಟ್ ಆಗಿ ನಟಿಸಿದ್ದಾರೆ. ಅಕ್ಷಯ್ ಕುಮಾರ್‌ಗೆ ಜೋಡಿಯಾಗಿ ಕರೀನಾ ನಟಿಸಿದರೆ ದಿಲ್ಜಿತ್‌ಗೆ ಜೋಡಿಯಾಗಿ ಕಿಯಾರಾ ನಟಿಸಿದ್ದಾರೆ. ಕಾಮಿಡಿ ಓರಿಯೆಂಟೆಡ್ ಚಿತ್ರ ಇದಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.