ಪ್ರೀತಿ ಮುಖ್ಯ, ಲಿಂಗ ಅಲ್ಲ ಎಂದಿರುವ ನಟಿ ಕರೀನಾ ಕಪೂರ್, ಮಕ್ಕಳಿಗೆ ಸಲಿಂಗಿ ಮದ್ವೆ ಕುರಿತು ಪಾಠ ಮಾಡಿದ್ದಾರೆ. ಇದು ತಪ್ಪಲ್ಲ ಎಂದು ಹೇಳಿದ್ದಾರೆ.
ಬಾಲಿವುಡ್ನ ಸದ್ಯದ ಯಶಸ್ವಿ ಜೋಡಿಗಳಲ್ಲಿ ಒಂದೆನಿಸಿದೆ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಅವರ ಜೋಡಿ. ಎಲ್ಲರಿಗೂ ತಿಳಿದಿರುವಂತೆ ಇದು ಸೈಫ್ ಅಲಿ ಅವರಿಗೆ ಎರಡನೆಯ ಮದುವೆ. ಅವರ ಮೊದಲ ಮದುವೆಯಾದದ್ದು ನಟಿ ಅಮೃತಾ ಸಿಂಗ್ ಅವರ ಜೊತೆಗೆ. ಈ ದಂಪತಿಗೆ ಇಬ್ಬರು ಪುತ್ರರಿದ್ದಾರೆ. ಕೆಲವು ಖ್ಯಾತನಾಮ ನಟರಂತೆಯೇ ಸೈಫ್ ಅಲಿ ಕೂಡ ಇಬ್ಬರೂ ಹಿಂದೂ ಯುವತಿಯರನ್ನು ಮದುವೆಯಾಗಿ ಸಕತ್ ಸುದ್ದಿ ಮಾಡಿದವರು. ಸೈಫ್ ಅಲಿ ಖಾನ್ ಕರೀನಾರಿಗಿಂತಲೂ 10 ವರ್ಷ ದೊಡ್ಡವರು. 5 ವರ್ಷಗಳ ಕಾಲ ಲಿವ್-ಇನ್ (Live in relation) ಸಂಬಂಧದಲ್ಲಿದ್ದ ಈ ಜೋಡಿ ಕೊನೆಗೆ ಮದುವೆಯಾಗಿತ್ತು. 53 ವರ್ಷದ ಸೈಫ್ ಅಲಿ ಖಾನ್ ಅವರಿಗೆ ಅಮೃತಾ ಸಿಂಗ್ ಮತ್ತು ಕರೀನಾ ಕಪೂರ್ ಈ ಇಬ್ಬರು ಪತ್ನಿಯರಿಂದ ನಾಲ್ವರು ಮಕ್ಕಳಿದ್ದಾರೆ. ಅವರ ಹೆಸರು ಸಾರಾ ಅಲಿ ಖಾನ್ (Sara Ali Khan), ಇಬ್ರಾಹಿಂ ಅಲಿ ಖಾನ್, ತೈಮೂರು ಅಲಿ ಖಾನ್ ಹಾಗೂ ಜೆಹ್ ಅಲಿ ಖಾನ್. ತಮ್ಮ ಮೊದಲ ಪತ್ನಿಯ ಜೊತೆ ಸೈಫ್ ಸಂಪರ್ಕದಲ್ಲಿ ಇಲ್ಲದಿದ್ದರೂ ಅವರ ಮಕ್ಕಳ ಜೊತೆ ಸಂಪರ್ಕದಲ್ಲಿ ಇದ್ದಾರೆ.
ಇದರ ನಡುವೆಯೇ ಸದ್ಯ ಕರೀನಾ ತಮ್ಮ ಇಬ್ಬರು ಮಕ್ಕಳ ಲಾಲನೆ ಪಾಲನೆ ಜೊತೆ ಸಿನಿಮಾದಲ್ಲಿಯೂ ಬಿಜಿಯಾಗಿದ್ದಾರೆ. ಈ ನಡುವೆ ತಮ್ಮ ಮಕ್ಕಳನ್ನು ಹೇಗೆ ಪಾಲನೆ ಮಾಡುತ್ತಿದ್ದೇನೆ ಎನ್ನುವ ಕುರಿತು ಕರೀನಾ ಕಪೂರ್ ಮಾತನಾಡಿದ್ದಾರೆ. ಮಕ್ಕಳಿಗೆ ಎಲ್ಲಾ ವಿಷಯಗಳೂ ತಿಳಿದಿರಬೇಕು, ಅವರ ಎದುರು ಯಾವುದನ್ನೂ ಮುಚ್ಚಿಡಬಾರದು ಎಂದಿರುವ ನಟಿ ಕರೀನಾ, ಸಲಿಂಗ ಕಾಮ, ಸಲಿಂಗ ವಿವಾಹದ ಬಗ್ಗೆಯೂ ತಮ್ಮ ಮಕ್ಕಳಿಗೆ ತಿಳಿವಳಿಕೆ ನೀಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ನಾಲ್ಕು ಮಕ್ಕಳ ಜೊತೆ ಸೈಫ್ ಅಲಿ ಫೋಟೋ ಶೇರ್ ಮಾಡಿದ್ರೆ ಹೀಗೆಲ್ಲಾ ಕಮೆಂಟ್ ಹಾಕೋದಾ?
ಇತ್ತೀಚೆಗೆ ಕೆಲವರು ಸಲಿಂಗದಲ್ಲಿ ವಿವಾಹ ಆಗುತ್ತಿದ್ದಾರೆ. ಮಹಿಳೆ ಮಹಿಳೆಯ ಜೊತೆಗೆ, ಪುರುಷ ಪುರುಷರ ಜೊತೆ ವಿವಾಹ ಆಗುವ ವಿಷಯಗಳು ಆಗಾಗ್ಗೆ ಕೇಳುತ್ತಲೇ ಇರುತ್ತೇವೆ. ಇದರ ಬಗ್ಗೆ ನಟಿ ಕರೀನಾ ಮಾತನಾಡಿದ್ದಾರೆ. ಈ ರೀತಿಯ ಸಲಿಂಗಿ ವಿವಾಹಗಳ ಬಗ್ಗೆಯೂ ತಮ್ಮ ಮಕ್ಕಳಿಗೆ ತಿಳಿವಳಿಕೆ ನೀಡುತ್ತಿರುವುದಾಗಿ ಹೇಳಿರುವ ನಟಿ, ಸಲಿಂಗದಲ್ಲಿ ವಿವಾಹವಾಗುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ. ಸಲಿಂಗಿಗಳು ಪರಸ್ಪರ ಪ್ರೀತಿಸುತ್ತಿದ್ದರೆ ಮದುವೆಯಾಗುವುದರಲ್ಲಿ ತಪ್ಪೇನಿದೆ ಎಂದು ನಟಿ ಪ್ರಶ್ನಿಸಿದ್ದಾರೆ. ಪ್ರೀತಿ ಎನ್ನುವುದು ಹೆಣ್ಣು, ಗಂಡು, ಸೈಜ್, ಫಾರ್ಮ್ ನೋಡಿ ಬರುವುದಿಲ್ಲ. ಯಾರಿಗೆ ಯಾರ ಮೇಲಾದರೂ ಪ್ರೀತಿ ಹುಟ್ಟಬಹುದು. ಸಲಿಂಗಿಗಳ ಮದುವೆಯು ಕೂಡ ಇದೇ ರೀತಿಯಾಗಿದೆ. ಇದನ್ನೇ ನಾನು ಮಕ್ಕಳಿಗೂ ಹೇಳುತ್ತೇನೆ ಎಂದಿದ್ದಾರೆ.
ಗಂಡು-ಹೆಣ್ಣು ಮಾತ್ರ ಪ್ರೀತಿಸುತ್ತಾರೆ ಎಂದು ಮಕ್ಕಳಿಗೆ ಹೇಳಿಕೊಡಬಾರದು. ಪ್ರೀತಿಗೆ ಬೇಧವಿಲ್ಲ ಎಂಬುದನ್ನು ಮಕ್ಕಳಿಗೆ ತಿಳಿಸುವ ಅವಶ್ಯಕತೆ ಇದೆ ಎಂದಿದ್ದಾರೆ ನಟಿ. ಅಂದಹಾಗೆ 2012ರಲ್ಲಿ ಕರೀನಾ ಮತ್ತು ಸೈಫ್ ಅಲಿ ಮದುವೆಯಾಗಿದೆ. 2016ರಲ್ಲಿ ಮೊದಲ ಮಗ ಹಾಗೂ 2021ರಲ್ಲಿ ಎರಡನೆಯ ಮಗ ಹುಟ್ಟಿದ್ದಾನೆ.
ಅಮೃತಾ ಸಿಂಗ್ರನ್ನು ಗುಟ್ಟಾಗಿ ಮದ್ವೆಯಾಗಿದ್ರಾ ಕರೀನಾ ಕಪೂರ್ ಪತಿ ಸೈಫ್?