ಸಮೋಸಾ ತಿಂದ ಜೀರೋ ಫಿಗರ್ Kareena Kapoor, ಹೀಗೆ ತಿಂತಿರು ಅಂತ ಕಾಲೆಳೆದ ಕರಣ್ ಜೋಹರ್

Published : Dec 19, 2025, 09:37 AM IST
Kareena Kapoor Khan

ಸಾರಾಂಶ

kareena Kapoor enjoying samosa : ಕರೀನಾ ಕಪೂರ್ ಖಾನ್ ಫಿಗರ್ ಮೆಂಟೇನ್ ಮಾಡಲು ಡಯಟ್ ಮಾಡ್ತಿದ್ದಾರಾ? ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಮಗನ ಸ್ಕೂಲಿನಲ್ಲಿ ಕರೀನಾ ಸಮೋಸಾ ತಿನ್ನುತ್ತಿದ್ದ ವಿಡಿಯೋ ವೈರಲ್ ಆಗಿದೆ.

ಬಾಲಿವುಡ್ (Bollywood) ನಲ್ಲಿ ಝಿರೋ ಫಿಗರ್ ಗೆ ಹೆಸರಾದವರು ಕರೀನಾ ಕಪೂರ್ ಖಾನ್ (Kareena Kapoor Khan). ಎರಡು ಮಕ್ಕಳಿದ್ರೂ ಕರೀನಾ ಕಪೂರ್ ಖಾನ್ ಮಾತ್ರ ಫಿಟ್ ಆಗಿದ್ದಾರೆ. ಯುವ ನಟಿಯರನ್ನು ನಾಚಿಸುವ ಸೌಂದರ್ಯ ಹೊಂದಿದ್ದಾರೆ. ಫಿಗರ್ ಮೆಂಟೇನ್ ಮಾಡೋಕೆ ಊಟ, ಕೋಲ್ಡ್ ಡ್ರಿಂಕ್ಸ್ ಎಲ್ಲ ಬಿಡ್ತಾರೆ ಎನ್ನುವ ನಂಬಿಕೆ ಫ್ಯಾನ್ಸ್ ಗಿದೆ. ಆದ್ರೆ ಕರೀನಾ ಸ್ವಲ್ಪ ಫುಡ್ಡಿ. ಅವಕಾಶ ಸಿಕ್ಕಾಗ ತಮ್ಮಿಷ್ಟದ ಆಹಾರವನ್ನು ತಿಂದು ಎಂಜಾಯ್ ಮಾಡ್ತಾರೆ. ಜಿಮ್ ನಲ್ಲಿ ಬೆವರಿಳಿಸುವ ಕರೀನಾ, ಪಾರ್ಟಿ ಮಾಡೋದ್ರಲ್ಲೂ ಮುಂದಿದ್ದಾರೆ. ಆಗಾಗ ತಮ್ಮ ಗರ್ಲ್ಸ್ ಗ್ಯಾಂಗ್ ಜೊತೆ ಅವರು ಪಾರ್ಟಿಗೆ ಹೋಗೋ ವಿಡಿಯೋ ವೈರಲ್ ಆಗ್ತಿರುತ್ತೆ. ಈಗ ಮಗ ತೈಮೂರ್ ಶಾಲೆಯಲ್ಲಿ ಕರೀನಾ ಸಮೋಸಾ ಎಂಜಾಯ್ ಮಾಡಿದ್ದಾರೆ.

ಮುಂಬೈನ ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಶಾಲೆಯಲ್ಲಿ ಗುರುವಾರ, ಡಿಸೆಂಬರ್ 18 ರಂದು ವಾರ್ಷಿಕ ಸಮಾರಂಭ ನಡೆದಿದೆ. ಇದ್ರಲ್ಲಿ ಅನೇಕ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಕರೀನಾ ಕಪೂರ್ ಅವರ ಮಕ್ಕಳಾದ ತೈಮೂರ್ ಮತ್ತು ಜೇ ಧೀರೂಭಾಯಿ ಅಂಬಾನಿ ಅಂತರರಾಷ್ಟ್ರೀಯ ಶಾಲೆಯಲ್ಲಿ ಓದುತ್ತಿದ್ದಾರೆ. ಸಿನಿಮಾ ನಿರ್ಮಾಪಕ-ನಿರ್ದೇಶಕ ಕರಣ್ ಜೋಹರ್ ಅವರ ಮಕ್ಕಳಾದ ಯಶ್ ಮತ್ತು ರೂಹಿ ಕೂಡ ಅದೇ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕರೀನಾ ಕಪೂರ್ ಮತ್ತು ಕರಣ್ ಜೋಹರ್ ಕೂಡ ಸಮಾರಂಭಕ್ಕೆ ಪಾಲ್ಗೊಂಡಿದ್ದರು. ಕರಣ್ ಜೋಹರ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಸಮಾರಂಭದ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಐಶ್ವರ್ಯಾ ರೈ ನೆರಳಲ್ಲಿ ಮರೆಯಾದ ಆ ನೀಲಿಗಣ್ಣಿನ ಸುಂದರಿ

ಸಮೋಸಾ ತಿಂದ ಕರೀನಾ

ಕರೀನಾ ಕಪೂರ್ ಖಾನ್, ಸಮಾರಂಭದಲ್ಲಿ ಸಮೋಸಾ ಸವಿದಿದ್ದಾರೆ. ಸಮೋಸಾ ತಿನ್ನುತ್ತಿರುವ ವಿಡಿಯೋವನ್ನು ಕರಣ್ ಜೋಹರ್ ಪೋಸ್ಟ್ ಮಾಡಿದ್ದಾರೆ. ಸಮೋಸಾ ಹಿಡಿದು ಎಂಜಾಯ್ ಮಾಡ್ತಾ ಕರೀನಾ ಅದನ್ನು ತಿನ್ನುತ್ತಿದ್ದರೆ ಕರಣ್ ಜೋಹರ್ ಕರೀನಾಳನ್ನು ಕಾರ್ಬಿ ಡಾಲ್ ಎಂದು ಕರೆದಿದ್ದಾನೆ. ಕರೀನಾ ಡಯಟ್ನಲ್ಲಿದ್ದಾರೆ ಎಂದು ಭಾವಿಸುವವರು ಒಮ್ಮೆ ನೋಡಿ. ನನಗೆ ನಿನ್ನ ಬಗ್ಗೆ ಹೆಮ್ಮೆಯಿದೆ, ಬೆಬೊ. ನೀನು ನನ್ನ ಕಾರ್ಬಿ ಡಾಲ್. ನೀನು ಹೀಗೆ ಚೆನ್ನಾಗಿ ತಿನ್ನುತ್ತಿರಿ ಎಂದು ಕರಣ್ ಜೋಹರ್ ಹೇಳಿದ್ದಾರೆ. ಕೋಪದಿಂದ, ಕರಣ್ ಜೋಹರ್ ಕಡೆಗೆ ನೋಡುವ ಕರೀನಾ ಮತ್ತೆ ಸಮೋಸಾ ಎಂಜಾಯ್ ಮಾಡಿದ್ದಾರೆ. ಇದಲ್ದೆ ಕರೀನಾ, ಇಲ್ಲ, ನಾನು ಡಯಟ್ನಲ್ಲಿಲ್ಲ ಎಂದಿದ್ದಾಳೆ.

ಕರೀನಾ ಕಪೂರ್ ಸಮೋಸಾ ತಿನ್ನುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕರೀನಾ ಕೂಡ ಕರಣ್ ಜೋಹರ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಕರಣ್ ಜೋಹರ್ ವೆರೈಟಿ ಆಹಾರ ತಿನ್ನುತ್ತಿದ್ದಾರೆ. ಈ ಫೋಟೋ ಪೋಸ್ಟ್ ಮಾಡಿದ ಕರೀನಾ ಕರಣ್ ಕೂಡ ತಿನ್ನುತ್ತಿದ್ದಾರೆ ಎನ್ನುವ ಶೀರ್ಷಿಕೆ ಹಾಕಿದ್ದಾರೆ.

ದಳಪತಿ ವಿಜಯ್ 'ಜನ ನಾಯಗನ್' ಚಿತ್ರದ ಕಥೆ ಇದೇನಾ? ಲೀಕ್ ಆದ ಸ್ಟೋರಿ.. ಶಾಕ್ ಆಯ್ತು ಚಿತ್ರತಂಡ!

ಧೀರೂಭಾಯಿ ಅಂಬಾನಿ ಅಂತರರಾಷ್ಟ್ರೀಯ ಶಾಲೆಯ ವಾರ್ಷಿಕ ಸಮಾರಂಭದಲ್ಲಿ ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ, ಶಾರುಖ್ ಖಾನ್ ಮತ್ತು ಗೌರಿ ಖಾನ್ ಕೂಡ ಕಾಣಿಸಿಕೊಂಡಿದ್ದಾರೆ. ಶಾಹಿದ್ ಕಪೂರ್, ಫರಾ ಖಾನ್ ಮತ್ತು ವಿದ್ಯಾ ಬಾಲನ್ ಕೂಡ ಶಾಲಾ ಸಮಾರಂಭದಲ್ಲಿ ಭಾಗವಹಿಸಿರುವುದು ಕಂಡುಬಂದಿದೆ.

ಕರೀನಾ ಕಪೂರ್ ಖಾನ್ 25 ವರ್ಷದ ವೃತ್ತಿ ಜೀವನದಲ್ಲಿ 50ಕ್ಕೂ ಹೆಚ್ಚು ಸಿನಿಮಾ ಮಾಡಿದ್ದಾರೆ. ಅದ್ರಲ್ಲಿ 17 ಸಿನಿಮಾ ಹಿಟ್ ಆಗಿದೆ. ಇತ್ತೀಚಿಗೆ ಸಿಂಗಮ್ ಅಗೇನ್ ಸಿನಿಮಾದಲ್ಲಿ ಕರೀನಾ ಕಾಣಿಸಿಕೊಂಡಿದ್ದರು. ಸದ್ಯ ಕರೀನಾ ಕೈನಲ್ಲಿ ಮೂರು ಸಿನಿಮಾ ಇದೆ. ವೀರೆ ದಿ ವೆಡ್ಡಿಂಗ್ 2, ದಯಾರಾ ಕೂಡ ಈ ಲೀಸ್ಟ್ ನಲ್ಲಿ ಸೇರಿದೆ.

 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಐಶ್ವರ್ಯಾ ರೈ ನೆರಳಲ್ಲಿ ಮರೆಯಾದ ಆ ನೀಲಿಗಣ್ಣಿನ ಸುಂದರಿ
ದಳಪತಿ ವಿಜಯ್ 'ಜನ ನಾಯಗನ್' ಚಿತ್ರದ ಕಥೆ ಇದೇನಾ? ಲೀಕ್ ಆದ ಸ್ಟೋರಿ.. ಶಾಕ್ ಆಯ್ತು ಚಿತ್ರತಂಡ!