ಹಿಂದೂ ಧರ್ಮದಲ್ಲಿ ಹುಟ್ಟಿದ ಕರೀನಾ ಕಪೂರ್ ಮಗನಿಗೆ ತೈಮೂರ್‌ ಆಲಿ ಖಾನ್‌ ಅಂತ ಹೆಸರಿಟ್ಟಿದ್ಯಾಕೆ?

Published : May 01, 2024, 12:01 PM ISTUpdated : May 01, 2024, 12:12 PM IST
ಹಿಂದೂ ಧರ್ಮದಲ್ಲಿ ಹುಟ್ಟಿದ ಕರೀನಾ ಕಪೂರ್ ಮಗನಿಗೆ ತೈಮೂರ್‌ ಆಲಿ ಖಾನ್‌ ಅಂತ ಹೆಸರಿಟ್ಟಿದ್ಯಾಕೆ?

ಸಾರಾಂಶ

ಕರೀನಾ ಕಪೂರ್ ಹಿಂದಿ ಚಿತ್ರರಂಗದ ಅತ್ಯಂತ ಪ್ರತಿಭಾವಂತ ನಟಿಯರಲ್ಲಿ ಒಬ್ಬರು. ಆದ್ರೆ ಹಿಂದೂ ಕುಟುಂಬದಲ್ಲಿ ಹುಟ್ಟಿದ ಕರೀನಾ ಕಪೂರ್ ತಮ್ಮ ಮಕ್ಕಳಿಗೆ ಮುಸ್ಲಿಂ ಹೆಸರು ಇಟ್ಟಿರುವುದರ ಬಗ್ಗೆ ಸಾಕಷ್ಟು ವಿವಾದಗಳು ಕೇಳಿ ಬಂದಿದ್ದವು. ಈ ಬಗ್ಗೆ ಸ್ವತಃ ಕರೀನಾ ಕಪೂರ್ ಮಾತನಾಡಿದ್ದಾರೆ.

ಕರೀನಾ ಕಪೂರ್ ಹಿಂದಿ ಚಿತ್ರರಂಗದ ಅತ್ಯಂತ ಪ್ರತಿಭಾವಂತ ನಟಿಯರಲ್ಲಿ ಒಬ್ಬರು. ಹಲವು ಹೆಸರಾಂತ ಸಿನಿಮಾಗಳಲ್ಲಿ ತಮ್ಮ ಅಭಿನಯ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಈಗಲೂ ತಮ್ಮ ಸ್ಟೈಲಿಶ್ ಲುಕ್‌ನೊಂದಿಗೆ ಅಭಿಮಾನಿಗಳ ಮನಸ್ಸು ಕದಿಯುತ್ತಾರೆ. ಕರೀನಾ ಕಪೂರ್‌, ಬಾಲಿವುಡ್ ನಟ ಸೈಫ್ ಆಲಿ ಖಾನ್‌ರನ್ನು ಮದುವೆಯಾಗಿದ್ದಾರೆ. ತೈಮೂರ್ ಅಲಿ ಖಾನ್ ಮತ್ತು ಜಹಾಂಗೀರ್ ಅಲಿ ಖಾನ್ ಎಂಬ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ಆದ್ರೆ ಹಿಂದೂ ಕುಟುಂಬದಲ್ಲಿ ಹುಟ್ಟಿದ ಕರೀನಾ ಕಪೂರ್ ತಮ್ಮ ಮಕ್ಕಳಿಗೆ ಮುಸ್ಲಿಂ ಹೆಸರು ಇಟ್ಟಿರುವುದರ ಬಗ್ಗೆ ಸಾಕಷ್ಟು ವಿವಾದಗಳು ಕೇಳಿ ಬಂದಿದ್ದವು. ಈ ಬಗ್ಗೆ ಸ್ವತಃ ಕರೀನಾ ಕಪೂರ್ ಮಾತನಾಡಿದ್ದಾರೆ.

ಕರೀನಾ ಕಪೂರ್ ಖಾನ್ ಮತ್ತು ಸೈಫ್ ಅಲಿ ಖಾನ್ ತಮ್ಮ ಗಂಡು ಮಗು ತೈಮೂರ್‌ಗೆ  ಜನನ ನೀಡಿದ ನಂತರ ಮಗನ ಹೆಸರನ್ನು ಆಯ್ಕೆ ಮಾಡಲು ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಯಿತು ಎಂದು ಬಹಿರಂಗಪಡಿಸಿದ್ದಾರೆ. ಹಳೆಯ ಸಂದರ್ಶನವೊಂದರಲ್ಲಿ, ಬೆಬೊ ತನ್ನ ಗಂಡು ಮಗುವಿನ ಹೆಸರಿನ ಬಗ್ಗೆ ಜನರ ಪ್ರಶ್ನೆಗಳು ನನ್ನನ್ನು ಭಯಪಡಿಸಿತ್ತು ಎಂದು ತಿಳಿಸಿದ್ದಾರೆ. 

ಈದ್​ ಫ್ಯಾಮಿಲಿ ಫೋಟೋದಲ್ಲಿ ಅತ್ತಿಗೆ ಕರೀನಾರನ್ನೇ ಕಟ್​ ಮಾಡಿದ ಸೈಫ್​ ತಂಗಿ ಸೋನಾ! ಆಗಿದ್ದೇನು?

'ಇದು ಒಬ್ಬ ವ್ಯಕ್ತಿಯಾಗಿ ಮತ್ತು ತಾಯಿಯಾಗಿ ನನ್ನನ್ನು ಆಳವಾಗಿ ಭಯಪಡಿಸಿತ್ತು. ಏಕೆಂದರೆ ನಾನು ನನ್ನ ಮಗುವಿಗೆ ಏನು ಹೆಸರಿಸುತ್ತೇನೆ ಮತ್ತು ನಾನು ಅವನನ್ನು ಹೇಗೆ ಕರೆಯುತ್ತೇನೆ ಅನ್ನೋದು ಸಂಪೂರ್ಣವಾಗಿ ನನ್ನ ನಿರ್ಧಾರ. ಆದರೂ ಎಲ್ಲರೂ ಈ ಬಗ್ಗೆ ಚರ್ಚೆ ಆರಂಭಿಸಿದರು. ತೈಮೂರ್ ಹುಟ್ಟಿದ ಕೆಲವೇ ಗಂಟೆಗಳ ನಂತರ ವ್ಯಕ್ತಿಯೊಬ್ಬರು ಅವರ ಹೆಸರನ್ನು ಪ್ರಶ್ನಿಸಿದಾಗ ಕರೀನಾ ಕಪೂರ್ ಅಳುವುದನ್ನು ನೆನಪಿಸಿಕೊಂಡರು

ತೈಮೂರ್ ಹುಟ್ಟಿದ ಎಂಟು ಗಂಟೆಗಳ ನಂತರ, ಒಬ್ಬ ಪ್ರಸಿದ್ಧ ವ್ಯಕ್ತಿ ತನ್ನನ್ನು ಆಸ್ಪತ್ರೆಗೆ ಭೇಟಿ ಮಾಡಲು ಬಂದರು ಮತ್ತು ನಂತರ ತನ್ನ ಮಗನ ಹೆಸರಿನ ಬಗ್ಗೆ ತನ್ನ ಕಾಳಜಿಯನ್ನು ತೋರಿಸಲು ಪ್ರಾರಂಭಿಸಿದರು. ಮಗುವಿಗೆ ತೈಮೂರ್ ಎಂದು ಏಕೆ ಹೆಸರಿಸಿದ್ದೀರಿ ಎಂದುಕೇಳಿದರು ಎಂದು ಕರೀನಾ ಹೇಳಿದ್ದಾರೆ. ಅಂತಹ ಘಟನೆಯ ನಂತರ ತಾನು ಅಳುತ್ತಿದ್ದೆ ಮತ್ತು ಆ ವ್ಯಕ್ತಿಯನ್ನು ಆಸ್ಪತ್ರೆಯಿಂದ ಹೊರಹೋಗುವಂತೆ ಕೇಳಿಕೊಂಡೆ ಎಂದು ಕೂಡ ನಟಿ ಸೇರಿಸಿದ್ದಾರೆ.

'ಟಾಕ್ಸಿಕ್​' ಬಿಗ್​ ಟ್ವಿಸ್ಟ್​: ತಂಗಿಯಾಗಿ ಕರೀನಾ, ಯಶ್​ಗೆ ಜೋಡಿಯಾಗಲಿರೋ ಬಾಲಿವುಡ್​ ಬೆಡಗಿ ಇವರೇ ನೋಡಿ?

ಸಂದರ್ಶನದಲ್ಲಿ, ಕರೀನಾ ಕಪೂರ್ ಖಾನ್, ಸೆಲೆಬ್ರಿಟಿಗಳು ಪಾಪರಾಜಿ ಸಂಸ್ಕೃತಿಯನ್ನು ಎದುರಿಸಬೇಕಾಗಿರುವುದರಿಂದ ಅದರೊಂದಿಗೆ ಬದುಕಲು ಕಲಿಯಬೇಕು. ಅದರಿಂದ ಓಡಿಹೋದಷ್ಟು ಬದುಕಲು ಕಷ್ಟವಾಗುತ್ತದೆ ಎಂದು ಅರ್ಥಮಾಡಿಕೊಳ್ಳಬೇಕು. ಹೀಗಾಗಿ ನನ್ನ ಮಗನಿಗೆ ತೈಮೂರ್ ಎಂದು ಹೆಸರಿಟ್ಟಿದ್ದಕ್ಕೆ ನನಗೆ ಯಾವ ಮುಜುಗರವೂ ಇಲ್ಲ. ಮಾಧ್ಯಮಗಳು ಅವನ ಫೋಟೊ ಕ್ಲಿಕ್ ಮಾಡುವ ಬಗ್ಗೆಯೂ ಹಿಂಜರಿಕೆಯಿಲ್ಲ' ಎಂದು ತಿಳಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?
10 ಭಾಷೆಗಳಲ್ಲಿ 90 ಸಿನಿಮಾಗಳು, ಗಂಗೂಲಿ ಜೊತೆ ಅಫೇರ್ ವದಂತಿ.. 50 ವರ್ಷವಾದರೂ ಮದುವೆಯಾಗದ ನಟಿ ಯಾರು?