KGF 2 ತರದ ಸಿನಿಮಾ ಬಾಲಿವುಡ್‌ನಲ್ಲಿ ಮಾಡಿದ್ರೆ ವಿರೋಧಿಸುತ್ತಿದ್ರು; ಕರಣ್ ಜೋಹರ್

Published : Jun 19, 2022, 05:07 PM IST
KGF 2 ತರದ  ಸಿನಿಮಾ ಬಾಲಿವುಡ್‌ನಲ್ಲಿ ಮಾಡಿದ್ರೆ ವಿರೋಧಿಸುತ್ತಿದ್ರು; ಕರಣ್ ಜೋಹರ್

ಸಾರಾಂಶ

ಬಾಲಿವುಡ್‌ನ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ಕರಣ್ ಜೋಹರ್ ಇತ್ತೀಚಿಗೆ ಸಂದರ್ಶನದಲ್ಲಿ ಕೆಜಿಎಫ್-2 ಬಗ್ಗೆ ಹೇಳಿದ ಮಾತು ವೈರಲ್ ಆಗಿದೆ. ಬಾಲಿವುಡ್‌ನಲ್ಲಿ ಕೆಜಿಎಫ್-2 ತರದ ಸಿನಿಮಾ ಮಾಡಿದ್ರೆ ತೀವ್ರ ವಿರೋಧ ವ್ಯಕ್ತವಾಗುತ್ತಿತ್ತು ಎಂದು ಕರಣ್ ಜೋಹರ್ ಹೇಳಿದ್ದಾರೆ. 

ಬಾಲಿವುಡ್‌ನ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ಕರಣ್ ಜೋಹರ್ (Karan Johar) ಇತ್ತೀಚಿಗೆ ಸಂದರ್ಶನದಲ್ಲಿ ಕೆಜಿಎಫ್-2 ಬಗ್ಗೆ ಹೇಳಿದ ಮಾತು ವೈರಲ್ ಆಗಿದೆ. ಬಾಲಿವುಡ್‌ನಲ್ಲಿ ಕೆಜಿಎಫ್-2 (KGF 2) ತರದ ಸಿನಿಮಾ ಮಾಡಿದ್ರೆ ತೀವ್ರ ವಿರೋಧ ವ್ಯಕ್ತವಾಗುತ್ತಿತ್ತು ಎಂದು ಕರಣ್ ಜೋಹರ್ ಹೇಳಿದ್ದಾರೆ. 

2022 ಭಾರತದಲ್ಲಿ ಸಿನಿಮಾದ ಸ್ಟ್ರಿಪ್ಟ್ ಬದಲಾಯಿಸಿದೆ. ಈ ವರ್ಷ ಬಾಕ್ಸ್ ಆಫೀಸ್‌ನಲ್ಲಿ ಮೂರ ಅತ್ಯಂತ ಯಶಸ್ವಿ ಭಾರತೀಯ ಚಿಲಚಿತ್ರಗಳನ್ನು ದಕ್ಷಣದಿಂದ ಬಂದವು, ತೆಲುಗು, ಕನ್ನಡ ಮತ್ತು ತಮಿಳು ಚಿತ್ರರಂಗದಿಂದ ತಲಾ ಒಂದು ಸಿನಿಮಾಗಳು.  ಈ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಮಾಯಿ ಮಾಡುವ ಜೊತೆಗೆ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದ ಸಿನಿಮಾಗಳಾಗಿವೆ. ಅಂದಹಾಗೆ ಇತ್ತೀಚಿನ ಸಂದರ್ಶನದಲ್ಲಿ ಕರಣ್ ಜೋಹರ್ ಈ ವರ್ಷ ಭಾರತದ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ ಕನ್ನಡದ ಕೆಜಿಎಫ್-2 ಸಿನಿಮಾವನ್ನು ಹಾಡಿಹೊಗಳಿದ್ದಾರೆ. ಆದರೆ ಇಂತ ಸಿನಿಮಾಗಳನ್ನು ಬಾಲಿವುಡ್‌ನಲ್ಲಿ ಮಾಡಿದರೆ ಅದನ್ನು ಖಂಡಿತ ನಿಷೇಧಿಸಲಾಗುವುದು ಎಂದು ಹೇಳಿದ್ದಾರೆ. 

ಕೆಜಿಎಫ್ -2 ಕನ್ನಡದ ಹೆಮ್ಮೆಯ ಸಿನಿಮಾವಾಗಿದೆ. ರಾಕಿಂಗ್ ಸ್ಟಾರ್ ಯಶ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.  2018ರಲ್ಲಿ ರಿಲೀಸ್ ಆಗಿದ್ದ ಕೆಜಿಎಫ್ ಸಿನಿಮಾದ ಸೀಕ್ವೆಲ್ ಕೆಜಿಎಫ್-2 ಬಾಕ್ಸ್ ಆಫೀಸ್ ನಲ್ಲಿ 1300 ಕೋಟಿ ರೂಪಾಯಿ ಬಾಚಿಕೊಂಡಿದೆ. ಹಿಂದಿಯಲ್ಲೇ ಬರೋಬ್ಬರಿ 435 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಬಗ್ಗೆ ಕರಣ್ ಜೋಹರ್ ಫಿಲ್ಮ್ ಕಂಪ್ಯಾನಿಯನ್ ಜೊತೆ ಮಾತನಾಡಿದ್ದಾರೆ. 

Fathers day 2022: ಬಾಲಿವುಡ್‌ನ ಸಿಂಗಲ್‌ ಫಾದರ್‌ಗಳು ಇವರು

'ನಾನು ಕೆಜಿಎಫ್ ವಿಮರ್ಶೆಗಳನ್ನು ಓದಿದಾಗ ನಾನು ಇದನ್ನ ಮಾಡಿದ್ರೆ ನಿಜಕ್ಕೂ ಬಾರಿ ಟೀಕೆ ಎದುರಿಸುತ್ತಿದ್ದೆವು. ಆದರೆ ಈಗ ಎಲ್ಲರೂ ಮೆಚ್ಚಿಕೊಂಡಿದ್ದಾರೆ. ದೊಡ್ಡ ಹಬ್ಬದಂತೆ ಸಂಭ್ರಮಿಸುತ್ತಿದ್ದಾರೆ.  ಅದು ನನಗೆ ತುಂಬಾ ಇಷ್ಟವಾಗಿಯು. ನಾನು ಇದನ್ನ ಹೃದಯದಿಂದ ಪ್ರೀತಿಸಿದೆ. ಆದರೆ ನಾನು ಇದನ್ನ ಮಾಡಿದ್ರೆ, ಆಗ?' ಎಂದು ಪ್ರಶ್ನೆ ಮಾಡಿದ್ದಾರೆ. 

'ನಮಗೆ ಯಾವುದೇ ರೀತಿಯ ಅವಕಾಶ ನೀಡಿಲ್ಲ. ನಾವು ಬೇರೆಯವರಾಗಲುು ಪ್ರಯತ್ನಿಸುತ್ತಿದ್ದೇವೆ ಎಂದು ನಾನು ಭಾವಿಸುತ್ತೇನೆ. ಅದ್ದರಿಂದ ನಾವು ಎಲ್ಲಾ ಸ್ಥಳದಲ್ಲಿ ಇದ್ದೀವಿ. ನಾವು ದ್ವಂದ್ವ ಅಸ್ತಿತ್ವದಲ್ಲಿ ಬದುಕುತ್ತಿದ್ದೇವೆ ಇದು ಮೊದಲು ನಿಲ್ಲಬೇಕು' ಎಂದಿದ್ದಾರೆ.   

ಬಾಲಿವುಡ್‌ನಲ್ಲಿ ಕೊರೊನಾ ಹೆಚ್ಚಾಗಲು ಕಾರಣವಾಯ್ತಾ ಕರಣ್ ಜೋಹರ್ ಬರ್ತಡೇ ಪಾರ್ಟಿ?

ಕರಣ್ ಜೋಹರ್ ಸದ್ಯ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇದು ರಣವೀರ್ ಸಿಂಗ್ ಮತ್ತು ಅಲಿಯಾ ಭಟ್ ಕಾಣಿಸಿಕೊಂಡಿದ್ದಾರೆ. ಸುಮಾರ ಆರು ವರ್ಷಗಳ ಬಳಿಕ ಕರಣ್ ಜೋಹರ್ ನಿರ್ದೇಶಕ್ಕೆ ಮರಳಿದ್ದಾರೆ. ಈ ಸಿನಿಮಾ ಮೂಲಕ ಕರಣ್ ಮತ್ತೆ ಮೋಡಿ ಮಾಡ್ತಾರಾ ಎಂದು ಕಾದುನೋಡಬೇಕು.. ಅಂದಹಾಗೆ ಈ ಸಿನಿಮಾ 2023 ಫೆಬ್ರವರಿ 10ಕ್ಕೆ ರಿಲೀಸ್ ಆಗುತ್ತಿದೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ರೀನಾ, ಕಿರಣ್ & ಲವರ್ ಗೌರಿ.. 'ನಾವೆಲ್ಲರೂ ಒಂದೇ ಫ್ಯಾಮಿಲಿ' ಎಂದ ಅಮೀರ್ ಖಾನ್; ಒಳಗೊಳಗೇ ನಕ್ಕ ನೆಟ್ಟಿಗರು!
ಆರ್ಯನ್ ಖಾನ್‌ಗೆ ಝೈದ್ ಖಾನ್ ಸಪೋರ್ಟ್; ಆದ್ರೂ ಪಬ್ಲಿಕ್‌ ಪ್ಲೇಸ್‌ನಲ್ಲಿ 'ಮಿಡ್ಲ್ ಫಿಂಗರ್' ಎತ್ತಿದ್ದು ತಪ್ಪು ಅಂತಿರೋ ನೆಟ್ಟಿಗರು!