ಕರಣ್ ಮತ್ತು ಅಲಿಯಾ ಭಟ್ ಇಬ್ಬರೂ ಕಂಠಪೂರ್ತಿ ಕುಡಿದು ವಿಕ್ಕಿ ಕೌಶಲ್‌ಗೆ ಫೋನ್ ಮಾಡಿ ಕೀಟಲೆ ಮಾಡಿದ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.
ಬಾಲಿವುಡ್ ಖ್ಯಾತ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ಅವರ ಕಾಫಿ ವಿತ್ ಕರಣ್ ಶೋ ಪ್ರಾರಂಭವಾಗಿದ್ದು ಅನೇಕ ದಿನಗಳೇ ಆಗಿದೆ. ಕಾಫಿ ವಿತ್ ಕರಣ್ ಸೀಸನ್ 7 ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ. ಈಗಾಗಲೇ ಅನೇಕ ಸೆಲೆಬ್ರಿಟಿಗಳು ಶೋನಲ್ಲಿ ಭಾಗಿಯಾಗಿದ್ದರು. ಈ ವಾರ ಬಾಲಿವುಡ್‌ನ ಖ್ಯಾತ ನಟರಾದ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ವಿಕ್ಕಿ ಕೌಶಲ್ ಹಾಜರಾಗಿದ್ದಾರೆ. ಸದ್ಯ ಪ್ರೋಮೋ ರಲೀಸ್ ಆಗಿದ್ದು ಅನೇಕ ಇಂಟ್ರಸ್ಟಿಂಗ್ ವಿಚಾರಗಳನ್ನು ರಿವೀಲ್ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಕರಣ್ ಜೋಹರ್ ಎಂದಿನಂತೆ ಸಿದ್ಧಾರ್ಥ್ ಮತ್ತು ವಿಕ್ಕಿ ಕೌಶಲ್ ಕಾಲೆಳೆದಿದ್ದಾರೆ. ವಿಕ್ಕಿ ಬಳಿ, ಕರಣ್ ನಿಮ್ಮ ಲವ್ ಸ್ಟೋರಿಯ ಸಂಪೂರ್ಣ ಕ್ರೆಡಿಟ್ ನನಗೆ ಸೇರಬೇಕು ಎಂದು ಹೇಳಿದ್ದಾರೆ. ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಕಳೆದ ವರ್ಷ ಅದ್ದೂರಿಯಾಗಿ ಮದುವೆಯಾಗಿದ್ದರು.
ಕರಣ್ ಜೋಹರ್ ಮತ್ತೊಂದು ಇಂಟ್ರಸ್ಟಿಂಗ್ ವಿಚಾರ ಬಿಚ್ಚಿಟ್ಟಿದ್ದಾರೆ. ಕರಣ್ ಮತ್ತು ಅಲಿಯಾ ಭಟ್ ಇಬ್ಬರೂ ಕಂಠಪೂರ್ತಿ ಕುಡಿದು ವಿಕ್ಕಿ ಕೌಶಲ್‌ಗೆ ಫೋನ್ ಮಾಡಿ ಕೀಟಲೆ ಮಾಡಿದ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. 'ಅಲಿಯಾ ಮತ್ತು ನಾನು ಒಮ್ಮೆ ಕುಡಿದು ವಿಕ್ಕಿಗೆ ಫೋನ್ ಮಾಡಿದ್ದೆವು. ನಾವು ವೈನ್ ಕುಡಿಯುತ್ತಿದ್ದೆವು ಮತ್ತು ಆಕಾಶದಲ್ಲಿ ನಕ್ಷತ್ರ ನೋಡುತ್ತಿದ್ದೆವು. ಆಗ ನಾವು ಯಾರಿಗೆ ಕರೆಯಬಹುದು ಎಂದು ಯೋಚಿಸುತ್ತಿದ್ದೆವು. ಇದು ನಿಮ್ಮ ಮದುವೆಗೆ ಮುಂಚೆಯೇ ಆದ ಘಟನೆ. ನಮ್ಮಿಬ್ಬರಿಗೂ ಕತ್ರಿನಾ ಬಹಳ ಹಿಂದಿನಿಂದಲೂ ತುಂಬಾ ಚೆನ್ನಾಗಿ ಗೊತ್ತು. ನಾವು ನಿಮ್ಮನ್ನು (ವಿಕ್ಕಿ ಕೌಶಲ್) ನಂತರ ಪರಿಚಯ ಮಾಡಿಕೊಂಡಿದ್ದು. ಕತ್ರಿನಾ ವಿವಾಹವು ನಮಗೆ ತುಂಬಾ ಭಾವನಾತ್ಮಕ ಮತ್ತು ಸಂತೋಷವನ್ನುಂಟು ಮಾಡಿದೆ' ಎಂದು ಕರಣ್ ಜೋಹರ್ ಹೇಳಿದರು.
ಕಾಫಿ ವಿತ್ ಕರಣ್ ಗೆ ಕರೀಬೇಕಂದ್ರೆ ಸೆಕ್ಸ್ ಲೈಫ್ ಚೆನ್ನಾಗಿರಬೇಕು, ಎಂದಿದ್ದೇಕೆ ತಾಪ್ಸಿ?
ಅಲಿಯಾ ಭಟ್, ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಒಬ್ಬರ ಜೊತೆಯೂ ಸ್ಕ್ರೀನ್ ಶೇರ್ ಮಾಡಿದ್ದಾರೆ. ರಾಝಿ ಸಿನಿಮಾದಲ್ಲಿ ಅಲಿಯಾ ನಟ ವಿಕ್ಕಿ ಕೌಶಲ್ ಜೊತೆ ನಟಿಸಿದ್ರೆ, ಜೀ ಲಿ ಜಾರಾ ಸಿನಿಮಾದಲ್ಲಿ ಕತ್ರಿನಾ ಜೊತೆ ಅಲಿಯಾ ನಟಿಸಿದ್ದರು.
ಇನ್ನು ಇದೇ ವೇಳೆ ಹಳೆಯ ಸೀಸನ್ ಬಗ್ಗೆಯೂ ಚರ್ಚೆಯಾಗಿದೆ. 2018ರಲ್ಲಿ ಪ್ರಸಾರವಾಗುತ್ತಿದ್ದ ಕಾಫಿ ವಿತ್ ಕರಣ್ ಸೀಸನ್ 6ನಲ್ಲಿ ಭಾಗಿಯಾಗಿದ್ದ ಕತ್ರಿನಾ, ವಿಕ್ಕಿ ಕೌಶಲ್ ಬಗ್ಗೆ ಹೇಳಿದ್ದರು. ತೆರೆಮೇಲೆ ವಿಕ್ಕಿ ಕೌಶಲ್ ಜೊತೆ ನಾನು ನಟಿಸಿದ್ರೆ ಚೆನ್ನಾಗಿ ಕಾಣುತ್ತದೆ ಎಂದು ಹೇಳಿದ್ದರು. ಸದ್ಯ ನಡೆಯುತ್ತಿರುವ ಶೋನಲ್ಲಿ ವಿಕ್ಕಿ ಕೌಶಲ್, ಕತ್ರಿನಾ ಮಾತನ್ನು ನೆನಪಿಸಿಕೊಂಡಿದ್ದಾರೆ. 'ಕಳೆದ ಸೀಸನ್‌ನಲ್ಲಿ ಈ ಕಾರ್ಯಕ್ರಮದಲ್ಲಿ ಏನಾಯಿತು, ಅದು ನಿಕ್ಕೂ ನನ್ನ ಕ್ಷಣವಾಗಿತ್ತು. ಯಾಕೆಂದರೆ ಅವರು ನನ್ನ ಬಗ್ಗೆ ತಿಳಿದಿದ್ದಾಯೇ ಎಂಬ ಅಚ್ಚರಿಯಾಗಿತ್ತು. ನಾವು ಯಾವತ್ತು ಭೇಟಿಯಾಗಿರಲಿಲ್ಲ' ಎಂದು ಹೇಳಿದರು.
ಎಕ್ಸ್ ಜೊತೆ ಸೆಕ್ಸ್ ಮಾಡಿದ್ರಾ? ಕರಣ್ ಜೋಹರ್ ಪ್ರಶ್ನೆಗೆ ಜಾನ್ವಿ ಕಪೂರ್ ಉತ್ತರ ಹೀಗಿತ್ತು
ಕತ್ರಿನಾ ಮತ್ತು ವಿಕ್ಕಿ ಕೌಶಲ್ ಮದುವೆ ರಾಜಸ್ಥಾನದಲ್ಲಿ ಅದ್ದೂರಿಯಾಗಿ ನೆರವೇರಿತ್ತು. ಕುಟುಂಬದವರು ಮತ್ತು ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಸದ್ಯ ಕತ್ರಿನಾ ಮತ್ತು ವಿಕ್ಕಿ ಕೌಶಲ್ ಸಂತೋಷದ ಜೀವನ ನಡಿಸುತ್ತಿದ್ದಾರೆ. ಇಬ್ಬರೂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.