Karachi to Noida : ಪಾಕ್​ ಲೇಡಿ ಸೀಮಾ ಹೈದರ್​ ಚಿತ್ರಕ್ಕೆ ಟ್ವಿಸ್ಟ್​: ಥೀಮ್​ ಸಾಂಗ್​ ರಿಲೀಸ್​; ನಾಯಕಿ ಯಾರು?

Published : Aug 22, 2023, 12:04 PM IST
Karachi to Noida : ಪಾಕ್​ ಲೇಡಿ ಸೀಮಾ ಹೈದರ್​ ಚಿತ್ರಕ್ಕೆ ಟ್ವಿಸ್ಟ್​:  ಥೀಮ್​ ಸಾಂಗ್​ ರಿಲೀಸ್​; ನಾಯಕಿ ಯಾರು?

ಸಾರಾಂಶ

ಪಾಕಿಸ್ತಾನದ ನಿಗೂಢ ಲೇಡಿ ಎಂದೇ ಖ್ಯಾತಿ ಪಡೆದಿರುವ ಸೀಮಾ ಹೈದರ್​ ಅವರ ಲವ್​ ಸ್ಟೋರಿಯನ್ನು ಆಧರಿಸಿ ತಯಾರಿಸಲಾಗುತ್ತಿರುವ ಕರಾಚಿ ಟು ನೊಯ್ಡಾದ ಥೀಮ್​ ಸಾಂಗ್​ ರಿಲೀಸ್​ ಆಗಿದೆ.   

ಪಾಕಿಸ್ತಾನದಿಂದ ನೇಪಾಳದ ಮೂಲಕ ಅಕ್ರಮವಾಗಿ ಭಾರತಕ್ಕೆ ಬಂದಿದ್ದ ಸೀಮಾ ಹೈದರ್ ಯಾರಿಗೆ ತಾನೆ ಗೊತ್ತಿಲ್ಲ.  ಭಾರತದ ಯುವಕ ಸಚಿನ್​ ಮೀನಾ ಜತೆ ಪಬ್‌ಜಿ ಆಡಿ ಲವ್ ಆಯಿತೆಂದು ತನ್ನ 4 ಮಕ್ಕಳ ಸಮೇತ ಭಾರತಕ್ಕೆ ಬಂದಿರುವ ಸೀಮಾ ಹೈದರ್‌ ಮೇಲೆ ಒಂದೆಡೆ ಅನುಮಾನಗಳ ಹುತ್ತವೇ ಹರಡಿದೆ.  ಪಾಕಿಸ್ತಾನದ ನಿವಾಸಿ ಸೀಮಾ ಹೈದರ್ ಅವರನ್ನು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಯುಪಿ ಎಟಿಎಸ್) ಎರಡು ದಿನಗಳ ಕಾಲ ವಿಚಾರಣೆ ನಡೆಸಿದ್ದೂ ಆಗಿದೆ.  ಈ ವೇಳೆ, ಆಕೆ ಬಳಿ ಇದ್ದ ಐದು ಪಾಕಿಸ್ತಾನದ ಅಧಿಕೃತ ಪಾಸ್‌ಪೋರ್ಟ್‌ಗಳು, ಬಳಕೆಯಾಗದ ಪಾಸ್‌ಪೋರ್ಟ್ ಮತ್ತು ಗುರುತಿನ ಚೀಟಿಯನ್ನು (Identity card) ವಶಪಡಿಸಿಕೊಳ್ಳಲಾಗಿದೆ. ಇದಕ್ಕೂ ಮುನ್ನ ಸೀಮಾ ಹೈದರ್‌ ಬಳಿ ನಾಲ್ಕು ಮೊಬೈಲ್ ಫೋನ್‌ಗಳು ಮತ್ತು ಎರಡು ವಿಡಿಯೋ ಕ್ಯಾಸೆಟ್‌ಗಳನ್ನು  ವಶಪಡಿಸಿಕೊಳ್ಳಲಾಗಿತ್ತು. ಈ ಹಿನ್ನೆಲೆ ಈ ದಾಖಲೆಗಳ ಬಗ್ಗೆ ತನಿಖೆ ನಡೆಯುತ್ತಿದೆ. ಈಕೆಯ ಬಗ್ಗೆ ಮಾಹಿತಿ ಕಲೆ ಹಾಕಿದ್ದಷ್ಟೂ ಅನುಮಾನದ ಹುತ್ತ ಸುಳಿದಾಡುತ್ತಲೇ ಇದೆ.

ಅದರ ನಡುವೆ ಈ ಇಬ್ಬರ ಲವ್​ಸ್ಟೋರಿಗೆ ಸಂಬಂಧಿಸಿದಂತೆ ಸಿನಿಮಾ ಬಿಡುಗಡೆಯಾಗುವುದಾಗಿ ಘೋಷಿಸಲಾಗಿತ್ತು. ಇದಕ್ಕೆ ಖುದ್ದು ಸೀಮಾ ಹೈದರ್​ ಅವರೇ ನಾಯಕಿ ಎಂದೂ ಹೇಳಲಾಗಿತ್ತು. ಆದರೆ ಇದೀಗ ಇದಕ್ಕೆ ಭಾರಿ ಟ್ವಿಸ್ಟ್​ ಸಿಕ್ಕಿದೆ.  ಸೀಮಾ ಹೈದರ್ ಮತ್ತು ಅವರ ಪತಿ ಸಚಿನ್ ಅವರ ಪ್ರೇಮಕಥೆಯ ಮೇಲೆ ತಯಾರಾಗುತ್ತಿರುವ ಚಿತ್ರಕ್ಕೆ ‘ಕರಾಚಿ ಟು ನೋಯ್ಡಾ’ ಎಂದು ಹೆಸರು ಇಡಲಾಗಿದ್ದು, ಚಿತ್ರದ ಥೀಮ್ ಸಾಂಗ್ ಈಗ  ಬಿಡುಗಡೆಯಾಗಿದೆ. ಕರಾಚಿ ಟು ನೋಯ್ಡಾ ಚಿತ್ರದ ಥೀಮ್ ಸಾಂಗ್ 'ಚಲ್ ಪಡೆ ಹೈ ಹಮ್' 500 ಕ್ಕೂ ಹೆಚ್ಚು ಸಂಗೀತ ವೇದಿಕೆಗಳಲ್ಲಿ ಬಿಡುಗಡೆಯಾಗಿದೆ.  ಈ ಹಾಡು Wynk, Apple Music, Gaana.com, Saavn, Spotify ನಲ್ಲಿ ಟ್ರೆಂಡಿಂಗ್ ಆಗಿದೆ. ಕ್ಷಣಾರ್ಧದಲ್ಲಿ ಲಕ್ಷಾಂತರ ಜನರು ಈ ಹಾಡನ್ನು ಕೇಳಿದ್ದಾರೆ. ದೆಹಲಿಯ ಸಂಸ್ಕಾರ ಭಾರತೀಯ ಆಡಿಟೋರಿಯಂನಲ್ಲಿ ಈ ಹಾಡನ್ನು ಬಿಡುಗಡೆ ಮಾಡಲಾಗಿದೆ.

Viral Video: ಸಿನಿಮಾ ಆಗ್ತಿದೆ ಸೀಮಾ ಹೈದರ್-ಸಚಿನ್ ಲವ್ ಸ್ಟೋರಿ: ಹೆಸ್ರು, ಆಡಿಷನ್​ ಬಹಿರಂಗ!

ಅಂದಹಾಗೆ   ಥೀಮ್​ ಸಾಂಗ್​ (Theme Song) ರಿಲೀಸ್​ ಆಗಿದೆ. ಮೊಬೈಲ್​ನಲ್ಲಿ ಪ್ರಿಯತಮನೊಂದಿಗೆ ಚಾಟ್​ ಮಾಡುವ ಸೀಮಾ ನಂತರ  ತಮ್ಮ ಮೂವರು ಮಕ್ಕಳೊಂದಿಗೆ ಆಟೋ ಹತ್ತಿ ಪಾಕಿಸ್ತಾನ ಬಿಟ್ಟು ವಿಮಾನದಲ್ಲಿ ಪ್ರಿಯತಮನಿಗಾಗಿ ನೋಯ್ಡಾ ತಲುಪುವುದನ್ನು ಇದರಲ್ಲಿ ನೋಡಬಹುದು. ಹಾಡನ್ನು ಬಿಡುಗಡೆ ಮಾಡುವ ಮೊದಲು, ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ಭಾರತ ಮಾತೆಯ ಚಿತ್ರಕ್ಕೆ ಹೂವುಗಳನ್ನು ಅರ್ಪಿಸುವ ಮೂಲಕ ದೀಪ ಬೆಳಗಿಸಲಾಗಿದೆ. ಅದೇ ಸಮಯದಲ್ಲಿ, ಚಿತ್ರದ ನಿರ್ಮಾಪಕ ಅಮಿತ್ ಜಾನಿ ಶಿವಾಜಿ ಮಹಾರಾಜರನ್ನು ಶ್ಲಾಘಿಸಿದ್ದಾರೆ.  ಈ ವೇಳೆ ನಿರ್ದೇಶಕ ಜಯಂತ್ ಸಿನ್ಹಾ, ಭರತ್ ಸಿಂಗ್, ಗಾಯಕಿ ಪ್ರೀತಿ ಸರೋಜ್, ನಟಿ ಫರ್ಹೀನ್ ಫಾಲಕ್ ಸೇರಿದಂತೆ ಇಡೀ ತಂಡ ಹಾಜರಿದ್ದರು.  

ಅಂದಹಾಗೆ ಇಲ್ಲಿಯವರೆಗಿನ ಮಾಹಿತಿಯ ಪ್ರಕಾರ ಸೀಮಾ ಹೈದರ್​ ಅವರೇ ತಮ್ಮ ಪಾತ್ರವನ್ನು ಮಾಡಲಿದ್ದಾರೆ ಎನ್ನುವ ಗಾಳಿ ಸುದ್ದಿಗೂ ತೆರೆ ಬಿದ್ದಿದೆ. ಈ ಪಾತ್ರವನ್ನು ನಟಿ ಫರ್ಹೀನ್ ಫಾಲಕ್ ಮಾಡಲಿದ್ದಾರೆ.  ಸೀಮಾ ಹೈದರ್ ಮೇಲೆ ತಯಾರಾಗುತ್ತಿರುವ ಚಿತ್ರಕ್ಕಾಗಿ ದೇಶಾದ್ಯಂತ ನೂರಾರು ರಂಗಭೂಮಿ ಕಲಾವಿದರು ಆಡಿಷನ್ ನಡೆಸಿದ್ದರು. ಸಚಿನ್ ಮೀನಾ ಪಾತ್ರಕ್ಕಾಗಿ ಗುಲಾಮ್ ಹೈದರ್ ಆಡಿಷನ್ ಮಾಡಿದ್ದರು. ಮಹಾರಾಷ್ಟ್ರ ನವನಿರ್ಮಾಣ (ಎಂಎನ್‌ಎಸ್) ಬೆದರಿಕೆಯ ನಡುವೆಯೂ ಸೀಮಾ ಹೈದರ್ ಮೇಲೆ ಸಿನಿಮಾ ಮಾಡಲು ಅಮಿತ್ ಜಾನಿ ಮುಂದಾಗಿದ್ದಾರೆ.  

ಪಾಕ್​ನ 'ನಿಗೂಢ ಲೇಡಿ' ಸೀಮಾ ಹೈದರ್​ಗೆ ಬಾಲಿವುಡ್​ಗೆ ಆಫರ್​? ಆರು ಲಕ್ಷ ರೂ. ಸಂಬಳ !

ಇತ್ತೀಚೆಗಷ್ಟೇ ಈ ಚಿತ್ರದ ಥೀಮ್ ಸಾಂಗ್‌ನ ಪೋಸ್ಟರ್ (Poster) ಲಾಂಚ್ ಆಗಿದ್ದು, ಇದೀಗ ಅತಿ ಶೀಘ್ರದಲ್ಲೇ ಈ ಚಿತ್ರದ ಟೀಸರ್ ಕೂಡ ಬಿಡುಗಡೆಯಾಗಲಿದೆ. ಪ್ರೇಮಕಥೆಯೇ ಅಥವಾ ಐಎಸ್‌ಐ ಷಡ್ಯಂತ್ರವಿದೆಯೇ ಎಂದು ಎಲ್ಲರೂ ಈ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಈ ಚಿತ್ರದಲ್ಲಿ ಮಾಡೆಲ್ ಫರ್ಹೀನ್ ಫಲಕ್ ಸೀಮಾ ಹೈದರ್ ಪಾತ್ರವನ್ನು ನಿರ್ವಹಿಸಲಿದ್ದಾರೆ. ಇದಕ್ಕೂ ಮೊದಲು, ಸಲ್ಮಾನ್ ಖಾನ್ ಅವರ ಟೈಗರ್ ಜಿಂದಾ ಹೈ ಚಿತ್ರದಲ್ಲಿ ಫರ್ಹೀನ್ ಪಾಕಿಸ್ತಾನದ ಆ್ಯಂಕರ್​ ಆಗಿ ಕಾಣಿಸಿಕೊಂಡಿದ್ದರು.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!