ನನ್ನ ಸಾವಿಗೆ ಹೆಂಡತಿ ರೆಡಿಯಾಗಿದ್ದಾಳೆ, ದೇಹ ಯಾರೂ ನೋಡ್ಬಾರ್ದು: ಪೊಸಾನಿ ಕೃಷ್ಣ ಆತಂಕದ ಹೇಳಿಕೆ ವೈರಲ್!

Published : Aug 22, 2023, 11:45 AM IST
ನನ್ನ ಸಾವಿಗೆ ಹೆಂಡತಿ ರೆಡಿಯಾಗಿದ್ದಾಳೆ, ದೇಹ ಯಾರೂ ನೋಡ್ಬಾರ್ದು: ಪೊಸಾನಿ ಕೃಷ್ಣ ಆತಂಕದ ಹೇಳಿಕೆ ವೈರಲ್!

ಸಾರಾಂಶ

 ಆತಂಕ ಹುಟ್ಟಿಸಿದೆ ತೆಲುಗು ಹಾಸ್ಯ ನಟ ಪೊಸಾನಿ ಕೃಷ್ಣ ಮುರಳಿ ವಿವಾದಾತ್ಮಕ ಹೇಳಿಕೆ ವೈರಲ್....

ತೆಲುಗು ಚಿತ್ರರಂಗದ ಜನಪ್ರಿಯ ಹಾಸ್ಯ ನಟ ಹಾಗೂ ರಾಜಕಾರಣಿ ಪೊಸಾನಿ ಕೃಷ್ಣ ಮುರಳಿ ಮಾಡುವ ಕೆಲಸಕ್ಕಿಂತ ಅಗಾಗ ನೀಡುವ ವಿವಾದಾತ್ಮಕ ಹೇಳಿಕೆಗಳು ತುಂಬಾನೇ ವೈರಲ್ ಆಗುತ್ತದೆ. ಅದರಲ್ಲೂ ರಾಜಕೀಯಕ್ಕೆ ಪ್ರವೇಶ ಕೊಟ್ಟ ಮೇಲೆ ಹುಚ್ಚುಚ್ಚು ಹೇಳಿಕೆಗಳು ಹೆಚ್ಚಾಗಿದೆ. ಈಗ ಹೆಂಡತಿಯನ್ನೂ ವಿವಾದಕ್ಕೆ ಎಳೆದಿರುವುದು ಶಾಕಿಂಗ್. 

ಹೌದು! ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ಫಯರ್ ಬ್ರ್ಯಾಂಡ್‌ ಪೊಲಿಟಿಷಿಯನ್ ಪೊಸಾನಿ ಕೃಷ್ಣ ಮುರಳಿ ತಮ್ಮ ಸಾವಿನ ಬಗ್ಗೆ ಓಪನ್ ಆಗಿ ಹೇಳಿಕೆ ನೀಡಿದ್ದಾರೆ. 'ನನ್ನ ಸಾವಿಗೆ ನಾನು ಈಗಾಗಲೇ ನನ್ನ ಹೆಂಡತಿಯನ್ನು ಸಿದ್ಧಪಡಿಸಿದ್ದೇನೆ. ಜನರು ಅಳುವುದು ಮತ್ತು ನನ್ನ ಬಗ್ಗೆ ಸಹಾನುಭೂತಿ ತೋರಿಸುವುದು ನನಗೆ ಇಷ್ಟವಿಲ್ಲ. ನನ್ನ ಮೃತದೇಹ ಮುಂದೆ ಅಳಬೇಡ ಎಂದು ಹೇಳಿದ್ದೇನೆ. ಇಷ್ಟೇ ಅಲ್ಲ ನನ್ನ ಮೃತದೇಹವನ್ನು ಚಿತ್ರಂಗದ ಮಂದಿಗೆ ತೋರಿಸಬೇಡ ಅಂತಲೂ ಹೇಳಿದ್ದೇನೆ' ಎಂದು ಪೊಸಾನಿ ಕೃಷ್ಣ ಮಾತನಾಡಿದ್ದಾರೆ.

ಅಣ್ಣಾವ್ರ ವ್ಯಕ್ತಿತ್ವ ಹೊಗಳಿದ ತೆಲುಗು ನಟ; ಟಾಲಿವುಡ್‌ ಸ್ಟಾರ್ಸ್‌ಗೆ ಪಾಠ!

'ನಾನು ಸತ್ತರೆ ನನ್ನ ಕುಟುಂಬ ಆರ್ಥಿಕ ಸಂಕಷ್ಟವನ್ನು ಎದುರಿಸುವುದಿಲ್ಲ. ಕೇವಲ ಬಾಡಿಗೆಯಿಂದಲೇ ಪ್ರತಿ ತಿಂಗಳು 8 ಲಕ್ಷ ರೂಪಾಯಿ ಹಣ ಬರುವಂತೆ ಮಾಡಿದ್ದೇನೆ' ಎಂದು ಕುಟುಂಬವನ್ನು ಆರ್ಥಿಕವಾಗಿ ಸದೃಢಗೊಳಿಸಿದ್ದೇನೆ ಎಂದು ಪೊಸಾನಿ ಹೇಳಿದ್ದಾರೆ.

6 ಫ್ಲಾಪ್ ಕೊಟ್ರೂ ಮುಚ್ಕೊಂಡು ಇವ್ರು ಸಿನಿಮಾ ನೋಡ್ಬೇಕು: ರಜನಿಕಾಂತ್- ಚಿರಂಜೀವಿ ಬಗ್ಗೆ ವಿಜಯ್ ದೇವರಕೊಂಡ ಕೊಂಕು

ಪೊಸಾನಿ ಪತ್ನಿ ಹೆಸರು ಕುಸುಮಾ ಲತಾ. ಇಬ್ಬರು ಗಂಡು ಮಕ್ಕಳಿದ್ದು ಉಜ್ವಲ್ ಮತ್ತು ಪ್ರಜ್ವಲ್ ಎಂದು ಹೆಸರಿಟ್ಟಿದ್ದಾರೆ. ಅದರಲ್ಲಿ ಕಿರಿಯ ಪುತ್ರ ಪ್ರಜ್ವಲ್ ಚಿತ್ರರಂಗದಲ್ಲಿ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾನೆ. ಸದ್ಯ ಫಿಲ್ಮ್ ಡೆವೆಲಪ್ಮೆಂಟ್ ಕಾರ್ಪೋರೇಷನ್ ಚೇರ್‌ಮನ್ ಆಗಿದ್ದಾರೆ ಪೊಸಾನಿ. ವೈಎಸ್‌ಆರ್ಸಿಪೊಯ ಸರ್ಕಾರದಲ್ಲಿ ಸಕ್ರಿಯ ಸದಸ್ಯರಾಗಿ ಗುರುತಿಸಿಕೊಂಡಿದ್ದಾರೆ. ಹಾಸ್ಯ ನಟನಾಗಿ ಮಾತ್ರವಲ್ಲದೆ ಸ್ಕ್ರಿಪ್ಟ್‌ ರೈಟರ್, ನಿರ್ದೇಶಕ ಹಾಗೂ ನಿರ್ಮಾಪಕನಾಗಿ ಕೆಲಸ ಮಾಡಿದ್ದಾರೆ. ಸುಮಾರು 150ಕ್ಕೂ ಹೆಚ್ಚು ಸಿನಿಮಾಗಳಿಗೆ ಕಥೆ ಬರೆದಿದ್ದಾರೆ ಹಾಗೂ ಕೆಲವೊಂದು ಚಿತ್ರ ನಿರ್ದೇಶಿಸಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ಮಾತ್ರವಲ್ಲದೆ 2017ರಲ್ಲಿ ಕಿರುತೆರೆ ಬದುಕು ಜಟಕಾ ಬಂಡಿ, 2018ರಲ್ಲಿ ಗ್ಯಾಂಗ್‌ಸ್ಟರ್ ಮತ್ತು 2021ರಲ್ಲಿ ಇನ್‌ ದಿ ನೇಮ್ ಆಫ್ ಗಾಡ್‌ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?