ರಶ್ಮಿಕಾ ಮಂದಣ್ಣ ಫೇವರೆಟ್ ಸಿನಿಮಾ ಲಿಸ್ಟ್‌ನಲ್ಲಿ ಆ ಹೆಸರು ಕೇಳಿ ಅಕ್ಷರಶಃ ಕಂಗಾಲಾದ್ರಾ ಕನ್ನಡಿಗರು?!

Published : Oct 25, 2025, 11:32 AM IST
Rashmika Mandanna Rishab Shetty

ಸಾರಾಂಶ

ಸಾಕಷ್ಟು ಕಡೆ ಸಂದರ್ಶನ ಕೊಟ್ಟಿರುವ ನಟಿ ರಶ್ಮಿಕಾ ಮಂದಣ್ಣ ಅವರು ಹೇಳಿರುವ ಮಾತೊಂದು ಇದೀಗ ಸಖತ್ ವೈರಲ್ ಆಗುತ್ತಿದೆ. ಈ ಸಂದರ್ಶನದ ಕ್ಲಿಪ್ಪಿಂಗ್ ಸ್ವಲ್ಪ ಹಳೆಯದು. ಆ ವೇಳೆ ಛಾವಾ ಚಿತ್ರವು ಬಿಡುಗಡೆ ಆಗಿರಲಿಲ್ಲ. ಪುಷ್ಪಾ 2 ಚಿತ್ರವು ಸೂಪರ್ ಹಿಟ್ ಆಗಿತ್ತು. ಆಗ ಎನು ಹೇಳಿದ್ರು ರಶ್ಮಿಕಾ? ಸ್ಟೋರಿ ನೋಡಿ..

ಟಾಪ್ ಹೀರೋಯಿನ್ ಆಗಿದ್ದಾರೆ ನ್ಯಾಷನಲ್ ಕ್ರಶ್ ಖ್ಯಾತಿಯ ನಟಿ ರಶ್ಮಿಕಾ ಮಂದಣ್ಣ!

ಸ್ಯಾಂಡಲ್‌ವುಡ್‌ನಿಂದ ಟಾಲಿವುಡ್, ಕಾಲಿವುಡ್, ಮಾಲಿವುಡ್ ಸಿನಿಮಾಗಳಲ್ಲಿ ಮಿಂಚಿ, ಈಗ ಬಾಲಿವುಡ್‌ನಲ್ಲಿ ಸಖತ್ ಟಾಪ್ ಹೀರೋಯಿನ್ ಆಗಿದ್ದಾರೆ ನ್ಯಾಷನಲ್ ಕ್ರಶ್ ಖ್ಯಾತಿಯ ನಟಿ ರಶ್ಮಿಕಾ ಮಂದಣ್ಣ. ಈ ನಟಿ (Rashmika Mandanna) ನಟಿಸಿದರೆ ಸಾಕು, ಸಿನಿಮಾ ಸೂಪರ್ ಹಿಟ್ ಆಗೋದು ಖಂಡಿತ ಎಂಬಷ್ಟರ ಮಟ್ಟಿಗೆ ಇಂದು 'ಲಕ್ಕಿ ಹೀರೋಯಿನ್' ಪಟ್ಟ ಪಡೆದವರು ಕನ್ನಡತಿ ರಶ್ಮಿಕಾ ಮಂದಣ್ಣ. ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಸಕ್ಸಸ್ ಪಡೆದ ಬಳಿಕ, ನಟಿ ರಶ್ಮಿಕಾ ಮಂದಣ್ಣ ಅವರು ಹಿಂತಿರುಗಿ ನೋಡಿದ್ದೇ ಇಲ್ಲ.

ಈ ವರ್ಷದ ಸೂಪರ್ ಹಿಟ್, ಟಾಪ್ ಒನ್ ಸಿನಿಮಾ 'ಛಾವಾ'ದಲ್ಲಿ ನಾಯಕಿಯಾಗಿ ನಟಿಸಿರುವ ಹೆಗ್ಗಳಿಕೆ ಕೂಡ ನಟಿ ರಶ್ಮಿಕಾ ಮಂದಣ್ಣ ಅವರಿಗಿದೆ. ಜೊತೆಗೆ, ಇತ್ತೀಚೆನ ಅವರ ಎಲ್ಲಾ ಸಿನಿಮಾಗಳೂ ಕೂಡ ಬ್ಲಾಕ್‌ ಬಸ್ಟರ್ ಹಿಟ್ ಆಗಿವೆ. ಈ ಎಲ್ಲಾ ಕಾರಣಗಳಿಂದ ನಟಿ ರಶ್ಮಿಕಾ ಇಮದು ಇಂಟರ್‌ನ್ಯಾಷನಲ್ ಖ್ಯಾತಿ ಪಡೆದಿದ್ದಾರೆ. ಸದ್ಯಕ್ಕೆ ರಶ್ಮಿಕಾ ನಟನೆಯ 'ಥಮ' ಸಿನಿಮಾ ಕೂಡ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಮುಂದೆ ಬಾಲಿವುಡ್‌ನ ಹ್ಯಾಂಡ್‌ಸಮ್ ಹೀರೋ ಹೃತಿಕ್ ರೋಶನ್ ಜತೆ ಕೂಡ ನಟಿಸಲಿದ್ದಾರೆ ರಶ್ಮಿಕಾ ಮಂದಣ್ಣ.

ಆ ವೇಳೆ ಛಾವಾ ಚಿತ್ರವು ಬಿಡುಗಡೆ ಆಗಿರಲಿಲ್ಲ

ಇವೆಲ್ಲಾ ಒಂದುಕಡೆ ಆಯ್ತು. ಸಾಕಷ್ಟು ಕಡೆ ಸಂದರ್ಶನ ಕೊಟ್ಟಿರುವ ನಟಿ ರಶ್ಮಿಕಾ ಮಂದಣ್ಣ ಅವರು ಹೇಳಿರುವ ಮಾತೊಂದು ಇದೀಗ ಸಖತ್ ವೈರಲ್ ಆಗುತ್ತಿದೆ. ಈ ಸಂದರ್ಶನದ ಕ್ಲಿಪ್ಪಿಂಗ್ ಸ್ವಲ್ಪ ಹಳೆಯದು. ಆ ವೇಳೆ ಛಾವಾ ಚಿತ್ರವು ಬಿಡುಗಡೆ ಆಗಿರಲಿಲ್ಲ. ಪುಷ್ಪಾ 2 ಚಿತ್ರವು ಸೂಪರ್ ಹಿಟ್ ಆಗಿತ್ತು. ಆ ವೇಳೆ ಸಂದರ್ಶನದಲ್ಲಿ ಪಾಲ್ಗೊಂಡಿದ್ದ ನಟಿ ರಶ್ಮಿಕಾ ಅವರು ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತ ತಮ್ಮ ಫೇವರೆಟ್ ಸಿನಿಮಾದ ಲಿಸ್ಟ್‌ ನೀಡಿದ್ದಾರೆ. ಈ ವೇಳೆ ಕನ್ನಡಿಗರಿಗೆ ನಿಜವಾಗಿಯೂ ಅಚ್ಚರಿಯ ಸಂಗತಿ ಕಾದಿತ್ತು.

ಟ್ರೋಲ್ ಮಾಡುವ, ದ್ವೇಷಿಸುವ ವರ್ಗಕ್ಕೆ ಉತ್ತರ?

ಏಕೆಂದರೆ, ತಮ್ಮ ಫೇವರೆಟ್ ಸಿನಿಮಾದ ಬಗ್ಗೆ ಹೇಳುತ್ತ ರಶ್ಮಿಕಾ ಅವರು 'ಪುಷ್ಪಾ 2, ಡಿಯರ್ ಕಾಮ್ರೆಡ್, ಆನಿಮಲ್, ಗುಡ್‌ ಬೈ, ಕಿರಿಕ್ ಪಾರ್ಟಿ, ಗೀತ ಗೋವಿಂದಂ' ಅಂತ ಹೇಳಿದ್ದಾರೆ. ರಶ್ಮಿಕಾ ಕನ್ನಡ ಸಿನಿಮಾ ಹೆಸರು ಹೇಳಿರೋದು ಹಲವರಿಗೆ ಶಾಕಿಂಗ್ ಎನ್ನಿಸಿದೆ ಎನ್ನಬಹುದು. ಕಾರಣ, 'ನಟಿ ರಶ್ಮಿಕಾ ಅವರು ಕನ್ನಡದ ಸಿನಿಮಾಗಳ ಮೂಲಕ ನಟನೆಯ ಕ್ಷೇತ್ರಕ್ಕೆ ಬಂದವರು. ಆದರೆ, ಅವರಿಗೆ ಕನ್ನಡ, ಕನ್ನಡ ಸಿನಿಮಾಗಳೆಂದರೆ ಈಗ ಅಲರ್ಜಿ' ಎಂದೆಲ್ಲಾ ಮಾತನ್ನಾಡುವವರು ತುಂಬಾ ಜನರಿದ್ದಾರೆ. ಈ ಕಾರಣವನ್ನೇ ಮುಂದಿಟ್ಟುಕೊಂಡು ನಟಿ ರಶ್ಮಿಕಾ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುವವರು, ದ್ವೇಷಿಸುವ ವರ್ಗವೇ ಇದೆ.

ಆದರೆ, ರಶ್ಮಿಕಾಗೆ ಕನ್ನಡವೆಂದರೆ, ತಾವು ಮಾಡಿರುವ ಕನ್ನಡ ಸಿನಿಮಾಗಳೆಂದರೆ ಬೇಸರವೇನೂ ಇಲ್ಲ ಎಂಬುದನ್ನು ಅವರು ಈ ಸಂದರ್ಶನದಲ್ಲಿ ಹೇಳಿರುವ ಮಾತಿನ ಮೂಲಕ ಸಾಕ್ಷಿ ಸಮೇತ ಪ್ರೂವ್ ಮಾಡಿದ್ದಾರೆ. ರಿಷಬ್ ಶೆಟ್ಟಿ ನಿರ್ದೇಶನ, ರಕ್ಷಿತ್ ಶೆಟ್ಟಿ ನಾಯಕತ್ವದ 'ಕಿರಿಕ್ ಪಾರ್ಟಿ' ಸೂಪರ್ ಹಿಟ್ ಸಿನಿಮಾದಲ್ಲಿ ರಶ್ಮಿಕಾ ನಾಯಕಿಯಾಗಿ ನಟಿಸಿದ್ದರು. ಆ ಬಳಿಕ ಅವರು ಟಾಲಿವುಡ್‌ಗೆ ಹೋಗಿ ಅಲ್ಲಿ ಸಕ್ಸಸ್ ಕಂಡು ಬಳಿಕ ಪ್ಯಾನ್ ಇಂಡಿಯಾ ನಟಿಯಾಗಿ ಟಾಪ್ ಪಟ್ಟಕ್ಕೆ ಹೋದವರು. ಇದೀಗ, ನಟಿ ರಶ್ಮಿಕಾ ಮಂದಣ್ಣ ಅವರು ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಕೂಡ ತಮ್ಮ ಫೆವರೆಟ್ ಸಿನಿಮಾ, ಅದು ನನ್ನ ಇಷ್ಟದ ಸಿನಿಮಾ ಲಿಸ್ಟ್‌ನಲ್ಲಿ ಇದೆ ಎಂದಿದಕ್ಕೆ ಕನ್ನಡಿಗರಲ್ಲಿ ಕೆಲವರಿಗೆ ಶಾಕ್ ಆಗಿದೆ, ಹಲವರಿಗೆ ಖುಷಿ ಆಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಹೀರೋ ಆಗುವ ಮುನ್ನ ಶಾಕ್ ಕೊಟ್ಟ ಅಕೀರಾ ನಂದನ್: ರೇಣು ದೇಸಾಯಿ ಫೋನ್ ಮಾಡಿದಾಗ ಪವನ್ ನಕ್ಕಿದ್ದೇಕೆ?
'ನನಗೆ ಡೈವೋರ್ಸ್‌ ಸಿಗೋದು ಪಕ್ಕಾ..' ನ್ಯಾಷನಲ್‌ ಕ್ರಶ್‌ ಗಿರಿಜಾ ಓಕ್‌ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್‌