ಮಿಸ್ಟರಿ ಮ್ಯಾನ್ ಜೊತೆ ನಟಿ ಕಂಗನಾ ರಣಾವತ್!​ ಕೈಕೈಹಿಡಿದು ನಡೆದ ಈ ವಿದೇಶಿಗ ಯಾರು?

By Suvarna News  |  First Published Jan 13, 2024, 1:33 PM IST

ಮಿಸ್ಟರಿ ಮ್ಯಾನ್ ಜೊತೆ ಮುಂಬೈನಲ್ಲಿ ಕಾಣಿಸಿಕೊಂಡ ನಟಿ ಕಂಗನಾ ರಣಾವತ್!​ ಕೈಕೈಹಿಡಿದು ನಡೆದ ಈ ವಿದೇಶಿಗ ಯಾರು?
 


 ನಟಿ ಕಂಗನಾ ರಣಾವತ್ ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಕಾರಣದಿಂದಾಗಿ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. 36 ವರ್ಷದ ನಟಿ, ಸದಾ ವಿವಾದಗಳ ಕಿರೀಟವನ್ನೇ ತಲೆಯಲ್ಲಿಟ್ಟುಕೊಂಡಿದ್ದಾರೆ.  ಇದೀಗ ಇವರು ತಮ್ಮ ವೈಯಕ್ತಿಕ ಬದುಕಿನಿಂದಾಗಿ ಗಮನ ಸೆಳೆದಿದ್ದಾರೆ. ಮನಸ್ಸಿಗೆ ಅನ್ನಿಸಿದ್ದನ್ನು ನೇರಾನೇರವಾಗಿ ಹೇಳಿ, ಯಾರಿಗೂ ಹೆದರದೇ ಧೈರ್ಯದಿಂದ ಮುನ್ನುಗ್ಗುತ್ತಲೇ ಕಾಂಟ್ರವರ್ಸಿ ಕ್ವೀನ್​ ಎಂದೇ ಹೆಸರು ಪಡೆದಿರುವವರು ಬಾಲಿವುಡ್​ ನಟಿ ಕಂಗನಾ ರಣಾವತ್​. ಸದ್ಯ ಯಾಕೋ ಬಾಲಿವುಡ್​ನಲ್ಲಿ ಅವರ ಚಿತ್ರಗಳು ಹಿಟ್​ ಆಗುತ್ತಲೇ ಇಲ್ಲ.  ಅವರ ನಸೀಬು ಸದ್ಯ ಸರಿ ಇದ್ದಂತಿಲ್ಲ. ಒಂದರ ಮೇಲೊಂದು ಫ್ಲಾಪ್‌ ಚಿತ್ರಗಳನ್ನು ನೀಡುತ್ತಿದ್ದಾರೆ. ಎಷ್ಟೇ ಕಷ್ಟಪಟ್ಟು, ಶ್ರಮವಹಿಸಿ, ಉತ್ತಮ ನಟನೆ ಮಾಡಿದ್ದರೂ ಇವರ ಚಿತ್ರಗಳು ಶಾಕ್‌ ಮೇಲೆ ಶಾಕ್‌ ನೀಡುತ್ತಿವೆ. ಇದರ ನಡುವೆ, ಕಂಗನಾ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಕಂಗನಾ ಅವರು  ವಿದೇಶಿ ವ್ಯಕ್ತಿಯೊಂದಿಗೆ  ಕಾಣಿಸಿಕೊಂಡಿದ್ದಾರೆ. ಇದರಿಂದಾಗಿ ಕಂಗನಾ ಅವರ ಡೇಟಿಂಗ್ ಲೈಫ್ ಕುರಿತು ಇದೀಗ ಸಾಕಷ್ಟು ಚರ್ಚೆಯಾಗುತ್ತಿದೆ. ಕಂಗನಾ ಜೊತೆ ಮಿಸ್ಟರಿ ಮ್ಯಾನ್ ಯಾರು ಎಂಬ ಬಗ್ಗೆ  ಸದ್ಯ ಅಭಿಮಾನಿಗಳು ತಲೆ ಬಿಸಿ ಮಾಡಿಕೊಂಡಿದ್ದಾರೆ. ನಿನ್ನೆ ಅಂದರೆ ಜನವರಿ 13ರ ಶುಕ್ರವಾರ ಸಂಜೆ ಮುಂಬೈನ ಸಲೂನ್‌ನ ಹೊರಗೆ ಕಂಗನಾ ಈ ವಿದೇಶಿ ಪ್ರಜೆ ಜೊತೆ ಕಾಣಿಸಿಕೊಂಡಿದ್ದಾರೆ. ವೈರಲ್ ಆಗಿರುವ ಈ ವಿಡಿಯೋದಲ್ಲಿ   ಇಬ್ಬರೂ ಪರಸ್ಪರ ಕೈ ಹಿಡಿದುಕೊಂಡು ನಡೆದುಕೊಂಡು ಹೋಗುತ್ತಿರುವುದನ್ನು ನೋಡಬಹುದು.  ಕಂಗನಾ ನೀಲಿ ಬಣ್ಣದ ಡ್ರೆಸ್ ಮತ್ತು ಕನ್ನಡಕದಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. 

ಕಂಗನಾ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಭಿಮಾನಿಗಳು ಕೂಡ ವಿಡಿಯೋಗೆ ಥಹರೇವಾರಿ ಕಮೆಂಟ್ ಮಾಡುತ್ತಿದ್ದಾರೆ. ಕೆಲವರು ಈ ವ್ಯಕ್ತಿ ಹೃತಿಕ್ ರೋಷನ್ ಈ ರೀತಿ ಕಾಣುತ್ತಾರೆ ಎಂದು ಹೇಳುತ್ತಿದ್ದಾರೆ. ಇದಕ್ಕೆ ಕಾರಣವೂ ಇದೆ. ಕಂಗನಾ ಮತ್ತು ಹೃತಿಕ್ ರೋಷನ್​ ಒಂದು ಕಾಲದಲ್ಲಿ ಭಾರಿ ಸುದ್ದಿಯಲ್ಲಿದ್ದ ಸ್ಟಾರ್ಸ್​. ಹೃತಿಕ್​  ರೋಷನ್​ ಅವರು ಮದುವೆಯಾಗಿದ್ದರೂ ಕಂಗನಾ ಹಿಂದೆ ಬಿದ್ದಿದ್ದರು. ಇವರಿಬ್ಬರೂ ಮದುವೆಯಾಗುತ್ತಾರೆ, ಹೃತಿಕ್​ ಪತ್ನಿಗೆ ವಿಚ್ಛೇದನ ಕೊಡುತ್ತಾರೆ ಎಂದು ಅದಾಗಲೇ ಸುದ್ದಿ ಹರಡಿತ್ತು. ಆದರೆ ಇಬ್ಬರ ಸಂಬಂಧ ಮುರಿದು ಬಿತ್ತು. ಹೃತಿಕ್​ ರೋಷನ್​ ತಮಗೆ ಮೋಸ ಮಾಡಿರುವ ಕುರಿತು ಹಲವು ಸಂದರ್ಶನಗಳಲ್ಲಿ ಕಂಗನಾ ಹೇಳುತ್ತಲೇ ಬಂದಿದ್ದಾರೆ. ಕೊನೆಗೂ ಹೃತಿಕ್​ ಪತ್ನಿ ಸುಸೇನ್​ ಖಾನ್​ ಅವರಿಗೆ ಡಿವೋರ್ಸ್​ ಕೊಟ್ಟು ಸಬಾ ಆಜಾದ್ ಜೊತೆ ಸಂಬಂಧದಲ್ಲಿದ್ದಾರೆ. 

Tap to resize

Latest Videos

ನಟಿ ಕಂಗನಾ ರಣಾವತ್​ ಲೋಕಸಭೆಗೆ ಸ್ಪರ್ಧೆ ಕನ್​ಫರ್ಮ್​: ಯಾವ ಕ್ಷೇತ್ರ, ಯಾವ ಪಕ್ಷ? ಇಲ್ಲಿದೆ ಡಿಟೇಲ್ಸ್​..

ಅದೇ ಇನ್ನೊಂದೆಡೆ ಈಗ ಕಂಗನಾ ಅವರ ಈ ಫೋಟೋ ಸಕತ್​ ಸದ್ದು ಮಾಡುತ್ತಿದೆ. ಈ ವ್ಯಕ್ತಿ ಯಾರು ಎಂದು ತಿಳಿಯದಿದ್ದರೂ, ಕಂಗನಾ ಫ್ಯಾನ್ಸ್​ ಅಭಿನಂದನೆಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ. ಇವರು ನಿಮ್ಮ ಬಾಯ್​ಫ್ರೆಂಡೇ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ಆದರೆ ಈ ವ್ಯಕ್ತಿ ಅಥವಾ ವೈರಲ್​ ವಿಡಿಯೋ ಕುರಿತು ಕಂಗನಾ ಇದುವರೆಗೆ ತುಟಿಕ್​ ಪಿಟಿಕ್​ ಅನ್ನಲಿಲ್ಲ. ಸದ್ಯ ಕಂಗನಾ ಅವರಿಗೆ ಅಯೋಧ್ಯೆಯಲ್ಲಿ ನಡೆಲಿರುವ ರಾಮಲಲ್ಲಾ ಪ್ರಾಣ ಪ್ರತಿಷ್ಠಾ ಕಾರ್ಯಕ್ಕೆ ಆಹ್ವಾನ ಬಂದಿದ್ದು, ಅದರ ಖುಷಿಯಲ್ಲಿದ್ದಾರೆ. 

ಇನ್ನು, ಕಂಗನಾ ರಣಾವತ್ ಅವರ ಮುಂಬರುವ ಚಿತ್ರದ ಕುರಿತು ಹೇಳುವುದಾದರೆ, 2023ರಲ್ಲಿ ಕಂಗನಾ ಅವರ ಯಾವ ಚಿತ್ರಗಳೂ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣಲಿಲ್ಲ. ಸದ್ಯ ಇವರು ಎಮರ್ಜೆನ್ಸಿ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಇದರಲ್ಲಿ  ಚಿತ್ರದಲ್ಲಿ ಕಂಗನಾ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 1975 ರಲ್ಲಿ ಭಾರತದಲ್ಲಿ ಹೇರಲಾದ ತುರ್ತು ಪರಿಸ್ಥಿತಿಯ ಘಟನೆಗಳನ್ನು ಆಧರಿಸಿದ   ಚಲನಚಿತ್ರವನ್ನು ಆರಂಭದಲ್ಲಿ ನವೆಂಬರ್ 2023 ರಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿತ್ತು. ಆದರೆ ಈಗ 2024ರಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಹೊರಬೀಳುತ್ತಿದೆ. ಚಿತ್ರದಲ್ಲಿ ಕಂಗನಾ ರಣಾವತ್, ಶ್ರೇಯಸ್ ತಲ್ಪಾಡೆ, ಅನುಪಮ್ ಖೇರ್, ದಿವಂಗತ ನಟ ಸತೀಶ್ ಕೌಶಿಕ್ ಮತ್ತು ನಟಿ ಮಹಿಮಾ ಚೌಧರಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.  ಇದರ ನಡುವೆಯೇ,  ನಟಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.
 

ಆದಿತ್ಯ ಕಪೂರ್​-ಅನನ್ಯಾಗೆ ಏರ್​ಪೋರ್ಟ್​ನಲ್ಲಿ ಎದುರಾಯ್ತು ಅನುಮಾನಾಸ್ಪದ ಬ್ಯಾಗ್- ಕೆಲಕಾಲ ಆತಂಕ

 
 
 
 
 
 
 
 
 
 
 
 
 
 
 

A post shared by yogen shah (@yogenshah_s)

click me!