ನಟಿ, ಸಂಸದೆ ಕಂಗನಾ ರಣಾವತ್ ಅವರ ಬಹು ನಿರೀಕ್ಷಿತ ಎಮರ್ಜೆನ್ಸಿ ಚಿತ್ರದ ಟ್ರೇಲರ್ ಬಿಡುಗಡೆಗೆ ಡೇಟ್ ಫಿಕ್ಸ್ ಆಗಿದೆ. ನಟಿ ಹೇಳಿದ್ದೇನು?
ಕಳೆದ ಜೂನ್ 25 ರಾಷ್ಟ್ರೀಯ ತುರ್ತು ಪರಿಸ್ಥಿತಿ( National Emergency) ಕರಾಳ ನೆನಪಿಗೆ 50 ವರ್ಷವಾಗಿದೆ. ಜೂನ್ 25, 1975ರಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿತ್ತು. ಅಂದಿನ ಪ್ರಧಾನಿ ಇಂದಿರಾ ಗಾಂಧಿ (Indira Gandhi) ತುರ್ತುಪರಿಸ್ಥಿತಿ ಘೋಷಣೆ ಮಾಡಿದ್ದು, 21 ತಿಂಗಳು ಕಾಲ ತುರ್ತು ಪರಿಸ್ಥಿತಿ ಅಸ್ತಿತ್ವದಲ್ಲಿ ಇತ್ತು. 1975, ಜೂನ್ 25ರಂದು ಭಾರತದ ಇತಿಹಾಸದಲ್ಲಿ ಕರಾಳ ದಿನವಾಗಿತ್ತು. ಇಂದು ತುರ್ತು ಪರಿಸ್ಥಿತಿ ಹೇರಿಕೆ ಖಂಡಿಸಿ ದೇಶಾದ್ಯಂತ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ಕರ್ನಾಟಕದಲ್ಲೂ ಕಪ್ಪುಪಟ್ಟಿ ಧರಿಸಿ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ತುರ್ತು ಪರಿಸ್ಥಿತಿ ಕಪ್ಪು ಚುಕ್ಕೆ. ಸಂವಿಧಾನವನ್ನು ತಿರಸ್ಕರಿಸಿ ತುರ್ತು ಪರಿಸ್ಥಿತಿ ಹೇರಲಾಯ್ತು. ಭಾರತದ ಯುವ ಪೀಳಿಗೆ ಇದನ್ನ ಎಂದು ಮರೆಯೋದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅತ್ತ ಹೇಳುತ್ತಿದ್ದರೆ, ಇತ್ತ ನೂತನ ಸಂಸದೆ ಕಂಗನಾ ರಣಾವತ್ ತಮ್ಮ ಮುಂಬರುವ ಚಿತ್ರ ಎಮರ್ಜೆನ್ಸಿಯ ಟ್ರೇಲರ್ ಬಿಡುಗಡೆಯನ್ನು ಘೋಷಣೆ ಮಾಡಿದ್ದಾರೆ.
ನಾಲ್ಕು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ನಟಿ, ಹಾಲಿ ಸಂಸದೆ ಕಂಗನಾ ರಣಾವತ್ ಅವರ ಎಮರ್ಜೆನ್ಸಿಯ ಬಹು ನಿರೀಕ್ಷಿತ ಟ್ರೇಲರ್ ನಾಳೆ ಅಂದರೆ ಆಗಸ್ಟ್ 14 ರಂದು ಬಿಡುಗಡೆಯಾಗಲಿದೆ. ಇದಾಗಲೇ ತಿಳಿಸಿರುವಂತೆ ಚಿತ್ರವು ಬರುವ ಸೆಪ್ಟೆಂಬರ್ 6ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಝೀ ಸ್ಟುಡಿಯೋಸ್ ಮತ್ತು ಮಣಿಕರ್ಣಿಕಾ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಬರುತ್ತಿರುವ 'ಎಮರ್ಜೆನ್ಸಿ' ಚಿತ್ರವು ಇದಾಗಲೇ ತಿಳಿದಿರುವಂತೆ ಮೊದಲ ಮಹಿಳಾ ಪ್ರಧಾನಿ ಇಂದಿರಾಗಾಂಧಿಯನ್ನು ಆಧರಿಸಿದ ಮೆಗಾ-ಬಜೆಟ್ ಚಲನಚಿತ್ರವಾಗಿದೆ. ಎಮರ್ಜೆನ್ಸಿಯ ತಾರಾ ಬಳಗದೊಂದಿಗೆ ಆಸಕ್ತಿದಾಯಕ ಪೋಸ್ಟರ್ ಅನ್ನು ಹಂಚಿಕೊಂಡ ಕಂಗನಾ, "ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದ ಕರಾಳ ಘಟ್ಟವನ್ನು ನೋಡಿ ಮತ್ತು ಅಧಿಕಾರದ ಲಾಲಸೆಯನ್ನು ನೋಡಿ ಎಂದಿದ್ದಾರೆ. ಚಿತ್ರದಲ್ಲಿ ಅನುಪಮ್ ಖೇರ್, ಮಿಲಿಂದ್ ಸೋಮನ್, ಶ್ರೇಯಸ್ ತಲ್ಪಾಡೆ ಮತ್ತು ದಿವಂಗತ ಸತೀಶ್ ಕೌಶಿಕ್ ಅವರ ಸಂಗೀತವನ್ನು ಸಂಚಿತ್ ಬಲ್ಹಾರಾ ಅವರು ಸಂಯೋಜಿಸಿದ್ದಾರೆ. ಕಥೆ ಮತ್ತು ಸಂಭಾಷಣೆಗಳನ್ನು ರಿತೇಶ್ ಷಾ ಬರೆದಿದ್ದಾರೆ.
ಮುಸ್ಲಿಂ ಟೋಪಿ, ಕ್ರೈಸ್ತರ ಕ್ರಾಸ್, ಹಿಂದೂಗಳ ತಿಲಕ... ಬೇಕಿತ್ತಾ ಕಂಗನಾಗೆ ಇದೆಲ್ಲಾ! ಈಗೇನಾಯ್ತು ನೋಡಿ...
ಅಷ್ಟಕ್ಕೂ, ಕಾಂಟ್ರವರ್ಸಿ ಕ್ವೀನ್ ಎಂದೇ ಹೆಸರು ಪಡೆದಿರುವವರು ಕಂಗನಾ ರಣಾವತ್ ಅವರ ಇತ್ತೀಚಿನ ಅವರ ಚಿತ್ರಗಳು ಹಿಟ್ ಆಗುತ್ತಲೇ ಇಲ್ಲ. ಅವರ ನಸೀಬು ಸದ್ಯ ಸರಿ ಇದ್ದಂತಿಲ್ಲ. ಒಂದರ ಮೇಲೊಂದು ಫ್ಲಾಪ್ ಚಿತ್ರಗಳನ್ನು ನೀಡುತ್ತಿದ್ದಾರೆ. ಎಷ್ಟೇ ಕಷ್ಟಪಟ್ಟು, ಶ್ರಮವಹಿಸಿ, ಉತ್ತಮ ನಟನೆ ಮಾಡಿದ್ದರೂ ಇವರ ಚಿತ್ರಗಳು ಶಾಕ್ ಮೇಲೆ ಶಾಕ್ ನೀಡುತ್ತಿವೆ. ಆದರೆ ಮೊದಲ ಬಾರಿಗೇ ಸಂಸದೆಯಾಗಿ ಲೋಕಸಭೆಗೆ ಎಂಟ್ರಿ ಕೊಟ್ಟಿದ್ದಾರೆ ನಟಿ. ಇಲ್ಲಿ ಅದೃಷ್ಟ ಖುಲಾಯಿಸಿದೆ. ಸದ್ಯ ನಟಿಯ ಕೈಯಲ್ಲಿ ಎಮರ್ಜೆನ್ಸಿ ಚಿತ್ರವಿದೆ. ಅಲ್ಲಿ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯ ಪಾತ್ರ ನಿರ್ವಹಿಸಿದ್ದಾರೆ. 1975 ರಲ್ಲಿ ಭಾರತದಲ್ಲಿ ಹೇರಲಾದ ತುರ್ತು ಪರಿಸ್ಥಿತಿಯ ಘಟನೆಗಳನ್ನು ಆಧರಿಸಿದ ಚಿತ್ರವಿದು. ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರ ಜೀವನದ ಸುತ್ತ ಸುತ್ತುತ್ತದೆ ಈ ಸಿನಿಮಾ. 1975ರಲ್ಲಿ ತುರ್ತು ಪರಿಸ್ಥಿತಿ ( Emergency) ಘೋಷಣೆ ಮಾಡಿದಾಗ ದೇಶದಲ್ಲಿ ಆಗಿರುವ ಅಲ್ಲೋಲ ಕಲ್ಲೋಲಗಳೇನು? ದೇಶ ಯಾವ ಸ್ಥಿತಿಗೆ ತಲುಪಿತ್ತು ಈ ಕುರಿತು ಎಳೆಎಳೆಯಾಗಿ ಚಿತ್ರ ಬಿಚ್ಚಿಟ್ಟಿರುವುದಾಗಿ ನಟಿ ಹೇಳಿದ್ದಾರೆ. ಈ ಸಿನಿಮಾದಲ್ಲಿ ಕಂಗನಾ ಅವರು ಇಂದಿರಾ ಗಾಂಧಿಯ ಪಾತ್ರ ಮಾಡಿದ್ದಾರೆ. ತುರ್ತು ಪರಿಸ್ಥಿತಿಯು ನಮ್ಮ ದೇಶದ ಇತಿಹಾಸದಲ್ಲಿ ಅತ್ಯಂತ ಮಹತ್ವದ ಮತ್ತು ಕರಾಳ ಅಧ್ಯಾಯಗಳಲ್ಲಿ ಒಂದಾಗಿದೆ ಎಂದು ಈ ಹಿಂದೆ ನಟಿ ಹೇಳಿದ್ದರು.
ಚಿತ್ರದ ಬಿಡುಗಡೆ ಪದೇ ಪದೇ ಮುಂದೂಡುತ್ತಲೇ ಹೋಗುತ್ತಿದೆ. ನವೆಂಬರ್ 24, 2023 ರಂದು ಬಿಡುಗಡೆಯಾಗಬೇಕಿತ್ತು. ನಂತರ ಜೂನ್ 14ರಂದು ಚಿತ್ರ ರಿಲೀಸ್ ಆಗಲಿದೆ ಎನ್ನಲಾಗಿತ್ತು. ಕಂಗನಾ ಥೇಟ್ ಇಂದಿರಾ ಗಾಂಧಿಯವರಂತೆ ಮೇಕಪ್ ಮಾಡಿಕೊಂಡು, ಅವರಂತೆಯೇ ಟ್ರೇಲರ್ ಕಳೆದ ವರ್ಷವೇ ಬಿಡುಗಡೆಯಾಗಿತ್ತು. ಕಂಗನಾ ಅವರ ಈ ನಟನೆಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಆದರೆ ಯಾಕೋ ಈ ಚಿತ್ರಕ್ಕೆ ಇನ್ನೂ ಮುಹೂರ್ತ ಕೂಡಿ ಬರುತ್ತಲೇ ಇರಲಿಲ್ಲ. ಇದೀಗ ಬಿಜೆಪಿಯ ಸಂಸದೆ ಆದ ಮೇಲೆ ನಟಿಯ ಚಿತ್ರದ ಬಗ್ಗೆ ಇನ್ನಷ್ಟು ಕುತೂಹಲ ಮನೆ ಮಾಡಿದೆ. ಇದೀಗ ನಟಿ ಸೆಪ್ಟೆಂಬರ್ 6ರಂದು ಚಿತ್ರ ಬಿಡುಗಡೆಯಾಗಲಿದೆ ಎಂದಿದ್ದಾರೆ. ಈ ಚಿತ್ರವನ್ನು ಸುಮಾರು 25 ಕೋಟಿ ರೂಪಾಯಿಗಳ ಬಜೆಟ್ನಲ್ಲಿ ರೆಡಿ ಮಾಡಲಾಗಿದೆ ಎನ್ನಲಾಗುತ್ತಿದೆ.
ತಮ್ಮವರ ಮೇಲೆಯೇ ಈ ಪರಿ ಹಿಂಸಾಚಾರ, ಇನ್ನು... ಎನ್ನುತ್ತಲೇ ಸನಾತನ ಧರ್ಮದ ಮಹತ್ವ ತಿಳಿಸಿದ ಕಂಗನಾ