ಕಂಗನಾ ರಣಾವತ್ ಕಾಂತಾರ ಸಿನಿಮಾ ನೋಡಿ ಹೊಗಳಿದ್ದಾರೆ. ಕುಟುಂಬ ಸಮೇತ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ವೀಕ್ಷಿಸಿದ ಕಂಗನಾ ರಿಷಬ್ ಶೆಟ್ಟಿಗೆ ಹ್ಯಾಟ್ಸ್ ಆಫ್ ಹೇಳಿದ್ದಾರೆ.
ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾಗೆ ದೇಶದಾದ್ಯಂತ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪ್ರೇಕ್ಷಕರು ಮಾತ್ರವಲ್ಲದೇ ಬೇರೆ ಬೇರೆ ಭಾಷೆಯ ಸಿನಿ ಗಣ್ಯರು ಸಹ ಸಿನಿಮಾ ನೋಡಿ ಹಾಡಿ ಹೊಗಳುತ್ತಿದ್ದಾರೆ. ಬಾಕ್ಸ್ ಆಫೀಸ್‌ನಲ್ಲೂ ಕಾಂತಾರ ಭರ್ಜರಿ ಕಮಾಯಿ ಮಾಡಿದೆ. ಈಗಾಗಲೇ 150 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮುನ್ನುಗ್ಗುತ್ತಿದೆ. ಅನೇಕ ಸ್ಟಾರ್ಸ್ ಕಾಂತಾರ ನೋಡಿ ಮೆಚ್ಚಿಕೊಂಡಿದ್ದಾರೆ. ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ತಮಿಳು ಸ್ಟಾರ್ ಧನುಷ್, ಪ್ರಭಾಸ್, ಅನುಷ್ಕಾ ಶೆಟ್ಟಿ ಸೇರಿದಂತೆ ಅನೇಕ ಸ್ಟಾರ್ಸ್ ಸಿನಿಮಾಗೆ ಫಿದಾ ಆಗಿದ್ದಾರೆ. ಇದೀಗ ಕಂಗನಾ ರಣಾವತ್ ಸಿನಿಮಾ ನೋಡಿ ಹೊಗಳಿದ್ದಾರೆ. ಕುಟುಂಬ ಸಮೇತ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ವೀಕ್ಷಿಸಿದ ಕಂಗನಾ ರಿಷಬ್ ಶೆಟ್ಟಿಗೆ ಹ್ಯಾಟ್ಸ್ ಆಫ್ ಹೇಳಿದ್ದಾರೆ.
ಸಿನಿಮಾ ಹೊರಬಂದ ಕಂಗನಾ ವಿಡಿಯೋ ಮೂಲಕ ಕಾಂತಾರ ಸಿನಿಮಾದ ವಿಮರ್ಶೆ ಮಾಡಿದ್ದಾರೆ. 'ನಾನು ಈಗ ಕುಟುಂಬದ ಜೊತೆ ಕಾಂತಾರ ಸಿನಿಮಾ ನೋಡಿ ಹೊರಬಂದೆ. ನಾನು ಇನ್ನು ಶೇಕ್ ಆಗುತ್ತಿದ್ದೀನಿ. ರಿಷಬ್ ಶೆಟ್ಟಿ ನಿಮಗೆ ಹ್ಯಾಟ್ಸ್ ಆಫ್. ಚಿತ್ರಕಥೆ, ನಿರ್ದೇಶನ, ಆಕ್ಟಿಂಗ್, ಆಕ್ಷನ್ ಅದ್ಭುತ, ನಂಬಲಸಾಧ್ಯ' ಎಂದು ಹೇಳಿದ್ದಾರೆ.
ಇನ್ನು ಸಿನಿಮಾದಲ್ಲಿನ ಸ್ಥಳಿಯ ಜಾನಪದವನ್ನು ಮೆಚ್ಚಿಕೊಂಡರು. 'ಸಂಪ್ರದಾಯ, ಜಾನಪದ ಮಿಶ್ರಣ. ಛಾಯಾಗ್ರಾಹಣ, ಆಕ್ಷನ್ ಅದ್ಭುತವಾಗಿದೆ. ಸಿನಿಮಾ ಎಂದರೆ ಇದು' ಎಂದು ಹಾಡಿಹೊಗಳಿದ್ದಾರೆ. ಈ ಅನಭವದಿಂದ ಹೊರಬರಲು ಒಂದು ವಾರ ಬೇಕಾಗಲಿದೆ. ಚಿತ್ರಮಂದಿರದಲ್ಲ ಅನೇಕರು ಇಂಥ ಸಿನಿಮಾ ನೋಡಿಲ್ಲ ಎಂದು ಹೇಳುತ್ತಿರುವುದು ಕೇಳಿದೆ. ಈ ಸಿನಿಮಾಗೆ ಧನ್ಯವಾದಗಳು. ಒಂದು ವಾರದಲ್ಲಿ ಈ ಸಿನಿಮಾ ಅನುಭವದಿಂದ ಹೊರಬರುತ್ತೇನೆ ಎನ್ನವುದು ಸಹ ನನಗೆ ಗೊತ್ತಿಲ್ಲ' ಎಂದು ಹೇಳಿದ್ದಾರೆ.
Kantara ನೋ ಕಾಮೆಂಟ್ಸ್ ಅಂದರೆ.....ನೋ ಕಾಮೆಂಟ್ಸ್; ವಿವಾದದ ಬಗ್ಗೆ ರಿಷಬ್ ಶೆಟ್ಟಿ ಮಾತು
ಅಂದಹಾಗೆ ಕಂಗನಾ ಇತ್ತೀಚಿಗಷ್ಟೆ ಕಾಂತಾರ ಸಿನಿಮಾದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ರಿಷಬ್ ಶೆಟ್ಟಿ ಅವರ ಪೋಸ್ಟರ್ ಶೇರ್ ಮಾಡಿ, 'ಕಾಂತಾರ ಬಗ್ಗೆ ಅಸಾಧಾರಣವಾದ ವಿಷಯಗಳನ್ನು ಕೇಳಲು ತುಂಬಾ ಕುತೂಹಲವಾಗುತ್ತಿದೆ. ಕಾಂತಾರ ನೋಡಲು ಕುತೂಹಲದಿಂದ ಕಾಯುತ್ತಿದ್ದೀನಿ' ಎಂದು ಹೇಳಿದ್ದರು. ಇದೀಗ ಕೊನೆಗೂ ಸಿನಿಮಾ ನೋಡಿ ಸಂತಸ ಪಟ್ಟಿದ್ದಾರೆ. ಕಂಗನಾ ವಿಮರ್ಶೆ ಸಿನಿಮಾತಂಡಕ್ಕೆ ಸಂತಸ ತಂದಿದೆ.
Kangana Ranaut is all praise for after watching the film in theaters. pic.twitter.com/Qya9Ghizb3
— Kangana Ranaut Daily (@KanganaDaily)Kantara Collection; ಮುಂದುವರೆದ ರಿಷಬ್ ಶೆಟ್ಟಿ ಅಬ್ಬರ, ಒಟ್ಟು ಗಳಿಕೆಯ ಪಕ್ಕಾ ಲೆಕ್ಕ ಇಲ್ಲಿದೆ
ಕಾಂತಾರ ಬಗ್ಗೆ
ಚಿತ್ರದಲ್ಲಿ ರಿಷಬ್ ಶೆಟ್ಟಿ ಜೊತೆ ಕಿಶೋರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ಸಪ್ತಮಿ ಗೌಡ ಕಾಣಿಸಿಕೊಂಡಿದ್ದಾರೆ. ಅಚ್ಯುತ್ ಕುಮಾರ್ ಪಾತ್ರ ಗಮನಾರ್ಹವಾಗಿದೆ. ಸ್ಯಾಂಡಲ್ ವುಡ್‌ನ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಕಾಂತಾರ ಮೂಡಿಬಂದಿದೆ.