ನಾನು ತಪ್ಪಾದ ದೇಶದಲ್ಲಿ ಕೆಲಸ ಮಾಡುತ್ತಿದ್ದೀನಿ: RRR ನೋಡಿ ಹಾಲಿವುಡ್ ನಿರ್ದೇಶಕ ಡೇನಿಯಲ್ ಪ್ರತಿಕ್ರಿಯೆ

Published : Oct 20, 2022, 04:42 PM IST
ನಾನು ತಪ್ಪಾದ ದೇಶದಲ್ಲಿ ಕೆಲಸ ಮಾಡುತ್ತಿದ್ದೀನಿ: RRR ನೋಡಿ ಹಾಲಿವುಡ್ ನಿರ್ದೇಶಕ ಡೇನಿಯಲ್ ಪ್ರತಿಕ್ರಿಯೆ

ಸಾರಾಂಶ

ಆರ್ ಆರ್ ಆರ್ ಸಿನಿಮಾ ನೋಡಿ ಹಾಲಿವುಡ್ ಖ್ಯಾತ ನಿರ್ದೇಶಕ ಡೇನಿಯಲ್ ಕ್ವಾನ್ ಪ್ರತಿಕ್ರಿಯೆ ನೀಡಿದ್ದಾರೆ. ನಾನು ತಪ್ಪು ದೇಶದಲ್ಲಿ ಕೆಲಸ ಮಾಡುತ್ತಿದ್ದೀನಿ ಅಂತ ಅನಿಸುತ್ತಿದೆ ಎಂದು ಹೇಳಿದ್ದಾರೆ. 

ಎಸ್ ಎಸ್ ರಾಜಮೌಳಿ ಸಾರಥ್ಯದಲ್ಲಿ ಮೂಡಿ ಬಂದಿರುವ ಸೂಪರ್ ಹಿಟ್ ಆರ್ ಆರ್ ಆರ್ ಸಿನಿಮಾ ಇನ್ನು ಸದ್ದು ಮಾಡುತ್ತಿದೆ. ಈಗಾಗಲೇ ಕೋಟಿ ಕೋಟಿ ಬಾಚಿಕೊಂಡಿರುವ  ಆರ್ ಆರ್ ಆರ್ ಸಿನಿಮಾ ಸದ್ಯ ವಿದೇಶದಲ್ಲಿ ಸದ್ದು ಮಾಡುತ್ತಿದೆ. ಆರ್ ಆರ್ ಆರ್ ಸಿನಿಮಾತಂಡ ಸದ್ಯ ಜಪಾನ್‌ನಲ್ಲಿ ಬೀಡು ಬಿಟ್ಟಿದೆ. ಜಪಾನ್‌ನಲ್ಲಿ ಸಿನಿಮಾ ಪ್ರಮೋಷನ್ ಮಾಡುತ್ತಿದ್ದು ಅಲ್ಲಿಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ನಡುವೆ ಹಾಲಿವುಡ್ ಖ್ಯಾತ ನಿರ್ದೇಶಕರೊಬ್ಬರು ರಾಜಮೌಳಿ ಆರ್ ಆರ್ ಆರ್ ಸಿನಿಮಾವನ್ನು ಹಾಡಿಹೊಗಳಿದ್ದಾರೆ.  ಅದು ಮತ್ಯಾರು ಅಲ್ಲ ಖ್ಯಾತ ನಿರ್ದೇಶಕ ಡೇನಿಯಲ್ ಕ್ವಾನ್. 

ಆರ್ ಆರ್ ಆರ್ ನೋಡಿ ಟ್ವೀಟ್ ಮಾಡಿರುವ ಡೇನಿಯಲ್ ಕ್ವಾನ್ 'ಅನೇಕ ವರ್ಷಗಳ ನಿರಂತರ ಕೆಲಸ ಮತ್ತು ಟ್ರಾವೆಲಿಂಗ್ ನಂತರ ನಾನು ಅಂತಿಮವಾಗಿ ನಾನು ನನ್ನ ಲಿಸ್ಟ್‌ನಲ್ಲಿದ್ದ ಒಂದೆರಡು ವಿಷಯಗಳನ್ನು ಪರಿಶೀಲಿಸಿದ್ದೇನೆ. 1, ನನ್ನ ಎಲ್ಲಾ ತೆರಿಗೆಗಳನ್ನು ಮುಗಿಸಿದೆ (ನನಗೆ ಗೊತ್ತು ಇದು ವ್ಯಂಗ್ಯ ಎಂದು) ಮತ್ತು 2, RRR ಅನ್ನು ವೀಕ್ಷಿಸಿದೆ. ನಾನು ತಮಾಷೆ ಮಾಡುತ್ತಿಲ್ಲ. ಭಾರತೀಯ ಆಕ್ಷನ್ ಚಲನಚಿತ್ರವನ್ನು ನೋಡಿದಾಗ ನಾನು ತಪ್ಪು ದೇಶದಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ನನಗೆ ಅನಿಸುತ್ತದೆ' ಎಂದು ಹೇಳಿದ್ದಾರೆ. 

ಮುಂದುವರೆದ ಅವರು, 'ಅಮೆರಿಕಾದಲ್ಲಿ ನಾವು ಹಲವಾರು ಬ್ಲಾಕ್‌ ಬಸ್ಟರ್‌ ಸಿನೆಮಾಗಳನ್ನು ಮಾಡುತ್ತೀವಾದರೂ ಅವೆಲ್ಲವೂ ಕೇವಲ ದೇಶದ ಮೇಲಿನ ಅಭಿಮಾನ, ಘನತೆ ಎತ್ತಿಹಿಡಿಯುವ ರೀತಿಯ ಕಥೆಗಳನ್ನು ಹೊಂದಿರುತ್ತವೆ. ಆರ್‌ಆರ್‌ಆರ್‌ ಸಿನಿಮಾ ನೋಡಿದಾಗ ಅದರಲ್ಲಿರುವ ಗಾಂಭೀರ್ಯತೆ ಮತ್ತು ಸಿನೆಮಾವನ್ನು ತೋರಿಸಿದ ರೀತಿ ನನ್ನನ್ನು ಗಾಢವಾಗಿ ಕಾಡುತ್ತಿದೆ. ಸಿನೆಮಾವನ್ನು ಪ್ರೀತಿಸಲು ನೂರೆಂಟು ಕಾರಣಗಳಿವೆ' ಎಂದರು.

ಈ ಚಿತ್ರಗಳ OTTಗೆ ಹಕ್ಕು ಅತ್ಯಂತ ದುಬಾರಿ ;ಪಟ್ಟಿಯಲ್ಲಿ KGFಗೆ ಎರಡನೇ ಸ್ಥಾನ

ಡೇನಿಯಲ್ ಪ್ರತಿಕ್ರಿಯೆ ಅಭಿಮಾನಿಗಳಿಗೆ ಫುಲ್ ಖುಷ್ ಆಗಿದ್ದಾರೆ. ರಾಮ್ ಚರಣ್ ಮತ್ತು ಜೂ.ಎನ್ ಟಿ ಆರ್ ಅಭಿಮಾನಿಗಳು ಮೆಚ್ಚಿಗೆಯ ಕಾಮೆಂಟ್ ಮಾಡುತ್ತಿದ್ದಾರೆ. ಈ ವರ್ಷ ತೆರೆಗೆ ಬಂದ ಆರ್ ಆರ್ ಆರ್ ಸಿನಿಮಾಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸ್ವಾತಂತ್ರ್ಯ ಹೋರಾಟಗಾರರ ಕಥೆ ಇದಾಗಿದ್ದು ರಾಮ್ ಚರಣ್ ಮತ್ತು ಜೂ ಎನ್ ಟಿ ಆರ್ ಮಿಂಚಿದ್ದರು. 300 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಆರ್ ಆರ್ ಆರ್ ಬರೋಬ್ಬರಿ 1000 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ.

RRR ಚಿತ್ರಕ್ಕಾಗಿ ಹೆಬ್ಬುಲಿಯಾದ ರಾಜಮೌಳಿ! ರಾಜಮೌಳಿ ಸಿನಿಮಾ ಮೇಕಿಂಗ್ ಹೇಗಿರುತ್ತೆ ಗೊತ್ತಾ ?

ಡೇನಿಯಲ್ ಸದ್ಯ ಎವೆರಿಥಿಂಗ್ ಎವೆರಿವೇರ್ ಆಲ್ ಅಟ್ ಒನ್ಸ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೊಂದು ಕಾಮಿಡಿ ಸಿನಿಮಾವಾಗಿದೆ. ಇದನ್ನು ಡೇನಿಯಲ್ ಮತ್ತು ಡೇನಿಯಲ್ ಸ್ಕೀನೆರ್ಟ್ ಬರೆದು ನಿರ್ದೇಶಿಸಿದ್ದಾರೆ. ಇದನ್ನು ರುಸ್ಸೋ ಸಹೋದರರು ನಿರ್ಮಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Sonali Bendre: 'ಅಡುಗೆಮನೆಗೆ ಹೋಗ್ಬೇಡ ನೀನು'.. ಅಂತ ಖಡಕ್ ಆಗಿ ಹೇಳಿದ್ರು ನನ್ ಅತ್ತೆ!
ತ್ರಿಷಾಳ ಮಾಜಿ ಪ್ರಿಯಕರನ ಜೊತೆ ಸಿಕ್ಕಿಬಿದ್ದ ಮತ್ತೊಬ್ಬ ನಟಿ; ಸಂದರ್ಶನದಲ್ಲಿ ಅವರೇ ಒಪ್ಪಿಕೊಂಡರು!