ಹಡಿಲು ಭೂಮಿ ಕೃಷಿ ಗದ್ದೆಗಳ ಕಳೆ ತೆಗೆದ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳಿಗೆ 'ಕಾಂತಾರ' ಚಲನಚಿತ್ರ ವೀಕ್ಷಣೆಗೆ ಶಾಸಕ ರಘುಪತಿ ಭಟ್ ಅವರಿಂದ ಉಚಿತ ವ್ಯವಸ್ಥೆ ಮಾಡಲಿದ್ದಾರೆ. ಸುವರ್ಣ ನ್ಯೂಸ್(Asianet suvarna News) ನ News Hour ಸಂದರ್ಶನದಲ್ಲಿ ನಿರ್ದೇಶಕ ರಿಷಬ್ ಶೆಟ್ಟಿ(Rishab Shetty) ಹಡಿಲು ಭೂಮಿಯ ಕೃಷಿ ಆಂದೋಲನವನ್ನು ಮನಸಾರೆ ಹೊಗಳಿದ್ದರು. ಇದರಿಂದ ಪ್ರಭಾವಗೊಂಡು ಶಾಸಕರು ಈ ಉಚಿತ ಸಿನಿಮಾ ವೀಕ್ಷಣೆ ವ್ಯವಸ್ಥೆ ಗೊಳಿಸಿದ್ದಾರೆ.
ಉಡುಪಿ (ಅ.21) : ಹಡಿಲು ಭೂಮಿ ಕೃಷಿ ಗದ್ದೆಗಳ ಕಳೆ ತೆಗೆದ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳಿಗೆ 'ಕಾಂತಾರ' ಚಲನಚಿತ್ರ ವೀಕ್ಷಣೆಗೆ ಶಾಸಕ ರಘುಪತಿ ಭಟ್ ಅವರಿಂದ ಉಚಿತ ವ್ಯವಸ್ಥೆ ಮಾಡಲಿದ್ದಾರೆ. ಸುವರ್ಣ ನ್ಯೂಸ್(Asianet suvarna News) ನ News Hour ಸಂದರ್ಶನದಲ್ಲಿ ನಿರ್ದೇಶಕ ರಿಷಬ್ ಶೆಟ್ಟಿ(Rishab Shetty) ಹಡಿಲು ಭೂಮಿಯ ಕೃಷಿ ಆಂದೋಲನವನ್ನು ಮನಸಾರೆ ಹೊಗಳಿದ್ದರು. ಇದರಿಂದ ಪ್ರಭಾವಗೊಂಡು ಶಾಸಕರು ಈ ಉಚಿತ ಸಿನಿಮಾ ವೀಕ್ಷಣೆ ವ್ಯವಸ್ಥೆ ಗೊಳಿಸಿದ್ದಾರೆ.
ಕಾಂತಾರಾ ಎಫೆಕ್ಟ್?!; ಉತ್ತರ ಕರ್ನಾಟಕದಲ್ಲಿಯೂ ಶುರುವಾಯ್ತು ಕರಾವಳಿಯ ದೈವಾರಾಧನೆ!
undefined
ಕೇದಾರೋತ್ಥಾನ ಟ್ರಸ್ಟ್ ಉಡುಪಿ ಮತ್ತು ಕೇದಾರೋತ್ಥಾನ ರೈತ ಉತ್ಪಾದಕರ ಕಂಪನಿ ಉಡುಪಿ ಇವರ ಮೂಲಕ ಉಡುಪಿ ವಿಧಾನಸಭಾ ಕ್ಷೇತ್ರದಾದ್ಯಂತ ಈ ಬಾರಿ 2ನೇ ಹಂತದಲ್ಲಿ ಹಡಿಲು ಭೂಮಿ ಕೃಷಿ ಮಾಡಿದ ಗದ್ದೆಗಳಲ್ಲಿನ ಕಳೆಗಳನ್ನು ತೆಗೆಯುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಮತ್ತು ಡಾ. ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಉಡುಪಿ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಮಣಿಪಾಲದ ಭಾರತ್ ಸಿನಿಮಾಸ್ ಚಿತ್ರಮಂದಿರದಲ್ಲಿ ಶನಿವಾರ 'ಕಾಂತಾರ' ಚಲನಚಿತ್ರ ವೀಕ್ಷಣೆಗೆ ಶಾಸಕ ಕೆ ರಘುಪತಿ ಭಟ್(MLA Raghupati Bhat) ಅಧ್ಯಕ್ಷತೆಯ ಕೇದಾರೋತ್ಥಾನ ಟ್ರಸ್ಟ್ ವತಿಯಿಂದ ಉಚಿತ ವ್ಯವಸ್ಥೆ ಮಾಡಲಾಗಿದೆ.
ಕೇದಾರೋತ್ಥಾನ ಟ್ರಸ್ಟ್ ಮೂಲಕ ಉಡುಪಿ ವಿಧಾನಸಭಾ ಕ್ಷೇತ್ರದಾದ್ಯಂತ ಕಳೆದ ಬಾರಿ ಪ್ರಥಮ ಹಂತದಲ್ಲಿ ಕೈಗೊಂಡ ಹಡಿಲು ಭೂಮಿ ಕೃಷಿ ಮಾಡಿದ ಗದ್ದೆಗಳಲ್ಲಿನ ಕಳೆ ತೆಗೆಯುವ ಕಾರ್ಯದಲ್ಲಿ 'ಕಾಂತಾರ' ಚಲನಚಿತ್ರದ ನಿರ್ದೇಶಕ, ನಾಯಕ ನಟರಾದಂತಹ ರಿಷಭ್ ಶೆಟ್ಟಿಯವರು ಪಾಲ್ಗೊಂಡು ವಿದ್ಯಾರ್ಥಿಗಳನ್ನು, ಯುವ ಸಮುದಾಯವನ್ನು ಹುರಿದುಂಬಿಸಿ ಕೃಷಿ ಚಟುವಟಿಕೆಗಳಲ್ಲಿ ಹೆಚ್ಚು ಹೆಚ್ಚಾಗಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಿದ್ದರು.
ವಿದೇಶದಲ್ಲಿ Kantara ಸಿನಿಮಾಗೆ ಟಿಕೆಟ್ ಸಿಗುತ್ತಿಲ್ಲ; ದೈವಗಳ ಬಗ್ಗೆ ನಾಯಕಿ ಸಪ್ತಮಿ ಗೌಡ ಮಾತು
ಅವರು ಈ ಬಾರಿ ನಿರ್ದೇಶಿಸಿ, ನಾಯಕ ನಟರಾಗಿ ಅಭಿನಯಿಸಿದ 'ಕಾಂತಾರ' ಚಲನಚಿತ್ರ ತುಳುನಾಡಿನ ದೈವಾರಾಧನೆಯ ಸಂಸ್ಕೃತಿಯನ್ನು ಎತ್ತಿಹಿಡಿದಿದ್ದು, ಕರಾವಳಿ ಕರ್ನಾಟಕದ ಸಂಸ್ಕೃತಿಯನ್ನು ರಾಷ್ಟ್ರದಾದ್ಯಂತ ಪಸರಿಸಿ ಹೊಸ ಸಂಚಲನ ಮೂಡಿಸಿದೆ. ಈ ಚಲನಚಿತ್ರವನ್ನು ವೀಕ್ಷಿಸಲು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಮತ್ತು ಡಾ. ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಉಡುಪಿ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಉಚಿತ ವ್ಯವಸ್ಥೆಯನ್ನು ಮಾಡಲಾಗಿದೆ.