
ಅಮೆರಿಕಾ ಹಾಸ್ಯನಟ(American Comedian), Rapper ಮತ್ತು ಟಿವಿ ನಿರೂಪಕ ನಿಕೋಲಸ್ ಸ್ಕಾಟ್ ಕ್ಯಾನನ್ ಉಫರ್ ನಿಕ್ ಕ್ಯಾನನ್ (Nick Cannon)ಕೆಲವು ದಿನಗಳ ಹಿಂದೆ ಖಾಸಗಿ ಕಾರ್ಯಕ್ರಮದ ನಡುವೆ ತಮ್ಮ ಪುತ್ರನ ಬಗ್ಗೆ ಮಾತನಾಡಿದ್ದಾರೆ. 5 ತಿಂಗಳ ಕಂದಮ್ಮ ಬ್ರೈನ್ ಟ್ಯೂಮರ್‌ಗೆ (Brain Tumor) ಬಲಿಯಾದ ಕ್ಷಣವನ್ನು ನೆನಪಿಸಿಕೊಂಡು ಭಾವುಕರಾಗಿದ್ದಾರೆ. ಪುತ್ರನ ನೆನಪಿಗಾಗಿ ನಿಕ್ ಎದೆ ಭಾಗದಲ್ಲಿ ಟ್ಯಾಟು ಹಾಕಿಸಿಕೊಂಡಿದ್ದಾರೆ.
'ನಾನು ಈ ವಿಚಾರವನ್ನು ಈವರೆಗೂ ಯಾರೊಂದಿಗೂ ಹಂಚಿಕೊಂಡಿಲ್ಲ, ಕುಟುಂಬದವರಲ್ಲೂ ಕೂಡ. ಪ್ರಪಂಚದಲ್ಲಿ ಏನ್ ಏನೋ ಆಗುತ್ತಿದೆ, ನನಗೆ ಈ ಸಲ ತುಂಬಾ ಕಷ್ಟದ ವೀಕೆಂಡ್ (Weekend) ಆಗಿತ್ತು. ನನ್ನ ಮಾತು ಆರಂಭಿಸುವ ಮುನ್ನ ನಿಮಗೆ ಪಿಕ್ ಆಫ್ ದಿ ಡೇ (Pic Of the Day) ತೋರಿಸಬೇಕು. ಇದು ಪುತ್ರ ಝೆನ್ (Zen). ಈ ಶೋ ಆರಂಭಕ್ಕೂ ಮುನ್ನ ನನ್ನ ಪ್ರಕಾರ ಬೇಸಿಗೆ ಶುರುವಾಗುವ ಮುನ್ನ ಝೆನ್ ಹುಟ್ಟಿದ್ದು ಅಂದ್ರೆ ಜೂನ್ 23ರಂದು. ನಾವು ತುಂಬಾನೇ ಖುಷಿಯಾಗಿದ್ದೆವು ನಾನು ಈ ಫೇಸ್‌ನ ಎಂಜಾಯ್ ಮಾಡುತ್ತಿದ್ದೆ. ಆತನಿಗೋಸ್ಕರ ವಿಭಿನ್ನ ರೀತಿಯಲ್ಲಿ ಫೋಟೋಶೂಟ್ ಮಾಡಿಸಿದ್ದೀವಿ.' ಎಂದು ಮಾತನಾಡುತ್ತಾ ನಿಕ್ ಭಾವುಕರಾಗಿದ್ದಾರೆ.
ವೇದಿಕೆ ಎದುರಿಗೆ ಕುಳಿತಿದ್ದ ಜನರಿಗೆ ನಿಕ್ ಜೀವನದಲ್ಲಿ ನಡೆದ ಘನಟೆ ಬಗ್ಗೆ ಅರಿವಿಲ್ಲದ ಕಾರಣ ಮಗು ಮುದ್ದಾಗಿದೆ ಎಂದು ಗುಂಪು ಗುಂಪಾಗಿ ಮಾತನಾಡಿಕೊಳ್ಳುತ್ತಿದ್ದರು. ಮೊದಲ ತಿಂಗಳೂ ಸೂಪರ್ ಅಗಿತ್ತು, ಎರಡನೇ ತಿಂಗಳು ಅವನನ್ನು ಗಮನಿಸಲು ಶುರು ಮಾಡಿದೆ ಎಲ್ಲಾ ಚೆನ್ನಾಗಿತ್ತು ಆದರೆ ನಾನು ಮತ್ತೊಂದು ಬದಲಾವಣೆ ಗಮನಿಸಿದ್ದೆವು. ಅವನಿಗೆ ಅದೆನೋ ಸೈನಸ್ ರೀತಿ ಆಗಿತ್ತು. ಸದಾ ಕೆಮ್ಮುತ್ತಿದ್ದ(Cough). ನಾವು ಜ್ವರ (Fever) ಎಂದುಕೊಂಡು ವೈದ್ಯರನ್ನು ಸಂಪರ್ಕ ಮಾಡಿದೆವು. ನನ್ನ ಮಗ ತುಂಬಾ ಮುದ್ದು ಮುದ್ದಾಗಿದ್ದ. ಎಲ್ಲಾ ನನ್ನ ರೀತಿಯೇ ಇದ್ದ. ಅವನ ಉಸಿರಾಟ ಚೆಕ್ ಮಾಡಿಸಲು ನಾನು ವೈದ್ಯರಿಗೆ ಹೋದಾಗ ನಮಗೆ ಆತನಿಗೆ ಬ್ರೈನ್ ಕ್ಯಾನ್ಸರ್ (Brain Cancer) ಇತ್ತು ಎಂದು ತಿಳಿಯಿತು. ಅವನ ತಲೆಯಲ್ಲಿ ನೀರು ಕಟ್ಟಿತ್ತು. ತಕ್ಷಣವೇ ನಾವು ಸರ್ಜರಿ (Surgery) ಮಾಡಿಸಿದ್ದೆವು' ಎಂದು ತಮ್ಮ ಪುತ್ರನಿಗೆ ಏನಾಯ್ತು ಎಂದು ಹೇಳಿಕೊಂಡಿದ್ದಾರೆ.
'ನಾವೆಲ್ಲರೂ ಆತನೊಂದಿಗೆ ಹೆಚ್ಚಿನ ಸಮಯ ಕಳೆದೆವು. ಆತನ ತಾಯಿ ಅಲೀಸ್ ಯಾವುದಕ್ಕೂ ಹೆಚ್ಚು ರಿಯಾಕ್ಟ್ ಮಾಡಲಿಲ್ಲ. ಸಮವಾಗಿ ಪರಿಸ್ಥಿತಿ ನಿಭಾಯಿಸಿದ್ದಳು. ಆದರೆ ನಾವು ನಿರೀಕ್ಷೆ ಮಾಡದ ತಿರುವು ಎದುರಿಸಿದೆವು. ಆತನಲ್ಲಿದ್ದ ಟ್ಯೂಮರ್ ಬೆಳೆಯುವುದಕ್ಕೆ ಶುರು ಮಾಡಿತ್ತು. ಈ ವೀಕೆಂಡ್ ನಾವು ಒಳ್ಳೆಯ ಸಮಯ ಕಳೆದೆವು. ಭಾನುವಾರು ಬೆಳಗ್ಗೆ ನಾವು ಬೇಗ ಎದ್ದೆವು ಇಡೀ ದಿನ ಒಟ್ಟಿಗೆ ಇದ್ದೆವು ಸಮುದ್ರದ (Ocean) ಕಡೆ ಸಮಯ ಕಳೆದೆವು. ಆಂದೇ ನಾನು ಆತನನ್ನು ಕೊನೆ ಬಾರಿ ತಬ್ಬಿಕೊಂಡಿದ್ದು (Last Hug). ಆತನನ್ನು ಮಾತನಾಡಿಸಿ ನಾನು ವಿಮಾನ ನಿಲ್ದಾಣಕ್ಕೆ (Airport) ಹೋಗು ಸಮಯದಲ್ಲಿ ವಿಚಾರ ತಿಳಿಯಿತ್ತು ನಾನು ಮತ್ತೆ ಹಿಂತಿರುಗಿ ಬಂದೆ. ಸೂರ್ಯೋದಯ ಮಾತ್ರವಲ್ಲ ನನ್ನ ಜೀವನದ ಸೂರ್ಯಾಸ್ತವನ್ನು ನಾನು ನೋಡಿದೆ' ಎಂದು ಮಾತನಾಡಿದ್ದಾರೆ.
'ಇಂದು ನಾನು ಹೇಗೆ ಶೋ (Tv show) ನಡೆಸುವೆ ಎಂದು ಗೊತ್ತಿರಲಿಲ್ಲ ಆದರೆ ನೀವು ನನ್ನ ಕುಟುಂಬ ನಿಮ್ಮ ಜೊತೆ ಮಾತನಾಡಬೇಕು ಎಂದು ನಾನು ಬಂದೆ. ನೀವು ನಮ್ಮನ್ನು ತುಂಬಾನೇ ಪ್ರೀತಿಸಬೇಕು. ಜನರು ಹೇಳುತ್ತಿದ್ದರು ಪವಾಡಗಳನ್ನು ನಂಬಬೇಕು ಅಂತ ನಾನು ಸಾಕಷ್ಟು ಬೇಡಿಕೊಂಡೆ. ನಮ್ಮ ಸೈನಿಕರನ್ನು ನೋಡಿದ್ದೀನಿ ಅವರು ಎಷ್ಟು ಧೈರ್ಯವಂತರು ಎಂದು ಈಗ ನಾನು ಕೂಡ ಹಾಗೆ ಇರಬೇಕು' ಎಂದು ಕಾರ್ಯಕ್ರಮ ಮುಗಿಸುವ ಮುನ್ನ ಪತ್ನಿ ಜೊತೆಗಿರುವ ಫೋಟೋ ಹಂಚಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.