* ಸಿದ್ಧಾರ್ಥ ಶುಕ್ಲಾ ಆತ್ಮದೊಂದಿಗೆ ಮಾತನಾಡಿದ ಹಫ್
* ಸಿದ್ಧಾರ್ಥ ಏತ್ಮ ಏನು ಹೇಳಿತು?
* ಸಿದ್ಧಾರ್ಥ್ ಸಾವಿನಿಂದ ಹೊರಬರದ ಅಭಿಮಾನಿಗಳು
ನವದೆಹಲಿ(ಸೆ. 12) ಬಿಗ್ ಬಾಸ್ ವಿನ್ನರ್ ಸಿದ್ದಾರ್ಥ್ ಶುಕ್ಲಾ ನಿಧನ ಬಾಲಿವುಡ್ ಗೆ ದೊಡ್ಡ ಆಘಾತ ನೀಡಿತ್ತು. ಅವರ ಸ್ನೇಹಿತರು ಮತ್ತು ಅಭಿಮಾನಿಗಳು ಈ ಆಘಾತದಿಂದ ಹೊರಗೆ ಬಂದಿಲ್ಲ.
ಆತ್ಮಹತ್ಯೆ ಮಾಡಿಕೊಂಡಿರುವ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್‌ನ ಆತ್ಮವನ್ನು ಕರೆದು ಮಾತಾಡಿಸಿರುವ ಸ್ಟೀವ್ ಹಫ್ ಇದೀಗ ಸಿದ್ಧಾರ್ಥ್ ಆತ್ಮದ ಜತೆಯೂ ಮಾತನಾಡಿದ್ದಾರೆ. ಹಿಂದೆ ಮೈಕಲ್ ಜಾಕ್ಸನ್ ಆತ್ಮದ ಜತೆಯೂ ಮಾತನಾಡಿದ್ದ.
ಚಿರಂಜೀವಿ ಸರ್ಜಾ ಆತ್ಮದೊಂದಿಗೆ ಮಾತನಾಡಿದ್ದ
ತಮ್ಮ ಯೂ ಟ್ಯೂಬ್ ಚಾನಲ್ ನಲ್ಲಿ ಸ್ಟೀವ್ ಹಫ್ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಮಾತನಾಡುತ್ತ ಸಿದ್ಧಾರ್ಥ್ ಆತ್ಮ ಅನೇಕ ವಿಚಾರಗಳನ್ನು ಹೇಳಿದೆ. ಈ ವಿಡಿಯೋದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಅನೇಕ ಪ್ರತಿಕ್ರಿಯೆಗಳು ಬಂದಿವೆ.
ಈತ ಬ್ಲಾಗ್ ಹೊಂದಿದ್ದಾನೆ. ಯೂಟ್ಯೂಬ್ ಚಾನೆಲ್ ಕೂಡ ಇವನ ಹೆಸರಿನಲ್ಲಿದೆ. ಆತ್ಮಗಳನ್ನು ಮಾತಾಡಿಸಿ ರೆಕಾರ್ಡ್ ಮಾಡಿದ ವಿಡಿಯೋಗಳನ್ನು ಹಾಗೂ ಆತ್ಮಗಳು ಮಾತಾಡಿದ್ದು ಎಂದು ಹೇಳಲಾಗುವ ಆಡಿಯೋಗಳನ್ನು ಯೂಟ್ಯೂಬ್‌ನಲ್ಲೂ ಬ್ಲಾಗ್‌ನಲ್ಲೂ ಹಾಕುತ್ತಾನೆ. ಹಾಗೆ ಈತ ಮೈಕೆಲ್ ಜಾಕ್ಸನ್‌ನನ್ನೂ ಮಾತಾಡಿಸಿ ಅದರ ವಿಡಿಯೋ ಆಡಿಯೋಗಳನ್ನು ತನ್ನ ಬ್ಲಾಗ್‌ನಲ್ಲೂ ಯೂಟ್ಯೂಬ್‌ನಲ್ಲೂ ಹಾಕಿದ್ದಾನೆ. ಜಾಕ್ಸನ್‌ನ ಆತ್ಮ ತನ್ನ ಅಭಿಮಾನಿಗಳಿಗೆ, ನಾನು ಇಲ್ಲಿಗೆ ಬಂದಿದ್ದೇನೆ- ಎಂದು ಹೇಳಿದ್ದಾನೆ ಎಂದು ಹಫ್ ವಿವರಿಸಿದ್ದರು.