'ಕಾಂತಾರ' ಚಿತ್ರವನ್ನು ನೇರವಾಗಿ ಆಸ್ಕರ್‌ಗೆ ಕಳುಹಿಸಿ; ನಟಿ ಕಂಗನಾ ರಣಾವತ್ ಒತ್ತಾಯ

By Shruthi Krishna  |  First Published Oct 21, 2022, 4:52 PM IST

ಮುಂದಿನ ವರ್ಷ,ಕಾಂತಾರ ಸಿನಿಮಾವನ್ನು ನೇರವಾಗಿ ಆಸ್ಕರ್‌ಗೆ ಕಳುಹಿಸಿ ಎಂದು ನಟಿ ಕಂಗನಾ ರಣಾವತ್ ಹೇಳಿದ್ದಾರೆ. 


ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾವನ್ನು ನೇರವಾಗಿ ಆಸ್ಕರ್‌ಗೆ ಕಳುಹಿಸಿ ಎಂದು ಬಾಲಿವುಡ್ ಖ್ಯಾತ ನಟಿ ಕಂಗನಾ ರಣಾವತ್ ಹೇಳಿದ್ದಾರೆ. ಸಿನಿಮಾ ನೋಡಿ ಇಷ್ಟ ಪಟ್ಟಿರುವ ಕಂಗನಾ ರಣಾವತ್ ಭಾರತಕ್ಕೆ ಸರಿಯಾದ ಪ್ರಾತಿನಿಧ್ಯದ ಅಗತ್ಯವಿದೆ, ಕಾಂತಾರ ಜಗತ್ತು ನೋಡಬೇಕಾಗಿರುವ ಸಿನಿಮಾ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಕಾಂತಾರ ವೀಕ್ಷಿಸಿ ವಿಡಿಯೋ ಮೂಲಕ ಪ್ರತಿಕ್ರಿಯೆ ನೀಡಿದ್ದ ಕಂಗನಾ, ರಿಷಬ್ ಶೆಟ್ಟಿಗೆ ಹ್ಯಾಟ್ಸ್ ಆಫ್ ಹೇಳಿದ್ದರು. ಇದೀಗ ಆಸ್ಕರ್‌ಗೆ ಕಳುಹಿಸಿ ಎಂದು ಬರೆದುಕೊಂಡಿದ್ದಾರೆ. 

ಈ ಬಗ್ಗೆ ಇನ್ಸ್ಟಾಗ್ರಾಮ್‌ನಲ್ಲಿ ಕಂಗನಾ, 'ಮುಂದಿನ ವರ್ಷ,ಕಾಂತಾರ ಸಿನಿಮಾವನ್ನು ನೇರವಾಗಿ ಆಸ್ಕರ್‌ಗೆ ಕಳುಹಿಸಿ. ಈ ವರ್ಷ ಮುಗಿಯೊದ್ರೊಳಗೆ ಇನ್ನು ಅನೇಕ ಉತ್ತಮ ಸಿನಿಮಾಗಳು ಬರಬಹುದು ಎಂದು ನನಗೆ ತಿಳಿದಿದೆ. ಭಾರತಕ್ಕೆ ಜಾಗತಿಕವಾಗಿ ಸರಿಯಾದ ಪ್ರಾತಿನಿಧ್ಯದ ಅಗತ್ಯವಿದೆ. ಭಾರತವು ಒಂದು ಪವಾಡದಂತೆ. ಕಾಂತಾರ ಜಗತ್ತು ಅನುಭವಿಸಲೇಬೇಕಾದ ಸಿನಿಮಾ' ಎಂದು ಹೇಳಿದ್ದಾರೆ. 

Tap to resize

Latest Videos

ಕಾಂತಾರ ಸಿನಿಮಾ ನೋಡಿ ಕಂಗನಾ ಹಾಡಿಹೊಗಳಿದ್ದಾರೆ. ಸಿನಿಮಾ ವೀಕ್ಷಿಸಿ ಹೊರಬಂದ ಕಂಗನಾ ವಿಡಿಯೋ ಮೂಲಕ ಕಾಂತಾರ ಸಿನಿಮಾದ ವಿಮರ್ಶೆ ಮಾಡಿದ್ದಾರೆ. 'ನಾನು ಈಗ ಕುಟುಂಬದ ಜೊತೆ ಕಾಂತಾರ ಸಿನಿಮಾ ನೋಡಿ ಹೊರಬಂದೆ. ನಾನು ಇನ್ನು ಶೇಕ್ ಆಗುತ್ತಿದ್ದೀನಿ. ರಿಷಬ್ ಶೆಟ್ಟಿ ನಿಮಗೆ ಹ್ಯಾಟ್ಸ್ ಆಫ್. ಚಿತ್ರಕಥೆ, ನಿರ್ದೇಶನ, ಆಕ್ಟಿಂಗ್, ಆಕ್ಷನ್ ಅದ್ಭುತ, ನಂಬಲಸಾಧ್ಯ' ಎಂದು ಹೇಳಿದ್ದಾರೆ.  

ಇನ್ನು ಸಿನಿಮಾದಲ್ಲಿನ ಸ್ಥಳಿಯ ಜಾನಪದವನ್ನು ಮೆಚ್ಚಿಕೊಂಡರು. 'ಸಂಪ್ರದಾಯ, ಜಾನಪದ ಮಿಶ್ರಣ. ಛಾಯಾಗ್ರಾಹಣ, ಆಕ್ಷನ್ ಅದ್ಭುತವಾಗಿದೆ. ಸಿನಿಮಾ ಎಂದರೆ ಇದು' ಎಂದು ಹಾಡಿಹೊಗಳಿದ್ದಾರೆ. ಈ ಅನಭವದಿಂದ ಹೊರಬರಲು ಒಂದು ವಾರ ಬೇಕಾಗಲಿದೆ. ಚಿತ್ರಮಂದಿರದಲ್ಲ ಅನೇಕರು ಇಂಥ ಸಿನಿಮಾ ನೋಡಿಲ್ಲ ಎಂದು ಹೇಳುತ್ತಿರುವುದು ಕೇಳಿದೆ. ಈ ಸಿನಿಮಾಗೆ ಧನ್ಯವಾದಗಳು. ಒಂದು ವಾರದಲ್ಲಿ ಈ ಸಿನಿಮಾ ಅನುಭವದಿಂದ ಹೊರಬರುತ್ತೇನೆ ಎನ್ನವುದು ಸಹ ನನಗೆ ಗೊತ್ತಿಲ್ಲ' ಎಂದು ಹೇಳಿದ್ದಾರೆ.    

ಹ್ಯಾಟ್ಸ್ ಆಫ್ ರಿಷಬ್ ಶೆಟ್ಟಿ, ಸಿನಿಮಾ ಅಂದ್ರೆ ಇದು; 'ಕಾಂತಾರ' ನೋಡಿ ಹೊಗಳಿದ ನಟಿ ಕಂಗನಾ

ಅಂದಹಾಗೆ ಕಂಗನಾ ಇತ್ತೀಚಿಗಷ್ಟೆ ಕಾಂತಾರ ಸಿನಿಮಾದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ರಿಷಬ್ ಶೆಟ್ಟಿ ಅವರ ಪೋಸ್ಟರ್ ಶೇರ್ ಮಾಡಿ, 'ಕಾಂತಾರ ಬಗ್ಗೆ ಅಸಾಧಾರಣವಾದ ವಿಷಯಗಳನ್ನು ಕೇಳಲು ತುಂಬಾ ಕುತೂಹಲವಾಗುತ್ತಿದೆ. ಕಾಂತಾರ ನೋಡಲು ಕುತೂಹಲದಿಂದ ಕಾಯುತ್ತಿದ್ದೀನಿ' ಎಂದು ಹೇಳಿದ್ದರು. ಇದೀಗ ಕೊನೆಗೂ ಸಿನಿಮಾ ನೋಡಿ ಸಂತಸ ಪಟ್ಟಿದ್ದಾರೆ. ಕಂಗನಾ ವಿಮರ್ಶೆ ಸಿನಿಮಾತಂಡಕ್ಕೆ ಸಂತಸ ತಂದಿದೆ.

ಕುತೂಹಲ ಹೆಚ್ಚಾಗ್ತಿದೆ, ಕಾಂತಾರ ನೋಡಲು ಕಾಯುತ್ತಿದ್ದೇನೆ; ನಟಿ ಕಂಗನಾ ರಣಾವತ್

ಕಾಂತಾರ ಬಗ್ಗೆ

ಚಿತ್ರದಲ್ಲಿ ರಿಷಬ್ ಶೆಟ್ಟಿ ಜೊತೆ ಕಿಶೋರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ಸಪ್ತಮಿ ಗೌಡ ಕಾಣಿಸಿಕೊಂಡಿದ್ದಾರೆ. ಅಚ್ಯುತ್ ಕುಮಾರ್ ಪಾತ್ರ ಗಮನಾರ್ಹವಾಗಿದೆ. ಸ್ಯಾಂಡಲ್ ವುಡ್‌ನ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಕಾಂತಾರ ಮೂಡಿಬಂದಿದೆ. 

 

click me!