Tunisha Sharma death; ಬಹುಪತ್ನಿತ್ವ ವಿರುದ್ಧ ಕಠಿಣ ಕಾನೂನು ತರಬೇಕು; ಮೋದಿಗೆ ನಟಿ ಕಂಗನಾ ಮನವಿ

By Shruthi Krishna  |  First Published Dec 28, 2022, 5:06 PM IST

ತುನಿಷಾ ಶರ್ಮಾ ಆತ್ಮಹತ್ಯೆ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟಿ ಕಾಂಗನಾ ರಣಾವತ್ ಬಹುಪತ್ನಿತ್ವದ ವಿರುದ್ಧ ಬಲವಾದ ಕಾನೂನು ತರಬೇಕು ಎಂದು ಪ್ರದೀನಿ ಮೋದಿ ಅವರಲ್ಲಿ ಮನವಿ ಮಾಡಿದ್ದಾರೆ. 


ಬಾಲಿವುಡ್ ನಟಿ ಕಂಗನಾ ರಣಾವತ್ ಯಾವುದೇ ಪ್ರರಣದ ಬಗ್ಗೆಯಾದರೂ ಪ್ರತಿಕ್ರಿಯೆ ನೀಡುತ್ತಾರೆ. ತಮ್ಮ ಅಭಿಪ್ರಾಯ ಹೊರಹಾಕುತ್ತಾರೆ. ಕೆಲವೊಮ್ಮೆ ಅಗ್ರೆಸಿವ್ ಆಗಿ ಮಾತನಾಡುವ ಕಾಂಗನಾ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು ಇದೆ. ಇದೀಗ ಬಾಲಿವುಡ್ ಸ್ಟಾರ್ ಕಿರುತೆರೆ ನಟಿ ತುನಿಷಾ ಶರ್ಮಾ ಆತ್ಮಹತ್ಯೆ ಪ್ಪಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಹೊಸ ಕಾನೂನು ತರುವಂತೆ ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ. ಬಹುಪತ್ನಿತ್ವ ಮತ್ತು ಆಸಿಡ್ ದಾಳಿಯಿಂದ ಮಹಿಳೆಯರನ್ನು ರಕ್ಷಿಸಲು ಹೊಸ ಕಾನೂನು ಜಾರಿ ತರುವಂತೆ ಪ್ರಧಾನಿಗೆ ಮನವಿ ಮಾಡಿದ್ದಾರೆ. 

ತುನಿಷಾ ಶರ್ಮಾ ಎಂದು ಹ್ಯಾಷ್‌ಟ್ಯಾಗ್ ಬಳಿಕ ದೀರ್ಘವಾದ ಪೋಸ್ಟ್ ಶೇರ್ ಮಾಡಿದ್ದಾರೆ. 'ಮಹಿಳೆ ಎಲ್ಲವನ್ನೂ ನಿಭಾಯಿಸಬಲ್ಲಳು, ಕಳೆದುಕೊಂಡ ಪ್ರೀತಿ, ಮದುವೆ, ಸಂಬಂಧ ಹೀಗೆ ಎಲ್ಲವನ್ನೂ ನಿಭಾಯಿಸಬಹುದು. ಆದರೆ ಅವಳ ಲವ್ ಸ್ಟೋರಿ ಎಂದಿಗೂ ಪ್ರೀತಿಯನ್ನು ಹೊಂದಿಲ್ಲ ಎಂಬ ಅಂಶವನ್ನು ಅವಳು ಎಂದಿಗೂ ನಿಭಾಯಿಸು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ. 

Tap to resize

Latest Videos

'ನಾನು ಗೌರವಾನ್ವಿತ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರಲ್ಲಿ ವಿನಂತಿಸುತ್ತೇನೆ. ಕೃಷ್ಣ ದ್ರೌಪದಿಗೆ ಸಹಾಯ ಮಾಡಿದ್ದಂತೆ, ನಾವು ನಿಮ್ಮಲ್ಲಿ ಒಪ್ಪಿಗೆ ಇಲ್ಲದ ಬಹುಪತ್ನಿತ್ವ ವಿರುದ್ಧ ಬಲವಾದ ಕಾನೂನು ಮಾಡುತ್ತೀರಿ ಎಂದು ನಿರೀಕ್ಷೆ ಇಟ್ಟಿದ್ದೀವಿ. ಮಹಿಳೆಯರ ಮೇಲೆ ಆಸಿಡ್ ದಾಳಿ, ಮಹಿಳೆಯನ್ನು ಅನೇಕ ತುಂಡು ತುಂಡುಗಾಳಾಗಿ ಕತ್ತರಿಸುವುದು ಇಂತವರಿಗೆ ತಕ್ಷಣ ಮರಣದಂಡನೆ ಶಿಕ್ಷೆ ವಿಧಿಸಬೇಕು' ಎಂದು ಹೇಳಿದ್ದಾರೆ.

 

Tunisha Sharma Death Case; ಇದು ಲವ್ ಜಿಹಾದ್ ವಿಷಯ: BJP ನಾಯಕರ ಗಂಭೀರ ಆರೋಪ

ತುನಿಷಾ ಶರ್ಮಾ ನಿಧನ  

20 ವರ್ಷ ವಯಸ್ಸಿನ ನಟಿ ತುನಿಷಾ ಶೂಟಿಂಗ್ ನಡುವೆ ಚಹಾ ವಿರಾಮದ ವೇಳೆ ವಾಶ್‌ರೂಮ್‌ಗೆ (wash room) ತೆರಳಿದ್ದು, ಅಲ್ಲೇ ನೇಣು ಹಾಕಿಕೊಂಡಿದ್ದರು. ಶೌಚಾಲಯಕ್ಕೆ ಹೋದ ಆಕೆ ಎಷ್ಟೇ ಹೊತ್ತಾದರೂ ಹೊರಗೆ ಬರದ ಹಿನ್ನೆಲೆಯಲ್ಲಿ ಬಾಗಿಲು ಒಡೆದು ಒಳ ಹೋದಾಗ ಅವರ ದೇಹ ನೇತಾಡುತ್ತಿರುವುದು ಕಾಣಿಸಿದೆ. ಕೂಡಲೇ ಶೂಟಿಂಗ್ ಸಿಬ್ಬಂದಿ ಅವಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲಾಗಲೇ ಅವರು ಸಾವನ್ನಪ್ಪಿದ್ದಾರೆ ಎಂದು  ವೈದ್ಯರು ಘೋಷಿಸಿದ್ದರು. ತುನಿಷಾ ಸಾವಿನ ಬಳಿಕ ಆಕೆಯ ಬಾಯ್‌ಫ್ರೆಂಡ್ ಶೀಜಾನ್ ಖಾನ್ ಅವರನ್ನು ಬಂಧಿಸಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ. ಈ ಪ್ರಕರಣ ಈಗ ಲವ್ ಜಿಹಾದ್ ಆಯಮ ಪಡೆದುಕೊಳ್ಳುತ್ತಿದೆ. ಈ ನಡುವೆ ಕಂಗನಾ ಟ್ವೀಟ್ ವೈರಲ್ ಆಗಿದೆ. 

ತುನಿಶಾ ಶರ್ಮಾ ಜತೆ ಬ್ರೇಕಪ್‌ ಆಗಲು ಶ್ರದ್ಧಾ ವಾಕರ್‌ ಹತ್ಯೆ ಕಾರಣ..!

ತುನಿಷಾ ಬಗ್ಗೆ 

ತುನಿಷಾ  ಶರ್ಮಾ ಅವರು ಸೋನಿ ಟಿವಿ ಶೋ 'ಭಾರತ್ ಕಾ ವೀರ್ ಪುತ್ರ - ಮಹಾರಾಣಾ ಪ್ರತಾಪ್'  ನಲ್ಲಿ ಬಾಲ ನಟಿಯಾಗಿ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು, ಅಲ್ಲಿ ಅವರು ಚಂದ್ ಕನ್ವರ್ ಪಾತ್ರವನ್ನು ನಿರ್ವಹಿಸಿದರು. ಇದಾದ ನಂತರ ಅವರು ಹಲವಾರು ಪ್ರದರ್ಶನಗಳು ಮತ್ತು ಹಿಂದಿ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ, ಜನಪ್ರಿಯ ನಟಿ ಕತ್ರಿನಾ ಕೈಫ್ ಅವರ ಬಾಲ್ಯದ ಪಾತ್ರಗಳಲ್ಲಿ ಪ್ರಮುಖವಾಗಿ ನಟಿಸಿದ್ದಾರೆ. ಅಷ್ಟೇ ಅಲ್ಲದೇ ಇಷ್ಕ್ ಸುಭಾನ್ ಅಲ್ಲಾ, ಗಬ್ಬರ್ ಪೂಂಚ್‌ವಾಲಾ, 'ಶೇರ್-ಎ-ಪಂಜಾಬ್: ಮಹಾರಾಜ ರಂಜಿತ್ ಸಿಂಗ್' ಮತ್ತು 'ಚಕ್ರವರ್ತಿನ್ ಅಶೋಕ ಸಾಮ್ರಾಟ್' ಮುಂತಾದ ಶೋಗಳಲ್ಲಿ ಕೆಲಸ ಮಾಡಿದ್ದಾರೆ.

  

click me!