
ಹಿಂದಿ ಕಿರುತೆರೆಯ ಖ್ಯಾತ ನಟಿ ತುನಿಷಾ ಶರ್ಮಾ ಆತ್ಮಹತ್ಯೆ ಬೆನ್ನಲ್ಲೇ ಖ್ಯಾತ ಯೂಟ್ಯೂಬರ್ 22ನೇ ವಯಸ್ಸಿಗೆ ತನ್ನ ಬದುಕು ಅಂತ್ಯಗೊಳಿಸಿದ್ದಾರೆ. ಇನ್ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪ್ರಭಾವಿಯಾಗಿದ್ದ ಲೀನಾ ನಾಗವಂಶಿ ಸೋಮವಾರ ಛತ್ತೀಸ್‌ಗಢದ ರಾಯಗಢ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತುನಿಷಾ ಶರ್ಮಾ ಆತ್ಮಹತ್ಯೆ ಪ್ರಕರಣದ ಬೆನ್ನಲ್ಲೇ ಮತ್ತೊಂದು ಆತ್ಮಹತ್ಮೆ ಶಾಕಿಂಗ್ ಆಗಿದೆ. ತನ್ನ ನಿವಾಸದ ಟೆರೇಸ್‌ನಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಲೀನಾ ನಾಗವಂಶಿ ಶವ ಪತ್ತೆಯಾಗಿದೆ. ಕೇವಲ 22 ವಯಸ್ಸಿನ ಲೀನಾ ದಿನದಿಂದ ದಿನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಫೇಮಸ್ ಆಗುತ್ತಿದ್ದರು.
ಲೀನಾ ಅವರ ತಾಯಿ ಮಾರುಕಟ್ಟೆಗೆ ಹೋಗಿ ಮನೆಗೆ ವಾಪಾಸ್ ಆದಾಗ ತಮ್ಮ ಕೋಣೆಯಲ್ಲಿ ಲೀನಾ ಇರಲಿಲ್ಲ. ಲೀನಾಳನ್ನು ಮನೆಯಲ್ಲಿ ಹುಡುಕಾಡಿದಾಗ ಟೆರೇಸ್ ಮೇಲೆ ಶವ ಪತ್ತೆಯಾಗಿದ್ದಾರೆ. ಲೀನಾ ಶವ ನೋಡಿ ತಾಯಿ ಶಾಕ್ ಆಗಿದ್ದಾರೆ. ಸದ್ಯ ಪೊಲೀಸರು ತನಿಖೆ ಆರಂಭಿಸಿದ್ದು ಸಾವಿನ ಹಿಂದಿನ ರಹಸ್ಯ ಬೇದಿಸುತ್ತಿದ್ದಾರೆ. ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ. ಕೊನೆಯದಾಗಿ ಲೀನಾ ಇನ್ಸ್ಟಾಗ್ರಾಮ್ ನಲ್ಲಿ ಕ್ರಿಸ್ಮಸ್ ವಿಡಿಯೋವನ್ನು ಶೇರ್ ಮಾಡಿದ್ದರು.
ಲೀನಾ ನಾಗವಂಶಿ ಬಗ್ಗೆ
ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದ ಯೂಟ್ಯೂಬರ್ ಲೀನಾ ನಾಗವಂಶಿ ಬಿಕಾಂ 2 ನೇ ವರ್ಷದ ವಿದ್ಯಾರ್ಥಿನಿ. ಲೀನಾ ನಾಗವಂಶಿ ಅವರ ತಂದೆ ಗ್ರಾಹಕರ ವೇದಿಕೆಯಲ್ಲಿ ಹಿರಿಯ ಸಹಕಾರಿ ನಿರೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಲೀನಾ ನಾಗವಂಶಿ ತನ್ನ ತಾಯಿ ಮತ್ತು ಸಹೋದರರೊಂದಿಗೆ ಗ್ರಾಹಕರ ವೇದಿಕೆಯ ಕಾಲೋನಿಯ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದರು.
ತುನಿಶಾ ಶರ್ಮಾ ಜತೆ ಬ್ರೇಕಪ್ ಆಗಲು ಶ್ರದ್ಧಾ ವಾಕರ್ ಹತ್ಯೆ ಕಾರಣ..!
ಲೀನಾ ನಾಗವಂಶಿ Instagram, Facebook ಮತ್ತು YouTube ನಲ್ಲಿ ಸಾಕಷ್ಟು ಸಕ್ರಿಯರಾಗಿದ್ದರು. Instagram ನಲ್ಲಿ 10,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದರು. ಲೀನಾ ನಾಗವಂಶಿ ಚಿಕ್ಕ ಚಿಕ್ಕ ವಿಡಿಯೋ, ರೀಲ್ಸ್‌ಗಳನ್ನು ಮಾಡುತ್ತಿದ್ದರು. ಜೊತೆಗೆ ಕೆಲವು ಮ್ಯೂಸಿಕ್ ವೀಡಿಯೊ ಮತ್ತು ಕಿರುಚಿತ್ರಗಳಲ್ಲಿ ನಟಿಸಿದ್ದಾರೆ. ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಗಳಲ್ಲಿ ಲೀನಾ ಫೋಟೋಗಳಿಂದ ತುಂಬಿ ಹೋಗಿವೆ.
Tunisha Sharma Death Case; ಇದು ಲವ್ ಜಿಹಾದ್ ವಿಷಯ: BJP ನಾಯಕರ ಗಂಭೀರ ಆರೋಪ
ಲೀನಾ ದಿಢೀರ್ ಸಾವು ಅನುಯಾಯಿಗಳಿಗೆ ಆಘಾತ ಮೂಡಸಿದೆ. ಆತ್ಮಹತ್ಯೆಯ ಕಾರಣ ಬಹಿರಂಗವಾಗಿಲ್ಲ. ರಾಯಗಢದ ಚಕ್ರಧರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಯಾವುದೇ ಡೆತ್ ಸಿಗದ ಕಾರಣ ಆತ್ಮಹತ್ಯೆಯ ಕಾರಣ ನಿಗೂಢವಾಗಿದೆ. ಸದ್ಯ ಲೀನಾ ಅವರ ಮೊಬೈಲ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತನಿಖೆ ಬಳಿಕವೇ ಸಾವಿನ ಕಾರಣ ಬಹಿರಂಗವಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.