ಮದುವೆ ಕುರಿತು ಕಂಗನಾ ಹೇಳಿದ್ದೇನು? ಸಲ್ಮಾನ್‌ನನ್ನೂ ಬಿಡದ ಬಾಲಿವುಡ್ ಕ್ವೀನ್!

By Suvarna News  |  First Published May 1, 2023, 1:11 PM IST

ನಟಿ ಕಂಗನಾ ರಣಾವತ್​ ಸಲ್ಮಾನ್​ ಖಾನ್​ ಅವರಿಗೆ ಬೆದರಿಕೆ ಕುರಿತು ಹೇಳಿದ್ದೇನು? ಮದುವೆಯ ಕುರಿತೂ ಮಾತನಾಡಿದ ನಟಿ 
 


ಕಂಗನಾ ರಣಾವತ್ (Kangana Ranaut) ಅವರು  ಮಾ ಕಾಳಿಯ ದರ್ಶನಕ್ಕೆ   ಹರಿದ್ವಾರದ ಪುರಾತನ ಶ್ರೀ ದಕ್ಷಿಣ ಕಾಳಿ ದೇವಸ್ಥಾನಕ್ಕೆ ಹೋಗಿದ್ದರು.  ಈ ವೇಳೆ ಅವರು ನಟ ಸಲ್ಮಾನ್​ ಖಾನ್​ ಅವರಿಗೆ ಬರುತ್ತಿರುವ ಜೀವ ಬೆದರಿಕೆಯ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದರು.  ಸಲ್ಮಾನ್ ಖಾನ್​ (Salman Khan) ಅವರಿಗೆ ಕೊಲೆ ಬೆದರಿಕೆ ಬಂದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ದೇಶವು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸುರಕ್ಷಿತ ಕೈಯಲ್ಲಿದೆ, ಆದ್ದರಿಂದ ಭದ್ರತೆಯ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದು ಅವರು ಹೇಳಿದರು.  'ನಾವು ನಟರು. ಸಲ್ಮಾನ್ ಖಾನ್ ಅವರಿಗೆ ಕೇಂದ್ರ ಭದ್ರತೆ ಒದಗಿಸಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಂದ ಭದ್ರತೆ ಪಡೆಯುತ್ತಿದ್ದು, ಭಯಪಡುವ ಅಗತ್ಯವಿಲ್ಲ.  ನನಗೆ ಬೆದರಿಕೆ ಬಂದಾಗಲೂ, ಕೇಂದ್ರ ನನಗೂ ಭದ್ರತೆಯನ್ನು ನೀಡಿತ್ತು. ಇಂದು ದೇಶವು ಸುರಕ್ಷಿತರ ಕೈಯಲ್ಲಿದೆ' ಎಂದು ನಟಿ ಕಂಗನಾ ಹೇಳಿದ್ದಾರೆ.

ಹರಿದ್ವಾರದಲ್ಲಿ ಗಂಗಾ ಆರತಿಯಲ್ಲಿ ಕಂಗನಾ ಕೂಡ ಭಾಗವಹಿಸಿದ್ದರು. ನಂತರ ಅವರು  ಕೇದಾರನಾಥ ಧಾಮಕ್ಕೆ ಭೇಟಿ ಕೊಟ್ಟರು.  ಇದೇ ಸಂದರ್ಭದಲ್ಲಿ 2024 ರ ಲೋಕಸಭಾ ಚುನಾವಣೆಯ ಬಗ್ಗೆಯೂ ಕಂಗನಾ  ಮಾತನಾಡಿದರು. '2024 ರ ಬಗ್ಗೆ ದೇಶದಾದ್ಯಂತ ಚರ್ಚೆ ನಡೆಯುತ್ತಿದೆ, ಆದರೆ 2019 ರಲ್ಲಿ ಸಂಭವಿಸಿದ್ದೇ 2024 ರಲ್ಲಿಯೂ ಸಂಭವಿಸುತ್ತದೆ. 2019 ರ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) 353 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಮರಳಿತ್ತು. ಮತ್ತೊಮ್ಮೆ ಇತಿಹಾಸ ಸೃಷ್ಟಿಯಾಗಲಿದೆ' ಎಂದರು.  

Tap to resize

Latest Videos

ಸಲ್ಮಾನ್​ಗೆ ಜೀವ ಬೆದರಿಕೆ ಮೇಲ್​ ಬಂದಿದ್ದಾದ್ರೂ ಎಲ್ಲಿಂದ? ಕೊನೆಗೂ ಸಿಕ್ತು ಸುಳಿವು!

ಮಾಧ್ಯಮದವರು ಕಂಗನಾಗೆ ಮದುವೆಯ ಬಗ್ಗೆ ಪ್ರಶ್ನೆ ಕೇಳಿದರು. ಅದಕ್ಕೆ ಕಂಗನಾ,  ಮದುವೆ ಎಂಬುದು ಹೃದಯದ ಸಂಬಂಧ ಎಂದು ಎಲ್ಲರಿಗೂ ತಿಳಿದಿದೆ ಎಂದಷ್ಟೇ ಹೇಳಿ ಮೌನವಾದರು. ಕಂಗನಾ ರಣಾವತ್​ (Kangana Ranaut) ಮತ್ತು ನಟ ಹೃತಿಕ್​ ರೋಷನ್​ ಅವರ ನಡುವಿನ ಲವ್​ ಸ್ಟೋರಿ ಚಿತ್ರಪ್ರಿಯರಿಗೆ ಹೊಸತೇನಲ್ಲ. ಮದುವೆಯಾದ ಮೇಲೂ ಹೃತಿಕ್​ ರೋಷನ್​ ಕಂಗನಾ ಅವರ ಹಿಂದೆ ಬಿದ್ದದ್ದು, ಕಂಗನಾ ಅವರಿಗಾಗಿ ಪತ್ನಿಯನ್ನು ಬಿಡಲು ರೆಡಿಯಾಗಿದ್ದು ಈಗ ಹಳೆಯ ವಿಷಯ. ಅದೇ ರೀತಿ ಕಂಗನಾ ಕೂಡ ಹೃತಿಕ್​ ರೋಷನ್​ (Hruthik Roshan) ಮಾತಿಗೆ ಮರುಳಾಗಿ ಅವರ ಎರಡನೆಯ ಪತ್ನಿಯಾಗಲು ರೆಡಿ ಆಗಿದ್ದು, ಆಮೇಲೆ ಎಲ್ಲವೂ ಅಯೋಮಯವಾಗಿ ಹೃತಿಕ್​ ರೋಷನ್​ ಕಂಗನಾಗೆ ಕೈಕೊಟ್ಟಿರೋ ಸುದ್ದಿ ಹಿಂದೊಮ್ಮೆ ಬಲು ಚರ್ಚಿತ ವಿಷಯವಾಗಿತ್ತು. ನಟ ಹೃತಿಕ್​ ರೋಷನ್​ ಮತ್ತು ನಟಿ ಕಂಗನಾ ರಣಾವತ್​ (Kangana Ranaut) ನಡುವೆ ನಂತರ ಬಹಳ ದಿನಗಳ ಕಾಲ ಕಿತ್ತಾಟ ನಡೆದಿತ್ತು. ಕಿತ್ತಾಟದ ಬಳಿಕವಷ್ಟೇ ಇವರಿಬ್ಬರೂ  ಡೇಟಿಂಗ್​ ಮಾಡುತ್ತಿದ್ದರು ಎಂಬ ವಿಷಯ ಬೆಳಕಿಗೆ ಬಂದಿತ್ತು.  

ಇನ್ನು ಕಂಗನಾ ಅವರ ಚಿತ್ರದ ವಿಷಯಕ್ಕೆ ಬರುವುದಾದರೆ,  ಕಂಗನಾ ಅವರಿಗೆ 2022 ಉತ್ತಮವಾಗಿರಲಿಲ್ಲ.  ಅವರ ಧಕಡ್ (Dhadak) ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಕುಸಿಯಿತು. ಈ ಚಿತ್ರ ತನ್ನ ಖರ್ಚಿನ ಅರ್ಧದಷ್ಟು ಗಳಿಸಲು ಸಾಧ್ಯವಾಗಲಿಲ್ಲ. ಅನೇಕ ನಗರಗಳಲ್ಲಿ ಪರಿಸ್ಥಿತಿ ಎಷ್ಟು ಕೆಟ್ಟದಾಗಿದೆ ಎಂದರೆ ಚಿತ್ರಕ್ಕೂ ಪ್ರೇಕ್ಷಕರು ಸಿಗಲಿಲ್ಲ. ಈಗ ನಟಿ,  ಎಮರ್ಜೆನ್ಸಿ ಬಿಡುಗಡೆಗೆ ತಯಾರಿ ನಡೆಸಿದ್ದಾರೆ. ಈ ಚಿತ್ರದಲ್ಲಿ ಕಂಗನಾ ಮಾಜಿ ಪ್ರಧಾನಿ ಇಂದಿರಾ ಗಾಂಧಿ (Indira Gandhi) ಪಾತ್ರದಲ್ಲಿ ನಟಿಸಿದ್ದಾರೆ. ಕಂಗನಾ ಈ ಚಿತ್ರದ ನಿರ್ದೇಶಕಿ ಮತ್ತು ನಿರ್ಮಾಪಕಿಯೂ ಹೌದು. ಚಿತ್ರದ ಬಿಡುಗಡೆ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲ, ಆದರೆ ಇದು ಈ ವರ್ಷ ಬಿಡುಗಡೆಯಾಗಲಿದೆ.

ಕಂಗನಾ, ಹೃತಿಕ್​ ರೋಷನ್​ ಲವ್​ ಸ್ಟೋರಿಗೆ ಸಾಕ್ಷಿಯಾಯ್ತು ಎಲಾನ್​ ಮಸ್ಕ್​ ಟ್ವೀಟ್​!

click me!