'ಎಮರ್ಜೆನ್ಸಿ' ಬಗ್ಗೆ ಹಬ್ಬಿದ್ದ ವದಂತಿ ಬ್ರೇಕ್ ಹಾಕಿದ ನಟಿ ಕಂಗನಾ ರಣಾವತ್

By Shruthi Krishna  |  First Published Dec 21, 2022, 3:41 PM IST

ಕಂಗನಾ ರಣವಾತ್ ಅವರು ತಮ್ಮ ಎಮರ್ಜೆನ್ಸಿ ಸಿನಿಮಾದ ಕೆಲವು ಭಾಗವನ್ನು ಸಂಸತ್ ಭವನದಲ್ಲಿ ಚಿತ್ರೀಕರಿಸಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಈ ಬಗ್ಗೆ ಕಂಗನಾ ಪ್ರತಿಕ್ರಿಯೆ ನೀಡಿದ್ದಾರೆ. 


ಬಾಲಿವುಡ್ ನಟಿ ಕಂಗನಾ ರಣಾವತ್ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ.  ಕಳೆದ ಕೆಲವು ದಿನಗಳಿಂದ ಸೈಲೆಂಟ್ ಆಗಿದ್ದ ಕಂಗನಾ ಇದೀಗ ಮತ್ತೆ ಎಮರ್ಜನ್ಸಿ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಕಂಗನಾ ಸದ್ಯ ಎಮರ್ಜೆನ್ಸಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಈಗಾಗಲೇ ಕೆಲವರ ಲುಕ್ ರಿವೀಲ್ ಮಾಡಿದ್ದು ಉತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿದೆ. ಈ ನಡುವೆ ಕಂಗನಾ ಎಮರ್ಜೆನ್ಸಿ ಸಿನಿಮಾವನ್ನು ಮತ್ತಷ್ಟು ರಿಯಲಸ್ಟಿಕ್ ಆಗಿ ಚಿತ್ರೀಕರಿಸಲು ಸಂಸತ್ ಭವನ ಕೇಳಿದ್ದರು ಎನ್ನುವ ಸುದ್ದಿ ವೈರಲ್ ಆಗಿತ್ತು. 'ಎಮರ್ಜೆನ್ಸಿ' ಸಿನಿಮಾದ ಕೆಲವು ಪ್ರಮುಖ ಭಾಗಗಳನ್ನು ಸಂಸತ್ ಭವನದೊಳಗೆ ಶೂಟ್ ಮಾಡಲು ಅವಕಾಶ ಕೊಡಿ ಎಂದು ಕಂಗನಾ ಬೇಡಿಕೆ ಇಟ್ಟಿದ್ದರು ಎನ್ನುವ ಮಾತು ಕೇಳಿ ಬಂದಿತ್ತು. ಈ ಬಗ್ಗೆ ಕಂಗನಾ ಪ್ರತಿಕ್ರಿಯೆ ನೀಡಿದ್ದಾರೆ. 

ವೈರಲ್ ಸುದ್ದಿಗೆ ಕಂಗನಾ ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. 'ಮೊದಲ ಬಾರಿಗೆ ಸಂಸತ್ತಿನಲ್ಲಿ ಚಲನಚಿತ್ರವನ್ನು ಚಿತ್ರೀಕರಿಸಲು ಅನುಮತಿ ಕೇಳಲಾಗಿದೆ. 'ಎಮರ್ಜೆನ್ಸಿ' ಸಿನಿಮಾದ ಒಂದು ಸಣ್ಣ ಭಾಗವನ್ನು ಸಂಸತ್ತಿ ಭವನದಲ್ಲಿ ಚಿತ್ರೀಕರಣಗೊಳ್ಳಲಿದೆ' ಎನ್ನುವ ಸುದ್ದಿಯನ್ನು ಶೇರ್ ಮಾಡಿ ಕಂಗನಾ ಪ್ರತಿಕ್ರಿಯೆ ನೀಡಿದ್ದಾರೆ. 'ಇದು ನಿಜವಲ್ಲ, ಇದು ಫೇಕ್ ಸುದ್ದಿ' ಎಂದು ಹೇಳಿದ್ದಾರೆ. 

'ಎಮರ್ಜೆನ್ಸಿ'ಗಾಗಿ ಸಂಸತ್ ಭವನ ಕೇಳಿದ ನಟಿ ಕಂಗನಾ ರಣಾವತ್; ಸಿಗುತ್ತಾ ಅನುಮತಿ?

Tap to resize

Latest Videos

 ತುರ್ತು ಪರಿಸ್ಥಿತಿ ಕುರಿತು ತಾವು ನಿರ್ಮಿಸುತ್ತಿರುವ ಸಿನಿಮಾಕ್ಕೆ ಸಂಸತ್‌ ಭವನದೊಳಗೆ ಚಿತ್ರೀಕರಣಕ್ಕೆ ಅನುಮತಿ ನೀಡಬೇಕೆಂದು ಬಾಲಿವುಡ್‌ ನಟಿ ಕಂಗನಾ ರಾಣಾವತ್‌ ಲೋಕಸಭೆ ಸಚಿವಾಲಯವನ್ನು ಕೋರಿದ್ದಾರೆ. ಸಂಸತ್‌ ಭವನದೊಳಗೆ ಸರ್ಕಾರಿ ಸ್ವಾಮ್ಯದ ದೂರದರ್ಶನ ಹಾಗೂ ಸಂಸದ್‌ ಟೀವಿ ಚಾನಲ್‌ನವರಿಗೆ ಮಾತ್ರ ವಿಡಿಯೋ ಚಿತ್ರೀಕರಣಕ್ಕೆ ಅನುಮತಿಯಿದೆ. ಯಾವುದೇ ಖಾಸಗಿ ವ್ಯಕ್ತಿ ಅಥವಾ ಸಂಸ್ಥೆಗೆ ಚಿತ್ರೀಕರಣಕ್ಕೆ ಅನುಮತಿಯಿಲ್ಲ. ಈವರೆಗೆ ಯಾವುದೇ ಖಾಸಗಿ ಚಿತ್ರೀಕರಣಕ್ಕೆ ಸಂಸತ್ತಿನೊಳಗೆ ಅನುಮತಿ ನೀಡಿದ ಉದಾಹರಣೆಯು ಇಲ್ಲ. ಹೀಗಾಗಿ ಕಂಗನಾ ನಡೆ ಎಲ್ಲರಿಗೂ ಅಚ್ಚರಿ ಮೂಡಿಸಿತ್ತು.  ಇದೀಗ ಈ ಬಗ್ಗೆ ಸ್ವತಃ ಕಂಗನಾ ಅವರೇ ಪ್ರತಿಕ್ರಿಯೆ ನೀಡುವ ಮೂಲಕ ಹರಿದಾಡುತ್ತಿದ್ದ ವದಂತಿಗೆ ಬ್ರೇಕ್ ಹಾಕಿದ್ದಾರೆ. 

Kangana Ranaut: ಮತ್ತೊಂದು ತಮಿಳು ಚಿತ್ರದಲ್ಲಿ ಕಂಗನಾ: ಈ ಬಾರಿ ಚಂದ್ರಮುಖಿಯಾಗಿ ನಟಿ!

‘ಎಮರ್ಜೆನ್ಸಿ’ ಚಿತ್ರವನ್ನು ಕಂಗನಾ ಅವರೇ ಬರೆದು, ನಿರ್ಮಾಣ ಮಾಡಿ, ನಿರ್ದೇಶನ ಮಾಡಿ, ಅವರೇ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕಂಗನಾ ರಣಾವತ್​ ಅವರ ವೃತ್ತಿಜೀವನದಲ್ಲಿ ‘ಎಮರ್ಜೆನ್ಸಿ’ ಸಿನಿಮಾ ಬಹುಮುಖ್ಯ ಆಗಲಿದೆ. ಅದಕ್ಕಾಗಿ ಅವರು ಸಖತ್​ ತಯಾರಿ ಮಾಡಿಕೊಂಡು ಶೂಟಿಂಗ್​ ಆರಂಭಿಸಿದ್ದಾರೆ. ಕಂಗನಾ ವಿಭಿನ್ನ ಪಾತ್ರ ಆಯ್ಕೆ ಮಾಡಿಕೊಂಡಿರುವುದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಇಂದಿರಾ ಪಾತ್ರಕ್ಕೆ ಬಣ್ಣ ಹಚ್ಚಿರುವ ಕಂಗನಾ ಲುಕ್ ಕೂಡ ಎಲ್ಲರ ಹೃದಯ ಗೆದ್ದಿತ್ತು. ಈ ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

click me!