ರಾಷ್ಟ್ರಪತಿ ದ್ರೌಪದಿ ಭೇಟಿ ಮಾಡಿದ ಕಾಂಟ್ರಾವರ್ಸಿಯಲ್‌ ಕ್ವೀನ್ ಕಂಗನಾ

By Anusha KbFirst Published Sep 10, 2022, 11:58 AM IST
Highlights

ಬಾಲಿವುಡ್ ಕ್ವೀನ್, ಇತ್ತೀಚೆಗೆ ಸದಾ ವಿವಾದಗಳಿಂದಲೇ ಸುದ್ದಿಯಾಗುತ್ತಿರುವ ನಟಿ ಕಂಗನಾ ರಾಣಾವತ್, ರಾಷ್ಟ್ರಪತಿ ದ್ರೌಪದಿ ಮರ್ಮು ಅವರನ್ನು ಶುಕ್ರವಾರ ಭೇಟಿ ಮಾಡಿ ಕ್ಷೇಮ ಸಮಾಚಾರ ವಿಚಾರಿಸಿದರು.

ಬಾಲಿವುಡ್ ಕ್ವೀನ್, ಇತ್ತೀಚೆಗೆ ಸದಾ ವಿವಾದಗಳಿಂದಲೇ ಸುದ್ದಿಯಾಗುತ್ತಿರುವ ನಟಿ ಕಂಗನಾ ರಾಣಾವತ್, ರಾಷ್ಟ್ರಪತಿ ದ್ರೌಪದಿ ಮರ್ಮು ಅವರನ್ನು ಶುಕ್ರವಾರ ಭೇಟಿ ಮಾಡಿ ಕ್ಷೇಮ ಸಮಾಚಾರ ವಿಚಾರಿಸಿದರು. ರಾಜಪಥವನ್ನು ಕರ್ತವ್ಯ ಪಥವಾಗಿ ಪರಿಷ್ಕೃತ ಗೊಳಿಸಲಾಗಿದ್ದು, ಇದರ ಉದ್ಘಾಟನ ಕಾರ್ಯಕ್ರಮದಲ್ಲಿ ಭಾಗವಹಿಸಿಸಲು ರಾಷ್ಟ್ರ ರಾಜಧಾನಿಗೆ ಬಂದಿದ್ದ ಬಾಲಿವುಡ್ ನಟಿ ಕಂಗನಾ ರಣಾವತ್‌ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾದರು. ಈ ವೇಳೆ ರಾಷ್ಟ್ರಪತಿ ಮರ್ಮು ಅವರನ್ನು ಹಾಡಿ ಹೊಗಳಿದ ಅವರು, ರಾಷ್ಟ್ರಪತಿ ಸಿಂಹಾಸನದಲ್ಲಿ ಕುಳಿತಿರುವ ಮರ್ಮು ದೇವತೆಗಿಂತ ಯಾವುದೇ ರೀತಿಯಲ್ಲೂ ಕಡಿಮೆ ಕಾಣುತ್ತಿಲ್ಲ ಎಂದು ಹೇಳಿದ್ದಾರೆ. 

ರಾಷ್ಟ್ರಪತಿಯನ್ನು ಭೇಟಿಯಾದ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ (Instagram) ಖುಷಿ ಹಂಚಿಕೊಂಡಿರುವ ಧಕಡ್ ಸ್ಟಾರ್ ( Dhaakad actress), ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಜಿ ಅವರನ್ನು ಭೇಟಿಯಾಗುವುದು ಎಂತಹ ಸಂತೋಷ, ಎಂತಹ ಗೌರವದ ಕ್ಷಣ ಎಂದು ಅವರು  ಬರೆದುಕೊಂಡಿದ್ದಾರೆ.

 

ಬಾಲಿವುಡ್ ನಟಿ ಕಂಗನಾ ತಮ್ಮ ಮುಂದಿನ ಸಿನಿಮಾ ಪ್ರಾಜೆಕ್ಟ್ ಎಮರ್ಜೆನ್ಸಿ(Emergency) ಚಿತ್ರೀಕರಣದಲ್ಲಿ(shooting) ಬ್ಯುಸಿ ಆಗಿದ್ದು, ಇತ್ತೀಚೆಗೆ ಈ ಕರ್ತವ್ಯಪಥದ ಉದ್ಘಾಟನಾ ಕಾರ್ಯಕ್ರಮಕ್ಕಾಗಿ ರಾಷ್ಟ್ರ ರಾಜಧಾನಿ ದೆಹಲಿಗೆ ಆಗಮಿಸಿದ್ದರು. ಈ ವೈಭವೋಪೇತ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮರ್ಮು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು. ಈ ಕಾರ್ಯಕ್ರಮದ ನಂತರ ದ್ರೌಪದಿ ಮರ್ಮು ಅವರನ್ನು ಭೇಟಿ ಮಾಡಿದ ಕಂಗನಾ ತಮ್ಮ ಇನ್ಸ್ಟಾ ಖಾತೆಯಲ್ಲಿ ಅವರೊಂದಿಗೆ ಇರುವ ಫೋಟೋವನ್ನು ಹಂಚಿಕೊಂಡಿದ್ದು, ರಾಷ್ಟ್ರಪತಿ ಬಗ್ಗೆ ಅಭಿಮಾನದ ಮಾತುಗಳನ್ನಾಡಿದ್ದಾರೆ.

ನಾನು ಗಾಂಧಿವಾದಿಯಲ್ಲ, ನೇತವಾದಿ; ನಟಿ ಕಂಗನಾ ರಣಾವತ್

ಈ ಫೋಟೋದಲ್ಲಿ ಕಂಗನಾ ಬಿಳಿ ಚೂಡಿಧಾರ್‌ನಲ್ಲಿ ರಾಷ್ಟ್ರಪತಿ ಮರ್ಮು ಜೊತೆ ಹೂಗುಚ್ಛವನ್ನು ಹಿಡಿದು ನಿಂತು ಸುಂದರವಾಗಿ ಕಂಗೊಳಿಸುತ್ತಿದ್ದಾರೆ. ರಾಷ್ಟ್ರಪತಿಗಳ ಸೌಮ್ಯವಾದ ಧ್ವನಿ, ಶಾಂತಚಿತ್ತದ ವರ್ತನೆ ಮತ್ತು ಸಹಾನುಭೂತಿಯ ನೋಟದ ಬಗ್ಗೆ ನಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಗೌರವಾನ್ವಿತ ರಾಷ್ಟ್ರಪತಿಗಳು ತನ್ನ ಕೆಲಸವನ್ನು ಮೆಚ್ಚಿದ್ದಾಗಿ ಕಂಗನಾ ಬರೆದುಕೊಂಡಿದ್ದಾರೆ.

ಗೌರವಾನ್ವಿತ ರಾಷ್ಟ್ರಪತಿ (president) ಶ್ರೀಮತಿ ದ್ರೌಪದಿ ಮುರ್ಮು ಜಿ (Droupadi Murmu) ಅವರನ್ನು ಭೇಟಿಯಾಗುವುದು ಎಂತಹ ಸಂತೋಷ, ಎಂತಹ ಗೌರವದ ಕ್ಷಣ, ಅವರ ಸೌಮ್ಯವಾದ ಧ್ವನಿ, ಶಾಂತವಾದ ವರ್ತನೆ ಮತ್ತು ಕರುಣಾಮಯವಾದ ನೋಟವು  ತುಂಬಾ ಆಕರ್ಷಕವೆನಿಸಿದೆ. ಆ ಹುದ್ದೆಯಲ್ಲಿರುವ ಅವರು ಯಾವುದೇ ದೇವತೆಗಿಂತ ಕಡಿಮೆ ಎನಿಸುತ್ತಿಲ್ಲ. ಅವರೊಂದು ಶಕ್ತಿ, ಪೋಷಿಸುವ, ಗುಣಪಡಿಸುವ ಮತ್ತು ಮಾರ್ಗದರ್ಶನ ನೀಡುವ ದೇವತೆ. ನನ್ನ ಕೆಲಸಕ್ಕೆ ರಾಷ್ಟ್ರಪತಿಗಳು ಮೆಚ್ಚುಗೆ ವ್ಯಕ್ತಪಡಿಸಿದಂತೆ ನಾನು ಗೌರವಾನ್ವಿತ ರಾಷ್ಟ್ರಪತಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಸಾಮಾನ್ಯ ನಾಗರಿಕ ಹುದ್ದೆಯಿಂದ ರಾಷ್ಟ್ರಪತಿ ಹುದ್ದೆಗೇರಿದ ಅವರು ಎಲ್ಲರಿಗೂ ಮಾದರಿ. ಈ ದೇಶದಲ್ಲಿ ಈ ದೇಶದ ಪ್ರತಿಯೊಬ್ಬ ಹೆಣ್ಣು ಮಗಳು ತನ್ನ ಮೂಲ ಸ್ಥಾನದಿಂದ ಯಾವುದೇ ಎತ್ತರಕ್ಕೆ ಏರಬಹುದು ಎಂಬುದಕ್ಕೆ ಅವರು ಸಾಕ್ಷಿ ಎಂದು ಹೇಳಿದೆ. ಅವರ ವಿನಮ್ರವಾದ ನೋಟ ನನಗೆ ಮತ್ತಷ್ಟು ಖುಷಿ ನೀಡಿತು ಎಂದು ಕಂಗನಾ ಬರೆದುಕೊಂಡಿದ್ದಾರೆ. 

ಬಾರ್ಬರಾ ಮೋರಿಯಿಂದ ಕಂಗನಾವರೆಗೆ ಹೃತಿಕ್, ರಾಕೇಶ್ ವಿವಾದ

ಈ ನಡುವೆ ಕಂಗನಾ ತನ್ನದೇ ಎರಡನೇ ನಿರ್ದೇಶನದ ಎಮರ್ಜೆನ್ಸಿ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದು, ಈ ಸಿನಿಮಾದಲ್ಲಿ ಮಿಲಿಂದ್ ಸೋಮನ್ (Milind Soman), ಅನುಪಮ್ ಖೇರ್ (Anupam Kher), ಮಹಿಮಾ ಚೌಧರಿ, ಶ್ರೇಯಸ್ ತಲ್ಪಡಿ ಇದ್ದಾರೆ. 

click me!