
ರಾಕಿಂಗ್ ಸ್ಟಾರ್ ಯಶ್(Yash) ನಟನೆಯ KGF 2 ಸಿನಿಮಾ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಪ್ರೇಕ್ಷಕರು ಮಾತ್ರವಲ್ಲದೇ ಅನೇಕ ಸಿನಿ ಗಣ್ಯರು ಸಹ ಸಿನಿಮಾ ನೋಡಿ ಹಾಡಿಹೊಗಳಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಸಹ ಕೆಜಿಎಫ್-2 ಸಿನಿಮಾವನ್ನು ಕನ್ನಡದಲ್ಲೇ ನೋಡಿ ಮೆಚ್ಚಿಕೊಂಡಿದ್ದಾರೆ. ಚಿತ್ರತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಎಲ್ಲಾ ಕಡೆಯಿಂದ ಸಿನಿಮಾಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಜಿಎಫ್ 2 ಮೂಲಕ ಕನ್ನಡ ಸಿನಿಮಾರಂಗವನ್ನು ವಿಶ್ವ ಮಟ್ಟದಲ್ಲಿ ಕೊಂಡೊಯ್ದ ಯಶ್, ಪ್ರಶಾಂತ್ ನೀಲ್ ಮತ್ತು ವಿಜಯ್ ಕಿರಗಂದೂರ್ ಅವರಿಗೆ ಅಭಿನಂದನೆಗಳ ಮಹಾಪೂರವೇ ಬರುತ್ತಿದೆ.
ಇದೀಗ ಬಾಲಿವುಡ್ ನಟಿ ಕಂಗನಾ ರಣಾವತ್(Kangana Ranaut) ಕೆಜಿಎಫ್ -2 ಸಿನಿಮಾ ಮತ್ತು ಯಶ್ ಅವರನ್ನು ಹಾಡಿಹೊಗಳಿದ್ದಾರೆ. ಅಲ್ಲದೇ ಯಶ್ ಅವರನ್ನು ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್(Amitabh Bachchan) ಅವರಿಗೆ ಹೋಲಿಸಿದ್ದಾರೆ. 70ರ ದಶಕದಲ್ಲಿ ಅಮಿತಾಭ್ ಬಿಟ್ಟುಹೋದ ಜಾಗವನ್ನು ಯಶ್ ತುಂಬುತ್ತಿದ್ದಾರೆ ಎಂದು ಹೇಳಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಸ್ಟೇಟಸ್ ಕೆಜಿಎಫ್2 ಯಶ್ ಫೋಟೋ ಶೇರ್ ಮಾಡಿ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. 'ಯಶ್ ಅವರು ಆಂಗ್ರಿ ಯಂಗ್ ಮ್ಯಾನ್. ಅಮಿತಾಭ್ ಅವರ 70ರ ದಶಕದಲ್ಲಿ ಬಿಟ್ಟ ಜಾಗವನ್ನು ಯಶ್ ತುಂಬುತ್ತಿದ್ದಾರೆ' ಎಂದು ಹೇಳಿದ್ದಾರೆ.
1970-80 ದಶಕದಲ್ಲಿ ಅಮಿತಾಭ್ ಬಚ್ಚನ್ ಡಾನ್, ದೀವಾರ್, ಶಕ್ತಿ, ಅಗ್ನಿಪಥ್ ಸಿನಿಮಾಗಳ ಮೂಲಕ ಆಂಗ್ರಿ ಆಂಗ್ ಮ್ಯಾನ್ ಎನ್ನುವ ಟೈಟಲ್ ಪಡೆದಿದ್ದರು. ಕಂಗನಾ ಯಶ್ ಅವರ ಕೆಜಿಎಫ್-2 ಸಿನಿಮಾ ಜೊತೆಗೆ ರಾಮ್ ಚರಣ್,ಜೂ.ಎನ್ ಟಿ ಆರ್ ಮತ್ತು ಅಲ್ಲು ಅರ್ಜುನ್ ಫೋಟೋಗಳನ್ನು ಶೇರ್ ಮಾಡಿದ್ದಾರೆ. ದಕ್ಷಿಣದ ಸೂಪರ್ ಸ್ಟಾರ್ ಗಳು ತಮ್ಮ ಸಂಸ್ಕೃತಿಯನ್ನು ಆಳವಾಗಿ ಅವಳವಡಿಸಿ ಕೊಂಡಿದ್ದಾರೆ ಎಂದು ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಂಗನಾ ದಕ್ಷಿಣ ಭಾರತದ ಸಿನಿಮಾಗಳ ಬಗ್ಗೆ ಒಲವು ತೋರಿಸುತ್ತಿದ್ದಾರೆ. ದಕ್ಷಿಣದ ಸಿನಿಮಾರಂಗವನ್ನು ಹೊಗಳುತ್ತಿದ್ದಾರೆ. ಇದೀಗ ಕನ್ನಡದ ಕೆಜಿಎಫ್2 ಸಿನಿಮಾಗೂ ಫಿದಾ ಆಗಿದ್ದಾರೆ.
ಕ್ಯಾನ್ಸರ್ ಎಂದು ಗೊತ್ತಾದ ಬಳಿಕ 2-3 ಗಂಟೆ ಅತ್ತಿದ್ದ KGF 2 ಅಧೀರ; ಭಾವುಕ ಕ್ಷಣ ಬಿಚ್ಚಿಟ್ಟ ದತ್
ಇತ್ತೀಚಿಗಷ್ಟೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಯಶ್ ಅಮಿತಾಬ್ ಅವರ ಚಿತ್ರಗಳನ್ನು ರಿಮೇಕ್ ಮಾಡುವ ಬಗ್ಗೆ ಪ್ರಶ್ನೆ ಎದುರಾಗಿತ್ತು. ರಿಮೇಕ್ ಮಾಡುವುದಾದರೆ ಅಮಿತಾಭ ಬಚ್ಚನ್ ಸಿನಿಮಾಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ಎನ್ನುವ ಪ್ರಶ್ನೆಗೆ ಉತ್ತರ ನೀಡಿದ್ದ ಯಶ್, ನಾನು ವೈಯಕ್ತಿವಾಗಿ ರಿಮೇಕ್ ಸಿನಿಮಾ ಮಾಡಲು ಇಷ್ಟಪಡುವುದಿಲ್ಲ. ಅದರಲ್ಲೂ ಬಚ್ಚನ್ ಸಿನಿಮಾಗಳನ್ನು ಮುಟ್ಟುವುದಿಲ್ಲ. ಅವೆಲ್ಲ ಕ್ಲಾಸಿಕ್ ಚಿತ್ರಗಳು ಎಂದು ಹೇಳಿದ್ದರು.
ಕೆಜಿಎಫ್-2 ಬಗ್ಗೆ
ಕೆಜಿಎಫ್-2 ಭರ್ಜರಿ ಕಲೆಕ್ಷನ್ ಮಾಡುತ್ತಾ ಮುನ್ನುಗ್ಗಿತ್ತಿದೆ. ಸಿನಿಮಾ ಬಿಡುಗಡೆಯಾಗಿ 2ದಿನಕ್ಕೆ ವಿಶ್ವದಾದ್ಯಂತ 300 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಇನ್ನೂ ಹಿಂದಿಯಲ್ಲಿ ಎಲ್ಲಾ ಸಿನಿಮಾಗಳ ಕಲೆಕ್ಷನ್ ದೂಳಿಪಟ ಮಾಡಿರುವ ಕೆಜಿಎಫ್-2 ನಂಬರ್ ಒನ್ ಸ್ಥಾನದಲ್ಲಿದೆ. ಕೆಜಿಎಫ್2 3ದಿನಗಳಲ್ಲಿ ಹಿಂದಿಯಲ್ಲಿ 143.64 ಕೋಟಿ ರೂ. ಬಾಚಿಕೊಂಡಿದೆ. ಇನ್ನೂ ಮೂರನೇ ದಿನದ ಒಟ್ಟು ಕಲೆಕ್ಷನ್ ವರದಿ ಬಹಿರಂಗವಾಗಬೇಕಿದೆ.
KGF 2; 3ನೇ ದಿನವೂ ಹಿಂದಿಯಲ್ಲಿ ದಾಖಲೆ ಬರೆದ ರಾಕಿ ಭಾಯ್
ಪ್ರಶಾಂತ್ ನೀಲ್ ನಿರ್ದೇಶನ, ಯಶ್ ಮತ್ತು ಸಂಜಯ್ ದತ್ ನಟನೆ, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಅರ್ಚನಾ ಜೋಯಿಶ್ ಹೀಗೆ ಪ್ರತಿಯೊಂದು ಪಾತ್ರಗಳು ಅಭಿಮಾನಿಗಳ ಹೃದಯ ಗೆದ್ದಿದೆ. ಆಕ್ಷನ್ ದೃಶ್ಯ, ಸಂಗೀತ ಮಾಸ್ ಎಲಿಮೆಂಟ್, ತಾಯಿ ಸೆಂಟಿಮೆಂಟ್ ಪ್ರತಿಯೊಂದು ವಿಭಾಗದಲ್ಲೂ ಕೆಜಿಎಫ್-2 ಅಭಿಮಾನಿಗಳ ಹೃದಯ ಗೆದ್ದಿದೆ. 3ನೇ ದಿನವು ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡಿ ಸಂಭ್ರಮಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.