
ಸ್ಯಾಂಡಲ್ ವುಡ್ ನ ಲವ್ಲಿ ಸ್ಟಾರ್ ನೆನಪಿರಲಿ ಪ್ರೇಮ್(Nenapirali Prem) ಪ್ರೇಮಂ ಪೂಜ್ಯಂ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ 100 ದಿನ ಪೂರೈಸುವ ಮೂಲಕ ಇಡೀ ಸಿನಿಮಾತಂಡ ಸಂಭ್ರಮಿಸಿತ್ತು. ಈ ಸಿನಿಮಾದ ಯಶಸ್ಸಿನ ಸಂತಸದಲ್ಲಿರುವ ಪ್ರೇಮ್ ಇನ್ನು ಯಾವುದೇ ಹೊಸ ಸಿನಿಮಾ ಅನೌನ್ಸ್ ಮಾಡಿಲ್ಲ. ಆದರೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಅಂದಹಾಗೆ ಹೊಸ ಸಿನಿಮಾ ಘೋಷಣೆ ಮಾಡಿದ್ರಾ ಅಂತ ಅಂದ್ಕೋಬೇಡಿ. ಪ್ರೇಮ್ ಜನ್ಮದಿನ ಸಮೀಸುತ್ತಿದೆ. ಈ ವಿಚಾರವಾಗಿ ನೆನಪಿರಲಿ ಪ್ರೇಮ್ ಅಭಿಮಾನಿಗಳಿ ಪತ್ರದ ಮೂಲಕ ವಿಶೇಷ ಮನವಿ ಮಾಡಿದ್ದಾರೆ.
ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ಪ್ರೇಮ್ ಹೇಳಿದ್ದಾರೆ. ಅಂದಹಾಗೆ ಪ್ರೇಮ್ ಜನ್ಮದಿನ ಏಪ್ರಿಲ್ 18 (Prem Birthday), ಅಂದರೆ ನಾಳೆ ಸೋಮವಾರ. ಪ್ರತಿವರ್ಷ ಪ್ರೇಮ್ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದರು. ಆದರೆ ಕೊರೊನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಅದ್ದೂರಿ ಹುಟ್ಟುಹಬ್ಬಕ್ಕೆ ಬ್ರೇಕ್ ಹಾಕಿದ್ದರು. ಆದರೆ ಈ ವರ್ಷ ಸಹ ಜನ್ಮದಿನ ಸಂಭ್ರಮಿಸುವುದಿಲ್ಲ ಎಂದು ಬಹಿರಂಗ ಪಡಿಸಿದ್ದಾರೆ. ಅಷ್ಟಕ್ಕೂ ಈ ವರ್ಷ ಹುಟ್ಟುಹಬ್ಬ ಆಚರಣೆಗೆ ಬ್ರೇಕ್ ಹಾಕಿದ್ದು ಅಪ್ಪು ಅಗಲಿಯ ನೋವು. ಪವರ್ ಸ್ಟಾರ್ ಕಳೆದು ಕೊಂಡ ನೋವು ಎಲ್ಲರನ್ನು ಕಾಡುತ್ತಿದೆ. ಸ್ನೇಹಜೀವಿ ಪುನೀತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡ ನೋವಿನಿಂದ ಇನ್ನು ಯಾರು ಹೊರಬಂದಿಲ್ಲ. ಹಾಗಾಗಿ ಇಂಥ ಸಮಯದಲ್ಲಿ ಹುಟ್ಟುಹಬ್ಬ ಆಚರಣೆ ಬೇಡ ಎಂದು ಪ್ರೇಮ್ ನಿರ್ಧರಿಸಿದ್ದಾರೆ.
20 ವರ್ಷ ಸಿನಿ ಜರ್ನಿಯಲ್ಲಿ 25 ಸಿನಿಮಾ ಮಾಡಿದ ನಟ Prem Nenapirali!
ಈ ಬಗ್ಗೆ ಪ್ರೇಮ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಅಭಿಮಾನಿಗಳಿಗೆ ಪತ್ರ ಬರೆದಿರುವ ಪ್ರೇಮ್ ತಾನು ಮನೆಯಲ್ಲಿ ಇರವುದಿಲ್ಲ ಎಂದಿರುವ ಪ್ರೇಮ್ ಫೋನ್ ಮೂಲಕ ವಿಶ್ ಮಾಡಿ ಎಂದಿದ್ದಾರೆ. ಪತ್ರದಲ್ಲಿ ಪ್ರೇಮ್, 'ಪ್ರತಿ ವರ್ಷ ನನ್ನ ಹುಟ್ಟುಹಬ್ಬವನ್ನು ನಿಮ್ಮದೇ ಎಂಬಂತೆ ಸಂಭ್ರಮಿಸುತ್ತಿದ್ದೀರಿ. ನಮ್ಮೆಲ್ಲರ ಪ್ರೀತಿಯ ಅಪ್ಪು ಸರ ಹಾಗೂ ನನ್ನ ಗೆಳೆಯ ಸುನೀಲ್ ದೂರವಾಗಿದ್ದಾರೆ. ಆದ ಕಾರಣ ಈ ವರ್ಷ ಹುಟ್ಟುಹಬ್ಬ ಆಚರಣೆ ಮಾಡಲ್ಲ. ಎಲ್ಲರಿಗೂ ಒಳ್ಳೆಯ ದಾಗಲಿ ಎಂದು ಪ್ರಾರ್ಥಿಸಲು ಕುಟುಂಬ ಸಮೇತ ದೇವಸ್ಥಾನಕ್ಕೆ ಹೋಗುತ್ತಿರುವ ಕಾರಣ ಮನೆಯಲ್ಲಿ ಇರುವುದಿಲ್ಲ. ಆದರೆ ನಿಮ್ಮ ಫೋನ್ ಕರೆಗಳಿಗೆ ಕಾಯುತ್ತಿರುತ್ತೇನೆ. ನಿಮ್ಮೆಲ್ಲರ ಅಭಿಮಾನವೇ ನನಗೆ ಶ್ರೀ ರಕ್ಷೆ' ಎಂದು ಹೇಳಿದ್ದಾರೆ.
Premam Poojyam ನೂರು ದಿನಗಳ ಸಂಭ್ರಮದಲ್ಲಿ ಮಿಂದೆದ್ದ ನೆನಪಿರಲಿ ಪ್ರೇಮ್!
ನೆನಪಿರಲಿ ಸಿನಿಮಾ ಮೂಲಕ ದೊಡ್ಡ ಮಟ್ಟದ ಖ್ಯಾತಿಗಳಿಸಿದ ಪ್ರೇಮ್ ಅನೇಕ ಸಿನಿಮಾಗಳನ್ನು ಮಾಡಿದ್ದಾರೆ. ಚಿತ್ರರಂಗದಲ್ಲಿ 20 ವರ್ಷಗಳನ್ನು ಪೂರೈಸಿರುವ ಪ್ರೇಮ್ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಇದೀಗ ಮತ್ತೊಂದು ಸೂಪರ್ ಹಿಟ್ ಗಾಗಿ ಕಾಯುತ್ತಿರುವ ಪ್ರೇಮ್ ಯಾವ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರ್ತಾರೆ ಎಂದು ಕಾದುನೋಡಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.