ಹೆಂಡತಿ ವಾಣಿ ಕೈಗೆ ಸಿಕ್ಕಬಿದ್ದ ಕಮಲ್ ಹಾಸನ್; ಹೊಟೆಲ್ ರೂಂನಲ್ಲಿ ಜೊತೆಗಿದ್ದ ನಟಿ ಯಾರು?

Published : Jan 02, 2025, 07:05 PM IST
ಹೆಂಡತಿ ವಾಣಿ ಕೈಗೆ ಸಿಕ್ಕಬಿದ್ದ ಕಮಲ್ ಹಾಸನ್; ಹೊಟೆಲ್ ರೂಂನಲ್ಲಿ ಜೊತೆಗಿದ್ದ ನಟಿ ಯಾರು?

ಸಾರಾಂಶ

ಕಮಲ್ ಹಾಸನ್, 'ಸಕಲ ಕಲಾವಲ್ಲಭ', ಎರಡು ಮದುವೆಗಳ ಹೊರತಾಗಿಯೂ ಹಲವು ಸಂಬಂಧಗಳನ್ನು ಹೊಂದಿದ್ದರು ಎನ್ನಲಾಗಿದೆ. ಬಾಲಿವುಡ್ ನಟಿ ರೇಖಾ ಜೊತೆ ಹೋಟೆಲ್ ರೂಮಿನಲ್ಲಿದ್ದಾಗ ಪತ್ನಿ ವಾಣಿ ಗಣಪತಿಗೆ ಸಿಕ್ಕಿಬಿದ್ದ ಘಟನೆಯೂ ವರದಿಯಾಗಿದೆ. ಈ ಘಟನೆಯ ನಂತರ ವಾಣಿ ಗಣಪತಿ ಕಮಲ್ ಹಾಸನ್‌ರಿಂದ ದೂರವಾದರು. ಕಮಲ್ ಹಾಸನ್ ಅವರ ರಸಿಕತನ ಮತ್ತು ಮದುವೆ ಬಗೆಗಿನ ಉದಾಸೀನತೆ ಚರ್ಚೆಯಲ್ಲಿದೆ.

ನಟ ಕಮಲ್ ಹಾಸನ್ (Kamal Haasan) ಅವರು ಸಿನಿಮಾರಂಗದಲ್ಲಿ ತುಂಬಾ ಎತ್ತರಕ್ಕೆ ಬೆಳೆದ ನಟ. 'ಸಕಲ ಕಲಾವಲ್ಲಭ' ಎಂಬ ಬಿರುದನ್ನು ಕೂಡ ಪಡೆದಿರುವ ನಟ ಕಮಲ್ ಹಾಸನ್ ಅವರು ನಿಜ ಜೀವನದಲ್ಲಿ ಕೂಡ ತುಂಬಾ ರಸಿಕರು. ಅಧಿಕೃತವಾಗಿಯೇ ಎರಡು (ಸಾರಿಕಾ, ವಾಣಿ ಗಣಪತಿ) ಮದುವೆ ಆಗಿರುವ ನಟ ಕಮಲ್ ಹಾಸನ್ ಅವರು ಸಾಕಷ್ಟು ಸಂಬಂಧ ಇಟ್ಟುಕೊಂಡಿದ್ದರು ಎಂಬ ಮಾತು ಚಾಲ್ತಿಯಲ್ಲಿದೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಮತ್ತೊಂದು ಸುದ್ದಿ ಹರಿದಾಡುತ್ತಿದ್ದು, ಬಾಲಿವುಡ್ ಖ್ಯಾತ ನಟಿಯೊಂದಿಗೆ ನಟ ಕಮಲ್ ಹಾಸನ್ ಸಿಕ್ಕಿಬಿದ್ದಿದ್ದರು ಎನ್ನಲಾಗಿದೆ. 

ಹೌದು, ನಟ ಕಮಲ್ ಹಾಸನ್ ಅವರು ಭಾರೀ ರಸಿಕರು ಎಂಬ ಮಾತಿನಲ್ಲಿ ಯಾವುದೇ ಸಂಶಯವಿಲ್ಲ. ಅದೇ ರೀತಿ ಅವರಿಗೆ ಮದುವೆ ಬಗ್ಗೆ ಪದ್ಧತಿ ಬಗ್ಗೆ ಅಷ್ಟೊಂದು ನಂಬಿಕೆ ಹಾಗು ಒಲವು ಇಲ್ಲ ಎನ್ನಲಾಗಿದೆ. ನಮ್ಮ ಸನಾತನ ಧರ್ಮದಲ್ಲಿ 'ಜೀವನದಲ್ಲಿ ಒಮ್ಮೆ ಮದುವೆಯಾಗುವುದು' ಎಂಬ ಮಾತು ಚಾಲ್ತಿಯಲ್ಲಿದೆ. ಆದರೆ ಕಮಲ್ ಹಾಸನ್ ಅವರು ಆ ಮಾತನ್ನು ಸುಳ್ಳು ಮಾಡಿದ್ದಾರೆ ಎಂದೇ ಹೇಳಬೇಕು. ವಾಣಿ ಗಣಪತಿ ಅವರೊಂದಿಗೆ 10 ವರ್ಷ ಹಾಗೂ ಸಾರಿಕಾ ಅವರೊಂದಿಗೆ 16 ವರ್ಷ ಸಂಸಾರ ಮಾಡಿದ್ದಾರೆ ನಟ ಕಮಲ್ ಹಾಸನ್. 

ಅಷ್ಟೇ ಅಲ್ಲ, ಸಂಸಾರ ಸಾಗರದಲ್ಲಿ ಈಜುತ್ತಿರುವ ಸಮಯದಲ್ಲಿ ಕೂಡ ಸಿಕ್ಕಸಿಕ್ಕ ನಟಿಯರೊಂದಿಗೆ ಮಜಾ ಮಾಡುವ ಚಾಳಿ ಈ ನಟನಿಗಿತ್ತು ಎನ್ನಲಾಗಿದೆ. ಸಹನಟಿ ಮಾತ್ರವಲ್ಲ, ತಮಗೆ ಇಷ್ಟವಾದ ನಟಿಯರೊಂದಿಗೆ ಕಮಲ್ ಹಾಸನ್ ಮಂಚ ಹಂಚಿಕೊಳ್ಳುತ್ತಿದ್ದರು ಎಂಬ ಸಂಗತಿ ಸೀಕ್ರೆಟ್‌ ಏನೂ ಅಲ್ಲ. ಅದೇ ರೀತಿ ಖ್ಯಾತ ಬಾಲಿವುಡ್ ನಟಿಯೊಂದಿಗೆ ಹೊಟೆಲ್ ರೂಮಿನಲ್ಲಿ ಇದ್ದಾಗ ಸ್ವಂತ ಹೆಂಡತಿ ಕೈಗೆ ಸಿಕ್ಕಿಬಿದ್ದಿದ್ದರು ನಟ ಕಮಲ್ ಹಾಸನ್ ಎನ್ನಲಾಗಿದೆ. ಹಾಗಿದ್ದರೆ ಅ ನಟಿ ಯಾರು? ಸಿಕ್ಕಿಬಿದ್ದಿದ್ದು ಯಾರ ಕೈಗೆ?

ಹೌದು, ಒಮ್ಮೆ ದಕ್ಷಿಣ ಭಾರತ ಮೂಲದ ಬಾಲಿವುಡ್‌ ಖ್ಯಾತ ನಟಿ ರೇಖಾ ಅವರೊಂದಿಗೆ ನಟ ಕಮಲ್ ಹಾಸನ್ ಅವರು ಹೊಟೆಲ್‌ ರೂಮಿನಲ್ಲಿ ಮಲಗಿದ್ದರು. ರೇಖಾ ಜೊತೆ ರಾತ್ರಿ ಕಳೆದು ಬೆಳಿಗ್ಗೆ ಫುಲ್ ಖುಷಿಯ ಮೂಡಿನಲ್ಲಿ ಹೊರಗೆ ಬರುವ ಮೂಡ್‌ನಲ್ಲಿದ್ದ ನಟ ಕಮಲ್ ಹಾಸನ್ ಅವರಿಗೆ ದೊಡ್ಡ ಶಾಕ್ ಆಗಿತ್ತು. ಕಾರಣ, ಆ ಸಂಗತಿ ಹೇಗೋ ತಿಳಿದುಕೊಂಡ ಪತ್ನಿ ವಾಣಿ ಗಣಪತಿ (Vani Ganapathy) ಅವರು ಆ ಹೊಟೆಲ್‌ಗೆ ಬಂದು ತಮ್ಮ ಪತಿಯನ್ನು ರೆಡ್‌ಹ್ಯಾಂಡ್‌ ಆಗಿ ಹಿಡಿದಿದ್ದರು. ಆಮೇಲೆ ಏನಾಯ್ತು ಎಂಬುದು ನಿಮಗೆಲ್ಲಾ ಗೊತ್ತು. 

ಒಂದೋ ಎರಡೋ ಸಾರಿ ಅಲ್ಲ, ಸಾಕಷ್ಟು ಸಮಯ ಇದೇ ಚಾಳಿ ಮುಂದುವರಿಸಿದ್ದ ನಟ ಕಮಲ್ ಹಾಸನ್ ಅವರಿಗೆ ಡಿವೋರ್ಸ್ ಕೊಟ್ಟು ವಾಣಿ ಗಣಪತಿ ಅವರು ಬೇರೆ ಮನೆ ಮಾಡಿಕೊಂಡು ಉಳಿದರು. ನಟಿ ರೇಖಾ ಈಗಲೂ ಸಿಂಗಲ್. ಅವರ ಬಗ್ಗೆ ಏನೂ ಹೇಳೋ ಹಾಗಿಲ್ಲ. ಸಿಂಗಲ್ ಆಗಿರುವವರು ಯಾರ ಜೊತೆ ಬೇಕಾದರೂ ಮಿಂಗಲ್ ಆಗಬಹುದು. ಆದರೆ ಇಲ್ಲೂ ಒಂದು ರೂಲ್ಸ್ ಮಾಡಿಕೊಳ್ಳುವುದು ಒಳ್ಳೆಯದು. ಅದೇನೆಂದರೆ ಸಿಂಗಲ್ ಆಗಿರೋರು ಸಿಂಗಲ್ ಆಗಿರೋರ ಜೊತೆ ಮಾತ್ರ ಮಿಂಗಲ್ ಆಗಬೇಕೇ ಹೊರತೂ ಫ್ಯಾಮಿಲಿ ಇರೋರ ಜೊತೆಗಲ್ಲ. 

ಆದರೆ, ಇಂಥ ನಿಯಮಗಳನ್ನು ನಟ ಕಮಲ್ ಹಾಸನ್ ಅಂಥವರು ಪಾಲಿಸುತ್ತಾರೆಯೇ? ಅದೇ ದೊಡ್ಡ ಸಮಸ್ಯೆ. ಇರಲಿ, ಇಂಥವುಗಳನ್ನು ನೋಡುತ್ತ, ಕೇಳುತ್ತ ಜನರು ತಮ್ಮ ತಮ್ಮ ಸಂಸಾರ ಸಾಗಿಸಿಕೊಳ್ಳುತ್ತ, ಮುರಿದುಕೊಳ್ಳುತ್ತ ಕೊನೆಗೊಂದು ದಿನ ಸತ್ತು ಹೋಗುತ್ತಾರೆ. ಹೀಗಾಗಿ ಇಂಥ ಸುದ್ದಿಗಳನ್ನು ಹಾಗೆ ನೋಡಿ ಹೀಗೆ ಬಿಡುವವರೇ ಹೆಚ್ಚು. ಆದ್ದರಿಂದ 'ಕಾಲಾಯ ತಸ್ಮೈ ನಮಃ' ಎನ್ನುವುದೇ ಸೂಕ್ತವೇನೋ..!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?