
ರಾಮ್ ಗೋಪಾಲ್ ವರ್ಮಾ ಒಂದು ಕಾಲದಲ್ಲಿ ಸೆನ್ಸೇಷನಲ್ ಡೈರೆಕ್ಟರ್ ಎಂದು ಹೆಸರಾಗಿದ್ದರು. ಶಿವ, ಸರ್ಕಾರ್, ಕ್ಷಣಸಾಕ್ಷಂ, ಮುಂತಾದ ಸಿನಿಮಾಗಳಿಂದ ಅವರು ಸೃಷ್ಟಿಸಿದ ಸಂಚಲನ ಅಷ್ಟಿಷ್ಟಲ್ಲ. ತೆಲುಗು ಮತ್ತು ಬಾಲಿವುಡ್ ಎರಡರಲ್ಲೂ ಟ್ರೆಂಡ್ ಸೆಟ್ಟರ್ ಆದರು. ಎಸ್.ಎಸ್.ರಾಜಮೌಳಿಯಂತಹ ನಿರ್ದೇಶಕರೂ ವರ್ಮಾ ಅವರ ಸಾಮರ್ಥ್ಯದ ಬಗ್ಗೆ ಹಾಡಿ ಕೊಂಡಾಡುತ್ತಿದ್ದರು. ಆದರೆ ಸದ್ಯ ರಾಮ್ ಗೋಪಾಲ ವರ್ಮಾ ಸದ್ಯ ವಿವಾದಗಳಿಂದಲೇ ಸುತ್ತುವರೆಯುತ್ತಿದ್ದಾರೆ. ಅವರ ಕ್ರೇಜ್ ಕಡಿಮೆಯಾಗುತ್ತಿದೆ. ಅವರ ಪೋಸ್ಟ್‌ಗಳು ಮತ್ತು ಅವರು ಮಾಡುತ್ತಿರುವ ಚಿತ್ರಗಳು ವಿವಾದಗಳಾಗುತ್ತಿವೆ. ಹೌದು. ಹಿಂದಿನ ವರ್ಮಾ ಈಗಿಲ್ಲ. ಈಗ ರಾಮ್ ಗೋಪಾಲ್ ವರ್ಮಾದಿಂದ ಬರುತ್ತಿರುವ ಚಿತ್ರಕ್ಕೆ ತಲೆಕೆಡಿಸಿಕೊಳ್ಳುವವರು ಕಡಿಮೆ. ವಿವಾದಾತ್ಮಕ ವಿಷಯಗಳನ್ನು ಇಟ್ಟುಕೊಂಡು ಸಿನಿಮಾ ಮಾಡುವುದಕ್ಕೂ ಇದೇ ಕಾರಣ. ನಿರ್ದೇಶಕರಾಗಿ ಅವರ ಸಿನಿಮಾಗಳ ಗುಣಮಟ್ಟ ಕಡಿಮೆಯಾಗುತ್ತಿದೆ. ರಾಮ್ ಗೋಪಾಲ್ ವರ್ಮಾ ಸಿನಿಮಾ ಈಗ ಗಲಾಟೆಯೇ ಹೊರತು ಬೇರೇನೂ ಅಲ್ಲ ಎಂಬ ಮಟ್ಟಿಗೆ ಅವರ ಚಿತ್ರಗಳು ವಿವಾದಕ್ಕೆ ಕಾರಣವಾಗುತ್ತಿವೆ.
ಇಂತಿಪ್ಪ ರಾಮ್ಗೋಪಾಲ್ ವರ್ಮಾ ಅವರು, ಇದೀಗ ಹೊಸ ವರ್ಷದ ರೆಸಲ್ಯೂಷನ್ ಕೇಳಿ ಸಿನಿ ಇಂಡಸ್ಟ್ರಿಯೇ ಶಾಕ್ ಆಗಿದೆ. ಇದಕ್ಕೆ ಮುಖ್ಯ ಕಾರಣ, ಮೊದಲನೆಯದ್ದು ರಾಮ್ಗೋಪಾಲ್ ವರ್ಮಾ ಎಂದ್ರೆ ವಿವಾದ ಎಂದು, ಇನ್ನೊಂದು ಇವರ ಹೆಸರಿನ ಆಸು ಪಾಸು ಸದಾ ಯಾವುದಾದರೂ ನಟಿಯರ ಇಲ್ಲವೇ ಹೆಣ್ಣುಮಕ್ಕಳ ಹೆಸರು ಥಳಕು ಹಾಕಿಕೊಂಡೇ ಇರುತ್ತದೆ. ಹೆಣ್ಣುಮಕ್ಕಳ ವಿಷಯದಲ್ಲಿ ಅಷ್ಟು ಫೇಮಸ್ ರಾಮಗೋಪಾಲ ವರ್ಮಾ ಅವರು. ಆದರೆ ಇದೀಗ ವಿಷಯಕ್ಕೆ ಸಂಬಂಧಿಸಿದಂತೆ ಅವರು ಹೊಸ ವರ್ಷದ ರೆಸಲ್ಯೂಷನ್ ಕೈಗೊಂಡಿದ್ದಾರೆ.
ದೇವಲೋಕದ ಅಪ್ಸರೆ ನನ್ನನ್ನು ಬಿಟ್ಟು ಮುದುಕನನ್ನು ಮದ್ವೆಯಾದ್ಲು! ರಾಮ್ ಗೋಪಾಲ್ ವರ್ಮಾ ಮಾತು ಮತ್ತೆ ಮುನ್ನೆಲೆಗೆ
ಅವರು ಒಟ್ಟು ಏಳು ನಿರ್ಣಯಗಳನ್ನು ಕೈಗೊಂಡಿದ್ದು, ಈ ಏಳೂ ನಿರ್ಣಯಗಳು ಕೇಳಿ ಎಲ್ಲರೂ ಶಾಕ್ ಆಗುವ ಜೊತೆಗೆ ಬಿದ್ದೂ ಬಿದ್ದೂ ನಗುವಂತಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಅವರು ಹಾಕಿರುವ ಏಳು ರೆಸಲ್ಯೂಷನ್ ಹೀಗಿವೆ ನೋಡಿ:
1. ನಾನು ವಿವಾದರಹಿತನಾಗುತ್ತೇನೆ.
2. ಕುಟುಂಬದ ವ್ಯಕ್ತಿಯಾಗುತ್ತಾರೆ
3. ನಾನು ದೇವರಿಗೆ ಭಯಪಡುವವನಾಗುತ್ತೇನೆ
4. ಪ್ರತಿ ವರ್ಷ 10 ಸತ್ಯ ರೀತಿಯ ಸಿನಿಮಾ ಮಾಡುತ್ತೇನೆ
5. ನಾನು ಟ್ವೀಟ್ ಮಾಡುವುದನ್ನು ನಿಲ್ಲಿಸುತ್ತೇನೆ
6. ನಾನು ಮಹಿಳೆಯರನ್ನು ನೋಡುವುದಿಲ್ಲ
7. ನಾನು ವೋಡ್ಕಾ ಸೇವಿಸುವುದನ್ನು ನಿಲ್ಲಿಸುತ್ತೇನೆ.
ಇವುಗಳಲ್ಲಿ ಏಳನ್ನೂ ಕೂಡ ಅವರು ತಮಾಷೆಯಾಗಿ ಬರೆದಿರುವುದನ್ನು ನೋಡಬಹುದು. ಏಕೆಂದರೆ ಈ ಏಳು ಮಾತುಗಳಿಂದಲೇ ಅವರು ಸದಾ ಸುದ್ದಿಯಲ್ಲಿ ಇರುವುದು ಜೊತೆಗೆ ವಿವಾದ ಸೃಷ್ಟಿಸುವುದು. ಅದರಲ್ಲಿಯೂ ಮದ್ಯ ಸೇವನೆ ಮತ್ತು ಹೆಣ್ಣು ಮಕ್ಕಳ ವಿಷಯದಲ್ಲಿ ಹಾಗೂ ವಿವಾದದಿಂದ ದೂರ ಇರುತ್ತೇನೆ ಎಂದು ಬರೆದಿರುವುದು ಮಾತ್ರ ಎಲ್ಲರನ್ನೂ ನಕ್ಕು ನಗಿಸುವಂತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.