
ಕಮಲ್‌ಗೆ ಕ್ಲಾಸ್
ತಮಿಳುನಾಡು ವಿಧಾನಸಭೆಗೆ ಇಂದು ಚುನಾವಣೆ ನಡೆಯುತ್ತಿದೆ. ಸಂಜೆ 5 ಗಂಟೆವರೆಗಿನ ವರದಿ ಪ್ರಕಾರ, ಶೇ. 80ಕ್ಕೂ ಹೆಚ್ಚು ಮತದಾನ ಆಗಿದೆ. ತಮಿಳು ಚಿತ್ರರಂಗದ ಅನೇಕ ಸ್ಟಾರ್ ನಟರು ವೋಟ್ ಹಾಕಲು ಬಂದಿದ್ದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇವರ ಜೊತೆಗೆ, ನಟ ಕಮಲ್ ಹಾಸನ್ ಮತ್ತು ಅವರ ಮಗಳು, ನಟಿ ಶ್ರುತಿ ಹಾಸನ್ ಕೂಡ ಒಟ್ಟಿಗೆ ವೋಟ್ ಹಾಕಲು ಬಂದಿದ್ದರು. ಆದರೆ, ಇವರಿಬ್ಬರು ಪೋಲಿಂಗ್ ಬೂತ್‌ನಲ್ಲಿದ್ದ ಕ್ಯೂ ನಿಯಮ ಪಾಲಿಸಿಲ್ಲ ಅಂತ ಸೋಶಿಯಲ್ ಮೀಡಿಯಾದಲ್ಲಿ ಜನರು ಹಿಗ್ಗಾಮುಗ್ಗಾ ಜಾಡಿಸುತ್ತಿದ್ದಾರೆ.
ಚೆನ್ನೈನ ಒಂದು ಪೋಲಿಂಗ್ ಸ್ಟೇಷನ್‌ಗೆ ಕಮಲ್ ಮತ್ತು ಶ್ರುತಿ ವೋಟ್ ಹಾಕಲು ಬಂದಿದ್ದರು. ಸುದ್ದಿ ಸಂಸ್ಥೆ ANI ಶೇರ್ ಮಾಡಿರುವ ವಿಡಿಯೋದಲ್ಲಿ, ಇಬ್ಬರೂ ಸ್ವಲ್ಪ ಹೊತ್ತು ಕ್ಯೂನಲ್ಲಿ ನಿಂತಿರುವುದು ಕಾಣಿಸುತ್ತದೆ. ಆದರೆ, ಸ್ವಲ್ಪ ಸಮಯದಲ್ಲೇ ಕ್ಯೂನಿಂದ ಹೊರಬಂದು ನೇರವಾಗಿ ಬೂತ್ ಒಳಗೆ ಹೋಗುತ್ತಾರೆ. ಸದಾ ಸಮಾನತೆ ಬಗ್ಗೆ ಭಾಷಣ ಮಾಡುವ ಕಮಲ್ ಹಾಸನ್, ಸಿಕ್ಕ ಮೊದಲ ಅವಕಾಶದಲ್ಲೇ ತಮ್ಮ ಸೆಲೆಬ್ರಿಟಿ ಸ್ಟೇಟಸ್ ಬಳಸಿಕೊಂಡಿದ್ದಾರೆ ಅಂತ ಒಬ್ಬರು ವಿಡಿಯೋ ಶೇರ್ ಮಾಡಿ ಬರೆದುಕೊಂಡಿದ್ದಾರೆ. ಜನರಿಗೆ ಯಾವಾಗಲೂ ಬುದ್ಧಿ ಹೇಳೋ ಇಂಥವರು, ನಿಜ ಜೀವನದಲ್ಲಿ ನಿಯಮ ಮುರಿಯುತ್ತಾರೆ ಅಂತ ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
ಆದರೆ, ಕಮಲ್ ಬೆಂಬಲಿಗರು ಬೇರೆಯದ್ದೇ ವಾದ ಮುಂದಿಟ್ಟಿದ್ದಾರೆ. ಕಮಲ್ ಅವರಂತಹ ಸ್ಟಾರ್ ನಟ ಹೆಚ್ಚು ಹೊತ್ತು ಕ್ಯೂನಲ್ಲಿ ನಿಂತರೆ, ಮಾಧ್ಯಮದವರು ಸೇರಿ ಜನಜಂಗುಳಿ ಉಂಟಾಗುತ್ತದೆ. ಇದರಿಂದ ವೋಟ್ ಹಾಕಲು ಬಂದಿರೋ ಬೇರೆ ಜನರಿಗೆ ತೊಂದರೆಯಾಗುತ್ತದೆ ಎಂದು ಸಮರ್ಥಿಸಿಕೊಂಡಿದ್ದಾರೆ. ANI ವಿಡಿಯೋದಲ್ಲಿ, 'ಕ್ಯಾಮೆರಾ ಸರಿಸಿ, ಜನರಿಗೆ ತೊಂದರೆಯಾಗುತ್ತಿದೆ' ಎಂದು ಪೊಲೀಸ್ ಅಧಿಕಾರಿಗಳು ಹೇಳುವ ಮಾತುಗಳು ಕೇಳಿಸುತ್ತವೆ. ಪೊಲೀಸರೇ ಕಮಲ್ ಅವರನ್ನು ಸಾಲಿನಿಂದ ಕರೆದು ವೋಟ್ ಹಾಕಲು ಕಳುಹಿಸಿದ್ದಾರೆ. ಈ ವೇಳೆ, ಕಮಲ್ ಹಾಸನ್ ತಮ್ಮ ಮುಂದಿದ್ದ ವ್ಯಕ್ತಿಯ ಬಳಿ ಅನುಮತಿ ಕೇಳುವುದನ್ನೂ ವಿಡಿಯೋದಲ್ಲಿ ನೋಡಬಹುದು.
Kamal Haasan couldn’t wait even a few minutes in the queue; he jumped the line and voted. These people deliver grand sermons on reels for the public, but in real life, they’re the biggest offenders.pic.twitter.com/If68TLql6I
— Rishi Bagree (@rishibagree) April 23, 2026
ಇದೇ ವೇಳೆ, ತಮಿಳು ಚಿತ್ರರಂಗದ ಅಜಿತ್ ಕುಮಾರ್, ಶಶಿಕುಮಾರ್, ವಿಕ್ರಂ, ಧನುಷ್ ಸೇರಿದಂತೆ ಬಹುತೇಕ ಎಲ್ಲಾ ಸ್ಟಾರ್‌ಗಳು ಇಂದು ವೋಟ್ ಹಾಕಿದ್ದಾರೆ. ನಟ ವಿಜಯ್ ಕೂಡ ತಾವು ಸ್ಥಾಪಿಸಿದ ಹೊಸ ರಾಜಕೀಯ ಪಕ್ಷದ ಮೊದಲ ಚುನಾವಣೆಯಲ್ಲಿ ವೋಟ್ ಹಾಕಿ ಗಮನ ಸೆಳೆದರು. ಕೇರಳ ಸೇರಿದಂತೆ ಇತರೆ ರಾಜ್ಯಗಳ ಜೊತೆಗೆ ತಮಿಳುನಾಡು ಚುನಾವಣಾ ಫಲಿತಾಂಶ ಕೂಡ ಮೇ 4 ರಂದು ಪ್ರಕಟವಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.