
ಹಿರಿಯ ನಟಿ ಶೋಭನಾ ಅವರು ಅವರ ಮನೆಯಲ್ಲಿ ಕಳ್ಳತನವಾಗಿದೆ. ಮನೆಯಲ್ಲಿದ್ದ ಹಣವನ್ನು ಕದ್ದು ಪರಾರಿಯಾದ ಮನೆ ಕೆಲಸದಾಕೆ ಸಿಕ್ಕಿಬಿದ್ದಿದ್ದಾಳೆ. ಕಳ್ಳಿ ಸಿಕ್ಕಿದರೂ ನಟಿ ಶೋಭನಾ ಆಕೆಯನ್ನು ಕ್ಷಮಿಸಿದ್ದಾರೆ. ಅಷ್ಟೆಯಲ್ಲದೇ ಮತ್ತೆ ಕೆಲಸಕ್ಕೆ ಸೇರಿಸಿಕೊಂಡಿದ್ದಾರೆ. ಆಕೆ ವಿರುದ್ಧ ನೀಡಿದ್ದ ದೂರನ್ನು ವಾಪಾಸ್ ಪಡೆದಿದ್ದಾದರೆ. ಮನೆಯಲ್ಲಿ 41,000 ರೂಪಾಯಿ ಕಳ್ಳತನವಾಗಿದೆ ಎಂದು ಶೋಭನಾ ದೂರು ದಾಖಲಿಸಿದ್ದರು. ತಕ್ಷಣ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದರು.
ಅಂದಹಾಗೆ ಹಿರಿಯ ನಟಿ ಶೋಭನಾ ಜುಲೈ 27ರಂದೆ ಕಳ್ಳವಾಗಿದೆ ಪೊಲೀಸರಿಗೆ ದೂರು ನೀಡಿದ್ದರು. ಶೋಭನಾ ತಮ್ಮ ತಾಯಿಯೊಂದಿಗೆ ಚೆನ್ನೈನ ತೇನಂಪೇಟಾದ ಶ್ರೀನಿವಾಸ ರಸ್ತೆಯಲ್ಲಿ ವಾಸಿಸುತ್ತಿದ್ದಾರೆ. ಕಡಲೂರು ಜಿಲ್ಲೆಯ ಕೋವಿಲ್‌ನ ವಿಜಯಾ ಎಂಬ ಮಹಿಳೆ ವರ್ಷದ ಹಿಂದೆ ಮನೆ ಕೆಲಸಕ್ಕೆ ಸೇರಿದ್ದಳು. ಆದರೆ ಉಂಡ ಮನೆಗೆ ದ್ರೋಹ ಬಗೆಯುವುದು ಎಂದಂತೆ ಕೆಲಸದಾಕೆ ಹಣ ಕದ್ದು ಪರಾರಿಯಾಗಿದ್ದರು. ಬಳಿಕ ಪೊಲೀಸರ ತನಿಖೆಯಲ್ಲಿ ಸಿಕ್ಕಿಬಿದ್ದಿದ್ದು ವಿಚಾರಣೆ ವೇಳೆ ಆಕೆ ಅಪರಾಧವನ್ನೂ ಒಪ್ಪಿಕೊಂಡಿದ್ದಾಳು.
ಕಳೆದ ಕೆಲವು ತಿಂಗಳುಗಳಿಂದ ಶೋಭನಾ ತಾಯಿ ಆನಂದಮ್ ನಟನ ಚಾಲಕನ ಸಹಾಯದಿಂದ ಸೇವಕಿ ಹಣ ಕದ್ದು ತನ್ನ ಮಗಳ ಖಾತೆಗೆ ಕಳುಹಿಸುತ್ತಿದ್ದಳು ಎನ್ನಲಾಗಿದೆ. ಸದ್ಯ ನಟಿ ಶೋಭನಾ ಮನೆ ಕೆಲಸದವಳನ್ನು ಕ್ಷಮಿಸಿ ಮತ್ತೆ ಕೆಲಸದಲ್ಲಿ ಮುಂದುವರೆಸಿದ್ದು ಅಚ್ಚರಿ ಮೂಡಿಸಿದೆ.
ಮನೆಕೆಲಸದಾಕೆ ವಿಜಯಾ ನಟಿ ಶೋಭನಾ ಬಳಿ ಕ್ಷಮೆ ಕೇಳಿದ್ದು 'ಬಡತನದಿಂದ ಈ ತಪ್ಪು ಮಾಡಿದೆ' ಎಂದು ಹೇಳಿದ್ದಾರೆ. ಆಕೆಯ ದೀನ ಸ್ಥಿತಿ ಕಂಡು ಶೋಭನಾ ದೂರು ವಾಪಸ್ ಪಡೆದಿದ್ದಾರೆ. ಮತ್ತೆ ತಮ್ಮ ಮನೆಯಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಈ ವಿಚಾರ ಅಭಿಮಾನಿಗಳು ನಟಿಯ ಒಳ್ಳೆ ಮನಸ್ಸಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಉಂಡ ಮನೆಗೆ ಯಾರು ದ್ರೋಹ ಬಗೆಯಬಾರದು ಎಂದು ಕೂಡ ಕಾಮೆಂಟ್ ಮಾಡುತ್ತಿದ್ದಾರೆ.
Shobana: ಮಳೆ ಸೀನ್ ಮಾಡುವಾಗ ಒಳಗೆ ಬಟ್ಟೆ ಇರಲಿಲ್ಲ... ರಜನೀ ಸರ್ ಎತ್ತಿಕೊಂಡೇ ಬಿಟ್ರು...
ಶೋಭನಾ ನಟಿ ಹಾಗೂ ಉತ್ತಮ ಭರತನಾಟ್ಯ ನೃತ್ಯಗಾರ್ತಿ. ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಚಲನಚಿತ್ರಗಳಲ್ಲಿ ನಟಿಸುವುದರ ಜೊತೆಗೆ ಮಲಯಾಳಂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟಿ ಎರಡು ರಾಷ್ಟ್ರ ಪ್ರಶಸ್ತಿ ಮತ್ತು ತಮಿಳುನಾಡು ರಾಜ್ಯ ಕಲೈಮಾಮಣಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.