Latest Videos

ಎರಡು ತಿಂಗಳ ಬಾಣಂತಿಯಾಗಿದ್ದಾಗ ಕುದುರೆ ಸವಾರಿ, ಕಳರಿಪಯಟ್ಟು ಕಲಿತ ನೋವಿನ ದಿನ ನೆನೆದ ನಟಿ ಕಾಜಲ್​

By Suchethana DFirst Published May 23, 2024, 5:33 PM IST
Highlights

ನಟಿ ಕಾಜಲ್​ ಎರಡು ತಿಂಗಳ ಬಾಳಂತಿ ಇರುವಾಗ್ಲೇ ಕುದುರೆ ಸವಾರಿ, ಕಳರಿಪಯಟ್ಟು ಕಲಿಯುವ ಅನಿವಾರ್ಯತೆ ಉಂಟಾಗಿರುವ ಕುರಿತು ಹೇಳಿದ್ದಾರೆ. ಅವರು ಹೇಳಿದ್ದೇನು? 
 

ಸದ್ಯ ಟಾಲಿವುಡ್‌ನ ಸುಂದರಿ ಕಾಜಲ್ ಬಗ್ಗೆ ಭಾರಿ ಸುದ್ದಿಯಾಗುತ್ತಿದೆ. ಇದಕ್ಕೆ  ಕಾರಣ,   ಲಕ್ಷ್ಮಿ ಕಲ್ಯಾಣಂ ಚಿತ್ರದ ಮೂಲಕ ತೆಲುಗು ಇಂಡಸ್ಟ್ರಿಗೆ ಪರಿಚಯವಾದ, ಈ ಸುಂದರಿ  ಈಗ ಈ ನಟಿ ಹಾರರ್ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.  ಕಾಜಲ್ ಅವರ ಇತ್ತೀಚಿನ ಹಾರರ್ ಚಿತ್ರ ಕಾರ್ತಿಕಾ ಸ್ಟ್ರೀಮಿಂಗ್‌ಗೆ ಸಿದ್ಧವಾಗುತ್ತಿದೆ. ಕಾರ್ತಿಕಾ ಎಂಬ ಶೀರ್ಷಿಕೆಯ ಈ ಚಿತ್ರದಲ್ಲಿ ರೆಜಿನಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ‘ಕಾರ್ತಿಕಾ’ ಚಿತ್ರವು ತೆಲುಗಿನ ಜನಪ್ರಿಯ OTT ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್ ಮಾಡಲು ಸಿದ್ಧವಾಗಿದೆ. ಇದೇ ವೇಳೆ ಇವರ ಇಂಡಿಯನ್ 2’ ಚಿತ್ರ ಬರುವ ಜುಲೈ 12ರಂದು ರಿಲೀಸ್​ ಆಗಲಿದೆ. ಈ ಚಿತ್ರದಲ್ಲಿ  ನಟಿ ಕಮಲ್​ ಹಾಸನ್​  ಜೊತೆ ನಟಿಸಿದ್ದಾರೆ. ಈ ಸಿನಿಮಾ ಸೆಟ್ಟೇರಿ ಹಲವು ವರ್ಷ ಕಳೆದಿದ್ದರೂ ಇದೀಗ ರಿಲೀಸ್​ ಆಗುತ್ತಿದೆ.  

ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ತಾವು ಶೂಟಿಂಗ್​  ಮತ್ತು ಮಗು ಎರಡನ್ನೂ ಹೇಗೆ ನಿಭಾಯಿಸುತ್ತಿದ್ದೆ ಎಂಬ ಬಗ್ಗೆ ತಿಳಿಸಿದ್ದಾರೆ. ಅಷ್ಟಕ್ಕೂ 2020ರಲ್ಲಿ ಕಾಜಲ್ ಅವರು ಗೌತಮ್ ಕಿಚ್ಲು ಅವರನ್ನು ಮದುವೆ ಆದರು. ತೆಲುಗಿನಲ್ಲಿ ಸ್ಟಾರ್ ಹೀರೋಯಿನ್ ಆಗಿ ಅವಕಾಶಗಳು ಅರಸಿ ಬರುತ್ತಿದ್ದ ಸಮಯದಲ್ಲೇ ನಟಿ ಕಾಜಲ್ ಅಗರ್ವಾಲ್‌ ಮದುವೆಯಾಗಿದ್ದರು. 2022ರಲ್ಲಿ  ಗಂಡು ಮಗುವಿಗೆ ಜನ್ಮ ನೀಡಿದರು. ಚಲನಚಿತ್ರಗಳಿಂದ ಕೆಲವು ದಿನಗಳವರೆಗೆ ಗ್ಯಾಪ್ ತೆಗೆದುಕೊಂಡರು. ಆದರೆ ಕಾಜಲ್ ಕ್ರೇಜ್ ಮಾತ್ರ ಕಡಿಮೆಯಾಗಲಿಲ್ಲ. ಮದುವೆಯ ನಂತರವೂ ಕಾಜಲ್‌ಗೆ ಹಲವಾರು ಅವಕಾಶಗಳು ಒದಗಿಬಂದವು. ಆದರೆ ಮಗು ಹುಟ್ಟಿದ ಸಮಯದಲ್ಲಿಯೇ ಅಂದರೆ  2022ರಲ್ಲಿ ‘ಇಂಡಿಯನ್ 2’ ಸಿನಿಮಾ ಶೂಟಿಂಗ್ ಕೂಡ ನಡೆಯುತ್ತಿತ್ತು. ಅದನ್ನು ಪೂರ್ಣಗೊಳಿಸೋ ಜವಾಬ್ದಾರಿ ಕಾಜಲ್​ಗೆ ಇತ್ತು. 

ಮದ್ವೆ ಯಾವಾಗ ಕೇಳಿದ್ರೆ ಹೀಗೆ ಹೇಳೋದಾ ನಟ ವಿಶಾಲ್​? ಈ ಜನ್ಮದಲ್ಲಿ ಇದು ಸಾಧ್ಯವಿಲ್ಲ ಬಿಡಿ ಎಂದ ಫ್ಯಾನ್ಸ್​!

ಇದೀಗ ಆ ದಿನಗಳನ್ನು ಅವರು ನೆನಪಿಸಿಕೊಂಡಿದ್ದಾರೆ ನಟಿ. ಮದುವೆ ಬಳಿಕ ನನ್ನ ಜೀವನದಲ್ಲಿ ಹೆಚ್ಚಿನ ಬದಲಾವಣೆ ಆಗಿಲ್ಲ. ಆದರೆ, ಮಗು ಜನಿಸಿದ ಬಳಿಕ ನಾನು ಬದಲಾದೆ. ಮಗುವನ್ನು ಹೊಂದುವುದು ನಿಜಕ್ಕೂ ಚಾಲೆಂಜಿಂಗ್. ನರ್ವಸ್ ಆಗುತ್ತಿದ್ದೆ, ಭಯ ಆಗುತ್ತಿತ್ತು. ಖಿನ್ನತೆಗೆ ಒಳಗಾಗಬಹುದು ಎನ್ನುವ ಭಯದಲ್ಲಿ ಮೊದಲೇ ಥೆರೆಪಿ ಕೂಡ ಪಡೆದಿದ್ದೆ. ಆದರೆ, ಮಗು ಹುಟ್ಟಿದ ತಕ್ಷಣ ಎರಡು ತಿಂಗಳಲ್ಲೇ ಶೂಟಿಂಗ್​ಗೆ ವಾಪಸಾದೆ.  ಕುದುರೆ ಸವಾರಿ ಕಲಿಯಲು ಹೋಗಿದ್ದೆ. ಶಂಕರ್ ಅವರ ಇಂಡಿಯನ್ 2 ಗಾಗಿ ನಾನು ಕುದುರೆ ಸವಾರಿ ಕಲಿಯಬೇಕಾಗಿತ್ತು. ಆದರೆ ಆಗ ನನಗೆ ತುಂಬಾ ನೋವಾಗುತ್ತಿತ್ತು. ಆದರೆ ನಾನು ಕಷ್ಟಪಡಬೇಕಿತ್ತು ಎಂದಿದ್ದಾರೆ.  ಕಳರಿಪಯಟ್ಟು ಕೂಡ ಮಾಡಿದ್ದೇನೆ. ನಿಜಕ್ಕೂ ತುಂಬಾನೇ ನೋವಿನ ದಿನಗಳು ಅವು. ಶಂಕರ್ ಅವರು ನಮ್ಮನ್ನು ಅರ್ಥ ಮಾಡಿಕೊಂಡರು. ಅವರು ಡೇಟ್​ನ ಅಡ್ಜಸ್ಟ್ ಮಾಡಲು ಪ್ರಯತ್ನಿಸಿದರು. ಯಾವಾಗದರೂ ನಾನೇ ಶೂಟಿಂಗ್​ನ ಪೂರ್ಣಗೊಳಿಸಬೇಕಿತ್ತು. ಆದ್ದರಿಂದ  ಶೂಟಿಂಗ್​  ಮಾಡುವುದು ಅನಿವಾರ್ಯವಾಗಿತ್ತು ಎಂದಿದ್ದಾರೆ. 


ಇಷ್ಟು ಕಷ್ಟದ ವಿಚಾರಗಳನ್ನು ನನ್ನ ಜೀವನದಲ್ಲಿ ಯಾವಾಗಲೂ ಮಾಡಿರಲಿಲ್ಲ. ನಾವು ತಿರುಪತಿಯಲ್ಲಿ ಶೂಟ್ ಮಾಡುವಾಗ ಮಗುವನ್ನೂ ಕರೆದುಕೊಂಡು ಹೋದೆ. ಶೂಟ್ ಮಧ್ಯೆ ಮಗುವಿಗೆ ಹಾಲುಣಿಸುತ್ತಿದ್ದೆ.   ಇದರಿಂದ   ತಪ್ಪಿತಸ್ಥ ಭಾವನೆ ಕೂಡ ಕಾಡಿತ್ತು. ಆದರೆ ಬೇರೆ ವಿಧಿಯಿರಲಿಲ್ಲ ಎಂದಿದ್ದಾರೆ. ಸುಮಾರು ನಾಲ್ಕು ವರ್ಷಗಳ ಹಿಂದೆ ಓಕೆ ಮಾಡಿದ ಸಿನಿಮಾ ಅದು. ನನಗೆ ಬೇಡವಾದರೆ ಬೇರೆಯವರನ್ನು ಕರೆದುಕೊಂಡು ಮಾಡುತ್ತಾರೆ. ಆದರೆ ಆ ಸಿನಿಮಾ ಮಾಡಬೇಕೆಂದುಕೊಂಡಿದ್ದೆ. ನನ್ನ ಡೇಟ್ಸ್ ಅಡ್ಜಸ್ಟ್ ಆಗುವಂತೆ ನಿರ್ದೇಶಕ ಶಂಕರ್ ಸರ್ ಕೂಡ ಪ್ಲಾನ್ ಮಾಡಿ ಸಪೋರ್ಟ್ ಮಾಡಿದ್ದಾರೆ. ನಿನ್ನ ಜಾಗದಲ್ಲಿ ನಾನು ಬೇರೆಯವರನ್ನು ತೆಗೆದುಕೊಳ್ಳುವುದಿಲ್ಲ.. ಸ್ವಲ್ಪವೂ ಭಯಪಡಬೇಡ ಎಂದು ಹೇಳಿದ್ದರು. ತುಂಬಾ ಕಷ್ಟವಾದರೂ ಇಷ್ಟಪಟ್ಟು ಮಾಡಿದ್ದು, ಹೆಮ್ಮೆ ಅನಿಸುತ್ತಿದೆ ಎಂದು ನಟಿ ಕಾಜಲ್‌ ಹೇಳಿದ್ದಾರೆ.  
 

ಅಪರಿಚಿತ ಕೊಟ್ಟ ಪೆನ್​ಡ್ರೈವ್​ ನೋಡಿ ನಟ ರಮೇಶ್​ ಅರವಿಂದ್​ಗೆ ಫುಲ್​ ಶಾಕ್​- ಮುಂದೇನಾಯ್ತು ನೋಡಿ...

click me!