
ತಮಿಳು, ತೆಲುಗು ಹಾಗೂ ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟಿ ಕಾಜಲ್ ಅಗರ್‌ವಾಲ್ (Kajal Aggarwal). ಹಿಂದಿ ಚಿತ್ರದಿಂದ ಸಿನಿಪಯಣ ಆರಂಭಿಸಿದರೂ ನಟಿಯಾಗಿ ಖ್ಯಾತಿ ಪಡೆದಿದ್ದು ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ. ಕನ್ನಡದಲ್ಲಿ ಪುನೀತ್ ರಾಜಕುಮಾರ್ ರ `ಚಕ್ರವ್ಯೂಹ' ಚಿತ್ರದಲ್ಲಿ ಒಂದು ಹಾಡನ್ನು ಹಾಡಿದ್ದಾರೆ. ಕೆಲ ವರ್ಷಗಳ ಹಿಂದೆ ಗೌತಮ್ ಕಿಚ್ಚಲು (Gautam Kitchlu) ಅವರನ್ನು ಮದುವೆಯಾಗಿರುವ ನಟಿ, ಕಳೆದ ವರ್ಷ ಏಪ್ರಿಲ್ 19ರಂದು ಗಂಡು ಮಗುವಿನ ಅಮ್ಮ ಆಗಿದ್ದಾರೆ. ಮದುವೆಯಾದ ಬಳಿಕ ನಟಿ ಕಾಜಲ್ ಅಗರ್‌ವಾಲ್ ನಟನೆಯಿಂದ ಕೊಂಚ ಬ್ರೇಕ್ ಪಡೆದಿದ್ದರು. ಆದರೆ ತಾಯಿಯಾದ ಮೇಲೆ ಚಿತ್ರರಂಗಕ್ಕೆ ಗುಡ್ ಬೈ ಹೇಳುವುದಿಲ್ಲ. ಈ ವರ್ಷಾಂತ್ಯದ ವೇಳೆಗೆ ತೂಕ ಇಳಿಸಿಕೊಂಡು ಮತ್ತೆ ಮೊದಲಿನಂತಾಗಿ ಶೂಟಿಂಗ್‌ಗೆ ಹಾಜರ್ ಆಗುವುದಾಗಿ ನಟಿ ಕಾಜಲ್ ಅಗರ್‌ವಾಲ್ ಈ ಹಿಂದೆ ನೀಡಿದ್ದ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಅದರಂತೆ ಅವರು ಅಮ್ಮನಾದ ಮೇಲೂ ಇವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದಾರೆ.
ಇದೀಗ ಸಕತ್ ಫೋಟೋ ಶೂಟ್ (Photo Shoot) ಮಾಡಿಸಿಕೊಂಡಿದ್ದಾರೆ ನಟಿ. ಅಮ್ಮನಾದ ಮೇಲೂ ಹಲವು ನಟಿಯಲು ಅದೇ ಗ್ಲಾಮರಸ್ ಲುಕ್ ಉಳಿಸಿಕೊಂಡಿರುವಂತೆ ಕಾಜಲ್ ಕೂಡ ಸುಂದರಿಯಾಗಿಯೇ ಕಾಣುತ್ತಿದ್ದಾರೆ. ಆದರೆ ಈಗ ಫೋಟೋ ನೋಡಿದ ಅವರ ಫ್ಯಾನ್ಸ್ಗೆ ಒಂದು ಡೌಟ್ ಶುರುವಾಗಿದೆ. ಅದೇನೆಂದರೆ, ಕಾಜಲ್ ಲುಕ್ಕು ಚೇಂಜ್ ಆಗಿದೆ. ಅವರ ಬದಲಾಗಿರುವ ಲುಕ್ಗೆ ಫ್ಯಾನ್ಸ್ ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಹಲವರು ಏನಿದು ಬದಲಾವಣೆ ಎಂದು ಕೇಳಿದರೆ, ಇನ್ನು ಹಲವರು ನಟಿ ಪ್ಲಾಸ್ಟಿಕ್ ಸರ್ಜರಿ (Plastic Surgery) ಮಾಡಿಸಿಕೊಂಡಿರಬಹುದೇ ಎಂದು ಸಂದೇಹ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಕಾರಣ, 80ರ ದಶಕದಲ್ಲಿಯೇ ನಟಿ ಶ್ರೀದೇವಿ ಸೇರಿದಂತೆ ಇತ್ತೀಚಿನ ಹಲವು ನಟಿಯರು ತಮ್ಮ ದೇಹದ ವಿವಿಧ ಭಾಗಗಳಲ್ಲಿ ಕತ್ತರಿ ಹಾಕಿಸಿಕೊಂಡವರೇ. ಮೂಗು, ತುಟಿ ಹಾಗೂ ಸ್ತನಗಳ ಶಸ್ತ್ರಚಿಕಿತ್ಸೆಗೆ ಒಳಗಾದವರು, ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡವರು. ಇದೇ ಸಾಲಿಗೆ ಕಾಜಲ್ ಕೂಡ ಸೇರಿದ್ದಾರೆಯೇ ಎನ್ನುವುದು ಅವರ ಪ್ರಶ್ನೆ.
Krishna Mukherjee: ಬಿಕಿನಿಗೆ ಫ್ಯಾನ್ಸ್ ಗರಂ, ಹನಿಮೂನ್ ವಿಡಿಯೋನೂ ಶೇರ್ ಮಾಡಿ ಎಂದು ಕಿಡಿ
37 ವರ್ಷದ ಈ ಚೆಲುವೆಯ ಫೋಟೋದ ಬಗ್ಗೆ ಈಗ ಸಕತ್ ಚರ್ಚೆ ಶುರುವಾಗಿದೆ. ಕೆಲವರು ಅಮ್ಮನಾದ ಮೇಲೆ ದೇಹದಲ್ಲಿ ಬದಲಾವಣೆ ಆಗಿದ್ದು, ಆಕೆ ವಿಭಿನ್ನವಾಗಿ ಕಾಣಿಸುತ್ತಿದ್ದಾರೆ ಎಂದು ಹೇಳುತ್ತಿದ್ದರೆ, ಇಲ್ಲಪ್ಪಾ ಇಲ್ಲ, ಸಂಪೂರ್ಣ ಲುಕ್ ಚೇಂಜ್ ಆಗಿದೆ. ಈ ಚಿತ್ರದಲ್ಲಿಯೂ ಗ್ಲಾಮರಸ್ (Glamourus) ಆಗಿಯೇ ಕಾಣುತ್ತಿದ್ದರೂ ಮುಖದಲ್ಲಿ ಏನೋ ವ್ಯತ್ಯಾಸ ಆಗಿದೆ ಎನ್ನುತ್ತಿದ್ದಾರೆ.
ತೆಲುಗು, ತಮಿಳು ಚಿತ್ರಗಳಲ್ಲಿ ಮೋಡಿ ಮಾಡಿರುವ ಬಟ್ಟಲುಗಣ್ಣಿನ ಚೆಲುವೆ ಕಾಜಲ್ ಅಗರ್ ವಾಲ್ ಕ್ಯೂ ಹೋ ಗಯಾನಾ ಚಿತ್ರದ ಮೂಲಕ ಬಾಲಿವುಡ್ ಗೆ ಪ್ರವೇಶಿಸಿದ್ದರು. 'ಮಗಧೀರ' (Magadheera) ಚಿತ್ರದ ಮೂಲಕ ಸಂಚಲನ ಮೂಡಿಸಿದ್ದ ಬಹುಭಾಷಾ ನಟಿ ಕಾಜಲ್ ಅಗರ್ ವಾಲ್ 2019ರಲ್ಲಿ ಹಾಲಿವುಡ್ಗೂ ಹಾರಿದ್ದರು. ಪ್ರಿಯಾಂಕಾ ಚೋಪ್ರಾ, ದೀಪಿಕಾ ಪಡುಕೋಣೆ, ಐಶ್ವರ್ಯಾ ರೈ ಸಾಲಿಗೆ ಇದೀಗ ಕಾಜಲ್ ಸೇರಿದ್ದಾರೆ. ಕೃಷ್ಣವಂಶಿ ನಿರ್ದೇಶನದ ಚಂದಮಾಮ ಚಿತ್ರದ ಮೂಲಕ ಕಾಜಲ್ಗೆ ಉತ್ತಮ ಮನ್ನಣೆ ಸಿಕ್ಕಿತ್ತು. ಅದರ ನಂತರ, ಕಾಜಲ್ ಸರಣಿ ಆಫರ್ಗಳೊಂದಿಗೆ ಅನೇಕ ಹಿಟ್ ಸಿನಿಮಾ ನೀಡಿದ್ದಾರೆ. ಟಾಲಿವುಡ್ ನಲ್ಲಿ ಅತಿ ಹೆಚ್ಚು ಹಿಟ್ ಸಿನಿಮಾ ನೀಡಿರುವ ನಟಿ ಕಾಜಲ್ ತಮಿಳಿನಲ್ಲೂ ಸಾಕಷ್ಟು ಸಿನಿಮಾ ಮಾಡಿದ್ದಾರೆ. ಕಾಜಲ್ ಪ್ರಸ್ತುತ ಸ್ಟಾರ್ ಹೀರೋ ಕಮಲ್ ಹಾಸನ್ ಜೊತೆ ಇಂಡಿಯನ್ 2 ಚಿತ್ರದಲ್ಲಿ ನಟಿಸುತ್ತಿದ್ದಾರೆ.
Bollywood Second Marriages: ಎರಡನೇ ಬಾರಿ ಮದ್ವೆಯಾಗಿ ಸಕ್ಸಸ್ ಕಂಡ ನಟಿಯರಿವರು
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.