
ಬಾಹುಬಲಿ ಖ್ಯಾತಿಯ ರಾಣಾ ದಗ್ಗಬಾಟಿ ಮತ್ತು ವಿಷ್ಣು ವಿಶಾಲ್ ಅವರ ಕಾಡಾನ್ ಸಿನಿಮಾದ ಟ್ರೇಲರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಪ್ರಭು ಸೊಲೊಮನ್ ನಿರ್ದೇಶನದ ಕಾಡನ್ ಆನೆಗಳನ್ನು ಉಳಿಸುವ ಮತ್ತು ಅರಣ್ಯನಾಶದ ವಿರುದ್ಧ ಮಾತನಾಡುವ ಸಿನಿಮಾ.
ಮೂರು ನಿಮಿಷಗಳ ಕಾಲದ ಟ್ರೈಲರ್‌ನಲ್ಲಿ ಅರಣ್ಯ ಅತಿಕ್ರಮಣದಂತಹ ಪ್ರಮುಖ ವಿಷಯಗಳನ್ನು ತಿಳಿಸಲಾಗಿದೆ. ವಿಶ್ವ ವನ್ಯಜೀವಿ ದಿನಾಚರಣೆಯ ಸಂದರ್ಭದಲ್ಲಿ ಕಾಡನ್ ಟ್ರೇಲರ್ ಬಿಡುಗಡೆಯಾಗಿದೆ.
ಹಿಂದೂಗಳ ಅವಹೇಳನ: ತಾಂಡವ್ ವೆಬ್‌ಸೀರಿಸ್ ಬಗ್ಗೆ ಅಮೆಜಾನ್ ಕ್ಷಮೆ!
ಟ್ರೇಲರ್ ಅನ್ನು ಬಿಡುಗಡೆ ಮಾಡುವುದರ ಜೊತೆಗೆ ಚಿತ್ರತಂಡ ಆಡಿಯೊವನ್ನು ಚೆನ್ನೈನ ಥಿಯೇಟರ್ನಲ್ಲಿ ಬಿಡುಗಡೆ ಮಾಡಿದ್ದಾರೆ. ನಿರೀಕ್ಷೆಯಂತೆ ಕಾಡನ್ ಚಿತ್ರದ ಟ್ರೈಲರ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಅರಣ್ಯ ಭೂಮಿಯನ್ನು ಅತಿಕ್ರಮಣ ಮಾಡುತ್ತಿರುವ ಪೊಲೀಸ್, ಮಾಧ್ಯಮ ಮತ್ತು ಅರಣ್ಯ ಸಚಿವರಿಗೆ ಕಠಿಣ ಪ್ರಶ್ನೆಗಳನ್ನು ಕೇಳುವ ಪ್ರಮುಖ ಪಾತ್ರದಲ್ಲಿ ರಾಣಾ ದಗ್ಗುಬಾಟಿ ಪಾತ್ರದಲ್ಲಿದ್ದಾರೆ.
ಬಾಲಿವುಡ್ ಕ್ವೀನ್ ವಿಚಾರಣೆ ಎದುರಿಸಲೇಬೇಕಾ..? ತಡೆ ನೀಡಲು ಹೈಕೋರ್ಟ್ ನಕಾರ
ವಿಷ್ಣು ವಿಶಾಲ್ ಟ್ರೈಲರ್ ಶೇರ್ ಮಾಡಿ, ಮನುಷ್ಯನ ದುರಾಸೆಯಿಂದ ಕಾಡು ಒಂದು ಮಹಾಕಾವ್ಯದ ಯುದ್ಧಕ್ಕೆ ಸಜ್ಜಾಗುತ್ತದೆ. ಕೆಟ್ಟದ್ದನ್ನು ಸೋಲಿಸಿ ಒಳ್ಳೆಯತನ ಗೆಲ್ಲುವುದಾ ? ಯುದ್ಧವು ಇದೀಗ ಪ್ರಾರಂಭವಾಗಿದೆ. ಕಾಡನ್ (ತಮಿಳು) ತ್ರಿಭಾಷಾ ಚಿತ್ರ. ಮಾರ್ಚ್ 26 ರಂದು ನಿಮ್ಮ ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದೆ ಎಂದು ಬರೆದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.