ಅತ್ತೆ-ಮಾವ ಜೊತೆ ಕಿರಿಕ್ ಮಾಡಿಕೊಂಡು ಮನೆ ಬಿಟ್ರಾ ಜ್ಯೋತಿಕಾ- ಸೂರ್ಯ?; ನೆಟ್ಟಿಗರಿಗೆ ಸ್ಪಷ್ಟನೆ ಕೊಟ್ಟ ಜ್ಯೋ

 ಚೆನ್ನೈನಿಂದ ಮುಂಬೈ ಕಡೆ ಹಾರಿದಕ್ಕೆ ಕುಟುಂಬದಲ್ಲಿ ಬಿರುಕು ಎಂದು ಸುದ್ದಿ. ನಾವೆಲ್ಲರೂ ಚೆನ್ನಾಗಿದ್ದೀವಿ ಎಂದು ಸ್ಪಷ್ಟನೆ ಕೊಟ್ಟ ಜ್ಯೋತಿಕಾ. 


ತಮಿಳು ಮತ್ತು ಮಲಯಾಳಂ ಚಿತ್ರರಂಗದ ಸಿಂಪಲ್ ನಟಿ ಜ್ಯೋತಿಕಾ ಕೆಲವು ವರ್ಷಗಳ ಹಿಂದೆ ಇದ್ದಕ್ಕಿದ್ದಂತೆ ಮುಂಬೈ ಕಡೆ ಪ್ರಯಾಣ ಮಾಡಿದರು. ಅಲ್ಲೇ ಮನೆ ಮಾಡಿಕೊಂಡು ವಾಸಿಸುತ್ತಿದ್ದಾರೆ, ತವರು ಸೇರಿಕೊಂಡರು. ಅತ್ತೆ- ಮಾವ ಜೊತೆ ಜ್ಯೋತಿಕಾ ಜಗಳ ಮಾಡಿಕೊಂಡು ದೂರವಾಗಿದ್ದಾರೆ ಅಂತ ದೊಡ್ಡ ಸುದ್ದಿಯಾಗಿತ್ತು. ಈ ವಿಚಾರದ ಬಗ್ಗೆ ಸ್ವತಃ ಜ್ಯೋತಿಕಾ ಪ್ರತಿಕ್ರಿಯೆ ನೀಡಿದ್ದಾರೆ.

'ಕೊರೋನಾ ಪ್ಯಾಂಡಮಿಕ್ ಸಮಯದಲ್ಲಿ ನನ್ನ ತಂದೆ ತಾಯಿಗೆ ಎರಡು ಮೂರು ಸಲ ಕೊರೋನಾ ವೈರಲ್ ತಗುಲಿತ್ತು. ಅಲ್ಲದೆ ಆ ಸಮಯದಲ್ಲಿ ಹೆಚ್ಚಿಗೆ ಪ್ರಯಾಣ ಮಾಡುವಂತೆ ಇರಲಿಲ್ಲ. ಅವರೊಟ್ಟಿಗೆ ಇರಲು ಸಹಾಯ ಮಾಡಲು ಆಗುತ್ತಿರಲಿಲ್ಲ. ಸುಮಾರು 25ರಿಂದ 27 ವರ್ಷಗಳ ಕಾಲ ಚೆನ್ನೈನಲ್ಲಿ ಗಂಡ ಜೊತೆ ಇದ್ದೆ ಆಗ ಫ್ಯಾಮಿಲಿನ ಮಿಸ್ ಮಾಡಿಕೊಂಡೆ. ಕೆಲಸ ಏನೂ ಮಾಡುವಂತೆ ಇರಲಿಲ್ಲ ಮಕ್ಕಳಿಗೆ ಸ್ಕೂಲ್‌ ಕೂಡ ಆನ್‌ಲೈನ್‌ ಇದ್ದ ಕಾರಣ ಫ್ಯಾಮಿಲಿ ಜೊತೆ ಸಮಯ ಕಳೆಯಲು ಒಳ್ಳೆಯ ಕ್ಷಣ ಎಂದು ಮುಂಬೈ ಕಡೆ ಪ್ರಯಾನ ಮಾಡಿದೆ' ಎಂದು ಜ್ಯೋತಿಕಾ ತಮಿಳು ಯುಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.

Latest Videos

ಕೈಯಲ್ಲಿ ಬೇಕಾದಷ್ಟು ಹಣವಿತ್ತು; ದಿಢೀರನೆ ಸೂರ್ಯನ ಜೊತೆ ಮದುವೆ ಮಾಡಿಕೊಳ್ಳಲು ಕಾರಣ ಬಿಚ್ಚಿಟ್ಟ ಜ್ಯೋತಿಕಾ!

ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆ ಆಗದಂತೆ ನೋಡಿಕೊಂಡು ಪ್ರಯಾಣ ಮಾಡಿರುವ ಕಥಾಲ್ ನಟಿ ಗಂಡನ ಸಪೋರ್ಟ್ ಮೆಚ್ಚಿಕೊಂಡಿದ್ದಾರೆ. 'ಸೂರ್ಯ ತುಂಬಾ ಸಪೋರ್ಟಿವ್ ಗಂಡ. ನಾನು ಸದಾ ಖುಷಿಯಾಗಿರಬೇಕು ಅಂತ ಇಷ್ಟ ಪಡುತ್ತಾರೆ. ಸದಾ ಮಕ್ಕಳ ಬಗ್ಗೆ ಚಿಂತಿಸುತ್ತಾರೆ. ಮಕ್ಕಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಪ್ರಪಂಚವನ್ನು ವಿಭಿನ್ನ ರೀತಿಯಲ್ಲಿ ಸೂರ್ಯ ನೋಡುತ್ತಾರೆ' ಎಂದು ಜ್ಯೋ ಹೇಳಿದ್ದಾರೆ.

ಸೂರ್ಯ ತುಂಬಾ ಬೋರಿಂಗ್ ಗಂಡ; ಜ್ಯೋತಿಕಾ ಮಾತಿಗೆ ಬೆಚ್ಚಿಬಿದ್ದ ಸೂರ್ಯ ಫ್ಯಾನ್ಸ್!

ಜ್ಯೋತಿಕಾ ಮುಂಬೈನಲ್ಲಿ ಇದ್ದಾಗ ಅತ್ತೆ-ಮಾವನ ಜೊತೆ ದೀಪಾವಳಿ ಆಚರಿಸಬೇಕು ಎಂದು ತುಂಬಾ ಆಸೆ ಪಟ್ಟರಂತೆ. ಆಗ ಅತ್ತೆಗೆ ಕರೆ ಮಾಡಿ ಆಸೆ ಹೇಳಿಕೊಂಡಾಗ ಎಲ್ಲರೂ ಒಟ್ಟಿಗೆ ಆಚರಿಸಿದ್ದಾರೆ. ಅತ್ತೆ-ಮಾವ, ಕಾರ್ತಿ ಮತ್ತು ಅವರ ಪತ್ನಿ ....ಕುಟುಂಬದ ಪ್ರತಿಯೊಬ್ಬರ ಜೊತೆಗೂ ಜ್ಯೋತಿಕಾ ಚೆನ್ನಾಗಿದ್ದಾರಂತೆ. ಅತ್ತೆ - ಮಾವ ವೃತ್ತಿ ಜೀವನಕ್ಕೆ ಸಖತ್ ಸಪೋರ್ಟ್ ಮಾಡುತ್ತಾರಂತೆ. 

click me!