ಅನಿಮಲ್​ ನಟಿ ತೃಪ್ತಿ ಡಿಮ್ರಿ 'ಆ ವಿಡಿಯೋ' ಲೀಕ್​! ಪಶ್ಚಾತ್ತಾಪ ಪಡುವ ದಿನ ದೂರವಿಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು...

By Suchethana D  |  First Published Sep 10, 2024, 10:56 AM IST

 ಅನಿಮಲ್​ ನಟಿ ತೃಪ್ತಿ ಡಿಮ್ರಿಯ 'ವಿಕ್ಕಿ ವಿದ್ಯಾರ ಆ ವಿಡಿಯೋ' ಚಿತ್ರದ ಡಾನ್ಸ್​ ವಿಡಿಯೋ ಲೀಕ್​ ಆಗಿದೆ! ಪಶ್ಚಾತ್ತಾಪ ಪಡುವ ದಿನ ದೂರವಿಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು...
 


ಅನಿಮಲ್​ ಚಿತ್ರದಲ್ಲಿ ಸಂಪೂರ್ಣ ಬೆತ್ತಲಾಗುವ ಮೂಲಕ ಭಾರಿ ಸಂಚಲನ ಸೃಷ್ಟಿಸಿರುವ ನಟಿ ತೃಪ್ತಿ ಡಿಮ್ರಿ. ಕಳೆದ ವರ್ಷದವರೆಗೂ ತೃಪ್ತಿ ಡಿಮ್ರಿ ಎನ್ನುವ ಬಾಲಿವುಡ್​​ ನಟಿ ಇದ್ದಾರೆ ಎನ್ನುವುದೇ ಎಷ್ಟೋ ಮಂದಿಗೆ ತಿಳಿದಿರಲಿಲ್ಲ. ಆದರೆ ಇದೀಗ ಗೂಗಲ್​ನಲ್ಲಿ ತೃಪ್ತಿಯ ಬಗ್ಗೆ ಸಿನಿ ಪ್ರಿಯರಿಗೆ ಇಂಟರೆಸ್ಟ್​ ಜಾಸ್ತಿಯಾಗುತ್ತಿದೆ. ಯಾರೀಕೆ? ಯಾವೆಲ್ಲಾ ಚಿತ್ರಗಳಲ್ಲಿ ನಟಿಸಿದ್ದಾರೆ? ಎಲ್ಲಿಯವರು ಎಂದೆಲ್ಲಾ ಸರ್ಚ್​ ಶುರುವಿಟ್ಟುಕೊಂಡಿದ್ದಾರೆ. ಪಾಳುಬಿದ್ದಿದ್ದ ಈಕೆಯ ಸೋಷಿಯಲ್​ ಮೀಡಿಯಾ ಖಾತೆ ಸಕ್ರಿಯಗೊಂಡಿದ್ದು, ಈಕೆಯ ಸೋಷಿಯಲ್​ ಮೀಡಿಯಾ ಕೂಡ ಸರ್ಚ್​ ಮಾಡಲಾಗುತ್ತಿದೆ. ದಿಢೀರನೆ ಎಲ್ಲರ ಕಣ್ಣು ಕುಕ್ಕಿದ್ದಾರೆ ಈ ಬೆಡಗಿ.  ಅನಿಮಲ್​ ಚಿತ್ರದಲ್ಲಿ ನಟ ರಣಬೀರ್​ ಕಪೂರ್​ ಜೊತೆ ಈಕೆಯ ನಗ್ನ ದೃಶ್ಯಗಳನ್ನು ನೋಡುತ್ತಿದ್ದಂತೆಯೇ ದಿಢೀರನೆ ಫ್ಯಾನ್ಸ್​ ಸಂಖ್ಯೆಯನ್ನೂ ಏರಿಸಿಕೊಂಡಿದ್ದಾರೆ ತಾರೆ. ಈಗ ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ ( Vicky Vidya Ka Woh Wala Video- ವಿಕ್ಕಿ ವಿದ್ಯಾರ ಆ ವಿಡಿಯೋ) ಹೆಸರಿನ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.

ಅಕ್ಟೋಬರ್​ ತಿಂಗಳಿನಲ್ಲಿ ಈ ಚಿತ್ರ ರಿಲೀಸ್​ ಆಗಲಿದ್ದು, ಇದರ ಡಾನ್ಸ್​ ವಿಡಿಯೋ ಒಂದು ಲೀಕ್​ ಆಗಿದೆ. ಇದರಲ್ಲಿ ತೃಪ್ತಿ ಕ್ಯಾಬರೆ ನರ್ತಕಿಯ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ನ್ಯಾಷನಲ್​ ಕ್ರಷ್​ ಎನಿಸಿಕೊಂಡಿರೋ ನಟಿಯ ವಿರುದ್ಧ ಒಂದೇ ಸಮನೆ ಕೆಟ್ಟ ಕಮೆಂಟ್ಸ್​ ಸುರಿಮಳೆಯಾಗುತ್ತಿದೆ. ರಾತ್ರೋ ರಾತ್ರಿ ಸ್ಟಾರ್​ ಪಟ್ಟ ಗಿಟ್ಟಿಸಿಕೊಂಡು ಚಿತ್ರ ನಿರ್ದೇಶಕರ ಫೆವರೆಟ್​ ನಟಿಯಾಗಿದ್ದ ತೃಪ್ತಿಯನ್ನು ನೋಡಲು ಇಷ್ಟು ತಾತ್ಸಾರ ಯಾಕೆ ಎಂದೇ ಅರ್ಥವಾಗುತ್ತಿಲ್ಲ. ನಿನ್ನನ್ನು ಬೆತ್ತಲಾಗಿ ನೋಡಾಯ್ತು, ಮತ್ತೆ ನಿನ್​ ಮೇಲೆ ಇಂಟರೆಸ್ಟ್​ ಇಲ್ಲ ಎಂದು ಕೆಲವರು ಕಮೆಂಟ್​ ಹಾಕಿದ್ದರೆ, ನೀನು ಒಮ್ಮೆ ಬೆತ್ತಲಾಗಿದ್ದಕ್ಕೆ ಜೀವನ ಪೂರ್ತಿ ನಿನ್ನನ್ನು ನಿರ್ದೇಶಕರು ಅದೇ ರೀತಿ ಬಳಸಿಕೊಳ್ಳುತ್ತಾರೆ, ನೀನು ಪಶ್ಚಾತ್ತಾಪ ಪಡುವ ದಿನ ದೂರವಿಲ್ಲ ಎಂದು ಮತ್ತೆ ಕೆಲವರು  ಹೇಳುತ್ತಿದ್ದರೆ, ವಯಸ್ಸು ಇರುವವರೆಗೆ ಬಟ್ಟೆ ಬಿಚ್ಚಬಹುದು, ಆಮೇಲೆ ರಸ್ತೆಯ ಮೇಲೆ ಬೀಳಬೇಕಾದೀತು ಹುಷಾರ್​, ಬೇಗ ಎಚ್ಚೆತುಕೋ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. 

Tap to resize

Latest Videos

undefined

ಧರ್ಮೇಂದ್ರ ಜೊತೆಗಿನ ಆ ದಿನಗಳ ನೆನೆದ ಜಯಾ! ಈ ವಯಸ್ಸಲ್ಲೂ ಅಮಿತಾಭ್​ ಪತ್ನಿಗೆ ಇದೆಂಥ ಆಸೆ ನೋಡಿ...

ಈಕೆಯ ಅಭಿನಯಕ್ಕೆ ಮನಸೋತವರೇ ಈಗ ಹೀಗೇಕೆ ತಿರುಗಿ ಬಿದ್ದಿದ್ದಾರೆ ಎನ್ನುವುದೇ ಅಚ್ಚರಿಯ ವಿಷಯವಾಗಿದೆ. ನಿನಗಿಂತ ಹಿಂದೆ ಇರುವ ಸೈಡ್​ ಆ್ಯಕ್ಟರ್ಸ್​ಗಳೇ ಚೆನ್ನಾಗಿ ಡಾನ್ಸ್​ ಮಾಡುತ್ತಾರೆ ಎಂದು ಓರ್ವ ನೆಟ್ಟಿಗ ಹೇಳಿದ್ದರೆ, ನೀನು ಏನಿದ್ರೂ ಬೆತ್ತಲಾಗಷ್ಟೇ ಲಾಯಕ್ಕು, ಡಾನ್ಸ್​ಗೂ, ನಿನಗೂ ಆಗಿ ಬರಲ್ಲ ಎಂದು ಮತ್ತೊಬ್ಬ ಹೇಳಿದ್ದಾರೆ. ಹೀಗೆ ಅನಿಮಲ್​ ಚಿತ್ರದಲ್ಲಿನ ನಟಿಯ ಬೆತ್ತಲನ್ನೇ ಎಳೆದು ತಂದು ಇನ್ನಿಲ್ಲದಂತೆ ಟ್ರೋಲ್​ ಮಾಡಲಾಗುತ್ತಿದೆ. 

'ರಣಬೀರ್​ ಕಪೂರ್​, ರಶ್ಮಿಕಾ ಮಂದಣ್ಣ ಹಾಗೂ ತೃಪ್ತಿ ಡಿಮ್ರಿ ಅಭಿನಯದ ಅನಿಮಲ್​ ಚಿತ್ರ ಚಿತ್ರಮಂದಿರಗಳಿಂದ ನಾಗಾಲೋಟದಿಂದ ಓಡಿತು. ಈ ಚಿತ್ರದಲ್ಲಿ  ಮೃಗೀಯತೆ, ಕ್ರೌರ್ಯ, ರಕ್ತಪಾತ, ಪ್ರೀತಿಪ್ರೇಮ, ಸ್ತ್ರೀದ್ವೇಷ, ಸಂಬಂಧ, ಅನುಬಂಧ ಎಲ್ಲವೂ ಇದೆ.  ಈ ಸಿನಿಮಾದಲ್ಲಿ ಹಿಂಸಾಚಾರ ಉತ್ತುಂಗದಲ್ಲಿದೆ. ಇದು ದುಷ್ಟರ ವಿರುದ್ಧದ ಕಾದಾಟವಾಗಿದೆ. ಆದರೂ ಹೆಣ್ಣಿನ ಮೇಲಿನ ದೌರ್ಜನ್ಯ ಮಿತಿಮೀರಿದೆ.  ಚಿತ್ರದಲ್ಲಿ ರಣಬೀರ್‌ ಕಪೂರ್‌   ಸ್ತ್ರೀದ್ವೇಷದ ಪ್ರತಿರೂಪವಾಗಿ ಕಾಣಿಸುತ್ತಾರೆ. ತನ್ನ ತಂಗಿಗೆ ವೈನ್‌ ಕುಡಿಯಲು, ವಿಸ್ಕಿ ಕುಡಿಯಲು ಹೇಳುತ್ತಾನೆ ನಾಯಕ.  ಸ್ತ್ರೀದ್ವೇಷಿಯಾಗಿಯೂ ಹಲವು ಕಡೆ ನಾಯಕ ಕಾಣಿಸುತ್ತಾನೆ. ಕಳೆದ ಡಿಸೆಂಬರ್ ​1 ರಂದು ಬಿಡುಗಡೆಯಾಗಿರುವ ಚಿತ್ರ ಇಂದಿಗೂ ಜನರು ನೋಡುತ್ತಿದ್ದಾರೆ.  ಅಡಲ್ಟ್​ ಸರ್ಟಿಫಿಕೇಟ್​ ಪಡೆದಿರುವ ಈ ಚಿತ್ರದಲ್ಲಿನ ಕೆಲವು ಹಸಿಬಿಸಿ ದೃಶ್ಯಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC)   ಕತ್ತರಿ ಹಾಕಿದ್ದರೂ ಮುನ್ನುಗ್ಗಿ ಸಾಗಿದೆ ಈ ಚಿತ್ರ. ಸಹಸ್ರಾರು ಕೋಟಿ ಕಮಾಯಿ ಮಾಡಿದ್ದು, ತೃಪ್ತಿ ಡಿಮ್ರಿ ಬೆತ್ತಲಾಗುವ ಮೂಲಕ ಭಾರಿ ಡಿಮಾಂಡ್​ ಕುದುರಿಸಿಕೊಂಡಿದ್ದಾರೆ. 

ಚೆನ್ನಾಗಿಯೇ ಇದ್ದ ನಿವೇದಿತಾಗೆ ಇದ್ದಕ್ಕಿದ್ದಂಗೆ ಇದೇನಾಯ್ತು? ವಿಡಿಯೋ ನೋಡಿ ಚಿಂತೆಗೀಡಾದ ಫ್ಯಾನ್ಸ್!

click me!