ಭೂಕಂಪ ಪೀಡಿತ ಜಪಾನ್​ನಿಂದ ಸುರಕ್ಷಿತವಾಗಿ ವಾಪಸಾಗಿರುವೆ: ಕಂಗೆಟ್ಟ ಫ್ಯಾನ್ಸ್​ಗೆ ಜ್ಯೂ.ಎನ್​ಟಿಆರ್ ಮಾಹಿತಿ

By Suvarna News  |  First Published Jan 2, 2024, 4:08 PM IST

ಹೊಸ ವರ್ಷದಂದು ಜಪಾನ್​ನಲ್ಲಿ ಸಂಭವಿಸಿದ ಪ್ರಬಲ ಭೂಕಂಪದ ಸಂದರ್ಭದಲ್ಲಿ ಅಲ್ಲಿಯೇ ಇದ್ದ ನಟ ಜ್ಯೂ.ಎನ್​ಟಿಆರ್​ ಸುರಕ್ಷಿತವಾಗಿ ಭಾರತಕ್ಕೆ ವಾಪಸಾಗಿರುವುದಾಗಿ ಮಾಹಿತಿ ನೀಡಿದ್ದಾರೆ. 
 


 ಹೊಸ ವರ್ಷದ ಮೊದಲ ದಿನವೇ ಜಪಾನ್​ನಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಘಟನೆಯಲ್ಲಿ ಇದುವರೆಗೆ 50ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಮಧ್ಯ ಜಪಾನ್‌ನಲ್ಲಿ ಸೋಮವಾರ 7.6 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಅಮೆರಿಕ ಜಿಯಾಲಜಿಕಲ್‌ ಸರ್ವೇ  ಹೇಳಿದೆ. ಈ ಹಿನ್ನೆಲೆ ಸುನಾಮಿ ಎಚ್ಚರಿಕೆ ನೀಡಲಾಗಿದ್ದು, ಭೂಕಂಪಕ್ಕೊಳಗಾದ ಪ್ರದೇಶದ ಜನರನ್ನು ಎತ್ತರದ ಪ್ರದೇಶಕ್ಕೆ ತೆರಳುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.  ಹೊಸ ವರ್ಷದಂದೇ  ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯವಾಗಿದ್ದು,  ಜನರು  ಇಡೀ ರಾತ್ರಿ ಕತ್ತಲೆಯಲ್ಲಿ ಮುಳುಗಿದ್ದರು.  ಇದೀಗ ಅಲ್ಲಿ ಜೀವನ ಅಲ್ಲೋಲ ಕಲ್ಲೋಲವಾಗಿದೆ. 

ಈ ಮಧ್ಯೆಯೇ, ಜೂನಿಯರ್​ ಎನ್​ಟಿಆರ್ ಅವರು ಕ್ರಿಸ್​​ಮಸ್ ಹಬ್ಬದ ಸಂದರ್ಭದಲ್ಲಿ ಜಪಾನ್​ ಪ್ರವಾಸಕ್ಕೆ  ತೆರಳಿದ್ದರು. ಭೂಕಂಪ ಆಗುವ ಸಮಯದಲ್ಲಿಯೂ ಅವರು ಅಲ್ಲಿಯೇ ಇದ್ದರು. ಭೂಕಂಪದ ಸುದ್ದಿ ಕೇಳುತ್ತಿದ್ದಂತೆಯೇ ಜ್ಯೂನಿಯರ್​ ಎನ್​ಟಿಆರ್​ ಫ್ಯಾನ್ಸ್​ ಶಾಕ್​ಗೆ ಒಳಗಾಗಿದ್ದರು. ಇದೀಗ ಭಾರತಕ್ಕೆ ಸುರಕ್ಷಿತವಾಗಿ ವಾಪಸಾಗಿರುವ ನಟ, ತಾವು ಸೇಫ್​ ಆಗಿ ವಾಪಸಾಗಿರುವುದಾಗಿ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ.  ‘ನಾವು ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದೇವೆ. ಜಪಾನ್​ನಲ್ಲಿ ಭೂಕಂಪ ಆಗಿದ್ದು ಶಾಕಿಂಗ್ ಆಗಿದೆ. ನಾನು ಒಂದು ವಾರ ಅಲ್ಲಿಯೇ ಕಳೆದಿದ್ದೇನೆ. ಭೂಕಂಪದಿಂದ ಹಾನಿಗೆ ಒಳಗಾದವರ ಬಗ್ಗೆ ದುಃಖ ಇದೆ. ಅಲ್ಲಿನ ಜನ ಬೇಗ ಚೇತರಿಸಿಕೊಳ್ಳಲಿ. ದೃಢವಾಗಿರಿ ಜಪಾನ್’ ಎಂದು ಅವರು ಹೇಳಿದ್ದಾರೆ. ನಿನ್ನೆ ಅಂದರೆ ಜನವರಿ 1ರಂದು ಜ್ಯೂನಿಯರ್​ ಎನ್​ಟಿಆರ್​ ಅವರು ತಮ್ಮ ಪತ್ನಿ ಮತ್ತು ಇಬ್ಬರು ಪುತ್ರರೊಂದಿಗೆ ಹೈದರಾಬಾದ್​ಗೆ ಆಗಮಿಸಿದ್ದಾರೆ. ಈ ವಿಷಯ ಕೇಳಿ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. 

Tap to resize

Latest Videos

ಹೊಸ ವರ್ಷಕ್ಕೆ ಹೊಸ ಸರ್​ಪ್ರೈಸ್​: ಅಯೋಧ್ಯೆ ಪುಣ್ಯಭೂಮಿಯಲ್ಲಿ ಡಾ.ಬ್ರೋ- ರಾಮಾಯಣ ನಂಟಿರೋ ನೇಪಾಳಕ್ಕೂ ಭೇಟಿ
 
ಇನ್ನು ಜೂನಿಯರ್​ ಎನ್​ಟಿಆರ್ ಅವರ ಸಿನಿಮಾದ ಕುರಿತು ಹೇಳುವುದಾದರೆ,  ಸದ್ಯ ಅವರು ಕೊರಟಾಲ ಶಿವ ನಿರ್ದೇಶನದ ‘ದೇವರ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ.  ‘ಆರ್​ಆರ್​ಆರ್’ ಸಿನಿಮಾದ ಬಳಿಕ ಈ ಸಿನಿಮಾದಲ್ಲಿ ನಟಿಸುತ್ತಿರುವುದರಿಂದ ಭಾರೀ ನಿರೀಕ್ಷೆಗಳಿವೆ. ಈ ಚಿತ್ರದ ಬಗ್ಗೆ ನಿರ್ಮಾಪಕರು ಈಗಾಗಲೇ ಹಲವು ಅಪ್‌ಡೇಟ್‌ಗಳನ್ನು ನೀಡುತ್ತಿದ್ದಾರೆ.  RRR ನಂತರ, ಜೂನಿಯರ್ NTR ಅವರ 30ನೇ ಚಿತ್ರವನ್ನು ಕೊರಟಾಲ ಶಿವ ನಿರ್ದೇಶನದಲ್ಲಿ ಮಾಡುತ್ತಿದ್ದಾರೆ. ಆ ವೇಳೆ ಎನ್ ಟಿಆರ್ ಫ್ಯಾಮಿಲಿ ಜೊತೆ ಜಪಾನ್​ಗೆ ಹೋಗಿದ್ದರು. ದೇವರ ಸಿನಿಮಾಗೆ ಅನಿರುದ್ಧ್ ಸಂಗೀತ ನೀಡುತ್ತಿದ್ದಾರೆ. ಎನ್ ಟಿ ಆರ್ ಆರ್ಟ್ಸ್ ಮತ್ತು ಯುವಸುಧಾ ಆರ್ಟ್ಸ್ ಈ ಬಿಗ್ ಸಿನಿಮಾ ನಿರ್ಮಾಣ ಮಾಡುತ್ತಿದೆ.  ಜಾನ್ವಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಚಿತ್ರವು ಬರುವ ಏಪ್ರಿಲ್ 5ರಂದು ಬಿಡುಗಡೆಯಾಗಲಿದೆ.


 
ಅಂದಹಾಗೆ, ಸೌತ್ ಸೂಪರ್ ಸ್ಟಾರ್ ಜೂನಿಯರ್ ಎನ್​​ಟಿಆರ್ (Jr. NTR) ದಕ್ಷಿಣ ಚಿತ್ರರಂಗದ ಶ್ರೀಮಂತ ಹೆಸರು. 20 ವರ್ಷಗಳ ವೃತ್ತಿ ಜೀವನದಲ್ಲಿ, ಜೂನಿಯರ್ ಎನ್​ಟಿಆರ್ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. RRR ಪ್ರಪಂಚದಾದ್ಯಂತ ಅವರಿಗೆ ಅಪಾರ ಅಭಿಮಾನಿಗಳನ್ನು ಕೊಟ್ಟಿದೆ.  ಇವರು ಪ್ರಣತಿ ಅವರೊಂದಿಗೆ 5 ಮೇ 2011 ರಂದು ಮದುವೆ ಮಾಡಿಕೊಂಡಾಗಲೇ ಸುದ್ದಿಯಾಗಿದ್ದರು. ಇದಕ್ಕೆ ಕಾರಣ, ಅವರ ಅದ್ಧೂರಿ ವಿವಾಹದ ಒಟ್ಟು ಬಜೆಟ್ 100 ಕೋಟಿ ರೂಪಾಯಿ ಆಗಿತ್ತು!  ಕೆಲ ತಿಂಗಳ ಹಿಂದೆ ಈ 'RRR' ಸ್ಟಾರ್ ಅನ್ನು ಮೆಕ್‌ಡೊನಾಲ್ಡ್ಸ್ ಮೆಕ್‌ಸ್ಪೈಸಿ ಚಿಕನ್  ಶೇರ್‌ಗಳ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿಕೊಂಡಿದೆ.  4 ಸೆಕೆಂಡುಗಳ ಜಾಹೀರಾತಿಗಾಗಿ 6-8 ಕೋಟಿ ವಿಧಿಸಿದ್ದಾರೆ ಎನ್ನಲಾಗಿದೆ. 

ಮತ್ತೆ ಮುನ್ನೆಲೆಗೆ ಬಂತು ಮೀ ಟೂ: ಕಮಲ ಹಾಸನ್​ ವಿರುದ್ಧ ಖ್ಯಾತ ಗಾಯಕಿ ಚಿನ್ಮಯಿ ಕೆಂಡಾಮಂಡಲ!

Back home today from Japan and deeply shocked by the earthquakes hitting. Spent the entire last week there, and my heart goes out to everyone affected.
Grateful for the resilience of the people and hoping for a swift recovery. Stay strong, Japan 🇯🇵

— Jr NTR (@tarak9999)
click me!