
ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ನಟ ರಣ್ವೀರ್ ಸಿಂಗ್ ಸರಣಿ ಸೋಲಿನ ಸರಣಿಯಲ್ಲಿ ಸಿಲುಕಿದ್ದಾರೆ. ಬಾಜಿರಾವ್ ಮಸ್ತಾನಿ, ಪದ್ಮಾವತ್ ಅಂತ ಹಿಟ್ ಸಿನಿಮಾಗಳನ್ನು ನೀಡಿರುವ ರಣ್ವೀರ್ ಸಿಂಗ್ ಇದೀಗ ಸಾಲು ಸಾಲು ಸೋಲು ಕಂಡಿದ್ದಾರೆ. 83, ಜಯೇಶ್ ಭಾಯ್ ಜೋರ್ದಾರ್, ಸರ್ಕಸ್ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ನೆಲಕಚ್ಚಿವೆ. ಸತತ ಸೋಲು ರಣ್ವೀರ್ ಸಿಂಗ್ ಅವರ ವೃತ್ತಿ ಜೀವನಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಇದೀಗ ರಣ್ವೀರ್ ಸಿಂಗ್ ಬಗ್ಗೆ ಮತ್ತೊಂದು ಮಾತು ಕೇಳಿಬರುತ್ತಿದೆ. ರಣ್ವೀರ್ ನಟಿಸಬೇಕಿದ್ದ ಸಿನಿಮಾಗೆ ತೆಲುಗು ಸ್ಟಾರ್ ಎಂಟ್ರಿ ಕೊಟ್ಟಿದ್ದಾರೆ ಎನ್ನಲಾಗಿದೆ. ಹೌದು ರಣ್ವೀರ್ ಸಿಂಗ್ ಮಾಡಬೇಕಿದ್ದ ಸಿನಿಮಾಗೆ ತೆಲುಗಿನ ಖ್ಯಾತ ನಟರಾದ ಜೂ.ಎನ್ ಟಿ ಆರ್ ಮತ್ತು ಅಲ್ಲು ಅರ್ಜುನ್ ಎಂಟ್ರಿ ಕೊಟ್ಟಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.
ದಿ ಇಮ್ಮಾರ್ಟಲ್ ಅಶ್ವತ್ಥಾಮ ಬಾಲಿವುಡ್‌ನಲ್ಲಿ ಅನೇಕ ಸಮಯದಿಂದ ಸದ್ದು ಮಾಡುತ್ತಿರುವ ಸಿನಿಮಾ. ಈ ಸಿನಿಮಾಗೆ ಮೊದಲು ವಿಕ್ಕಿ ಕೌಶಲ್ ಆಯ್ಕೆಯಾಗಿದ್ದರು. ಆದರೆ ಅವರನ್ನು ಸಿನಿಮಾದಿಂದ ಹೊರಗಿಡಲಾಯಿತು. ವಿಕ್ಕಿ ಜಾಗಕ್ಕೆ ಬಳಿಕ ರಣ್ವೀರ್ ಸಿಂಗ್ ಎಂಟ್ರಿ ಕೊಟ್ಟರು. ಈಗ ರಣ್ವೀರ್ ಕೂಡ ಸಿನಿಮಾದಿಂದ ಔಟ್ ಆಗಿದ್ದಾರೆ ಎನ್ನಲಾಗಿದೆ. ಅಷ್ಟೆಯಲ್ಲ ಹಿಂದಿ ಸಿನಿಮಾಗೆ ಸೌತ್ ಸ್ಟಾರ್ ಕಲಾವಿದರನ್ನು ಕರೆತರಲು ನಿರ್ಮಾಪಕರು ಪ್ಲಾನ್ ಮಾಡಿರುವುದು ಅಚ್ಚರಿ ಮೂಡಿಸಿದೆ.
ದಿ ಇಮ್ಮಾರ್ಟಲ್ ಅಶ್ವತ್ಥಾಮ ಸಿನಿಮಾಗೆ ಜಿಯೋ ಸ್ಟುಡಿಯೋಸ್ ನಿರ್ಮಾಣ ಮಾಡುತ್ತಿದೆ. ಈಗಾಗಲೇ ಜಿಯೋ ಸ್ಟುಡಿಯೋಸ್ ಹಲವು ಪ್ರಾಜೆಕ್ಟ್ ಗಳನ್ನು ಅನೌಸ್ ಮಾಡಿದೆ. ಇದೀಗ ದಿ ಇಮ್ಮಾರ್ಟಲ್ ಅಶ್ವತ್ಥಾಮ ಕೂಡ ಜಿಯೋ ಸ್ಟುಡಿಯೋಸ್ ಪಾಲಾಗಿದೆ. ಈ ಮೊದಲು ಬೇರೆ ನಿರ್ಮಾಪಕರು ಇದ್ದರು. ಆದರೀಗ ಜಿಯೋ ಸ್ಟುಡಿಯೋಸ್ ನಿರ್ಮಾಣ ಮಾಡಲು ಮುಂದಾಗಿದೆ. ನಿರ್ಮಾಣ ಸಂಸ್ಥೆ ಬದಲಾದ ಬಳಿಕ ಸೌತ್ ಸ್ಟಾರ್ ಗಳ ಕಡೆ ಒಲವು ಹೆಚ್ಚಾಗಿದೆ. ಹಾಗಾಗಿ ಜೂ.ಎನ್ ಟಿ ಆರ್ ಮತ್ತು ಅಲ್ಲು ಅರ್ಜುನ್ ಅವರನ್ನು ನಾಯಕನ ಸ್ಥಾನದಲ್ಲಿ ಕೂರಿಸಲು ಸಜ್ಜಾಗಿದ್ದಾರೆ.
Deepika Padukone: 'ಪಠಾಣ್' ನಾಯಕಿ ಗರ್ಭಿಣಿ? ಏನಿದು ಬಿಸಿಬಿಸಿ ಸುದ್ದಿ?
ದಿ ಇಮ್ಮಾರ್ಟಲ್ ಅಶ್ವತ್ಥಾಮ ಚಿತ್ರಕ್ಕೆ ಉರಿ ಸಿನಿಮಾ ಖ್ಯಾತಿಯ ಅದಿತ್ಯ ಧಾರ್ ನಿರ್ದೇಶನ ಮಾಡಲಿದ್ದಾರೆ. ಇದೀಗ ಹೀರೋ ಆಯ್ಕೆ ವಿಚಾರದಲ್ಲಿ ಈ ಸಿನಿಮಾ ಸದ್ದು ಮಾಡುತ್ತಿದೆ. ಜೂನಿಯರ್ ಎನ್‌ಟಿಆರ್ ಅಥವಾ ಅಲ್ಲು ಅರ್ಜುನ್ ಇಬ್ಬರಲ್ಲಿ ಒಬ್ಬರು ಹೀರೋ ಆಗಲಿದ್ದಾರೆ ಎನ್ನಲಾಗಿದೆ. ಅಂತಿಮವಾಗಿ ಯಾರು ಆಯ್ಕೆ ಆಗಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
ಪತಿ ರಣ್ವೀರ್ ಕೈ ಹಿಡಿಯಲು ನಿರಾಕರಿಸಿದ ದೀಪಿಕಾ; 'ಏನೋ ಸರಿ ಇಲ್ಲ' ಎಂದ ಫ್ಯಾನ್, ವಿಡಿಯೋ ವೈರಲ್
ಪುಷ್ಪ ಸಿನಿಮಾದ ಸಕ್ಸಸ್ ಬಳಿಕ ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಜೂ. ಎನ್ ಟಿ ಆರ್ ಕೂಜ ಆರ್ಆರ್ಆರ್ ಸಿನಿಮಾ ಬಳಿಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಆಸ್ಕರ್ ಪ್ರಶಸ್ತಿಯನ್ನೂ ಬಾಚಿಕೊಳ್ಳುವ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ. ಹಾಗಾಗಿ ಈ ಇಬ್ಬರೂ ನಟರಿಗೂ ಬೇಡಿಕೆ ಹೆಚ್ಚಾಗಿದೆ. ಇಬ್ಬರಲ್ಲಿ ಒಬ್ಬರು ಇಮ್ಮಾರ್ಟಲ್ ಅಶ್ವತ್ಥಾಮಗೆ ನಾಯಕನಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.