ಟಾಲಿವುಡ್ ಸ್ಟಾರ್ ನಟ ಜೂ ಎನ್ ಟಿ ಆರ್ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ. ಜೂ ಎನ್ ಟಿ ಆರ್ ನಟನೆಯ 31ನೇ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದೆ. ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಸಾರಥ್ಯದಲ್ಲಿ ಜೂ ಎನ್ ಟಿ ಆರ್ 31ನೇ ಸಿನಿಮಾ ಮೂಡಿಬರುತ್ತಿದೆ.
ತೆಲುಗಿನ ಖ್ಯಾತ ನಟ, ಕನ್ನಡ ಮಾತನಾಡುವ ಮಾತನಾಡುವ ಕನ್ನಡಿಗರ ಹೃದಯ ಗೆದ್ದಿರುವ ಪ್ರೀತಿಯ ನಟ ಜೂ.ಎನ್ ಟಿ ಆರ್ ಅವರಿಗೆ ಇಂದು (ಮೇ 20) ಹುಟ್ಟುಹಬ್ಬದ ಸಂಭ್ರಮ. ಹೌದು, ಮೇ 20 ಜೂ ಎನ್ ಟಿ ಆರ್ 39ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಜೂ.ಎನ್ ಟಿ ಆರ್ ಅವರಿಗೆ ಅಭಿಮಾನಿಗಳು, ಸ್ನೇಹಿತರು ಮತ್ತು ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಹಾಪೂರವೇ ಹರಿದುಬರುತ್ತಿದೆ. ಅಭಿಮಾನಿಗಳಂತು ಸಾಮಾಜಿಕ ಜಾಲತಾಣಗಳಲ್ಲಿ ನೆಚ್ಚಿನ ನಟನ ಫೋಟೋ, ವಿಡಿಯೋ ಶೇರ್ ಮಾಡುವ ಪ್ರೀತಿಯ ಶುಭಾಶಯ ತಿಳಿಸುತ್ತಿದ್ದಾರೆ.
ಹುಟ್ಟುಹಬ್ಬದ ವಿಶೇಷವಾಗಿ ಜೂ ಎನ್ ಟಿ ಆರ್ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ. ಜೂ ಎನ್ ಟಿ ಆರ್ ನಟನೆಯ 31ನೇ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದೆ. ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಸಾರಥ್ಯದಲ್ಲಿ ಜೂ ಎನ್ ಟಿ ಆರ್ 31ನೇ ಸಿನಿಮಾ ಮೂಡಿಬರುತ್ತಿದೆ. ಅಂದಹಾಗೆ ಇಬ್ಬರು ಸಿನಿಮಾ ಮಾಡ್ತಾರೆ ಎನ್ನುವ ಸುದ್ದಿ ಕಳೆದ ಎರಡು ವರ್ಷಗಳಿಂದ ಸಿಕ್ಕಾಪಟ್ಟೆ ಸದ್ದು ಮಾಡುತ್ತಿತ್ತು. ಆದರೆ ಈ ಬಗ್ಗೆ ಪ್ರಶಾಂತ್ ನೀಲ್ ಅಥವಾ ಜೂ ಎನ್ ಟಿ ಆರ್ ಯಾವುದೇ ಮಾಹಿತಿ ಬಹಿರಂಗ ಪಡಿಸಿರಲಿಲ್ಲ. ಇದೀಗ ಆರ್ ಆರ್ ಆರ್ ನಟನ ಹುಟ್ಟುಹಬ್ಬದ ದಿನ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಅಧಿಕೃತವಾಗಿ ಬಹಿರಂಗ ಪಡಿಸಿದ್ದಾರೆ.
ಅಂದಹಾಗೆ ನಿರ್ದೇಶಕ ಪ್ರಶಾಂತ್ ನೀಲ್ ಫಸ್ಟ್ ಲುಕ್ ಶೇರ್ ಮಾಡಿ, ರಕ್ತದಲ್ಲಿ ತೋಯ್ದ ಮಣ್ಣು ಮಾತ್ರ ನೆನಪಾಗುವುದು. ಅವನ ಮಣ್ಮು, ಅವನ ಆಳ್ವಿಕೆ, ಖಂಡವಾಗಿ ಅವನ ರಕ್ತವಲ್ಲ ಎಂದು ಕ್ಯಾಪ್ಷನ್ ನೀಡಿದ್ದಾರೆ. ಕ್ಯಾಪ್ಷನ್ ಮತ್ತು ಫಸ್ಟ್ ಲುಕ್ ನೋಡಿದ್ರೆ ಗೊತ್ತಾಗುತ್ತದೆ ಇದು ಪಕ್ಕಾ ಮಾಸ್ ಸಿನಿಮಾ ಎನ್ನುವುದು. ಈ ಪೋಸ್ಟರ್ ಗೆ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಅನೇಕರು ಇದು ಕೂಡ ಪಕ್ಕಾ ಬ್ಲಾಕ್ ಬಸ್ಟರ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
𝑻𝒉𝒆 𝒐𝒏𝒍𝒚 𝒔𝒐𝒊𝒍 𝒕𝒉𝒂𝒕 𝒊𝒔 𝒘𝒐𝒓𝒕𝒉 𝒓𝒆𝒎𝒆𝒎𝒃𝒆𝒓𝒊𝒏𝒈 𝒊𝒔 𝒕𝒉𝒆 𝒐𝒏𝒆 𝒔𝒐𝒂𝒌𝒆𝒅 𝒊𝒏 𝒃𝒍𝒐𝒐𝒅!
𝐇𝐢𝐬 𝐬𝐨𝐢𝐥.... 𝐇𝐢𝐬 𝐫𝐞𝐢𝐠𝐧 .....
𝐁𝐮𝐭 𝐝𝐞𝐟𝐢𝐧𝐢𝐭𝐞𝐥𝐲 𝐧𝐨𝐭 𝐡𝐢𝐬 𝐛𝐥𝐨𝐨𝐝.... pic.twitter.com/NNSw3O9zU6
Happy Birthday Jr. NTR; ಸಹೋದರ, ಸ್ನೇಹಿತ, ಸಹನಟ ಏನೆಂದು ಕರೆಯಲಿ, ರಾಮ್ ಚರಣ್ ಪ್ರೀತಿಯ ವಿಶ್
ಇನ್ನು ನಟ ಜೂ ಎನ್ ಟಿ ಆರ್ ಪೋಸ್ಟರ್ ಶೇರ್ ಮಾಡಿ ಮುಂದಿನ ಸಿನಿಮಾ ಪ್ರಶಾಂತ್ ನೀಲ್ ಜೊತೆ ಎಂದು ಹೇಳಿದ್ದಾರೆ. ಇಬ್ಬರ ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಅಂದಹಾಗೆ ಇಬ್ಬರೂ ಸಹ ಅತೀ ದೊಡ್ಡ ಹಿಟ್ ನೀಡಿರುವ ಸಂಭ್ರಮದಲ್ಲಿದ್ದಾರೆ. ಜೂ.ಎನ್ ಟಿ ಆರ್ ಆರ್ ಆರ್ ಆರ್ ಸಿನಿಮಾದ ಸಕ್ಸಸ್ ನಲ್ಲಿದ್ದಾರೆ. ಪ್ರಶಾಂತ್ ನೀಲ್ ಕೆಜಿಎಫ್-2 ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಎರಡು ಸಿನಿಮಾಗಳು ಬಾಕ್ಸ ಆಫೀಸ್ ನಲ್ಲಿ ಭರ್ಜರಿ ಕಮಾಯಿ ಮಾಡಿವೆ. 1100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿವೆ.
ಒಂದೇ ಸಿನಿಮಾದಲ್ಲಿ ಯಶ್, ಪ್ರಭಾಸ್, ಜೂ.ಎನ್‌ಟಿಆರ್; ಹೊಂಬಾಳೆ ಫಿಲ್ಮ್ಸ್‌ನ ಹೊಸ ಸಾಹಸ
ಜೂ.ಎನ್ ಟಿ ಆರ್ ಸದ್ಯ ನಿರ್ದೇಶಕ ಕೊರಟಾಲ ಶಿವ ಜೊತೆ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಇದು ಜೂ ಎನ್ ಟಿ ಆರ್ ಅವರ 30ನೇ ಸಿನಿಮಾವಾಗಿದೆ. ಈ ಸಿನಿಮಾ ಬಳಿಕ ಪ್ರಶಾಂತ್ ನೀಲ್ ಜೊತೆ ಸಿನಿಮಾ ಆರಂಭಿಸಲಿದ್ದಾರೆ. ಪ್ರಶಾಂತ್ ನೀಲ್ ಕೂಡ ಸದ್ಯ ಸಲಾರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾಗಿ ಇಬ್ಬರ ಕಮಿಟ್ ಮೆಂಟ್ ಮುಗಿದ ಬಳಿಕ ಪ್ರಾರಂಭವಾಲಿದೆ. ಈ ಸಿನಿಮಾದ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ಇನ್ನು ಬಹಿರಂಗವಾಗಬೇಕಿದೆ.