'ರಾಮಾಚಾರಿ' ಧಾರಾವಾಹಿಯಿಂದ ನಟಿ ಭಾವನಾ ಔಟ್; ಮಾನ್ಯತಾ ಪಾತ್ರಕ್ಕೆ ಹೊಸ ನಟಿ ಎಂಟ್ರಿ

Published : May 20, 2022, 11:17 AM ISTUpdated : May 20, 2022, 11:22 AM IST
'ರಾಮಾಚಾರಿ' ಧಾರಾವಾಹಿಯಿಂದ ನಟಿ ಭಾವನಾ ಔಟ್; ಮಾನ್ಯತಾ ಪಾತ್ರಕ್ಕೆ ಹೊಸ ನಟಿ ಎಂಟ್ರಿ

ಸಾರಾಂಶ

ಕನ್ನಡ ಧಾರಾವಾಹಿ ಲೋಕದಲ್ಲಿ ಇತ್ತೀಚಿಗೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಧಾರಾವಾಹಿಗಳಲ್ಲಿ ರಾಮಾಚಾರಿ ಕೂಡ ಒಂದು. ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಈ ಧಾರಾವಾಹಿಯಲ್ಲಿ ಈಗ ದೊಡ್ಡ ಬದಲಾವಣೆ ಮಾಡಲಾಗಿದೆ. ಈ ಧಾರಾವಾಹಿಯಲ್ಲಿ ಭಾವನಾ ನಾಯಕಿ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಶ್ರೀಮಂತ ಮನೆಯ ಮಹಿಳೆಯ ಪಾತ್ರದಲ್ಲಿ ಭಾವನಾ ಬಣ್ಣ ಹಚ್ಚಿದ್ದರು. ಆದರೀಗ ಈ ಪಾತ್ರದಿಂದ ಭಾವನಾ ಹೊರನಡೆದಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.

ಕನ್ನಡ ಧಾರಾವಾಹಿ ಲೋಕದಲ್ಲಿ ಇತ್ತೀಚಿಗೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಧಾರಾವಾಹಿಗಳಲ್ಲಿ ರಾಮಾಚಾರಿ ಕೂಡ ಒಂದು. ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಈ ಧಾರಾವಾಹಿಯಲ್ಲಿ ಈಗ ದೊಡ್ಡ ಬದಲಾವಣೆ ಮಾಡಲಾಗಿದೆ. ಅಂದಹಾಗೆ ಈ ಧಾರಾವಾಹಿಯ ಪ್ರಮುಖ ಪಾತ್ರಗಳಲ್ಲಿ ಮಾನ್ಯತಾ ಪಾತ್ರ ಕೂಡ ಒಂದು. ಈ ಪಾತ್ರದಲ್ಲಿ ಸ್ಯಾಂಡಲ್ ವುಡ್‌ನಾ ಖ್ಯಾತ ನಟಿ ಭಾವನಾ ರಾಮಣ್ಣ ಕಾಣಿಸಿಕೊಂಡಿದ್ದರು. ಧಾರಾವಾಹಿಯಲ್ಲಿ ಭಾವನಾ ನಾಯಕಿ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಶ್ರೀಮಂತ ಮನೆಯ ಮಹಿಳೆಯ ಪಾತ್ರದಲ್ಲಿ ಭಾವನಾ ಬಣ್ಣ ಹಚ್ಚಿದ್ದರು. ಆದರೀಗ ಈ ಪಾತ್ರದಿಂದ ಭಾವನಾ ಹೊರನಡೆದಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಆದರೆ ಈ ಧಾರಾವಾಹಿಯಿಂದ ಭಾವನಾ ದಿಢೀರ್ ಹಿಂದೆ ಸರಿಯುತ್ತಿರುವ ಕಾರಣ ಇನ್ನು ಬಹಿರಂಗವಾಗಿಲ್ಲ.

ರಾಮಾಚಾರಿ ಧಾರಾವಾಹಿ ಮೂಲಕ ಭಾವನಾ ಸಂಪೂರ್ಣವಾಗಿ ಕಿರುತೆರೆ ಪ್ರೇಕ್ಷಕರ ಮುಂದೆ ಬಂದಿದ್ದರು. ಇದಕ್ಕೂ ಮೊದಲು ಭಾವನಾ ಕನ್ನಡತಿ ಧಾರಾವಾಹಿಯಲ್ಲಿ ದೇವತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅತಿಥಿ ಪಾತ್ರದ ಮೂಲಕ ಧಾರಾವಾಹಿ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ಬಳಿಕ ರಾಮಾಚಾರಿ ಮೂಲಕ ಸಂಪೂರ್ಣವಾಗಿ ಧಾರಾವಾಹಿಯಲ್ಲಿ ಮಿಂಚಿದ್ದರು. ಆದರೀಗ ಈ ಧಾರಾವಾಹಿಯಿಂದನೂ ಹೊರ ನಡೆಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಈ ಬಗ್ಗೆ ಇನ್ನು ಧಾರಾವಾಹಿ ಕಡೆಯಿಂದ ಅಧಿಕೃತ ಮಾಹಿತಿ ಇನ್ನು ಬಹಿರಂಗವಾಗಿಲ್ಲ.

ಮಾನ್ಯತಾ ಪಾತ್ರಕ್ಕೆ ಜಾನ್ಸಿ ಕಾವೇರಪ್ಪ ಎಂಟ್ರಿ

ಹೌದು, ಭಾವನಾ ಬಿಟ್ಟುಹೋದ ಜಾಗಕ್ಕೆ ಮತ್ತೋರ್ವ ಖ್ಯಾತ ನಟಿ ಜಾನ್ಸಿ ಕಾವೇರಪ್ಪ ಎಂಟ್ರಿ ಕೊಟ್ಟಿದ್ದಾರೆ. ನಟಿ ಜಾನ್ಸಿ ಸೀತಾ ವಲ್ಲಭ ಧಾರಾವಾಹಿಯಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಬಳಿಕ ಮತ್ತೆ ಬಣ್ಣ ಹಚ್ಚಿರಲಿಲ್ಲ. ಇದೀಗ ಮಾನ್ಯತಾ ಪಾತ್ರಕ್ಕೆ ಜೀವ ತುಂಬುವ ಮೂಲಕ ಮತ್ತೆ ಕಿರುತೆರೆ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಶೀಘ್ರದಲ್ಲೇ ಜಾನ್ಸಿ ರಾಮಾಚಾರಿ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಧಾರಾವಾಹಿ ತಂಡ ಸದ್ಯದಲ್ಲೇ ಮಾಹಿತಿ ಬಹಿರಂಗ ಪಡಿಸುವ ಸಾಧ್ಯತೆ ಇದೆ.

ಈಗಾಗಲೇ ಜಾನ್ಸಿ ಧಾರಾವಾಹಿ ತಂಡ ಸೇರಿಕೊಂಡಿದ್ದು ಮುಂಬರುವ ದೃಶ್ಯಗಳ ಚಿತ್ರೀಕರಣ ಕೂಡ ಪ್ರಾರಂಭ ಮಾಡಿದ್ದಾರೆ. ಈ ಧಾರಾವಾಹಿಯಲ್ಲಿ ಮಾನ್ಯತಾ ಅತ್ಯಂತ ಪ್ರಭಾವಶಾಲಿ ಮಹಿಳೆ. ಭಾವನಾ ಈ ಪಾತ್ರಕ್ಕೆ ಜೀವತುಂಬಿದ್ದರು. ಇದೀಗ ಜಾನ್ಸಿ ಹೇಗೆ ಮಿಂಚಲಿದ್ದಾರೆ, ಮಾನ್ಯತಾ ಪಾತ್ರದ ಮೂಲಕ ಮತ್ತೆ ಕಿರುತೆರೆ ಪ್ರೇಕ್ಷಕರ ಹೃದಯ ಗೆಲ್ತಾರಾ ಎಂದು ಕಾದುನೋಡಬೇಕು.

ರಾಮಾಚಾರಿ ಧಾರಾವಾಹಿ ಸದ್ಯ ಟ್ವಿಸ್ಟ್ ಅಂಡ್ ಟರ್ನ್ ಗಳ ಮೂಲಕ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸುತ್ತಾ ಮುನ್ನುಗ್ಗುತ್ತಿದೆ. ಧಾರಾವಾಹಿಯ ನಾಯಕಿ ಚಾರುಲತಾ ಸದ್ಯ ನಾಯಕ ರಾಮಾಚಾರಿ ಮನೆಯಲ್ಲಿದ್ದಾರೆ. ಸಂಸ್ಕಾರ ಕಲಿಸಬೇಕೆಂದು ಚಾರುಲತಾ ತಂದೆ ಮಗಳನ್ನು ರಾಮಾಚಾರಿ ಮನೆಯಲ್ಲಿ ಬಿಟ್ಟಿದ್ದಾರೆ. ಆದರೆ ಚಾರುಲತಾ ತನ್ನ ಹಠವನ್ನು ಬಿಟ್ಟಿಲ್ಲ. ರಾಮಾಚಾರಿ ಮನೆಯಲ್ಲಿ ಅವಾಂತರಗಳನ್ನು ಮಾಡುತ್ತಾ ಕಾಟ ಕೊಡುತ್ತಿದ್ದಾರೆ. ಚಾರುಲತಾ ಯಾವಾಗ ಸಂಸ್ಕಾರ ಕಲಿಯುತ್ತಾರೆ, ರಾಮಾಚಾರಿ ಪ್ರೀತಿಯಲ್ಲಿ ಬೀಳ್ತಾರಾ ಎಂದು ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?