ಬಾಲಿವುಡ್ ನಟ ಜಾನ್ ಅಬ್ರಹಾಂ ಮಸಲ್ಸ್ ತೋರಿಸಿದ್ದಾರೆ. ಫೋಟೋ ನೋಡಿದ ಫ್ಯಾನ್ಸ್ ಇದೇನು ಗೂಗಲ್ ಮ್ಯಾಪಾ ಎಂದು ಪ್ರಶ್ನಿಸಿದ್ದಾರೆ.
ಬಾಲಿವುಡ್ ಹಾಟ್ ನಟ ಜಾನ್ ಅಬ್ರಹಾಂ ಮಸಲ್ಸ್ ತೋರಿಸಿ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಉಬ್ಬಿದ ನರಗಳನ್ನು ತೋರಿಸೋ ಫೋಟೋ ಈಗ ಎಲ್ಲೆಡೆ ವೈರಲ್ ಅಗಿದೆ. ನೆಟ್ಟಿಗರು ವಿಭಿನ್ನವಾಗಿ ಕಮೆಂಟ್ ಮಾಡಿದ್ದಾರೆ.
ನಟ ಜಾನ್ ಅಬ್ರಹಾಂ ಗುರುವಾರ ತಮ್ಮ ತೋಳಿನ ಚಿತ್ರವನ್ನು ಹಂಚಿಕೊಂಡಿದ್ದಾರೆ. ಫ್ಯಾನ್ಸ್ ಇದನ್ನು ನೋಡಿ ಶಾಕ್ ಆಗಿದ್ದಾರೆ. ನಟ ಮಸಲ್ಸ್ ಫೋಟೋ, ಬಾಡಿ ತೋರಿಸ್ತಿರೋದು ಇದೇ ಮೊದಲೇನಲ್ಲ.
ಸನ್ನಿ ಲಿಯೋನ್ ಗೌನ್ ಹಿಂದೆ ಬಚ್ಚಿಟ್ಟ ಬಾಲಿವುಡ್ ನಟ: ರೀಸನ್ ಏನು..?
ಚಿತ್ರದಲ್ಲಿ ಜಾನ್ ಎಡಗೈಯ ಸ್ನಾಯುಗಳ ಮಧ್ಯೆ ಸ್ಪಷ್ಟವಾಗಿ ಗೋಚರಿಸುವ ರಕ್ತನಾಳಗಳನ್ನು ಕಾಣಬಹುದು. ಯಾವುದೇ ಫ್ಯಾಟ್ ಇಲ್ಲದೆ ಇರೋ ಮಸಲ್ಸ್ ಫೋಟೋ ತೋರಿಸಿದ್ದಾರೆ ನಟ.
ಈ ಫೋಟೋ ಅವರ ಸತ್ಯಮೇವ ಜಯತೆ 2 ನಿರ್ದೇಶಕ ಮಿಲಾಪ್ ಜಾವೇರಿ ಶೇರ್ ಮಾಡಿದ್ದಾರೆ. ಯೆ ಹಾಥ್ ನಹಿ, ಥೆಜೋಹ್ನಬ್ರಹಾಂ ಕಾ ಹಥೋಡಾ ಹೈ ಎಂದು ಫನ್ನಿ ಕ್ಯಾಪ್ಶನ್ ಕೊಟ್ಟಿದ್ದಾರೆ. ಈ ವರ್ಷದ ಮೇ 12 ರಂದು ಸಿನಿಮಾ ಬಿಡುಗಡೆಯಾಗಲಿದೆ. ಇದು ಕಳೆದ ವರ್ಷ ಗಾಂಧಿ ಜಯಂತಿಯಂದು ಬಿಡುಗಡೆಯಾಗಬೇಕಿತ್ತು. ಆದರೆ ಕೊರೋನಾದಿಂದಾಗಿ ರಿಲೀಸ್ ತಡವಾಗಿದೆ.
ನೇಹಾ ಇಲ್ಲದೆ ಮ್ಯೂಸಿಕ್ ಇಂಡಸ್ಟ್ರಿ ಏನೂ ಅಲ್ಲ ಎಂದ ಖ್ಯಾತ ಡ್ಯಾನ್ಸರ್ ನೋರಾ..!
ಫೋಟೋಗೆ ಕಮೆಂಟ್ ಮಾಡಿದ ನಟ ಟೈಗರ್ ಶ್ರಾಫ್ ಕ್ರೇಝಿ ಎಂದು ಬರೆದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನಟಿ ಗೌತಮಿ ಮಿಲಾಪ್ ಆಘಾತಕ್ಕೊಳಗಾದ ಮುಖದ ಎಮೋಜಿಗಳನ್ನು ಕಮೆಂಟ್ ಮಾಡಿದ್ದಾರೆ.
ಫ್ಯಾನ್ಸ್ ಫನ್ನಿಯಾಗಿ ಕಮೆಂಟ್ ಮಾಡಿದ್ದಾರೆ. ಒಬ್ಬ ಫ್ಯಾನ್ ಇದನ್ನು ಗೂಗಲ್ ಮ್ಯಾಪ್ ಎಂದು ಕರೆದರೆ, ಇನ್ನೊಬ್ಬರು ರಕ್ತ ಪರೀಕ್ಷೆ ಮಾಡಲು ನಿಮಗೆ ನಿಜವಾಗಿಯೂ ಒಳ್ಳೆ ರಕ್ತನಾಳಗಳಿವೆ ಎಂದು ಹೇಳಿದ್ದಾರೆ.